ಜೋರಾಯ್ತು ಸ್ಕ್ರಾಪಿಂಗ್ ನೀತಿ: ಪಾರ್ಕ್ ಮಾಡಿದ್ದ ಕಾರನ್ನು ಮಾಹಿತಿ ನೀಡದೆ ಹೊತ್ತೊಯ್ದ ಅಧಿಕಾರಿಗಳು

ಭಾರತದಲ್ಲಿ ವಾಯು ಮಾಲಿನ್ಯದ ವಿರುದ್ಧ ಅತ್ಯಂತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಖಾಸಗಿ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಹಳೆಯ ಕಾರನ್ನು ಮಾಲೀಕರಿಗೆ ತಿಳಿಸದೆ ಸ್ಕ್ರಾಪಿಂಗ್ ನೀತಿ ಅಡಿ ಸ್ಕ್ರ್ಯಾಪ್ ಮಾಡಲು ಕೊಂಡೊಯ್ದ ಘಟನೆ ದೆಹಲಿಯಲ್ಲಿ ನಡೆದಿದೆ. ಬಳಸದೆ ನಿಲ್ಲಿಸಿದ್ದ ಕಾರನ್ನು ಹೀಗೆ ಕೊಂಡೊಯ್ದಿರುವುದು ಮಾಲೀಕರಲ್ಲಿ ಸಾಕಷ್ಟು ಆಘಾತವನ್ನುಂಟು ಮಾಡಿದೆ.

ಎಲ್ಲರಿಗು ತಿಳಿದಿರುವಂತೆ ದೆಹಲಿ ಎನ್‌ಸಿಆರ್ ರಸ್ತೆಗಳಲ್ಲಿ ವಾಯುಮಾಲಿನ್ಯವನ್ನು ಕಡಿಮೆ ಮಾಡುವ ಸಲುವಾಗಿ ಸ್ಕ್ರಾಪಿಂಗ್ ನೀತಿ ಅಡಿ 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ಮತ್ತು 10 ವರ್ಷಕ್ಕಿಂತ ಹಳೆಯ ಡೀಸೆಲ್ ಕಾರುಗಳ ಬಳಕೆಯನ್ನು ನಿಷೇಧಿಸಲಾಗಿದೆ. ಇದೀಗ ಹಳೆಯ ಕಾರನ್ನು ಹೀಗೆ ಸ್ಕ್ರಾಪಿಂಗ್‌ಗೆ ಕೊಂಡೊಯ್ದಿರುವುದು ರಾಜಕೀಯ ವಿಶ್ಲೇಷಕ ಮತ್ತು ಸೆಲೆಬ್ರಿಟಿ ತಹಸೀನ್ ಪೂನಾವಾಲಾ ಅವರದ್ದು.

scrapping-policy-officials-take-old-car-scrap-owner-shock

ಅವರ 15 ವರ್ಷ ಹಳೆಯ ಹೋಂಡಾ ಸಿಆರ್-ವಿ ಅನ್ನು ದೆಹಲಿ ಸಾರಿಗೆ ಇಲಾಖೆಯ ಅಧಿಕಾರಿಗಳು ಎಳೆದೊಯ್ದಿದ್ದು, ಇದರಿಂದಾಗಿ ವಾಹನಕ್ಕೆ ಹಾನಿಯಾಗಿದೆ ಎಂದು ಆರೋಪಿಸಿದ್ದಾರೆ. ರಸ್ತೆ ಬದಿ ಎಂದರೆ ಸಾರ್ವಜನಿಕ ರಸ್ತೆ ಬದಿಯಲ್ಲ, ಅವರ ಕಚೇರಿ ಇರುವ ಸ್ಥಳದ ಪ್ರವೇಶದ್ವಾರದಲ್ಲಿ ನಿಲುಗಡೆ ಮಾಡಿದ್ದರು ಎನ್ನಲಾಗಿದೆ. ಆದ್ರೂ ದೆಹಲಿ ಪೊಲೀಸರು ಕಾರನ್ನು ವಿಲೇವಾರಿ ಮಾಡಿ ಸ್ಕ್ರ್ಯಾಪ್‌ಗೆ ಕಳುಹಿಸಿದ್ದಾರೆ ಎಂಬುದು ಅವರ ಆರೋಪ.

