ಭಾರತದಲ್ಲಿ ಶೀಘ್ರವೇ ಸಿಗಲಿದೆ ಟಾಟಾ ಆಲ್ಟ್ರೊಜ್ ರೇಸರ್: ಎಲ್ಲರೂ ಮೆಚ್ಚುವ ವೈಶಿಷ್ಟ್ಯಗಳಿವೆ..!

ಪ್ರಮುಖ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಆಲ್ಟ್ರೊಜ್ ರೇಸರ್ ಕಾರನ್ನು ಶೀಘ್ರದಲ್ಲೇ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಈ ಬಗ್ಗೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿತ್ತು. ಈ ಕಾರು, ಕಾಸ್ಮೆಟಿಕ್ ಬದಲಾವಣೆ ಹಾಗೂ ಸಾಕಷ್ಟು ನವೀನ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಟಾಟಾ ಆಲ್ಟ್ರೊಜ್ ರೇಸರ್ ಕಾರಿಗೆ ಪ್ರಬಲ ಪ್ರತಿಸ್ಪರ್ಧಿ ಎಂದರೆ, ಅದು ಹ್ಯುಂಡೈ ಐ20 ಎನ್-ಲೈನ್ ಮಾದರಿ ಕಾರುಗಳು, ಮುಂಬರಲಿರುವ ಆಲ್ಟ್ರೊಜ್ ರೇಸರ್, ರೂ.9 ಲಕ್ಷ ಬೆಲೆಯಲ್ಲಿ (ಎಕ್ಸ್ ಶೋರೂಂ) ಖರೀದಿಗೆ ಲಭ್ಯವಾಗಬಹುದು ಎಂದು ಅಂದಾಜಿಸಲಾಗಿದೆ. ಹೊರ ಭಾಗದ ವಿನ್ಯಾಸದ ಬಗ್ಗೆ ಹೇಳುವುದಾದರೆ, ಬಾನೆಟ್ ಹಾಗೂ ರೂಫ್ ಮೇಲೆ ರೆಡ್, ಬ್ಲಾಕ್ ಬಣ್ಣದ ಡುಯಲ್ ಟೋನ್ ಥೀಮ್ ಅನ್ನು ಹೊಂದಿದೆ. ಅಲ್ಲದೆ, ಅಲಾಯ್ ವೀಲ್ಸ್ ಗಳನ್ನು ಪಡೆದಿದ್ದು, ಬಹುತೇಕ ಯುವ ಗ್ರಾಹಕರನ್ನು ಸೆಳೆಯಲಿದೆ.

ಭಾರತದಲ್ಲಿ ಶೀಘ್ರವೇ ಸಿಗಲಿದೆ ಟಾಟಾ ಆಲ್ಟ್ರೊಜ್ ರೇಸರ್: ಎಲ್ಲರೂ ಮೆಚ್ಚುವ ವೈಶಿಷ್ಟ್ಯಗಳಿವೆ..!

ಈ ಕಾರಿನ ಒಳ ಭಾಗದ ವೈಶಿಷ್ಟ್ಯ ಹಾಗೂ ವಿನ್ಯಾಸ ಬಗ್ಗೆ ಹೇಳುವುದಾದರೆ, ಇದರ ಕ್ಯಾಬಿನ್ ಅತ್ಯಾಕರ್ಷಕವಾಗಿದ್ದು, ಆಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ ಎಂದು ಹೇಳಬಹುದು. ಸೀಟ್‌ ಹಾಗೂ ಗೇರ್ ಲಿವರ್ ಸುತ್ತಲೂ ಎಸಿ ವೆಂಟ್‌ಗಳನ್ನು ಹೊಂದಿದೆ. ಅಲ್ಲದೆ, ದೊಡ್ಡದಾದ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೆಂಟಿಲೇಟೆಡ್ ಸೀಟ್‌ಗಳು, ವೈರ್‌ಲೆಸ್ ಚಾರ್ಜರ್, ಏರ್ ಪ್ಯೂರಿಫೈಯರ್ ಮತ್ತು ಎಲೆಕ್ಟ್ರಿಕ್ ಸನ್‌ರೂಫ್ ನಂತಹ ಹತ್ತು ಹಲವು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ.

