ಸ್ಪೋರ್ಟಿ ಲುಕ್‌ನ ಜಿಮ್ನಿ ಸ್ಪೆಷಲ್ ಹೆರಿಟೇಜ್ ಎಡಿಷನ್ ಪರಿಚಯಿಸಿದ ಸುಜುಕಿ

ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸುಜುಕಿ ಜಿಮ್ನಿ ಎಸ್‍ಯುವಿಯು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿ ಹೊಸ ಸಂಚಲನವನ್ನು ಸೃಷ್ಟಿಸಿತು. ಈ ಸುಜುಕಿ ಜಿಮ್ನಿ ಎಸ್‍ಯುವಿ ದಶಕಗಳಿಂದ ಜಾಗತಿಕ ಮಾರುಕಟ್ಟೆಗಳಲ್ಲಿ ಸಾಮಾನ್ಯ ದೃಶ್ಯವಾಗಿದೆ. ಇದೀಗ ಈ ಜಿಮ್ನಿ ಎಸ್‍ಯುವಿಗೆ ಭಾರತೀಯ ಮಾರುಕಟ್ಟೆಯಲ್ಲಿಯೂ ಕೂಡ ಬಾರೀ ಬೇಡಿಕೆಯನ್ನು ಪಡೆದುಕೊಂಡಿದೆ.

2023ರ ಆಟೋ ಎಕ್ಸ್‌ಪೋದಲ್ಲಿ ಕಾಣಿಸಿಕೊಂಡ ಸುಜುಕಿ ಜಿಮ್ನಿ ಮಾದರಿಯು ಮುಂದಿನ 2-3 ತಿಂಗಳುಗಳಲ್ಲಿ ರಸ್ತೆಗಿಳಿಯುವ ಸಾಧ್ಯತೆಯಿದೆ. ಇನ್ನು ಮಾರುತಿ ಸುಜುಕಿ ಕಂಪನಿಯ ಜಿಮ್ನಿ ಎಸ್‍ಯುವಿಗಾಗಿ 22,000 ಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ಪಡೆದುಕೊಂಡಿದೆ. ಸುಜುಕಿ ಇತ್ತೀಚೆಗೆ ಆಸ್ಟ್ರೇಲಿಯಾದ ಮಾರುಕಟ್ಟೆಯಲ್ಲಿ ಜಿಮ್ನಿ ಸ್ಪೆಷಲ್ ಹೆರಿಟೇಜ್ ಎಡಿಷನ್ ಅನ್ನು 33,490 ಆಸಿ ಡಾಲರ್‌ (ಸುಮಾರು ರೂ.18 ಲಕ್ಷ) ಬೆಲೆಗೆ ಪರಿಚಯಿಸಿದರು.

ಸ್ಪೋರ್ಟಿ ಲುಕ್‌ನ ಜಿಮ್ನಿ ಸ್ಪೆಷಲ್ ಹೆರಿಟೇಜ್ ಎಡಿಷನ್ ಪರಿಚಯಿಸಿದ ಸುಜುಕಿ

ಸುಜುಕಿ ಜಿಮ್ನಿ ಎಸ್‍ಯುವಿಯನ್ನು ಮೊದಲ ಬಾರಿಗೆ 1970 ರಲ್ಲಿ ಬಿಡುಗಡೆಗೊಳಿಸಿತು. ಅಂದಿನಿಂದ ಇದು ಪ್ರಪಂಚದಾದ್ಯಂತ ದಾಖಲೆ ಪ್ರಮಾಣದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸುಜುಕಿ ಎಸ್‍ಯುವಿಯ ಎರಡೂ-ಡೋರಿನ ಆವೃತ್ತಿಯಲ್ಲಿ ಆವೃತ್ತಿಯನ್ನು ಪ್ರದರ್ಶಿಸಿದೆ. ಇನ್ನು ಐದು-ಡೋರಿನ ಜಿಮ್ನಿ ಎಸ್‍ಯುವಿ ಬಿಡುಗಡೆಯಾಗುವ ವಿಶ್ವದ ಮೊದಲ ಮಾರುಕಟ್ಟೆ ಭಾರತವಾಗಿದೆ ಎಂಬುವುದು ಗಮನಾರ್ಹ ಅಂಶವಾಗಿದೆ. ಸುಜುಕಿ ಜಿಮ್ನಿ ಸ್ಪೆಷಲ್ ಹೆರಿಟೇಜ್ ಎಡಿಷನ್ ಅನ್ನ್ನು 5-ಡೋರಿನ ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಯ್ಕೆ ಮತ್ತು 4x4 ಆವೃತ್ತಿಯೊಂದಿಗೆ ಮಾತ್ರ ಲಭ್ಯವಿದೆ.

