ತುಕ್ಕು ಹಿಡಿದಿದ್ದ ಹಿಂದೂಸ್ತಾನ್ ಕಾಂಟೆಸ್ಸಾವನ್ನು ಸ್ಟಾರ್ಟ್ ಮಾಡಲು ಯತ್ನಿಸಿದ ಮಾಲೀಕನಿಗೆ ಅಚ್ಚರಿ!
'ಹಿಂದೂಸ್ತಾನ್ ಕಾಂಟೆಸ್ಸಾ' ಈ ಹೆಸರು ಆಟೋ ಉತ್ಸಾಹಿಗಳಿಗೆ ಚಿರಪರಿಚಿತ. ಇದರ ಉದ್ದವಾದ ವಿನ್ಯಾಸ, ಮಸ್ಕುಲರ್ ಬಾನೆಟ್ ಹೊಂದಿರುವ ಈ ನಾಲ್ಕು ಬಾಗಿಲಿನ ಸೆಡಾನ್‌ಗೆ ತನ್ನದೇ ಇತಿಹಾಸವಿದೆ. ಸದ್ಯ ಈ ಕಾರು ಕಾಣಿಸಿಕೊಳ್ಳುವುದು ವಿರಳವಾದ್ರೂ ವಿಂಟೇಜ್ ಕಾರುಗಳು ಎಂದಾಕ್ಷಣ ನೆನಪಾಗುವ ಕಾರುಗಳಲ್ಲಿ ಹಿಂದೂಸ್ತಾನ್ ಕಾಂಟೆಸ್ಸಾ ಕಂಡಿತ ನೆನಪಾಗುತ್ತದೆ.
ಅದೇನೇ ಇದ್ದರೂ, ಹಲವಾರು ಮಾಡಿಫೈಗೊಳಿಸಿದ ಕಾಂಟೆಸ್ಸಾ ಸೆಡಾನ್‌ಗಳು, ಮಸ್ಟ್ಯಾಂಗ್‌ಗಳು ಮತ್ತು ಇತರ ಮಸ್ಕುಲರ್ ಕಾರುಗಳು ತನ್ನದೇ ಆದ ವಿಭಿನ್ನ ವಿಭಾಗದಲ್ಲಿ ನಿಲ್ಲುತ್ತವೆ. ಹಾಗಾಗಿಯೇ ಆಟೋ ಉತ್ಸಾಹಿಗಳು ಕ್ಲಾಸಿಕ್ ಕಾರುಗಳನ್ನು ಹೊಂದಲು ಹಪಹಪಿಸುತ್ತಾರೆ. ಕ್ಲಾಸಿಕ್ ಕಾರನ್ನು ಹೊಂದುವುದು ಆನಂದದಾಯಕವೆಂದು ತೋರುತ್ತದೆಯಾದರೂ ನಿರ್ವಹಿಸುವುದು ಸವಾಲಿನ ಸಂಗತಿಯಾಗಿದೆ.

ಅನೇಕ ಕ್ಲಾಸಿಕ್ ಕಾರ್ ಮಾಲೀಕರು ತಮ್ಮ ವಾಹನಗಳನ್ನು ಮಾರಾಟ ಮಾಡುತ್ತಾರೆ ಅಥವಾ ಅವುಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದರೇ ಒಂದೆಡೆ ನಿಲ್ಲಿಸಿಬಿಡುತ್ತಾರೆ. ಹಾಗೆಯೇ ಹಲವು ವರ್ಷಗಳಿಂದ ನಿಲ್ಲಿಸಿಬಿಟ್ಟಿದ್ದ ಹಿಂದೂಸ್ತಾನ್ ಕಾಂಟೆಸ್ಸಾ ಕಾರು ಕೇವಲ ಕೆಲ ಮಾರ್ಪಾಡುಗಳಿಂದ ಹೇಗೆ ಸ್ಟಾರ್ಟ್ ಆಯ್ತು ಎಂಬುದನ್ನು ತೋರುವ ವಿಡಿಯೋವೊಂದು ಇಲ್ಲಿದೆ. ಇದು ತುಸು ಹಳೆಯ ವಿಡಿಯೋವಾದ್ರು ನಮ್ಮ ಆಟೋ ಉತ್ಸಾಹಿಗಳಿಗಾಗಿ ಈ ಕುರಿತ ಲೇಖನ ಬರೆಯಲಾಗಿದೆ.
