Maruti ಕಾರುಗಳು ಸುರಕ್ಷಿತವಲ್ಲ ನಿಜ, ಆದ್ರೆ ಸಾವಿರಾರು ಕೆ.ಜಿ ಹೊರುವ ತಾಕತ್ತಿದೆ... ವಿಡಿಯೋ ನೋಡಿ

Maruti 800, ದೇಶದ ಅದೆಷ್ಟೋ ಮಧ್ಯಮ ವರ್ಗದ ಕುಟುಂಬಗಳಿಗೆ ಕಾರು ಹೊಂದುವ ಕನಸನ್ನು ನನಸು ಮಾಡಿದ ಕಾರು. ಸುದೀರ್ಘ ಪ್ರಯಾಣದ ಬಳಿಕ ಇದೇ ವರ್ಷದ ಆರಂಭದಲ್ಲಿ, RDE ಮಾನದಂಡಗಳ ಕಾರಣದಿಂದಾಗಿ ಮಾರುತಿ ಆಲ್ಟೊ 800 ಅನ್ನು ಸ್ಥಗಿತಗೊಳಿಸಲಾಯಿತು.

ಇದೀಗ ಆ ಸ್ಥಾನವನ್ನು ಭರ್ತಿ ಮಾಡುವ ಮೂಲಕ ಕಂಪನಿಯ ಎಂಟ್ರಿ ಲೆವಲ್ ಕಾರಾಗಿ ಮಾರುತಿ ಆಲ್ಟೊ k10 ಮುನ್ನಲೆಗೆ ಬಂದಿದೆ. ಅಲ್ಲದೇ ಮೊದಲಿನಿಂದಲೂ ಆಲ್ಟೊ ಖರೀದಿದಾರರಲ್ಲಿ ಅತ್ಯಂತ ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿ ಮುಂದುವರೆದಿದೆ. ಈ ಕಾರು ನೋಡಲು ತುಂಬಾ ಸಣ್ಣದಾಗಿ ಕಂಡರೂ ಭಾರವನ್ನು ಹೊರುವಲ್ಲಿ ಅದರ ತಾಕತ್ತನ್ನು ಸಾಭೀತು ಪಡಿಸಿದೆ.

Maruti

ಒಂದು ಲೆಕ್ಕದಲ್ಲಿ ಮೂರ್ತಿ ಸಣ್ಣದಾದ್ರೂ ಕೀರ್ತಿ ದೊಡ್ಡದು ಎಂಬಂತೆ ಇದನ್ನು ನೋಡಲಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆಯಾಗಿ ಇತ್ತೀಚಿನ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ಈ ಕುರಿತ ವಿಡಿಯೋವನ್ನು Instagram ಪುಟದಲ್ಲಿ automobile.memes ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋದಲ್ಲಿ, ಹಳೆಯ ತಲೆಮಾರಿನ ಮಾರುತಿ ಆಲ್ಟೊ ಕಾರು ಸಖತ್ ಫೇಮಸ್ ಆಗುತ್ತಿದೆ.

ಹಡಗು ಕಂಪನಿಗಳು ಸಾಮಾನ್ಯವಾಗಿ ಬಳಸುವ ಲೋಹದ ಕಂಟೇನರ್ (ಶಿಪ್ಪಿಂಗ್ ಕಂಟೇನರ್) ಅನ್ನು ಆಲ್ಟೊ ಹೊತ್ತೊಯ್ಯುವುದು ಎಂಥವರನ್ನು ಒಂದು ಕ್ಷಣ ದಂಗಾಗಿಸುತ್ತಿದೆ. ವಿಡಿಯೋದಲ್ಲಿ ಶಿಪ್ಪಿಂಗ್ ಕಂಟೇನರ್ ಅನ್ನು ಮಾರುತಿ ಆಲ್ಟೊ ಹ್ಯಾಚ್ ಬ್ಯಾಕ್‌ನ ಮೇಲ್ಭಾಗದಲ್ಲಿ ಸುರಕ್ಷಿತವಾಗಿ ಇಡಲಾಗಿದೆ. ಕಾರು ರಸ್ತೆಯ ಎಡ ಲೇನ್‌ನಲ್ಲಿ ವೇಗವಾಗಿ ಮುನ್ನುಗ್ಗುತ್ತಿರುವುದು ನೋಡಲು ಮಜಾ ನೀಡುತ್ತಿದೆ.