ಹೆಚ್ಚುವರಿಯಾಗಿ, ಹಿಂಭಾಗದ ಮಡ್‌ಫ್ಲ್ಯಾಪ್‌ಗಳ ಮೇಲೆ 'ಸುಜುಕಿ' ಎಂಬಾಸಿಂಗ್ ಹೊಂದಿದೆ. ಗ್ಲೋಬಲ್ ಸ್ಪೆಕ್ ಜಿಮ್ನಿ, ಅದರ ವಿಶೇಷ ಆವೃತ್ತಿಯಲ್ಲಿ, ಈ ಎಸ್‍ಯುವಿ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಸ್ಪೋರ್ಟ್ಸ್ ರೆಡ್ ಮಡ್‌ಫ್ಲ್ಯಾಪ್‌ಗಳು, ರೆಟ್ರೊ ಥೀಮ್‌ನೊಂದಿಗೆ ಬಣ್ಣದ ಡೆಕಾಲ್‌ಗಳು ಮತ್ತು ಬ್ಲ್ಯಾಕ್ ಪರ್ಲ್, ಜಂಗಲ್ ಗ್ರೀನ್, ವೈಟ್ ಮತ್ತು ಮೀಡಿಯಂ ಗ್ರೇ ಅನ್ನು ಒಳಗೊಂಡಿರುವ ವಿಶಿಷ್ಟವಾದ ಬಾಡಿ ಬಣ್ಣದ ಆಯ್ಕೆಗಳನ್ನು ಹೊಂದಿವೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಜಿಮ್ನಿ ಎಸ್‍ಯುವಿಯು ಝೀಟಾ ಮತ್ತು ಆಲ್ಫಾ ಎಂಬ ಎರಡು ಟ್ರಿಮ್‌ಗಳಲ್ಲಿ ಲಭ್ಯವಿರುತ್ತದೆ. ಆಸಕ್ತ ಗ್ರಾಹಕರು ಅಧಿಕೃತ NEXA ಡೀಲರ್‌ಶಿಪ್‌ಗಳಲ್ಲಿ ರೂ 25,000 ಟೋಕನ್ ಮೊತ್ತವನ್ನು ಪಾವತಿಸಿ ಬುಕ್ ಮಾಡಬಹುದು. ಮಾರುತಿ ಸುಜುಕಿ ಜಿಮ್ನಿ ಎಸ್‍ಯುವಿಯು ಬಿಡುಗಡೆಯಾದ ಬಳಿಕ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗೂರ್ಖಾಗೆ ಭಾರೀ ಪೈಪೋಟಿ ನೀಡಲಿದೆ.

ಈ ಹೊಸ ಸುಜುಕಿ ಜಿಮ್ನಿ ಎಸ್‍ಯುವಿಯಲ್ಲಿ Arkamys ಸರೌಂಡ್ ಸೆನ್ಸ್‌ನೊಂದಿಗೆ 9-ಇಂಚಿನ SmartPlay Pro+ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. ಇದರೊಂದಿಗೆ ಈ ಮಾರುತಿ ಜಿಮ್ನಿ 5 ಡೋರ್ ಎಸ್‍ಯುವಿಯಲ್ಲಿ ಇತ್ತೀಚಿನ ಸ್ಮಾರ್ಟ್‌ಫೋನ್ ಸಂಪರ್ಕ, ಲೆದರ್ ಸುತ್ತುವ ಸ್ಟೀರಿಂಗ್ ವೀಲ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪುಶ್ ಸ್ಟಾರ್ಟ್/ಸ್ಟಾಪ್, ಎಲೆಕ್ಟ್ರಿಕಲ್ ಅಡ್ಜಸ್ಟ್ ಮಾಡಬಹುದಾದ ಗ್ಲಾಸ್ ಅನ್ನು ಹೊಂದಿದೆ.

ಇನ್ನು ಈ ಸುಜುಕಿ ಜಿಮ್ನಿ ಎಸ್‍ಯುವಿಯಲ್ಲಿ ವಾಷರ್, ಫಾಗ್ ಜೊತೆ LED ಆಟೋ ಹೆಡ್‌ಲ್ಯಾಂಪ್‌ಗಳಂತಹ ವೈಶಿಷ್ಟ್ಯಗಳು ಲ್ಯಾಂಪ್‌ಗಳನ್ನು ಹೊಂದಿವೆ.ಎಸ್‍ಯುವಿಯ ಫ್ರಂಟ್ ಮತ್ತು ರಿಯರ್ ವೆಲ್ಡ್ ಟೋ ಹುಕ್ಸ್, ಫ್ರಂಟ್ ಮತ್ತು ರಿಯರ್ ಸೀಟ್ ಅಡ್ಜಸ್ಟ್ ಮಾಡಬಹುದಾದ ಹೆಡ್‌ರೆಸ್ಟ್ ಅನ್ನು ಹೊಂದಿದೆ. ಇದರೊಂದಿಗೆ ಸ್ಟೇನ್ ತೆಗೆಯಬಹುದಾದ ಐಪಿ ಫಿನಿಶ್ ಅನ್ನು ಹೊಂದಿದೆ. ಸ್ಟೇನ್ ತೆಗೆಯಬಹುದಾದ ಐಪಿ ಫಿನಿಶ್ ಮತ್ತು ಡ್ರೈವರ್ ಸೈಡ್ ಪವರ್ ವಿಂಡೋವನ್ನು ಹೊಂದಿದೆ.

ಇನ್ನು ಬಾಡಿ ಬಣ್ಣದ ORMVಗಳು, ಅಲಾಯ್ ವ್ಹೀಲ್ ಗಳು ಮತ್ತು ಟಾಪ್-ಎಂಡ್ ಆಲ್ಫಾ ಟ್ರಿಮ್‌ನಲ್ಲಿ ಪ್ರತ್ಯೇಕವಾಗಿ ನೀಡಲಾಗುತ್ತದೆ. ಸ್ಟ್ಯಾಂಡರ್ಡ್ ಫೀಚರ್ ಕಿಟ್ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕದೊಂದಿಗೆ ಸ್ಮಾರ್ಟ್‌ಪ್ಲೇ ಪ್ರೊ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಈ ಎಸ್‍ಯುವಿಯಲ್ಲಿ ಎಂಐಡಿ (ಟಿಎಫ್‌ಟಿ ಕಲರ್ ಡಿಸ್ಪ್ಲೇ) ಮತ್ತು ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಅನ್ನು ಹೊಂದಿರುತ್ತದೆ.

Article Published On: Saturday, March 4, 2023, 14:50 [IST]
English summary
Suzuki unveiled jimny special heritage edition details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+