ಗುಣಮಟ್ಟದಲ್ಲಿ ಸೈ ಎನಿಸಿಕೊಂಡ ಸ್ಕೋಡಾ ಸ್ಲಾವಿಯಾ... ಅಪಘಾತದಲ್ಲಿ ಪ್ರಯಾಣಿಕರು ಸೇಫ್

ಹೊಸ ಸ್ಕೋಡಾ ಕುಶಾಕ್ ಮತ್ತು ವೋಕ್ಸ್‌ವ್ಯಾಗನ್ ಟೈಗುನ್ ಗ್ಲೋಬಲ್ ಎನ್‌ಸಿಎಪಿಯಿಂದ ಈಗಾಗಲೇ 5 ಸ್ಟಾರ್ ರೇಟಿಂಗ್ ಪಡೆದಿವೆ. ಎಲ್ಲರಿಗೂ ತಿಳಿದಿರುವಂತೆ ಇವು ಸಹೋದರ ಸಂಸ್ಥೆಗಳಾಗಿವೆ, ಇವರ ಸೆಡಾನ್ ಕಾರುಗಳಾದ ಸ್ಲಾವಿಯಾ ಮತ್ತು ವರ್ಟಸ್ ಇನ್ನೂ ಪರೀಕ್ಷಿಸಬೇಕಾಗಿದೆ. ಅದಕ್ಕೂ ಮುನ್ನವೇ ಸ್ಕೋಡಾ ಸ್ಲಾವಿಯಾ ಎಷ್ಟು ಸುರಕ್ಷಿತವಾಗಿದೆ ಎಂಬುದು ಇತ್ತೀಚೆಗೆ ನಡೆದ ಅಪಘಾತವೊಂದು ಬಹಿರಂಗಪಡಿಸಿದೆ.

ಇತ್ತಿಚೆಗೆ ನಡೆದ ಸ್ಕೋಡಾ ಸ್ಲಾವಿಯಾ ಅಪಘಾತವು ಮುಂಜಾನೆ 5:50 ರ ಸುಮಾರಿಗೆ ಸಂಭವಿಸಿರುವುದಾಗಿ ವರದಿಯಾಗಿದೆ. ಅಪಘಾತದಲ್ಲಿ ಸ್ಕೋಡಾ ಸ್ಲಾವಿಯಾ ನೋಡಲು ಕೆಟ್ಟದಾಗಿ ಹಾಳಾಗಿದ್ದು, ಹೆಚ್ಚು ಹಾನಿಗೊಳಗಾಗಿರುವುದು ವಿಡಿಯೋದಲ್ಲಿ ಕಾಣುತ್ತಿದೆ. ಸ್ಲಾವಿಯಾದ ಚಾಲಕ ನಿಯಂತ್ರಣ ತಪ್ಪಿ ಲೋಡ್ ಆಗಿದ್ದ ಸರಕು ಸಾಗಣೆ ವಾಹಕಕ್ಕೆ ಡಿಕ್ಕಿ ಹೊಡೆದು ನಂತರ ಅದರ ಎಡಭಾಗದಲ್ಲಿರುವ ಫುಟ್‌ಪಾತ್‌ಗೆ ಹೆಚ್ಚಿನ ವೇಗದಲ್ಲಿ ಡಿಕ್ಕಿ ಹೊಡೆದಿದೆ. ಈ ಅಪಘಾತವು ಸ್ಲಾವಿಯಾಕ್ಕೆ ಸಾಕಷ್ಟು ಹಾನಿಯನ್ನುಂಟುಮಾಡಿದೆ.