ಟಾಟಾ ಆಲ್ಟ್ರೊಜ್ ಕಾರಿನ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 1.2 - ಲೀಟರ್ 3 - ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, 120 bhp ಗರಿಷ್ಠ ಪವರ್ ಹಾಗೂ 170 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದ್ದು, 6 - ಸ್ವೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ. ಅಲ್ಲದೆ, ಟಾಟಾ ಮೋಟಾರ್ಸ್ ಡುಯಲ್ ಕ್ಲಚ್ DCA ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಬಹುದು.

ಸದ್ಯ ಮಾರುಕಟ್ಟೆಯಲ್ಲಿ ಕಾರು ಖರೀದಿ ಮಾಡುವರೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಟಾಟಾ ಆಲ್ಟ್ರೊಜ್ ಕೂಡ ಸುರಕ್ಷತೆಯ ದೃಷ್ಟಿಯಿಂದ ಅತ್ಯುನ್ನತ ಕಾರಾಗಿದೆ ಎಂದು ಹೇಳಬಹುದು. ಇದು ವಯಸ್ಕರ ರಕ್ಷಣೆ ಹಾಗೂ ಮಕ್ಕಳ ರಕ್ಷಣೆ ವಿಭಾಗದಲ್ಲಿ 5 - ಸ್ಟಾರ್ ರೇಟಿಂಗ್ ಪಡೆದಿದ್ದು, ಸುರಕ್ಷತೆಯ ದೃಷ್ಟಿಯಿಂದ ಆರು ಏರ್ ಬ್ಯಾಗ್ಸ್, ABS (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), CSC (ಕಾರ್ನರಿಂಗ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಜೊತೆಗೆ ಸೆನ್ಸರ್ಸ್ ಅನ್ನು ಹೊಂದಿದೆ.

ಇಷ್ಟೇ ಅಲ್ಲದೆ, ಕೆಲ ದಿನಗಳ ಹಿಂದೆ, ದೆಹಲಿಯಲ್ಲಿ ಮುಕ್ತಾಯಗೊಂಡ ಆಟೋ ಎಕ್ಸ್‌ಪೋದಲ್ಲಿ ಟಾಟಾ ಮೋಟಾರ್ಸ್, CNG ಆಲ್ಟ್ರೊಜ್ ಆವೃತ್ತಿಯನ್ನು ಪ್ರದರ್ಶಸಿತ್ತು. ಇದು 1.2 - ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ 3 - ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 86 bhp ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಆದರೆ, CNG ಮೋಡ್ ನಲ್ಲಿ 72 bhp ಪವರ್ ಹಾಗೂ 95 Nm ಪೀಕ್ ಉತ್ಪಾದಿಸಲಿದೆ. 5 - ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ.

ಒಟ್ಟಾರೆ, ಈ ಕಾರು ಹತ್ತು ಹಲವು ನವೀನ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬರಲಿದ್ದು, ಬೆಲೆಯು ಕೈಗೆಟುಕುವ ರೀತಿಯಲ್ಲಿ ಇರುವುದರಿಂದ ಗ್ರಾಹಕರು ಇಷ್ಟಪಟ್ಟು ಖರೀದಿ ಮಾಡಬಹುದು. ಸುರಕ್ಷತೆಯ ದೃಷ್ಟಿಯಿಂದಲ್ಲೂ ಅತ್ಯುತ್ತಮವಾಗಿದ್ದು, ಶೀಘ್ರದಲ್ಲಿ ಸಿಗಲಿದೆ. ಭಾರತದಲ್ಲಿ ಈ ಕಾರು ಲಭ್ಯವಾದ ಮೇಲೆ ಅತಿ ಕಡಿಮೆ ಬೆಲೆಗೆ ದೊರೆಯುವ ಹ್ಯುಂಡೈ ಐ20 ಎನ್-ಲೈನ್ ಮಾದರಿ ಕಾರುಗಳಿಗೆ ಭಾರೀ ಪೈಪೋಟಿ ನೀಡಬಹುದು. ಸದ್ಯ ಖರೀದಿದಾರರು ಯಾವೆಲ್ಲ ವೈಶಿಷ್ಟ್ಯಗಳೊಂದಿಗೆ ಈ ಕಾರನ್ನು ಟಾಟಾ ನೀಡಲಿದೆ ಎಂದು ಕಾತರದಿಂದ ಕಾಯುತ್ತಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
Tata altroz racer coming soon in india details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X