ಎಲೆಕ್ಟ್ರಿಕ್ ಬಳಿಕ ಸಿಎನ್‌ಜಿ ಕಾರುಗಳ ವಿಭಾಗದಲ್ಲೂ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ ಟಾಟಾ

ಭಾರತದಲ್ಲಿ ಸಿಎನ್‌ಜಿ ಪ್ರಯಾಣಿಕ ವಾಹನ ಜಾಗವನ್ನು ಪ್ರವೇಶಿಸಿದ ಟಾಟಾ ಮೋಟಾರ್ಸ್ ಈಗ ತನ್ನ ಬಂಡವಾಳವನ್ನು ಮತ್ತಷ್ಟು ವಿಸ್ತರಿಸಲು ನೋಡುತ್ತಿದೆ. ಟಾಟಾ ಮೋಟಾರ್ಸ್ ಕಂಪನಿಯು 2021ರಲ್ಲಿ Tiago ಮತ್ತು Tigor iCNG ಮಾದರಿಗಳ ಪರಿಚಯಿಸಿದ್ದರು. ಇದೀಗ ಸಿಎನ್‌ಜಿ ಸರಣಿಯಲ್ಲಿ ಪಂಚ್ ಮತ್ತು ಆಲ್‌‌ಟ್ರೊಜ್ ಕಾರು ಕೂಡ ಸೇರಿಕೊಳ್ಳಲಿದೆ.

ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗಿರುವುದರಿಂದ ಕೆಲವು ಗ್ರಾಹಕರು ಸಿಎನ್‌ಜಿ ಕಾರುಗಳ ಕಡೆ ಮುಖ ಮಾಡುತ್ತಿದ್ದಾರೆ. ಇದರಿಂದ ಹಲವು ಜನಪ್ರಿಯ ಕಂಪನಿಗಳು ಸಿಎನ್‌ಜಿ ಕಾರುಗಳನ್ನು ಪರಿಚಯಿಸುತ್ತಿದೆ. ಇದೀಗ ಜನಪ್ರಿಯ ಸ್ವದೇಶಿ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಹೊಸ ಟಾಟಾ ಪಂಚ್ ಸಿಎನ್‌ಜಿ ಮತ್ತು ಆಲ್‌‌ಟ್ರೊಜ್ ಸಿಎನ್‌ಜಿ ಕಾರುಗಳನ್ನು ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಿದ್ದರು. ಈ ಹೊಸ ಟಾಟಾ ಟಾಟಾ ಪಂಚ್ ಸಿಎನ್‌ಜಿ ಮತ್ತು ಆಲ್‌‌ಟ್ರೊಜ್ ಸಿಎನ್‌ಜಿ ಕಾರುಗಳು 2023ರ ಜೂನ್ ತಿಂಗಳ ವೇಳೆಗೆ ಭಾರತದಲ್ಲಿ ಬಿಡುಗಡೆ ಮಾಡಲು ದೃಢಪಡಿಸಲಾಗಿದೆ.

ಸಿಎನ್‌ಜಿ ವಿಭಾಗದಲ್ಲೂ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ ಟಾಟಾ

ಟಾಟಾದ ಇತರ ಸಿಎನ್‌ಜಿ ಮಾದರಿಗಳಂತೆ, ಆಲ್‌‌ಟ್ರೊಜ್ ಸ್ಟ್ಯಾಂಡರ್ಡ್ ಮಾದರಿಗೆ ಹೋಲಿಸಿದರೆ ಸಿಎನ್‌ಜಿ ಆವೃತ್ತಿಯಲ್ಲಿ ಕೆಲವು ನವೀಕರಣಗಳನ್ನು ಪಡೆಯುತ್ತದೆ. ಆಲ್‌‌ಟ್ರೊಜ್ ಸಿಎನ್‌ಜಿ ಸನ್‌ರೂಫ್ ಮತ್ತು 6 ಏರ್‌ಬ್ಯಾಗ್‌ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಪಂಚ್ iCNG ಯಂತೆಯೇ, ಆಲ್‌‌ಟ್ರೊಜ್ iCNG ಕೂಡ ಟಾಟಾದ ಟ್ವಿನ್-ಸಿಲಿಂಡರ್ ತಂತ್ರಜ್ಞಾನವನ್ನು ಪಡೆಯುತ್ತದೆ, ಟಾಟಾ ಆಲ್ಟ್ರೋಜ್ ವಾಯ್ಸ್-ಕಂಟ್ರೋಲ್ ಸನ್‌ರೂಫ್ ಮತ್ತು 6 ಏರ್‌ಬ್ಯಾಗ್‌ಗಳೊಂದಿಗೆ ಬರುತ್ತದೆ ಎಂದು ಟಾಟಾ ಹೇಳುತ್ತದೆ. ಚೊಚ್ಚಲ ಪಂಚ್ iCNG ಯಂತೆಯೇ, Altroz iCNG ಕೂಡ ಟಾಟಾದ ಟ್ವಿನ್-ಸಿಲಿಂಡರ್ ತಂತ್ರಜ್ಞಾನವನ್ನು ಪಡೆಯುತ್ತದೆ.