ಫುಲ್ ಟ್ಯಾಂಕ್‌ನಲ್ಲಿ ಬರೋಬ್ಬರಿ 900 ಕಿ.ಮೀ ಓಡುವ ರಾಯಲ್ ಎನ್‌ಫೀಲ್ಡ್ ಡೀಸಲ್ ಬೈಕ್

ಹಿಂಬದಿಯ ಬಂಪರ್ ಸಂಪೂರ್ಣವಾಗಿ ಕಳಚಿ ಬಿದ್ದಿದ್ದು, ಹಿಂಬದಿಯ ಆಕ್ಸಲ್ ಕೂಡ ಮುರಿದು ಹೋಗಿದೆ. ವಾಹನವು ಫುಟ್‌ ಪಾತ್‌ಗೆ ಅಪ್ಪಳಿಸಿರುವುದನ್ನು ನಾವು ವಿಡಿಯೋದಲ್ಲಿ ನೋಡಬಹುದು. ಪ್ರಯಾಣಿಕರು ಸುರಕ್ಷಿತವಾಗಿದ್ದು, ಮುಂಭಾಗದ ಏರ್‌ ಬ್ಯಾಗ್‌ಗಳು ಸಮಯಕ್ಕೆ ತೆರೆದುಕೊಂಡ ಕಾರಣ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಕಾರಿನಿಂದ ಹೊರನಡೆದಿದ್ದಾರೆ. ಅಪಘಾತದ ತೀರ್ವತೆ ಯಾವಮಟ್ಟಿಗಿದೆ ಎಂಬುದನ್ನು ವಾಹನದ ಪರಿಸ್ಥಿತಿಯನ್ನು ಕಂಡು ತಿಳಿಯಬಹುದು. ಆದರೂ ಪ್ರಯಾಣಿಕರು ಸೇಫ್ ಆಗಿರುವುದು ಸ್ಲಾವಿಯಾ ಗುಣಮಟ್ಟವನ್ನು ತೋರುತ್ತಿದೆ.

ಇನ್ನು ವಾಹನದ ಹಾನಿಯ ಕುರಿತು ವಿವರವಾಗಿ ಮಾತನಾಡುವುದಾದರೆ ಮುಂಭಾಗದಲ್ಲಿ ಹೆಚ್ಚು ಹಾನಿಯಾಗಿರುವುದನ್ನು ನೋಡಬಹುದು. ಕಾರಿನ ಎಡ ಮುಂಭಾಗದ ಆಕ್ಸಲ್ ಸಂಪೂರ್ಣವಾಗಿ ಮುರಿದು ಬಿದ್ದ ಪರಿಣಾಮ ಟೈರ್ ಒಡೆದಿದೆ. ಸ್ಲಾವಿಯಾದ ಮುಂಭಾಗವು ಸಂಪೂರ್ಣವಾಗಿ ಕಿತ್ತುಹೋಗಿದ್ದು, ಅದನ್ನು ಸರಿಪಡಿಸಬಹುದೇ ಎಂದಬು ಅನುಮಾನವಾಗಿದೆ. ಒಟ್ಟಾರೆ ಕ್ರಾಷ್ ಟೆಸ್ಟ್‌ಗೂ ಮುನ್ನವೇ ಸ್ಕೋಡಾ ಸ್ಲಾವಿಯಾ ಗುಣಮಟ್ಟದಲ್ಲಿ ಸೈ ಎನಿಸಿಕೊಂಡಿದೆ ಎಂದು ಹೇಳಬಹುದು. ಮುಂದಿನ ದಿನಗಳಲ್ಲಿ ಕ್ರಾಷ್ ಪರೀಕ್ಷೆ ಏನು ಹೇಳಲಿದೆ ಕಾಯಬೇಕಿದೆ.