ಇಲ್ಲಿ ನೆಟ್ಟಿಗರ ಗಮನ ಸೆಳೆದಿರುವುದು ನಾನು ಕಾರನ್ನು ಬಳಸುತ್ತಿಲ್ಲ ಎಂಬ ಪೂನಾವಾಲಾ ಅವರ ಹೇಳಿಕೆ. ಬ್ಯಾಟರಿ ತೆಗೆದು ಸುರಕ್ಷಿತ ಜಾಗದಲ್ಲಿ ನಿಲ್ಲಿಸಲಾಗಿದೆ. ಸದ್ಯ ಕಾರು ಚಾಲನೆಯಲ್ಲಿಲ್ಲ, ಆದ್ರೆ ಬ್ಯಾಟರಿ ಹಾಕಿ ಸಣ್ಣ ರಿಪೇರಿ ಮಾಡಿದ್ರೆ ತುಂಬಾ ಚೆನ್ನಾಗಿ ಓಡುತ್ತದೆ. 15 ವರ್ಷ ಹಳೆಯ ಕಾರು ಎಂಬಷ್ಟಕ್ಕೆ ಕಾರನ್ನು ಹೀಗೆ ಕೊಂಡೊಯ್ಯವುದು ಸರಿಯಲ್ಲ ಎಂದು ಮಾಲೀಕ ತಹಸೀನ್ ಪೂನವಾಲ ಹೇಳಿದ್ದಾರೆ.

ಘಟನೆಯನ್ನು ವಿವರಿಸುತ್ತಾ ಟ್ವಿಟ್ಟರ್ ಪೋಸ್ಟ್‌ ಮಾಡಿರುವ ಅವರು, ಈ ಹಿಂದೆ ನನ್ನ ಪ್ರೀತಿಯ ನಾಯಿ ಹೋಂಡಾ ಸಿಆರ್-ವಿ ಒಳಗೆ ಸಾವನ್ನಪ್ಪಿತ್ತು. ಜೊತೆಗೆ ಕುಟುಂಬ ಸದಸ್ಯರು ವಾಹನದ ಮೇಲೆ ಭಾವನಾತ್ಮಕ ಬಾಂಧವ್ಯ ಹೊಂದಿದ್ದಾರೆ. ಈ ಕಾನೂನಿನ ಬಗ್ಗೆ ಗೊತ್ತಿದೆ, ಆದ್ರೆ ಕಾರನ್ನು ಓಡಿಸದೆ ತಮ್ಮ ಸ್ವಂತ ಜಾಗದಲ್ಲಿ ನಿಲ್ಲಿಸಿ, ಬ್ಯಾಟರಿಯನ್ನು ತೆಗೆದುಹಾಕಿದ್ದ ಕಾರಣ ಅದನ್ನು ಬಳಸುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

ಪೊಲೀಸರು ಕಾರನ್ನು ತೆಗೆದುಕೊಂಡು ಹೋಗುವ ಮುನ್ನ ವಿವಿಧ ರೀತಿಯಲ್ಲಿ ಹಾನಿಗೊಳಿಸಿದ್ದಾರೆ. ಇದನ್ನು ಖಚಿತಪಡಿಸಲು, ಪೂನಾವಾಲಾ ಕೆಲವು ಚಿತ್ರಗಳು ಮತ್ತು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಏಪ್ರಿಲ್ 2023 ರಿಂದ ದೆಹಲಿ ಸಾರಿಗೆ ಇಲಾಖೆ, ದೆಹಲಿ ಕಾರ್ಪೊರೇಷನ್ ಮತ್ತು ದೆಹಲಿ ಪೊಲೀಸರು ರಸ್ತೆಬದಿಗಳಲ್ಲಿ ನಿಲುಗಡೆ ಮಾಡಲಾದ ಅನುಪಯುಕ್ತ ವಾಹನಗಳನ್ನು ವಿಲೇವಾರಿ ಮಾಡಲು ಮುಂದಾಗಿದ್ದಾರೆ.

ಅವರ ಕಾನೂನಿನಂತೆ ತೆಹ್ಸೀನ್ ಪೂನಾವಾಲಾ ಅವರ ಹೋಂಡಾ ಸಿಆರ್-ವಿ ಅವರ ನಿವಾಸದ ಸಮೀಪವಿರುವ ಕಚೇರಿಯ ಹೊರಗೆ ರಸ್ತೆ ಬದಿ ನಿಲ್ಲಿಸಲಾಗಿದೆ. ಅವರ ನಿವಾಸದ ಮಿತಿಯಲ್ಲಿ ಅಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು. ಹಾಗಾಗಿ ದೆಹಲಿ ಸಾರಿಗೆ ಇಲಾಖೆಯ ಅಧಿಕಾರಿಗಳು ಅವರ ಹಳೆಯ ವಾಹನವನ್ನು ಸ್ಕ್ರ್ಯಾಪಿಂಗ್ ಮಾಡಲು ಕಳುಹಿಸಿದ್ದಾರೆ ಎಂಬುದು ಅಧಿಕಾರಿಗಳ ಹೇಳಿಕೆಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ.

Article Published On: Friday, July 7, 2023, 12:57 [IST]
English summary
Scrapping policy officials take old car scrap owner shock
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+