Google Maps: ಗೂಗಲ್ ಮ್ಯಾಪ್‌ನಲ್ಲಿ ಸ್ಪೀಡೊ ಮೀಟರ್: ಇನ್ಮುಂದೆ ಟ್ರಾಫಿಕ್ ಚಲನ್‌ಗಳ ಭಯವಿಲ್ಲ!

ಇತ್ತೀಚೆಗೆ, ಗೂಗಲ್ ಮ್ಯಾಪ್ಸ್‌(Google Maps)ನಲ್ಲಿ ಮತ್ತೊಂದು ಹೊಸ ಫೀಚರ್ ಅನ್ನು ಪರಿಚಯಿಸಲಾಗಿದೆ. ಈ ಹೊಸ ಫೀಚರ್‌ನಲ್ಲಿ ರಸ್ತೆ ಸುರಕ್ಷತೆಗೆ ಆದ್ಯತೆ ನೀಡುವಡಿದ್ದು, ರಿಯಲ್-ಟೈಮ್ ಸ್ಪೀಡ್ ಲಿಮಿಟ್ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಕತ್ತಲಿರುವ ಪ್ರದೇಶಗಳು ಮತ್ತು ಪರಿಚಯವಿಲ್ಲದ ಸಂಚಾರ ನಿಯಮಗಳಂತಹ ಸವಾಲಿನ ಸಂದರ್ಭಗಳಲ್ಲಿ ಇದು ಉಪಯುಕ್ತವಾಗಿರುತ್ತದೆ.

ಈ ಹೊಸ ವೈಶಿಷ್ಟ್ಯದೊಂದಿಗೆ ರಿಯಲ್-ಟೈಮ್ ಸ್ಪೀಡ್ ಲಿಮಿಟ್ ಮಾಹಿತಿಯನ್ನು ತಿಳಿದುಕೊಳ್ಳುವ ಮೂಲಕ ವಾಹನ ಚಾಲಕರು ಆಯಾ ಪ್ರದೇಶಗಳಲ್ಲಿ ವೇಗ ನಿಯಂತ್ರಣದ ಸೂಚನೆಗಳನ್ನು ಪಡೆಯಬಹುದು. ಉದಾಹರಣೆಗೆ, ಹೆದ್ದಾರಿಯಿಂದ ರಾಜ್ಯ ಅಥವಾ ಗ್ರಾಮೀಣ ರಸ್ತೆಗೆ ಪರಿವರ್ತನೆ ಮಾಡುವಾಗ ಚಾಲಕರು ತಮ್ಮ ವೇಗವನ್ನು ನಿಯಂತ್ರಿಸಬೇಕಾಗಬಹುದು. ಆದರೆ, ಚಾಲಕರಿಗೆ ಇದನ್ನು ತ್ವರಿತವಾಗಿ ಗುರುತಿಸಲು ಕಷ್ಟವಾಗುತ್ತದೆ. ಕೆಲವು ಪ್ರದೇಶಗಳು ವೇಗದ ಮಿತಿಗಳನ್ನು ಹೊಂದಿರುತ್ತವೆ.

speedometer-in-google-maps-android-phones-explanation

ಆದ್ರೆ ಇದನ್ನು ತಿಳಿಯದೇ ವೇಗದಲ್ಲಿ ಚಲಿಸಿ ಪೊಲೀಸ್ ಚಲನ್‌ಗೆ ಕಾರಣವಾಗಬಹುದು. ಇಂತಹ ಸ್ಪೀಡ್ ಲಿಮಿಟ್ ಗುರುತಿಸುವುದು ವಿಶೇಷವಾಗಿ ರಾತ್ರಿಯಲ್ಲಿ ಸವಾಲಾಗಬಹುದು. ಹಾಗಾಗಿಯೇ ಉತ್ತಮ ಸುರಕ್ಷತೆ ಮತ್ತು ನ್ಯಾವಿಗೇಷನ್ ಸಹಾಯವನ್ನು ಒದಗಿಸಲು, ಗೂಗಲ್ ಮ್ಯಾಪ್ಸ್ ಸ್ಪೀಡೋಮೀಟರ್ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸಿದೆ. ಪ್ರಪಂಚದಾದ್ಯಂತ ರಸ್ತೆಗಳಿಗೆ ನೈಜ-ಸಮಯದ ವೇಗ ಮಿತಿ ಮಾಹಿತಿಯನ್ನು ಪ್ರದರ್ಶಿಸುತ್ತದೆ. ಈ ವೈಶಿಷ್ಟ್ಯವು ಪ್ರಸ್ತುತ ಆಂಡ್ರಾಯ್ಡ್ ಫೋನ್‌ಗಳಲ್ಲಿ ಮಾತ್ರ ಲಭ್ಯವಿದೆ.

ಬಳಸುವುದು ಹೇಗೆ: ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ Google ಮ್ಯಾಪ್ಸ್ ಅಪ್ಲಿಕೇಶನ್ ತೆರೆಯಿರಿ. ಮ್ಯಾಪ್ಸ್ ಅಪ್ಲಿಕೇಶನ್‌ ಮೇಲಿನ ಬಲ ಮೂಲೆಯಲ್ಲಿ, ನಿಮ್ಮ ಪ್ರೊಫೈಲ್ ಚಿತ್ರ ಅಥವಾ ಹೆಸರನ್ನು ನೀವು ನೋಡಬಹುದು, ಅಲ್ಲಿ ಡ್ರಾಪ್-ಡೌನ್ ಮೆನು ತೆರೆಯಲು ನಿಮ್ಮ ಪ್ರೊಫೈಲ್ ಚಿತ್ರ ಅಥವಾ ಹೆಸರಿನ ಮೇಲೆ ಒತ್ತಿ. ಅದರ ಡ್ರಾಪ್-ಡೌನ್ ಮೆನುವಿನಲ್ಲಿ, "ಸೆಟ್ಟಿಂಗ್ಸ್" ಆಯ್ಕೆಮಾಡಿ, ಇದು ಸೆಟ್ಟಿಂಗ್ ಮೆನುವನ್ನು ತೆರೆಯುತ್ತದೆ.

speedometer-in-google-maps-android-phones-explanation

ಅಲ್ಲಿಂದ, ಮುಂದಿನ ಹಂತಕ್ಕೆ ಮುಂದುವರಿಯಲು "ನ್ಯಾವಿಗೇಷನ್ ಸೆಟ್ಟಿಂಗ್ಸ್" ಆಯ್ಕೆಮಾಡಿ. ಒಮ್ಮೆ ನೀವು ನ್ಯಾವಿಗೇಷನ್ ಸೆಟ್ಟಿಂಗ್ ತರೆದ ಬಳಿಕ, ಕೆಳಗೆ ಹೋದರೆ "ಡ್ರೈವಿಂಗ್ ಆಪ್ಷನ್ಸ್" ಎಂಬ ವಿಭಾಗವನ್ನು ನೋಡಬಹುದು. ಈ ವಿಭಾಗವು ನಿಮ್ಮ ಚಾಲನಾ ಅನುಭವಕ್ಕಾಗಿ ವಿವಿಧ ವೈಶಿಷ್ಟ್ಯಗಳು ಮತ್ತು ಆದ್ಯತೆಗಳನ್ನು ಒಳಗೊಂಡಿದೆ. "ಡ್ರೈವಿಂಗ್ ಆಪ್ಷನ್ಸ್" ವಿಭಾಗದಲ್ಲಿ, ನೀವು ಸ್ಪೀಡೋಮೀಟರ್ ಟಾಗಲ್ ಸ್ವಿಚ್ ಅನ್ನು ನೋಡಬಹುದು.

ಸ್ಪೀಡೋಮೀಟರ್ ಅನ್ನು ಸಕ್ರಿಯಗೊಳಿಸಲು, ನಿಮ್ಮ ಚಾಲನೆಯ ವೇಗದಲ್ಲಿ ನೈಜ-ಸಮಯದ ಮಿತಿಯನ್ನು ಪಡೆಯಲು ಆ ಸ್ವಿಚ್ ಅನ್ನು "ಆನ್" ಮಾಡಿ. ನೀವು ಸ್ಪೀಡೋಮೀಟರ್ ಅನ್ನು ಪ್ರಾರಂಭಿಸಿದ ನಂತರ, Google ಮ್ಯಾಪ್ಸ್‌ನೊಂದಿಗೆ ನ್ಯಾವಿಗೇಟ್ ಮಾಡುವಾಗ ಅದು ನಿಮ್ಮ GPS ವೇಗವನ್ನು ತೋರಿಸುತ್ತದೆ. ನಿಮ್ಮ ವಾಹನವು ವೇಗದ ಮಿತಿಯನ್ನು ಮೀರಿದರೆ ಅದು ನಿಮಗೆ ಎಚ್ಚರಿಕೆ ನೀಡುತ್ತದೆ.

speedometer-in-google-maps-android-phones-explanation

ಸ್ಪೀಡೋಮೀಟರ್ ಹೇಗೆ ಕೆಲಸ ಮಾಡುತ್ತದೆ?: ಅಧಿಕೃತ ಬ್ಲಾಗ್ ಪೋಸ್ಟ್ ಪ್ರಕಾರ, ಗಲ್ಲಿಗಳ ವೀಕ್ಷಣೆ, ಥರ್ಡ್ ಪಾರ್ಟಿ ಚಿತ್ರಗಳಿಂದ ವೇಗದ ಮಿತಿಗಳನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ (AI)ಯನ್ನು ಬಳಸುತ್ತದೆ. ಆದ್ದರಿಂದ ಸ್ಪೀಡೋಮೀಟರ್ ಗೂಗಲ್ ಮ್ಯಾಪ್ಸ್ ವೇಗವನ್ನು ನಿಯಂತ್ರಿಸುತ್ತದೆ. ಇದು ವೇಗದ ಮಿತಿಯನ್ನು ನಿರ್ಧರಿಸಲು GPS ಮಾಹಿತಿಯನ್ನು ಬಳಸುತ್ತದೆ.

ಹಾಗೆಯೇ Google ಮ್ಯಾಪ್ಸ್ ಟ್ರಾಫಿಕ್ ಮಾದರಿಗಳನ್ನು ಸಹ ವಿಶ್ಲೇಷಿಸುತ್ತದೆ. ಇದು ಅಧಿಕೃತವಾಗಿ ಲಭ್ಯವಿರುವ ಡೇಟಾದೊಂದಿಗೆ ಕ್ರಾಸ್-ರೆಫರೆನ್ಸ್ ಮಾಡುತ್ತದೆ. ಈ ಮೂಲಕ ಸ್ಪೀಡೋಮೀಟರ್ ವೈಶಿಷ್ಟ್ಯವು ಚಾಲಕರು ವೇಗದ ಮಿತಿಯಲ್ಲಿ ಉಳಿಯಲು ಸಹಾಯ ಮಾಡುತ್ತದೆ. ಹಾಗೆಯೇ ವಾಹನ ತಯಾರಕರು ಸುಧಾರಿತ ಸಹಾಯಕ ಚಾಲನಾ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಕೂಡ ಸಹಾಯ ಮಾಡುತ್ತದೆ.

speedometer-in-google-maps-android-phones-explanation

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, November 20, 2023, 17:11 [IST]
English summary
Speedometer in google maps android phones explanation
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+