ಟಾಟಾ ನ್ಯಾನೋ ಬರೀ ಕಾರಲ್ಲ ಅದೊಂದು ಎಮೋಷನ್: ಪುನರಾಗಮನಕ್ಕೆ ಕಾಯುತ್ತಿರುವ ಬಹುಕೋಟಿ ಭಾರತೀಯರು
ದೇಶ ಕಂಡ ಅತ್ಯಂತ ಹೆಮ್ಮೆಯ ಬ್ಯುಸಿನೆಸ್‌ಮೆನ್ ಎಂದರೆ ಅದು ರತನ್ ಟಾಟಾ. ಸದ್ಯ ಟಾಟಾ ಮೋಟೋರ್ಸ್‌ನ ಮುಖ್ಯಸ್ಥರಾಗಿರುವ ರತನ್ ಟಾಟಾ ಮಾಡಿರುವಂತಹ ಒಳ್ಳೆಯ ಕೆಲಸಗಳಿಗೆ ಅಥವಾ ಜನ ಮೆಚ್ಚುವ ಕೆಲಸಗಳಿಗೆ ಲೆಕ್ಕವಿಲ್ಲ ಎಂದರೆ ಅದು ಅತಿಶಯೋಕ್ತಿ ಆಗಲಾರದು ಎಂಬುದು ನಮ್ಮ ಅಭಿಪ್ರಾಯ.
ರತನ್ ಟಾಟಾ ಅವರ ಡ್ರೀಮ್ ಕಾರು ಯಾವುದೆಂದು ಯಾರಾದರೂ ಕೇಳಿದರೆ ಅದು ಟಾಟಾ ನ್ಯಾನೋ (Tata Nano) ಎಂದು ಕಣ್ಣು ಮುಚ್ಚಿಕೊಂಡು ಹೇಳಬಹುದು. ಭಾರತದಲ್ಲಿ ಲಾಂಚ್ ಆದ ಅತೀ ಕಡಿಮೆ ಬೆಲೆಯ ಕಾರು ಈ ಟಾಟಾ ನ್ಯಾನೋ. ಈಗ ಈ ಕಾರು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ಇದಕ್ಕೆ ಕಾರಣ ರತನ್ ಟಾಟಾ ಅವರ ಪರ್ಸನಲ್ ಅಸಿಸ್ಟೆಂಟ್ ಶಾಂತನು ನಾಯ್ಡು. ಇತ್ತೀಚೆಗಷ್ಟೇ ಶಾಂತನು ನಾಯ್ಡು ತಮ್ಮ ಟಾಟಾ ನ್ಯಾನೋ ಜೊತೆ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿದ್ದು, ಇದೀಗ ಎಲ್ಲರ ಮನ ಮುಟ್ಟುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.
ತಮ್ಮ ಲಿಂಕ್ಡ್‌ಇನ್ ಖಾತೆಯ ಪೋಸ್ಟ್‌ನಲ್ಲಿ ಶಾಂತನು ನಾಯ್ಡು, ನನ್ನ ಈ ಲಿಲ್ಲೀ ಗೆ ನಾಲ್ಕು ವರ್ಷಗಳಾಗಿದೆ. ಈ ನಾಲ್ಕು ವರ್ಷದಲ್ಲಿ ಹಲವಾರು ನೆನಪುಗಳು, ಮನದಾಳದ ಮಿಡಿತಗಳು, ಪ್ರೀತಿ ಪಾತ್ರರ ಜೊತೆಗಿನ ಡ್ರೈವ್, ಮಳೆಗಾಲದ ನೆನಪುಗಳು, ಕೆಲವೊಂದು ಎಸ್‌ಯುವಿಗಳಿಗೆ ಟೀಸ್ ಮಾಡಿದ್ದು ಇದೀಗ ಟಾಟಾ ನ್ಯಾನೋ ಮನೆ ಮಗನಂತಾಗಿದೆ ಎಂದು ಬರೆದುಕೊಂಡಿದ್ದಾರೆ.

ಇದೀಗ ಟಾಟಾ ನ್ಯಾನೋ ಕಾರಿನ ಉತ್ಪಾದನೆ ಸ್ಥಗಿತಗೊಂಡು ವರ್ಷಗಳೇ ಕಳೆದರೂ ಇನ್ನೂ ಸಹ ಅದು ಜನಮಾನಸದಿಂದ ಮರೆಯಾಗಿಲ್ಲ ಎನ್ನುವುದಕ್ಕೆ ಶಾಂತನು ನಾಯ್ಡು ಅವರ ಈ ಪೋಸ್ಟೇ ಸಾಕ್ಷಿ. ಇವರ ಈ ಲಿಂಕ್ಡ್‌ಇನ್ ಪೋಸ್ಟ್ ಸಾಕಷ್ಟು ವೈರಲ್ ಆಗುತ್ತಿದ್ದು, ಇದರ ಬಗ್ಗೆ ಸಾಕಷ್ಟು ಅಭಿಪ್ರಾಯಗಳನ್ನು ಸಾವಿರಾರು ಜನ ಹಂಚಿಕೊಳ್ಳುತ್ತಿದ್ದಾರೆ.
ಇನ್ನು ಟಾಟಾ ನ್ಯಾನೋ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಿಲ್ಲವಾದರೂ ಅದು ರತನ್ ಟಾಟಾ ಅವರ ಡ್ರೀಮ್ ಕಾರ್. ಅದಕ್ಕೆ ಕಾರಣ, ಭಾರತದ ಪ್ರತಿಯೊಬ್ಬ ಕೆಳ ವರ್ಗದ ಕುಟುಂಬದ ಜನರೂ ತಮ್ಮ ಕುಟುಂಬದ ಸಮೇತ ಒಟ್ಟಾಗಿ ಒಂದು ಕಾರಿನಲ್ಲಿ ಪ್ರಯಾಣ ಮಾಡಬೇಕು ಎಂಬ ರತನ್ ಟಾಟಾ ಅವರ ಕನಸು.
ಇದನ್ನು ಸಾಕಾರಗೊಳಿಸಲು ರತನ್ ಟಾಟಾ ಭಾರತೀಯ ಮಾರುಕಟ್ಟೆಗೆ ಅತೀ ಕಡಿಮೆ ಬೆಲೆಯಲ್ಲಿ, ಭಾರತದ ಚೀಪೆಸ್ಟ್ ಕಾರು ಎಂದು ಟಾಟಾ ನ್ಯಾನೋವನ್ನು ಲಾಂಚ್ ಮಾಡುತ್ತಾರೆ. ಆದರೆ ಟಾಟಾ ನ್ಯಾನೋ ನಿರೀಕ್ಷಿಸಿದ ಮಟ್ಟಿಗೆ ಈ ಕಾರು ಮಾರುಕಟ್ಟೆಯಲ್ಲಿ ಸದ್ದು ಮಾಡಲಿಲ್ಲ ಎಂಬುದು ಸೋಜಿಗದ ಸಂಗತಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications