180-ಅಡಿ ಆಳಕ್ಕೆ ಕಾರು ಬಿದ್ದರೆ ಪ್ರಯಾಣಿಕರು ಬದುಕಲು ಸಾಧ್ಯೆವೇ? TATA ಕಾರುಗಳಿಂದ ಮಾತ್ರ ಸಾಧ್ಯ!

ಟಾಟಾ ಆಲ್ಟ್ರೋಜ್ ನಿಯಂತ್ರಣ ತಪ್ಪಿ ರಸ್ತೆ ಬದಿಯಿಂದ 180 ಅಡಿ ಆಳಕ್ಕೆ ಬಿದ್ದಿರುವ ದೃಷ್ಯಗಳನ್ನು ಅಲ್ಲಿನ ಸ್ಥಳೀಯರು ಸೆರೆಹಿಡಿದಿದ್ದು, ಇಂತಹ ಅಪಘಾತದಲ್ಲೂ ಯಾರಾದರೂ ಬದುಕುಳಿಯಲು ಸಾಧ್ಯಯೇ? ಆದ್ರೆ ಇದು ಟಾಟಾ ಕಾರುಗಳಿಂದ ಮಾತ್ರ ಸಾಧ್ಯ. ಹೌದು 180 ಅಡಿ ಆಳಕ್ಕೆ ಬಿದ್ದಿರೂ ಪ್ರಯಾಣಿಕರು ಗಾಯಗಳಿಂದ ಹೊರಬಿದ್ದಿದ್ದಾರೆ.

ವಿಡಿಯೋದಲ್ಲಿರುವ ಮಾಹಿತಿಯ ಪ್ರಕಾರ, ಮಹಾರಾಷ್ಟ್ರದ ಪುಣೆಯಲ್ಲಿ TATA ಆಲ್ಟ್ರೋಜ್ ರಸ್ತೆ ಬದಿಯಿಂದ 180 ಅಡಿ ಕೆಳಗೆ ಬಿದ್ದಿದೆ. ಅಪಘಾತಕ್ಕೊಳಗಾದ ಟಾಟಾ ಆಲ್ಟ್ರೋಜ್ ಕಾರನ್ನು ಮಹಿಳೆ ಓಡಿಸುತ್ತಿದ್ದರು ಎನ್ನಲಾಗಿದ್ದು, ಈ ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡಿರುವುದನ್ನು ನಾವು ವಿಡಿಯೋದಲ್ಲಿ ಸ್ಪಷ್ಟವಾಗಿ ನೋಡಬಹುದು. ಆದ್ರೂ ಮಹಿಳೆ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾರೆ ಎಂದು ವರಿದಿಯಾಗಿದೆ.

tata

ನಿಜಕ್ಕೆ ಅವರು ಅಪಘಾತದ ನಂತರ ನಡೆಯಲು ಕೂಡ ಸಾಧ್ಯವಾಯಿತು ಎಂದು ಸ್ಥಳೀಯರು ಹೇಳಿರುವುದಾಗಿ ವಿಡಿಯೋದಲ್ಲಿ ತಿಳಿಸಲಾಗಿದೆ. ಇದು ಕಾರಿನ ನಿರ್ಮಾಣ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಈ ಅಪಘಾತ ಹೇಗೆ ಸಂಭವಿಸಿತು, ನಿಖರ ಕಾರಣವೇನು ಎಂಬುದರ ಕುರಿತು ಯಾವುದೇ ಉಲ್ಲೇಖವಿಲ್ಲ. ಮಹಿಳೆ ನಿಯಂತ್ರಣ ಕಳೆದುಕೊಂಡು ಹೀಗಾಗಿದೆ ಎಂದು ಮಾತ್ರ ಹೇಳಲಾಗುತ್ತಿದೆ.

ಟಾಟಾ Altroz ಗ್ಲೋಬಲ್ NCAP ನಲ್ಲಿ ದೇಶದ 5-ಸ್ಟಾರ್ ರೇಟಿಂಗ್ ಪಡೆದಿರುವ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳಲ್ಲಿ ಟಾಪ್ ಮಾದರಿಯಾಗಿದೆ. ಇತ್ತೀಚೆಗೆ ಗ್ರಾಹಕರು ಈ ರೇಟಿಂಗ್ ನೋಡಿ ಕೂಡ ಕಾರುಗಳನ್ನು ಖರೀದಿಸುತ್ತಿದ್ದಾರೆ. ಆದ್ದರಿಂದ ಆಲ್ಟ್ರೋಜ್ ಸುರಕ್ಷತೆಯ ರೇಟಿಂಗ್ ಅದರ ಮಾರಾಟದಲ್ಲಿಯೂ ಪ್ರತಿಫಲಿಸುತ್ತದೆ. ಜೊತೆಗೆ ಇದು ಅತ್ಯಾಕರ್ಷಕ ಡಿಸೈನ್, ಸ್ಪೋರ್ಟಿ ಲುಕ್‌ನಲ್ಲಿ ಬರುತ್ತದೆ.

