TATA ಹೆಸರಿನಲ್ಲಿ ದೊಡ್ಡ ಸ್ಕ್ಯಾಮ್... ಈ ಲಿಂಕ್ ಬಂದರೆ ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬೇಡಿ

TATA ಮೋಟಾರ್ಸ್ ಹೆಸರೇಳಿಕೊಂಡು ಗ್ರಾಹಕರ ವೈಯಕ್ತಿಕ ಮಾಹಿತಿ ಕದಿಯುವುದು ಹಾಗೂ ಹಣ ಲೂಟಿ ಮಾಡುವುದು ಬೆಳಕಿಗೆ ಬಂದಿದೆ. ಟಾಟಾ ಮೋಟಾರ್ಸ್‌ನ 15ನೇ ವಾರ್ಷಿಕೋತ್ಸವಕ್ಕೆ ಟಾಟಾ ಪಂಚ್ ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಹೇಳಿ ನಕಲಿ ಲಿಂಕ್ ಕಳುಹಿಸುತ್ತಿದ್ದು, ಇದರಿಂದ ಗ್ರಾಹಕರು ಎಚ್ಚರವಾಗಿರಬೇಕಾಗಿದೆ.

ಭಾರತದಲ್ಲಿ ಹ್ಯಾಕರ್ಸ್ ಹೆಚ್ಚಾಗಿಬಿಟ್ಟಿದ್ದಾರೆ, ಅತ್ಯಾಧುನಿಕ ಟೆಕ್ನಾಲಜಿ ಬಳಿಸಿಕೊಂಡು ಹಣ, ಇತರೆ ಮಾಹಿತಿ ಕದಿಯುತ್ತಿದ್ದಾರೆ. ಇತ್ತೀಚೆಗಷ್ಟೇ ವಾಟ್ಸಾಪ್‌ನಲ್ಲಿ ಲಿಂಕ್ ಒಂದನ್ನು ವೈರಲ್ ಮಾಡುತ್ತಿರುವ ಗುಂಪೊಂದು ಟಾಟಾ ಮೋಟಾರ್ಸ್ ತನ್ನ 15 ನೇ ವಾರ್ಷಿಕೋತ್ಸವ ಆಚರಿಸುತ್ತಿದ್ದು, ನಾವು ಕೇಳುವ ಕೆಲ ಪ್ರಶ್ನೆಗಳಿಗೆ ಉತ್ತರಿಸಿದರೆ ಟಾಟಾ ಪಂಚ್ ಕಾರನ್ನು ಬಹುಮಾನವಾಗಿ ಪಡೆಯಬಹುದು ಎಂದು ಮರಳು ಮಾಡುತ್ತಿದ್ದಾರೆ.

TATA

ವೈರಲ್ ಲಿಂಕ್‌ನಲ್ಲಿ ಏನಿದೆ? ಲಿಂಕ್ ಓಪನ್ ಮಾಡಿದ ತಕ್ಷಣ ಕೆಲ ಪ್ರಶ್ನೆಗಳು ಬರುತ್ತವೆ. ಇವು ತುಂಬಾ ಸುಲಭ ಪ್ರಶ್ನೆಗಳಾಗಿದ್ದು, ಇವುಗಳಿಗೆ ಎಲ್ಲರೂ ಉತ್ತರಿಸಲೆಂದೇ ರೆಡಿ ಮಾಡಿದ್ದಾರೆ. ಒಂದು ವೇಳೆ ಈ ಪ್ರಶ್ನೆಗಳಿಗೆ ಉತ್ತರಿಸದಿದ್ದಲ್ಲಿ ಲಿಂಕ್ ಓಪನ್ ಮಾಡಿಯೂ ವ್ಯರ್ಥವಾದ್ದರಿಂದ ಸುಲಭ ಪ್ರಶ್ನೆಗಳನ್ನು ನೀಡಲಾಗುತ್ತದೆ. ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಉಡುಗೊರೆ ಬಾಕ್ಸ್‌ಗಳು ಬರುತ್ತವೆ.

ಮೊದಲ ಬಹುಮಾನದ ಪೆಟ್ಟಿಗೆಯಲ್ಲಿ ಏನೂ ಇರೋದಿಲ್ಲ. ಎರಡನೇ ಬಾಕ್ಸ್‌ ಅನ್ನು ಕ್ಲಿಕ್ಕಿಸಿದಾಗ ಟಾಟಾ ಪಂಚ್ ಕಾರು ಬಹುಮಾನವಾಗಿ ಬಂದಿದೆ ಎಂದು ತೋರಿಸುತ್ತದೆ. ಈ ಕಾರನ್ನು ನಿಮ್ಮದಾಗಿಸಿಕೊಳ್ಳಲು ನಮ್ಮ ಲಿಂಕ್ ಅನ್ನು 5 WhatsApp ಗ್ರೂಪ್‌ಗಳಿಗೆ ಅಥವಾ 20 ಜನರಿಗೆ ಕಳುಹಿಸಿ ಎಂದು ಹೇಳುತ್ತದೆ. ತಿಳಿಯದವರು ಈ ಲಿಂಕ್ ಶೇರ್ ಮಾಡಿದ್ರೂ ಯಾವುದೇ ಬಹುಮಾನ ಸಿಗೋದಿಲ್ಲ.

