Tata: ಟಾಟಾದ ಈ ಕಾರನ್ನು ಖರೀದಿಸಬೇಕೇ.. ಇದು ಉತ್ತಮ ಸಮಯ, ಬೈಕ್‌ನಂತೆ ಮೈಲೇಜ್!

ಭಾರತದಲ್ಲಿ ಟಾಟಾ (Tata) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿದೆ. ಅದರ ಕಾರುಗಳು ಆಕರ್ಷಕ ವೈಶಿಷ್ಟ್ಯ, ವಿನ್ಯಾಸದೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವುದರಿಂದ ಹೆಚ್ಚಿನ ಮಂದಿ ಇಷ್ಟಪಟ್ಟು ಖರೀದಿಸುತ್ತಾರೆ. ದೀಪಾವಳಿ ಹಿನ್ನೆಲೆ, ದೇಶಾದ್ಯಂತ ವಿವಿಧ ಟಾಟಾ ಡೀಲರ್​ಶಿಪ್ ಭರ್ಜರಿ ರಿಯಾಯಿತಿಯನ್ನು ನೀಡಿವೆ.​

ಟಾಟಾ ಆಲ್ಟ್ರೋಜ್ (Tata Altroz) ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದ್ದು, ಈ ಅಕ್ಟೋಬರ್ ಅತ್ಯುತ್ತಮ ರಿಯಾಯಿತಿ ಪ್ರಯೋಜವನ್ನು ಹೊಂದಿದೆ. ಈ ಕಾರು, ರೂ.20,000 ನಗದು ರಿಯಾಯಿತಿ (cash discount), ರೂ.10,000 ವಿನಿಮಯ ಬೋನಸ್ (exchange bonus) ಹಾಗೂ 5,000 ಕಾರ್ಪೊರೇಟ್ ರಿಯಾಯಿತಿ (corporate discount) ಅನ್ನು ಒಳಗೊಂಡಿದೆ. ನೂತನ ಆಲ್ಟ್ರೋಜ್ ರೂ.6.60 ಲಕ್ಷದಿಂದ ರೂ.10.74 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

Tata: ಟಾಟಾದ ಈ ಕಾರನ್ನು ಖರೀದಿಸಬೇಕೇ.. ಇದು ಉತ್ತಮ ಸಮಯ, ಬೈಕ್‌ನಂತೆ ಮೈಲೇಜ್!

ಈ ಕಾರು, ಎಕ್ಸ್ಇ, ಎಕ್ಸ್ಇ ಪ್ಲಸ್, ಎಕ್ಸ್ಎಂ ಪ್ಲಸ್, ಎಕ್ಸ್‌ಟಿ ಸೇರಿದಂತೆ ವಿವಿಧ ರೂಪಾಂತರಗಳ ಆಯ್ಕೆಯಲ್ಲಿ ಸಿಗುತ್ತದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. ಇದರ 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 86 PS ಪವರ್, 113 Nm ಪೀಕ್ ಟಾರ್ಕ್,1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 110 PS ಗರಿಷ್ಠ ಪವರ್, 140 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

1.5-ಲೀಟರ್ ಡೀಸೆಲ್ ಎಂಜಿನ್, 90 PS ಗರಿಷ್ಠ ಪವರ್, 200 Nm ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯ ಒಳಗೊಂಡಿದೆ. 5-ಸ್ವೀಡ್ ಮ್ಯಾನುವಲ್ ಹಾಗೂ 6-ಸ್ವೀಡ್ ಡುಯಲ್ ಕ್ಲಚ್ ಟ್ರಾಸ್ಮಿಷನ್ (DCT) ಗೇರ್ ಬಾಕ್ಸ್ ಅನ್ನು ಹೊಂದಿದೆ. ಸಿಎನ್‌ಜಿ ಪವರ್ ಟ್ರೈನ್ ಪಡೆದಿರುವ ಕಾರು, 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಪಡೆದಿದೆ.

Tata: ಟಾಟಾದ ಈ ಕಾರನ್ನು ಖರೀದಿಸಬೇಕೇ.. ಇದು ಉತ್ತಮ ಸಮಯ, ಬೈಕ್‌ನಂತೆ ಮೈಲೇಜ್!

ಇದು 73.5 PS ಹಾಗೂ 103 Nm ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದ್ದು, ಕೇವಲ 5-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಟಾಟಾ ಆಲ್ಟ್ರೋಜ್ ಪೆಟ್ರೋಲ್ ಹಾಗೂ ಡೀಸೆಲ್ ರೂಪಾಂತರ 18.5 kmpl - 23.60kmpl, ಸಿಎನ್‌ಜಿ ವೇರಿಯೆಂಟ್ ಬೈಕ್‌ನಂತೆ 26.2 km/kg ಮೈಲೇಜ್ ನೀಡುತ್ತದೆ.

ಹೊಸ ಟಾಟಾ ಆಲ್ಟ್ರೋಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿರುವುದರಿಂದ 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕನೆಕ್ಟ್ದ್ ಕಾರ್ ಟೆಕ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಬಿಯೆಂಟ್ ಲೈಟಿಂಗ್, ಕ್ರೂಸ್ ಕಂಟ್ರೋಲ್ ಹಾಗೂ ಸಿಂಗಲ್ ಪೇನ್ ಸನ್‌ರೂಫ್ ಸೇರಿದಂತೆ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಈ ಕಾರು ಸುರಕ್ಷತೆಯ ದೃಷ್ಟಿಯಿಂದ ಅತ್ಯುತ್ತಮವಾಗಿದ್ದು, ಗ್ಲೋಬಲ್ ಎನ್‌ಸಿಎಪಿಯಿಂದ ವಯಸ್ಕರ ರಕ್ಷಣೆ ವಿಭಾಗದಲ್ಲಿ 5 ಸ್ಟಾರ್, ಮಕ್ಕಳ ರಕ್ಷಣೆ ವಿಭಾಗದಲ್ಲಿ 3 ಸ್ಟಾರ್ ರೇಟಿಂಗ್ ಪಡೆದಿದೆ. ಸೇಫ್ಟಿ ಸಲುವಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌, ISOFIX ಚೈಲ್ಡ್-ಸೀಟ್ ಆಂಕರ್‌, ಆಟೋ ಪಾರ್ಕ್ ಲಾಕ್ ಮತ್ತು ರೇರ್ ಪಾರ್ಕಿಂಗ್ ಸೇನಾರ್ಸ್ ಸೇರಿದಂತೆ ವಿವಿಧ ಫೀಚರ್ಸ್ ಇವೆ. ಗಮನಿಸಿ.. ಈ ಡಿಸ್ಕೌಂಟ್ ಆಫರ್ ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಡೀಲರ್​ಶಿಪ್ ಸಂಪರ್ಕಿಸಿರಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, November 13, 2023, 16:43 [IST]
English summary
Tata altroz available with best discount this car mileage like a bike
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+