ಶ್ರೀಶ್ ತ್ರಿಪಾಠಿ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ. ಮನೆಯ ಗ್ಯಾರೇಜ್‌ನಂತೆ ಕಾಣುವ ಕಾಂಪೌಂಡ್‌ನಲ್ಲಿ ಬಾಗಿಲು ಮುಚ್ಚಿದ ಶೆಡ್‌ನೊಳಗೆ ಹಿಂದೂಸ್ತಾನ್ ಕಾಂಟೆಸ್ಸಾ ಸೆಡಾನ್ ಅನ್ನು ಈ ವಿಡಿಯೋದಲ್ಲಿ ನೋಡಬಹುದು. ಕಾರು ತುಕ್ಕು ಹಿಡಿದು ಹಲವು ವರ್ಷಗಳಿಂದ ನಿಲ್ಲಿಸಲ್ಪಟ್ಟಿರುವಂತೆ ತೋರುತ್ತಿದ್ದು, ಇತ್ತಿಚೆಗೆ ವರ್ಷಗಳಲ್ಲಿ ಚಾಲನೆಯೇ ಮಾಡಿಲ್ಲದಂತೆ ಕಾಣುತ್ತಿದೆ.

ವೀಡಿಯೊದಲ್ಲಿ ವ್ಲಾಗರ್‌ನ ಮುಖ್ಯ ಉದ್ದೇಶ ಕಾರನ್ನು ಹೇಗಾದರೂ ಮಾಡಿ ಪ್ರಾರಂಭಿಸುವುದಾಗಿದೆ. ಹಾಗಾಗಿ ಕಾರನ್ನು ಗ್ಯಾರೇಜ್‌ನಿಂದ ಹೊರಕ್ಕೆ ತರುವ ಮೂಲಕ ಯಾವುದೇ ತೊಂದರೆಗಳಿಲ್ಲದೇ ರಿಪೇರಿ ಮಾಡಿಕೊಳ್ಳಬಹುದು ಎಂಬ ಆಲೋಚನೆಯಿಂದ ಹೊರತರುತ್ತಾನೆ. ಬಳಿಕ ತುಕ್ಕು ಹಿಡಿದ ಹಳೆಯ ಕಾಂಟೆಸ್ಸಾವನ್ನು ಬಹಿರಂಗಪಡಿಸಿ ಮಾಲೀಕ ರಿಪೇರಿ ಕಾರ್ಯವನ್ನು ಪ್ರಾರಂಭಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.
ಬಾಡಿ ಪ್ಯಾನಲ್‌ಗಳು ಮತ್ತು ಒಳಭಾಗವು ಬಹುತೇಕ ತುಕ್ಕು ಹಿಡಿದಿವೆ. ಆದ್ರೆ ಇದ್ಯಾವುದನ್ನು ಪರಿಗಣಿಸದ ಮಾಲೀಕ ಮೊದಲು ಅದರ ಎಂಜಿನ್ ಹೇಗಿದೆ ಎಂಬುದನ್ನು ಪರಿಶೀಲಿಸಿದ್ದಾನೆ. ಬಾನೆಟ್ ಅಡಿಯಲ್ಲಿರುವ ಹೆಚ್ಚಿನ ಘಟಕಗಳು ತುಕ್ಕು ಹಿಡಿದಿದ್ದರೇ ಇನ್ನೂ ಕೆಲ ಭಾಗಗಳು ತುಕ್ಕು ಹಿಡಿಯಲು ಪ್ರಾರಂಭಿಸಿವೆ. ಕಾರಿನ ಕಾರ್ಬ್ಯುರೇಟರ್ ಕಳಪೆ ಸ್ಥಿತಿಯಲ್ಲಿದ್ದು, ಇಂಧನ ಪಂಪ್ ಮತ್ತು ಇಂಧನ ಮಾರ್ಗಗಳು ಹದಗೆಟ್ಟಿರುವುದನ್ನು ಇದೇ ವೇಳೆ ಪತ್ತೆಹಚ್ಚಲಾಗಿದೆ.

ಮಾಲೀಕ ಹೇಗಾದರೂ ಮಾಡಿ ಕಾರನ್ನು ಸ್ಟಾರ್ಟ್ ಮಾಡುವ ಉದ್ದೇಶದಿಂದ ತನ್ನ ಸ್ವಂತ ಕಾರಿನಿಂದ ಕೆಲ ಉಪಕರಣಗಳನ್ನು ತಂದು ಕಾಂಟೆಸ್ಸಾವನ್ನು ಪ್ರಾರಂಭಿಸಲು ಪ್ರಯತ್ನಿಸಿದ್ದಾನೆ. ವರ್ಷಗಳಿಂದ ಕಾರು ಗ್ಯಾರೇಜ್‌ನಲ್ಲಿ ಬಿದ್ದಿರುವುದರಿಂದ ಬ್ಯಾಟರಿ ಸಂಪೂರ್ಣ ಖಾಲಿಯಾಗಿದೆ. ಹಾಗಾಗಿ ಹೊಸ ಬ್ಯಾಟರಿಯನ್ನು ಬಳಸಿ ಎಂಜಿನ್ ಆಯಿಲ್ ಕ್ಯಾನ್‌ನಿಂದ ಮಾಡಿದ ಮೋಟರ್‌ನ ಪಕ್ಕದಲ್ಲಿ ತಾತ್ಕಾಲಿಕ ಇಂಧನ ಟ್ಯಾಂಕ್ ಅನ್ನು ಹೊಂದಿಸಿದ್ದಾನೆ.
ಟ್ಯಾಂಕ್‌ನಿಂದ ಪೆಟ್ರೋಲ್ ಅನ್ನು ಕ್ಯಾನ್‌ಗೆ ಪಂಪ್ ಮಾಡಿ ಎಂಜಿನ್‌ಗೆ ಕಳುಹಿಸಲಾಗುತ್ತದೆ. ಹಲವಾರು ಪ್ರಯತ್ನಗಳ ನಂತರ, ಕಾರು ಮರುಜೀವ ಪಡೆಯುವಂತೆ ನಿಧಾನವಾಗಿ ಸ್ಟಾರ್ಟ್ ಆಗಲು ಪ್ರಾರಂಭಿಸಿದೆ. ನಂತರ, ಕಾರಿನ ಇಗ್ನಿಟರ್‌ನ ಹಿಂದಿನ ಸುರುಳಿಯು ಅತಿಯಾಗಿ ಬಿಸಿಯಾಗುತ್ತಿದೆ ಎಂಬುದು ಇದೇ ವೇಳೆ ತಿಳಿದುಬಂದಿದೆ. ತಾತ್ಕಾಲಿಕ ಪರಿಹಾರವಾಗಿ, ಇದನ್ನು ಬೈಪಾಸ್ ಮಾಡಿದ ಕಾರಣ ಕಾರನ್ನು ಪ್ರಾರಂಭಿಸಲು ಅನುವು ಮಾಡಿಕೊಟ್ಟಿತು.

ಒಟ್ಟಾರೆ ಕಾರನ್ನು ಸ್ಟಾರ್ಟ್ ಮಾಡುವ ಪ್ರಯತ್ನವು ಯಶಸ್ವಿಯಾಯಿತು. ಬಳಿಕ ಕಾರನ್ನು ಕಟ್ಟಡದ ಕಾಂಪೌಂಡ್ ನೆರಳಿನಲ್ಲಿ ನಿಲ್ಲಿಸಿ ಮುಂದಿನ ರಿಪೇರಿ ಕಾರ್ಯಕ್ಕಾಗಿ ಗ್ಯಾರೇಜ್ ಕೊಂಡೊಯ್ಯಬೇಕು, ಅದಕ್ಕೂ ಮುನ್ನ ವಾಹನ ವಿಮೆ ಮಾಡಿಸಿಕೊಳ್ಳಬೇಕು ಮತ್ತು ಮಾಲಿನ್ಯ ನಿಯಂತ್ರಣದ (PUC) ಪ್ರಮಾಣಪತ್ರವನ್ನು ಪಡೆಯಬೇಕು ಎಂದು ಹೇಳುವ ಮೂಲಕ ವೀಡಿಯೊ ಮುಕ್ತಾಯಗೊಳ್ಳುತ್ತದೆ. ವಿಡಿಯೋ ಲಿಂಕ್ ಕೆಳಗೆ ನೀಡಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications