Tata Altroz iCNG: ಮಾರುತಿ, ಟೊಯೊಟಾ ಸಿಎನ್‌ಜಿ ಕಾರುಗಳ ಪ್ರತಿಸ್ಪರ್ಧಿಯಾದ ಹೊಸ ಟಾಟಾ ಕಾರಿನ ಬುಕ್ಕಿಂಗ್ ಪ್ರಾರಂಭ

ಸಿಎನ್‌ಜಿ ಪ್ರಯಾಣಿಕ ವಾಹನ ಜಾಗವನ್ನು ಪ್ರವೇಶಿಸಿದ ಜನಪ್ರಿಯ ಸ್ವದೇಶೀ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಈಗ ತನ್ನ ಸಿಎನ್‌ಜಿ ವಾಹನ ವಿಭಾಗವನ್ನು ಮತ್ತಷ್ಟು ವಿಸ್ತರಿಸುತ್ತಿದೆ. ಟಾಟಾ ಮೋಟಾರ್ಸ್ ಕಂಪನಿಯು 2021ರಲ್ಲಿ Tiago ಮತ್ತು Tigor iCNG ಮಾದರಿಗಳ ಪರಿಚಯಿಸಿದ್ದರು. ಇದೀಗ ಸಿಎನ್‌ಜಿ ಸರಣಿಯಲ್ಲಿ ಆಲ್‌‌ಟ್ರೊಜ್ ಕಾರು ಕೂಡ ಸೇರಿಕೊಳ್ಳಲು ಸಜ್ಜಾಗಿದೆ.

ಇದೀಗ ಟಾಟಾ ಕಂಪನಿಯು ಆಲ್ಟ್ರೋಜ್ ಸಿಎನ್‌ಜಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಈ ಹೊಸ ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ರೂ.21,000 ರೂಪಾಯಿಗಳನ್ನು ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಈ ಹೊಸ ಟಾಟಾ ಆಲ್ಟ್ರೋಜ್ ಸಿಎನ್‌ಜಿ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಾರುತಿ ಸುಜುಕಿ ಬಲೆನೊ ಸಿಎನ್‌ಜಿ ಮತ್ತು ಟೊಯೊಟಾ ಗ್ಲಾಂಝಾ ಸಿಎನ್‌ಜಿ ಮಾದರಿಗಳಿಗೆ ಪೈಪೋಟಿ ನೀಡುತ್ತದೆ.

Tata Altroz iCNG

ಟಾಟಾ ಕಂಪನಿಯ ಇತರ ಸಿಎನ್‌ಜಿ ಮಾದರಿಗಳಂತೆ, ಸಿಎನ್‌ಜಿ ಆಲ್‌‌ಟ್ರೊಜ್ ಅದರ ಪೆಟ್ರೋಲ್ ಮತ್ತು ಡೀಸೆಲ್ ರೂಪಾಂತರಗಳನ್ನು ಹೊರತುಪಡಿಸಿ ಕೆಲವು ಸಣ್ಣ ನವೀಕರಣಗಳನ್ನು ಪಡೆಯುತ್ತದೆ. ಮುಖ್ಯವಾಗಿ ಈ ಹೊಸ ಟಾಟಾ ಆಲ್‌‌ಟ್ರೊಜ್ ಸಿಎನ್‌ಜಿ ಸನ್‌ರೂಫ್ ಮತ್ತು 6 ಏರ್‌ಬ್ಯಾಗ್‌ಗಳೊಂದಿಗೆ ಮಾರುಕಟ್ಟೆಗೆ ಬರಲಿದೆ, ಟಾಟಾ ಪಂಚ್ iCNG ಯಂತೆಯೇ, ಆಲ್‌‌ಟ್ರೊಜ್ iCNG ಕೂಡ ಟಾಟಾದ ಟ್ವಿನ್-ಸಿಲಿಂಡರ್ ತಂತ್ರಜ್ಞಾನವನ್ನು ಪಡೆಯುತ್ತದೆ,

ಎರಡು ಚಿಕ್ಕ ಸಿಎನ್‌ಜಿ ಹೆಚ್ಚಿನ ಬೂಟ್ ಸ್ಪೇಸ್ ಅನ್ನು ಒದಗಿಸುತ್ತದೆ. ಇನ್ನು ಸ್ವದೇಶಿ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಇತ್ತೀಚೆಗೆ ನಡೆದ 2023ರ ಆಟೋ ಎಕ್ಸ್‌ಪೋದಲ್ಲಿ ತನ್ನ ಆಲ್‌‌ಟ್ರೊಜ್ ಸಿಎನ್‌ಜಿ ಕಾರನ್ನು ಅನಾವರಣಗೊಳಿಸಿತು. ಟಾಟಾ ಕಂಪನಿಯು ಈ ಆಲ್‌‌ಟ್ರೊಜ್ ಸಿಎನ್‌ಜಿ ಕಾರನ್ನು ಭಾರತದಲ್ಲಿ ಮುಂದಿನ ತಿಂಗಳಿನಲ್ಲಿ ಬಿಡುಗಡೆಗೊಳಿಸಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಕೆಲವು ವರ್ಷಗಳಿಂದ ಟಾಟಾ ಕಾರುಗಳು ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿವೆ.