ಎರಡು ಚಿಕ್ಕ CNG ಸಿಲಿಂಡರ್‌ಗಳು ಬೂಟ್ ಫ್ಲೋರ್‌ನ ಕೆಳಗೆ ಇದೆ. ಈ ಮುಂಬರುವ ಟಾಟಾ ಆಲ್‌‌ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಸಿಎನ್‌ಜಿ ಆವೃತ್ತಿಯು ಟಾಟಾ ಟಿಯಾಗೊ ಸಿಎನ್‌ಜಿ ಹ್ಯಾಚ್‌ಬ್ಯಾಕ್ ಮತ್ತು ಟಾಟಾ ಟಿಗೊರ್ ಸಿಎನ್‌ಜಿ ಕಾಂಪ್ಯಾಕ್ಟ್ ಸೆಡಾನ್‌ಗೆ ಪವರ್ ನೀಡುವ ಅದೇ ಎಂಜಿನ್‌ನಿಂದ ಚಾಲಿತವಾಗುವ ಸಾಧ್ಯತೆಯಿದೆ. ಈ ಎರಡೂ ಕಾರುಗಳು ಒಂದೇ ರೀತಿಯ ಎಂಜಿನ್ ಆಯ್ಕೆಗಳನ್ನು ಹಂಚಿಕೊಳ್ಳುತ್ತವೆ, 1.2 ಲೀಟರ್ ಟರ್ಬೊ ಪೆಟ್ರೋಲ್ ಮೋಟಾರ್ ಮತ್ತು 1.5-ಲೀಟರ್ ಟರ್ಬೊ ಡೀಸೆಲ್ ಮೋಟಾರ್ ಆಗಿರುತ್ತದೆ.

ಸಿಎನ್‌ಜಿ ವಿಭಾಗದಲ್ಲೂ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ ಟಾಟಾ

ಎರಡೂ ಕಾರುಗಳಲ್ಲಿ ಪವರ್ ಮತ್ತು ಟಾರ್ಕ್ ಉತ್ಪಾದನೆಯು ವಿಭಿನ್ನವಾಗಿದೆ. ಸಿಎನ್‌ಜಿ ಚಾಲನೆಯಲ್ಲಿರುವಾಗ, ಆಲ್‌‌ಟ್ರೊಜ್ ಪವರ್ ಮತ್ತು ಟಾರ್ಕ್ ಉತ್ಪಾದನೆಯು ಸುಮಾರು 10-15 ಪಿಎಸ್‌ಗಳಷ್ಟು ಇಳಿಯುವ ಸಾಧ್ಯತೆಯಿದೆ. ಗೇರ್ ಬಾಕ್ಸ್ ಆಯ್ಕೆಯು ಆಯ್ಕೆಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಎಎಂಟಿ ಸೇರಿದೆ. ಸಿಎನ್‌ಜಿ ರೂಪಾಂತರಗಳನ್ನು ಮ್ಯಾನುಯಲ್ ಟ್ರಾನ್ಸ್‌ಮಿಷನ್‌ನೊಂದಿಗೆ ನೀಡಲಾಗುವುದು. ಈ ಆಲ್‌‌ಟ್ರೊಜ್ ಸಿಎನ್‌ಜಿ ಮಾದರಿಗಾಗಿ ಫೀಚರ್ಸ್ ಆಯಾ ಪೆಟ್ರೋಲ್ ರೂಪಾಂತರಗಳಂತೆಯೇ ಇರುತ್ತದೆ. ಟಾಟಾ ಆಲ್‌‌ಟ್ರೊಜ್ 'ಐ-ಟರ್ಬೊ' ರೂಪಾಂತರವನ್ನು ಬಿಡುಗಡೆಗೊಳಿಸಿದ ಬಳಿಕ ಮಾರಾಟದಲ್ಲಿ ಮತ್ತಷ್ಟು ಬೂಸ್ಟ್ ಮಾಡಿತು.