tata

ಸಿಎನ್‌ಜಿನಲ್ಲೂ ಕಮಾಲ್: ಆಟೋ ಎಕ್ಸ್‌ಪೋ 2023 ರಲ್ಲಿ ತನ್ನ ಹೊಸ ಟ್ವಿನ್-ಸಿಲಿಂಡರ್ ತಂತ್ರಜ್ಞಾನದೊಂದಿಗೆ ಟಾಟಾ ಮೋಟಾರ್ಸ್ Altroz iCNG ಮಾದರಿಯೊಂದಿಗೆ ಮುಂದಾಗಿತ್ತು. ಟೈಲ್‌ಗೇಟ್‌ನಲ್ಲಿರುವ iCNG ಬ್ಯಾಡ್ಜ್ ಹೊರತುಪಡಿಸಿ CNG ಆವೃತ್ತಿಯ ವಿನ್ಯಾಸವು ಬಹುತೇಕ ಇಂಧನ ಚಾಲಿತ ಮಾದರಿಯಂತೆಯೇ ಇರುತ್ತದೆ. ನೀವು ಯಾವ ಇಂಧನ ಬಳಸುತ್ತಿರುವಿರಿ ಎಂಬುದನ್ನು ತಿಳಿಸುವ ಸೆಂಟರ್ ಕನ್ಸೋಲ್‌ನಲ್ಲಿನ ಹೊಸ CNG ಬಟನ್ ಅನ್ನು ಹೊರತುಪಡಿಸಿ, ಮಿಕ್ಕೆಲ್ಲವು ಒಂದೇ ಆಗಿವೆ.

ಹೊಸ Altroz iCNG ವಿವಿಧ ವೈಶಿಷ್ಟ್ಯಗಳೊಂದಿಗೆ ಪ್ಯಾಕ್ ಮಾಡಲ್ಪಟ್ಟಿದೆ. ಪೆಟ್ರೋಲ್ ಆವೃತ್ತಿಯೊಂದಿಗೆ ಬರುವ ಎಲ್ಲಾ ವೈಶಿಷ್ಟ್ಯಗಳನ್ನು ಇದರಲ್ಲೂ ನೋಡಬಹುದು. Altroz iCNG ನ ಟಾಪ್-ಸ್ಪೆಕ್ ಆವೃತ್ತಿಗಳು ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು, ರೈನ್-ಸೆನ್ಸಿಂಗ್ ವೈಪರ್‌ಗಳು, ಟಾಟಾದ iRA ಸ್ಮಾರ್ಟ್‌ಕಾರ್ ಸೆಟಪ್‌ನೊಂದಿಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು Android Auto ಮತ್ತು Apple CarPlay ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಟಾಪ್-ಆಫ್-ಲೈನ್ Altroz iCNG ನಲ್ಲಿನ ಇತರ ವೈಶಿಷ್ಟ್ಯಗಳೆಂದರೆ ವೈರ್‌ಲೆಸ್ ಫೋನ್ ಚಾರ್ಜರ್, ಏರ್ ಪ್ಯೂರಿಫೈಯರ್, ಲೆಥೆರೆಟ್ ಸೀಟ್ ಅಪ್ಹೋಲ್ಸ್ಟರಿ ಮತ್ತು ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳನ್ನು ನೋಡಬಹುದು. ಟೈಲ್‌ಗೇಟ್ ಅನ್ನು ತೆರೆದಾಗ ಬೂಟ್‌ನಲ್ಲಿ ವಿನ್ಯಾಸ ಮತ್ತು ಪ್ರಾಯೋಗಿಕತೆಯ ವಿಷಯದಲ್ಲಿ ದೊಡ್ಡ ಬದಲಾವಣೆ ಕಂಡುಬರುತ್ತದೆ. ಟಾಟಾದ ಟ್ವಿನ್ 30kg CNG ಸಿಲಿಂಡರ್‌ಗಳನ್ನು ಬೂಟ್‌ನ ಅಡಿಯಲ್ಲಿ ನೊಡಬಹುದು.

ಇನ್ನೂ ಹಲವು ವೈಶಿಷ್ಟ್ಯಗಳೊಂದಿಗೆ ತನ್ನ ವಿಭಾಗದಲ್ಲಿ ಉತ್ತಮ ಮಾರಾಟ ಕಾಣುತ್ತಿದೆ. ಟಾಟಾ ಮೋಟಾರ್ಸ್ ಈ ಆಲ್ಟ್ರೋಜ್ ಐಸಿಎನ್‌ಜಿ ಪರಿಚಯಿಸಿದಾಗಿನಿಂದ ಗ್ರಾಹಕರಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟಾಟಾ ಕಾರುಗಳು ಹಾಗೂ ಅವುಗಳ ನಿರ್ಮಾಣ ಗುಣಮಟ್ಟದ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ, ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ಡ್ರೈವ್‌ಸ್ಪಾರ್ಕ್‌ನೊಂದಿಗೆ ಸಂಪರ್ಕದಲ್ಲಿರಿ.

Article Published On: Friday, June 16, 2023, 16:02 [IST]
English summary
Tata altroz car falls 180 feet deep passengers safe
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+