ದೇಶಿಯ ಮಾರುಕಟ್ಟೆಯಲ್ಲಿ ಕಾರು ತಯಾರಕರು ಹೊಸ ಸಿಎನ್‌ಜಿ ಮಾದರಿಗಳನ್ನು ಪರಿಚಯಿಸುವುದನ್ನು ಮುಂದುವರೆಸಿದ್ದಾರೆ. ಉದಾಹರಣೆಗೆ, ಮಾರುತಿ ಇತ್ತೀಚೆಗೆ ಸ್ವಿಫ್ಟ್ ಸಿಎನ್‌ಜಿಯನ್ನು ಬಿಡುಗಡೆಗೊಳಿಸಿತ್ತು. ಜುಲೈನಲ್ಲಿ, ಹ್ಯುಂಡೈ ಐ10 ನಿಯೋಸ್ ಅಸ್ಟಾ ರೂಪಾಂತರಕ್ಕಾಗಿ ಸಿಎನ್‌ಜಿ ಆಯ್ಕೆಯನ್ನು ಪರಿಚಯಿಸಿತು. ಟಾಟಾ ಮೋಟಾರ್ಸ್‌ನ ಮಾದರಿಗಳನ್ನು ಆಯ್ಕೆಯು ಪ್ರಸ್ತುತ ಟಿಯಾಗೋ ಮತ್ತು ಟಿಗೊರ್ ನೊಂದಿಗೆ ಲಭ್ಯವಿದೆ. ಇದೀಗ ಟಾಟಾ ಆಲ್‌‌ಟ್ರೊಜ್ ಸಿಎನ್‌ಜಿ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಸ್ಟ್ಯಾಂಡರ್ಡ್ Altroz ಕಾರಿಗೆ ಹೋಲಿಸಿದಾಗ ಕ್ಯಾಬಿನ್ ನಲ್ಲಿ ಕೆಲವು ನವೀಕರಣಗಳನ್ನು ಪಡೆಯುತ್ತದೆ. ಹೊಸ ತಂತ್ರಜ್ಞಾನ ಟಾಟಾ ಆಲ್‌‌ಟ್ರೊಜ್ ವಾಯ್ಸ್-ಕಂಟ್ರೋಲ್ ಸನ್‌ರೂಫ್ ಮತ್ತು 6 ಏರ್‌ಬ್ಯಾಗ್‌ಗಳೊಂದಿಗೆ ಬರುತ್ತದೆ ಎಂದು ಟಾಟಾ ಹೇಳುತ್ತದೆ. ಚೊಚ್ಚಲ ಪಂಚ್ iCNG ಯಂತೆಯೇ, Altroz iCNG ಕೂಡ ಟಾಟಾದ ಟ್ವಿನ್-ಸಿಲಿಂಡರ್ ತಂತ್ರಜ್ಞಾನವನ್ನು ಪಡೆಯಬಹುದು. ಎರಡು ಚಿಕ್ಕ CNG ಸಿಲಿಂಡರ್‌ಗಳು ಬೂಟ್ ಫ್ಲೋರ್‌ನ ಕೆಳಗೆ ಇದೆ.

ಈ ಮುಂಬರುವ ಹೊಸ ಟಾಟಾ ಆಲ್‌‌ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಸಿಎನ್‌ಜಿ ಆವೃತ್ತಿಯು ಟಾಟಾ ಟಿಯಾಗೊ ಸಿಎನ್‌ಜಿ ಹ್ಯಾಚ್‌ಬ್ಯಾಕ್ ಮತ್ತು ಟಾಟಾ ಟಿಗೊರ್ ಸಿಎನ್‌ಜಿ ಕಾಂಪ್ಯಾಕ್ಟ್ ಸೆಡಾನ್‌ಗೆ ಪವರ್ ನೀಡುವ ಅದೇ ಎಂಜಿನ್‌ನಿಂದ ಚಾಲಿತವಾಗುವ ಸಾಧ್ಯತೆಯಿದೆ. ಇನ್ನು ಎರಡೂ ಕಾರುಗಳು ಒಂದೇ ರೀತಿಯ ಎಂಜಿನ್ ಆಯ್ಕೆಗಳನ್ನು ಹಂಚಿಕೊಳ್ಳುತ್ತವೆ. 1.2 ಲೀಟರ್ ಟರ್ಬೊ ಪೆಟ್ರೋಲ್ ಮೋಟಾರ್ ಮತ್ತು 1.5-ಲೀಟರ್ ಟರ್ಬೊ ಡೀಸೆಲ್ ಮೋಟಾರ್ ಆಗಿರುತ್ತದೆ.

ಸಿಎನ್‌ಜಿ ಚಾಲನೆಯಲ್ಲಿರುವಾಗ, ಆಲ್ಟ್ರೊಜ್‌ನ ಪವರ್ ಮತ್ತು ಟಾರ್ಕ್ ಉತ್ಪಾದನೆಯು ಸುಮಾರು 10-15 ಬಿಹೆಚ್‍ಪಿಗಳಷ್ಟು ಇಳಿಯುವ ಸಾಧ್ಯತೆಯಿದೆ. ಗೇರ್ ಬಾಕ್ಸ್ ಆಯ್ಕೆಯು ಆಯ್ಕೆಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಎಎಂಟಿ ಸೇರಿವೆ.ಸಿಎನ್‌ಜಿ ರೂಪಾಂತರಗಳನ್ನು ಮ್ಯಾನುಯಲ್ ಟ್ರಾನ್ಸ್‌ಮಿಷನ್‌ನೊಂದಿಗೆ ನೀಡಲಾಗುವುದು. ಇನ್ನು ಟಾಟಾ ಟಿಯಾಗೊ ಸಿಎನ್‌ಜಿ ಮತ್ತು ಟಾಟಾ ಟಿಗೊರ್ ಸಿಎನ್‌ಜಿಯಲ್ಲಿನ ಈ ಎಂಜಿನ್ ಸ್ಟ್ಯಾಂಡರ್ಡ್ ರೂಪದಲ್ಲಿ 84.82 ಬಿಹೆಚ್‌ಪಿ ಪವರ್ ಮತ್ತು 113 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Article Published On: Wednesday, April 19, 2023, 13:51 [IST]
English summary
Tata altroz icng bookings open launch details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+