ಅದೇ ರೀತಿ ಸಿಎನ್‌ಜಿ ಮಾದರಿಯು ಉತ್ತಮವಾಗಿ ಮಾರಾಟವಾಗಬಹುದು. ವಿಶೇಷವೆಂದರೆ ಭಾರತದಲ್ಲಿ ವಾಹನ ಸುರಕ್ಷತೆಯ ಬಗ್ಗೆ ಹೆಚ್ಚುತ್ತಿರುವ ಅರಿವಿನೊಂದಿಗೆ ಟಾಟಾ ಕಾರುಗಳು ಖರೀದಿದಾರರಲ್ಲಿ ಬೇಡಿಕೆಯ ಹೆಚ್ಚಳಕ್ಕೆ ಸಾಕ್ಷಿಯಾಗುತ್ತಿವೆ ಎಂದು ಹೇಳಬಹುದು. ಟಾಟಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಕಂಪನಿಯ ಮೊದಲ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿ ಆಲ್‌‌ಟ್ರೊಜ್ ಕಾರನ್ನು ಬಿಡುಗಡೆಗೊಳಿಸಲಾಗಿತ್ತು.ಸದ್ಯ ಟಾಟಾ ಮೋಟಾರ್ಸ್ ಎರಡು CNG ಕಾರುಗಳನ್ನು ಅನಾವರಣಗೊಳಿಸಿದೆ. ಆಲ್ಟ್ರಾಜ್ CNG ಜೊತೆಗೆ ಭಾರತದಲ್ಲಿ ಮೊದಲ ಬಾರಿಗೆ ಆಟೋ ಎಕ್ಸ್‌ಪೋದಲ್ಲಿ ಪಂಚ್ CNGಯನ್ನು ಅಧಿಕೃತವಾಗಿ ಪ್ರದರ್ಶಿಸಿದೆ,

ಪಂಚ್ ಸಿಎನ್‌ಜಿಯನ್ನು ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ದೇಶದ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಪಂಚ್ ಕಾರಿನಲ್ಲಿ ಟ್ವಿನ್-ಸಿಲಿಂಡರ್ ತಂತ್ರಜ್ಞಾನವನ್ನು ಟಾಟಾ ನೀಡುತ್ತಿದೆ. ಇದು 30 ಲೀಟರ್ ಸಿಎನ್‌ಜಿಯ ಎರಡು ಸಿಲಿಂಡರ್ ಟ್ಯಾಂಕ್‌ಗಳನ್ನು ಹೊಂದಿದೆ ಎಂದು ಹೇಳಬಹುದು. ಪಂಚ್ ಸಿಎನ್‌ಜಿ ಕಾರಿಗೆ 1,199 ಸಿಸಿ ನ್ಯಾಚುರಲ್ ಆಸ್ಪಿರೇಟೆಡ್ ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಪವರ್ ಒದಗಿಸುತ್ತದೆ. ಇದು 86 PS ಗರಿಷ್ಠ ಪವರ್ ಮತ್ತು 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಈ ಎಂಜಿನ್ ಅನ್ನು 5-ಸ್ವೀಡ್ ಮ್ಯಾನುಯಲ್ ಅಥವಾ ಐದು-ಸ್ವೀಡ್ AMTಗೆ ಜೋಡಿಸಲಾಗಿದೆ. ಗಮನಾರ್ಹವಾಗಿ, CNG ಆವೃತ್ತಿಯು 73.5 PS ಪವರ್ ಮತ್ತು 95 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದ್ದು, ಇದು ಐದು-ಸ್ವೀಡ್ ಮ್ಯಾನುವಲ್ ಯುನಿಟ್‌ನೊಂದಿಗೆ ಖರೀದಿಗೆ ಲಭ್ಯವಿರಲಿದೆ. ಈ ಪಂಚ್ ಕಾರಿನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಪ್ರೊಜೆಕ್ಟರ್ ಹೆಡ್‌ಲೈಟ್ಸ್, ಕಾರ್ನರಿಂಗ್ ಲೈಟ್‌ಗಳೊಂದಿಗೆ ಫಾಗ್ ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ವೈ-ಆಕಾರದ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳನ್ನು ಹೊಂದಿರಲಿವೆ.

Most Read Articles

Kannada
English summary
Tata altroz punch cng india launch details in kannada
Story first published: Friday, February 3, 2023, 13:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X