ಫುಲ್ ಟ್ಯಾಂಕ್‌ನಲ್ಲಿ ಬರೋಬ್ಬರಿ 900 ಕಿ.ಮೀ ಓಡುವ ರಾಯಲ್ ಎನ್‌ಫೀಲ್ಡ್ ಡೀಸಲ್ ಬೈಕ್

ಕ್ರ್ಯಾಶ್ ಟೆಸ್ಟ್ ರೇಟಿಂಗ್‌ಗಳನ್ನು ಇನ್ನೂ ಪಡೆದಿಲ್ಲ:
MQB A0-IN ಪ್ಲಾಟ್‌ಫಾರ್ಮ್ ಅನ್ನು ಬೇಸ್ ಆಗಿಸಿಕೊಂಡು ಇದನ್ನು ವಿನ್ಯಾಸಗೊಳಿಸಲಾಗಿದೆ, ಹೊಸ ಸ್ಕೋಡಾ ಸ್ಲಾವಿಯಾ ಜನಪ್ರಿಯ ರಾಪಿಡ್‌ಗೆ ಬದಲಿಯಾಗಿ ಬಂದಿರುವ ಮಾದರಿಯಾಗಿದೆ. ಗ್ಲೋಬಲ್ ಎನ್‌ಸಿಎಪಿ ಇನ್ನೂ ಭಾರತೀಯ-ಸ್ಪೆಕ್ ಸ್ಕೋಡಾ ಸ್ಲಾವಿಯಾವನ್ನು ಪರೀಕ್ಷಿಸಲು ಮುಂದಾಗಿಲ್ಲ. ಆದರೆ ಕ್ರ್ಯಾಶ್ ಟೆಸ್ಟ್ ಏಜೆನ್ಸಿ ಹೊಸ ಸ್ಕೋಡಾ ಕುಶಾಕ್ ಅನ್ನು ಪರೀಕ್ಷಿಸಿದೆ, ಇದು ಕೂಡ ಅದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಹಾಗಾಗಿ ಅದರಷ್ಟೇ ಗುಣಮಟ್ಟವನ್ನು ಸ್ಲಾವಿಯಾದಲ್ಲಿ ನಿರೀಕ್ಷಿಸಹುದು.

ಹೊಸ ಸ್ಕೋಡಾ ಕುಶಾಕ್ ಮತ್ತು ಫೋಕ್ಸ್‌ವ್ಯಾಗನ್ ಟೈಗನ್ ಪ್ಲಾಟ್‌ಫಾರ್ಮ್‌ಗಳು ಪರಿಪೂರ್ಣ 5 ಸ್ಟಾರ್ ರೇಟಿಂಗ್ ಅನ್ನು ಹಂಚಿಕೊಂಡಿವೆ. ಹೊಸ ಪರೀಕ್ಷಾ ಪ್ರೋಟೋಕಾಲ್‌ಗಳ ಪ್ರಕಾರ ಈ SUV ಗಳನ್ನು ಪರೀಕ್ಷಿಸಲಾಗಿದೆ. ಆದರೆ ಸ್ಲಾವಿಯಾವನ್ನು ಇನ್ನೂ ಪರೀಕ್ಷಿಸಬೇಕಾಗಿದ್ದರೂ, ಅದಕ್ಕೂ ಮುನ್ನವೇ ಅಪಘಾತವು ಕಾರಿನ ಗುಣಮಟ್ಟವನ್ನು ತೋರಿದೆ. ಕ್ರ್ಯಾಶ್ ಟೆಸ್ಟ್ ಏಜೆನ್ಸಿ ಇಂದ ಪರೀಕ್ಷಿಗೆ ಒಳಗಾದಾಗ ಕಾರು ಹೆಚ್ಚಿನ ಅಂಕಗಳನ್ನು ಗಳಿಸುವ ಸಾಧ್ಯೆಗಳು ಇವೆ ಎಂದು ಹೇಳಲಾಗುತ್ತಿದೆ.

ಪರೀಕ್ಷೆಗೂ ಮುನ್ನವೇ ಸ್ಲಾವಿಯಾ ಸ್ಕೋಡಾದಿಂದ ಮತ್ತೊಂದು ಜನಪ್ರಿಯ ಮಾರಾಟದ ಮಾದರಿಯಾಗಿ ತನ್ನ ಸಾಮರ್ಥ್ಯವನ್ನು ತೋರಿಸಿದೆ. ಪೆಟ್ರೋಲ್- ಮಾತ್ರ ಸೆಡಾನ್ ಆಗಿ ಬಿಡುಗಡೆಯಾದ ಹೊಸ ಸ್ಕೋಡಾ ಸ್ಲಾವಿಯಾ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. 1.0- ಲೀಟರ್ ಮೂರು- ಸಿಲಿಂಡರ್ ಟರ್ಬೋಚಾರ್ಜ್ಡ್ 115 ಪಿಎಸ್ ಎಂಜಿನ್ ಮತ್ತು 1.5- ಲೀಟರ್ ನಾಲ್ಕು ಸಿಲಿಂಡರ್ ಟರ್ಬೋ ಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Monday, February 27, 2023, 13:55 [IST]
English summary
Skoda slavia build quality is good passengers are safe in an accident
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+