ನೀವು ಸೂಕ್ಷ್ಮವಾಗಿ ಗಮನಿಸಿದರೆ, ವೀಡಿಯೊದಲ್ಲಿ ಕಂಡುಬರುವ ಮಾರುತಿ ಆಲ್ಟೊವನ್ನು ಈ ರೀತಿಯ ಕಾರ್ಯಗಳಿಗಾಗಿಯೇ ಬಳಸಲಾಗುತ್ತಿದೆ ಎಂದು ತೋರುತ್ತಿದೆ. ಈ ಮಾರುತಿ ಆಲ್ಟೊ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಕಾಣುತ್ತಿಲ್ಲ, ಉತ್ತರ ಭಾರತದಲ್ಲಿ ಎಲ್ಲೋ ಈ ವಿಡಿಯೋವನ್ನು ರೆಕಾರ್ಡ್ ಮಾಡಿದಂತೆ ತೋರುತ್ತಿದೆ. ಮಾರುತಿ ಆಲ್ಟೊದ ಹಿಂದೆ ಒಂದು ಬೈಕನ್ನು ಸಹ ಕಾಣಬಹುದು.

ಯಾವುದೇ ವಾಹನವು ಕಾರಿಗೆ ಡಿಕ್ಕಿಯಾಗದಂತೆ ನೋಡಿಕೊಳ್ಳಲು ಬೆಂಗಾವಲು ವಾಹನವಾಗಿ ಬೈಕ್ ಫಾಲೋ ಮಾಡುತ್ತಿರುವಂತಿದೆ. ಇನ್ನು ಮುಖ್ಯ ವಿಷಯಕ್ಕೆ ಬಂದರೆ ವಿಡಿಯೋದಲ್ಲಿ ಕಾಣುವ ಕಂಟೇನರ್ ಬೃಹತ್ ಆಕಾರದಲ್ಲಿದೆ. ಆಲ್ಟೊಗಿಂತ ಎತ್ತರ ಮತ್ತು ಅಗಲವಾಗಿ ಕಾಣುತ್ತದೆ. ಸಾಮರ್ಥ್ಯಕ್ಕಿಂತ ಹೆಚ್ಚಿನ ಲೋಡ್‌ ಅನ್ನು ಆಲ್ಟೊ ಸಾಗಿಸುತ್ತಿದೆ. ಅದರ ಸ್ಸ್ಪೆಸ್ಪೆನ್ಷನ್ ನೋಡಿದ್ರೇ ಗೊತ್ತಾಗುತ್ತಿದೆ, ಕಾರು ಯಾವ ಮಟ್ಟದಲ್ಲಿ ಭಾರ ಹೊರುತ್ತಿದೆಯೆಂದು.

ಇದು ತುಂಬಾ ಅಪಯಾಕಾರಿ: ವಾಹನ ತಯಾರಕರು ಗೂಡ್ಸ್ ಸಾಗಿಸಲೆಂದೇ ವಾಣಿಜ್ಯ ವಾಹನಗಳನ್ನು ತಯಾರಿಸುತ್ತಾರೆ. ಪ್ಯಾಸಿಂಜರ್ ಹಾಗೂ ವಾಣಿಜ್ಯ ವಾಹನಗಳ ನಡುವೆ ವಿಭಿನ್ನ ಮೆಕ್ಯಾನಿಸಂ ಇರುತ್ತದೆ. ಹಾಗಾಗಿ ಪ್ಯಾಸಿಂಜರ್ ವಾಹನಗಳನ್ನು ಇಂತಹ ಕೆಲಸಗಳಿಗೆ ಬಳಸಿದರೆ ವಾಹನಗಳಿಗೂ ಅಪಯ, ಓಡಿಸುವ ನಮಗೂ ಅಪಾಯ. ಕಂಟೈನರ್‌ಗಳನ್ನು ಸಾಗಿಸಲು ಮಾರುಕಟ್ಟೆಯಲ್ಲಿ ಟ್ರಕ್‌ಗಳು ಮತ್ತು ಟ್ರೇಲರ್‌ಗಳು ಲಭ್ಯವಿವೆ.

ಹಾಗಾಗಿ ವಾಣಿಜ್ಯ ವಾಹನಗಳನ್ನು ಇಂತಹ ಕೆಲಸಗಳಿಗೆ ಬಳಸಿಕೊಳ್ಳುವುದು ಉತ್ತಮ. ಒಂದು ವೇಳೆ ಬೇರೆ ದಾರಿಯಿಲ್ಲದಿದ್ದರೇ ಸಣ್ಣ ಪುಟ್ಟ ಸರಕುಗಳನ್ನು ಸಾಗಿಸಬೇಕೇ ಹೊರತು ಮನಬಂದಂತೆ ಇಷ್ಟು ದೊಡ್ಡ ಕಂಟೈನರ್ ಸಾಗಿಸುವುದು ತುಂಬಾ ಅಪಾಯ ಹಾಗೂ ನಿಯಮ ಉಲ್ಲಂಘನೆಯಾಗಿದೆ. ಪೊಲೀಸರ ಕಣ್ಣಿಗೆ ಬಿದ್ದರೂ ಕಂಟೈನರ್ ಜೊತೆ ಒಂದು ಇಂಚು ಮುಂದೆ ಸಾಗಲು ಕೂಡ ಅನುಮತಿಸುವುದಿಲ್ಲ.

Article Published On: Friday, June 9, 2023, 17:43 [IST]
English summary
Shipping container on maruti alto car viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+