TATA

ಇಂತಹ ಲಿಂಕ್‌ಗಳನ್ನು ಈಗಾಗಲೇ ನಾವೆಲ್ಲರೂ ಯಾವುದೋ ಒಂದು ಬಹುಮಾನ ಸಿಗುವ ಉದ್ದೇಶದಲ್ಲಿ ಈ ಹಿಂದೆ ಕ್ಲಿಕ್ ಮಾಡಿದ್ದೇವೆ ಅಲ್ಲವೇ? ಆದ್ರೆ ನಿಮಗೆ ತಿಳಿಯದ ವಿಷಯವೇನೆಂದರೆ ಈ ಲಿಂಕ್‌ಗಳು ತುಂಬಾ ಅಪಾಯಕಾರಿ, ಒಮ್ಮೆ ಕ್ಲಿಕ್ ಮಾಡಿದ್ರೆ ನಮ್ಮ ಫೋನ್ ಹ್ಯಾಕ್ ಮಾಡಲು ನಾವೇ ಹ್ಯಾಕರ್‌ಗಳಿಗೆ ಸಹಕರಿಸಿದಂತಾಗುತ್ತದೆ ಎಂಬುದು ತಿಳಿದಿರಲಿ.

ಈಗ ವೈರಲ್ ಆಗುತ್ತಿರುವ ಟಾಟಾ ಕಾರಿನ ಬಹುಮಾನ ಕುರಿತ ಲಿಂಕ್ ತಮಿಳುನಾಡಿನಲ್ಲಿ ವೇಗವಾಗಿ ಹರಡುತ್ತಿದೆ. ಅನೇಕರು ಇದನ್ನು ಕ್ಲಿಕ್ ಮಾಡಿ ಅದರಲ್ಲಿನ ಪ್ರಶ್ನೆಗಳಿಗೆ ಉತ್ತರಿಸಿ ಶೇರ್ ಮಾಡಿದ್ದಾರೆ. ಟಾಟಾ ಪಂಚ್ ಕಾರು ಉಡುಗೊರೆಯಾಗಿ ಸಿಕ್ಕಿದೆ ಎಂದು ತಪ್ಪಾಗಿ ಭಾವಿಸಿದ್ದಾರೆ. ಇದು ಕೆಲವು ದಿನಗಳಿಂದ ನಡೆಯುತ್ತಿದೆ. ಆದರೆ ಇದು ಸಂಪೂರ್ಣ ನಕಲಿ.

ಟಾಟಾ ಮೋಟಾರ್ಸ್ ಅನ್ನು 1945 ರಲ್ಲಿ ಸ್ಥಾಪಿಸಲಾಗಿದೆ. ಆದ್ರೆ ಈ ವೆರೆಗೆ ಲಿಂಕ್ ಕಳುಹಿಸಿ ಕಾರುಗಳನ್ನು ಗಿಫ್ಟ್ ನೀಡುವುದಾಗಿ ಟಾಟಾ ಮೋಟಾರ್ಸ್ ಎಂದೂ ಹೇಳಿಲ್ಲ. ಹಾಗೇನಾದರೂ ಇದ್ದರೇ ಟಾಟಾ ಮೋಟಾರ್ಸ್ ವೆಬ್‌ಸೈಟ್‌ನಲ್ಲಿ ನೋಂದಾಯಿಸಲಾಗುತ್ತದೆ. ಹಾಗಾಗಿ ಇದು ಸಂಪೂರ್ಣ ನಕಲಿ ಲಿಂಕ್ ಆಗಿದ್ದು, ಕ್ಲಿಕ್ ಮಾಡಿದರೆ ನಿಮ್ಮ ಮಾಹಿತಿ ಕದಿಯುವ ಸಾಧ್ಯತೆಗಳಿವೆ.

ಈ ಲಿಂಕ್ ತಮಿಳುನಾಡಿನಲ್ಲಿ ಸಖತ್ ವೈರಲ್ ಆಗಿದೆ. ಇದು ನಮ್ಮ ರಾಜ್ಯಕ್ಕೂ ಎಂಟ್ರಿ ಕೊಡಬಹುದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ಇವನ್ನು ನಂಬಬಾರದು. ಸುಖಾಸುಮ್ಮನೆ ಕಂಪನಿಯವರು ಲಕ್ಷಾಂತರ ಮೌಲ್ಯದ ಕಾರುಗಳನ್ನು ಹೀಗೆ ಬಹುಮಾನವಾಗಿ ನೀಡೋದಿಲ್ಲ. ಹಾಗಾಗಿ ಸಾರ್ವಜನಿಕರು ಇಂತಹ ಸ್ಕ್ಯಾಮ್‌ಗಳಿಗೆ ಬಲಿಯಾಗದೇ ಎಚ್ಚರ ವಹಿಸಬೆಕು.

Article Published On: Thursday, June 15, 2023, 14:58 [IST]
English summary
Scam in the name of tata
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+