ಭಾರತದಲ್ಲಿ ಅಬ್ಬರಿಸಲು ಬರಲಿವೆ ಕೈಗೆಟುಕುವ ಬೆಲೆಯ ಟಾಟಾ ಆಲ್ಟ್ರೋಜ್ ಕಾರುಗಳು: ಹೇಗಿವೆ?
ಭಾರತದ ಪ್ರಮುಖ ವಾಹನ ತಯಾರಕ ಕಂಪನಿ 'ಟಾಟಾ ಮೋಟಾರ್ಸ್' ತಯಾರಿಸುವ ಕಾರುಗಳು ಭಾರೀ ಜನಪ್ರಿಯತೆಯನ್ನು ಗಳಿಸಿವೆ. ಅವುಗಳ ಕಾರ್ಯವೈಖರಿ, ಕೈಗೆಟುಕುವ ಬೆಲೆ ಹಾಗೂ ವೈಶಿಷ್ಟ್ಯಗಳು ಪ್ರತಿಯೊಬ್ಬರನ್ನು ಸೆಳೆಯುತ್ತವೆ. ಇದೀಗ, ಪ್ರೀಮಿಯಂ ಆಲ್ಟ್ರೋಜ್ ಹ್ಯಾಚ್‌ಬ್ಯಾಕ್ ಮಾದರಿಗಳನ್ನು ಈ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ.
ಮೊದಲಿಗೆ ಟಾಟಾದ ಬಹುನಿರೀಕ್ಷಿತ ಆಲ್ಟ್ರೋಜ್ ರೇಸರ್ ಹ್ಯಾಚ್‌ಬ್ಯಾಕ್ ಬಗ್ಗೆ ಮಾತನಾಡುವುದಾದರೆ, ಇದು ಹುಂಡೈ i20 ಎನ್ ಲೈನ್ ಮಾದರಿಗಳಿಗೆ ದೊಡ್ಡ ಮಟ್ಟದ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗಿದೆ. ಮುಂಬರಲಿರುವ ಆಲ್ಟ್ರೋಜ್ ರೇಸರ್ ಹ್ಯಾಚ್‌ಬ್ಯಾಕ್ ನ್ನು ಕಳೆದ ಜನವರಿಯಲ್ಲಿ ಮುಕ್ತಾಯಗೊಂಡ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನವನ್ನು ಮಾಡಲಾಗಿತ್ತು. ಇದು 1.2-ಲೀಟರ್, 3 - ಸಿಲಿಂಡರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ.

ಗರಿಷ್ಠ 118.3 bhp ಪವರ್ ಮತ್ತು 170 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಪಡೆದಿರಲಿದ್ದು, 6 - ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಹಿಂದಿನ ಮಾದರಿಗೆ ಹೋಲಿಸಿದರೆ, ಆಲ್ಟ್ರೋಜ್ ರೇಸರ್ ಒಳಭಾಗದಲ್ಲಿ ಹತ್ತಾರು ನವೀನ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಅವುಗಳೆಂದರೆ, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಫೋನ್ ಚಾರ್ಜರ್ ಗಳನ್ನು ಪಡೆದಿರಲಿದೆ.
ಈ ಕಾರು, ಸುರಕ್ಷತೆಯ ದೃಷ್ಟಿಯಿಂದಲ್ಲೂ ಅತ್ಯುತ್ತಮವಾಗಿದ್ದು, ಆರು ಏರ್ ಬಾಗ್ಸ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಹೊರಭಾಗದಲ್ಲಿ ಸಾಕಷ್ಟು ಆಕರ್ಷಕ ವಿನ್ಯಾಸವನ್ನು ಹೊಂದಿರಲಿದೆ. 16-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಸ್, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, ಹಾಗೂ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ಸ್ ಅನ್ನು ಪಡೆದಿದ್ದು, ಆಲ್ಟ್ರೋಜ್ ರೇಸರ್ ಇದೇ ವರ್ಷವೇ ಮಾರುಕಟ್ಟೆಗೆ ಬರಲಿದ್ದು, ರೂ.8.00 ಲಕ್ಷದಿಂದ ರೂ.12.00 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಬಹುದು.

ಟಾಟಾ ಮೋಟಾರ್ಸ್ ನಿಂದ ಮುಂಬರುವ ಮತ್ತೊಂದು ಕಾರು ಆಲ್ಟ್ರೋಜ್ ಸಿಎನ್‌ಜಿ, ಬಗ್ಗೆ ಮಾತನಾಡುವುದಾದರೆ, ಇದು ಹೆಚ್ಚಿನ ಇಂಧನ ದಕ್ಷೆತೆಯೊಂದಿಗೆ ಖರೀದಿಗೆ ಲಭ್ಯವಾಗಲಿದೆ. 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಪಡೆದಿದ್ದು, ಸಿಎನ್‌ಜಿ ಮೋಡ್‌ನಲ್ಲಿ ಗರಿಷ್ಠ 77 bhp ಪವರ್ ಹಾಗೂ 97 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 60 ಲೀಟರ್ ಸಾಮರ್ಥ್ಯದ ಸಿಎನ್‌ಜಿ ಫ್ಯುಯೆಲ್ ಟ್ಯಾಂಕ್ ಹೊಂದಿದ್ದು, 25km/kg ಮೈಲೇಜ್ ನೀಡಬಹುದು.
ಆಲ್ಟ್ರೋಜ್ ರೇಸರ್ ಹ್ಯಾಚ್‌ಬ್ಯಾಕ್ ನಂತೆಯೇ ಈ ಕಾರನ್ನು ದೆಹಲಿಯ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಅನಾವರಣ ಮಾಡಲಾಗಿತ್ತು. ಗ್ರಾಹಕರ ಅಭಿರುಚಿಗೆ ತಕ್ಕಂತೆ ಸಾಕಷ್ಟು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಅವುಗಳೆಂದರೆ, 7 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹಲವು. ಈ ಕಾರು, ರೂ.10.55 ಲಕ್ಷ ಬೆಲೆಯಲ್ಲಿ ಖರೀದಿಗೆ ದೊರೆಯಬಹುದು ಎಂದು ಅಂದಾಜಿಸಲಾಗಿದೆ.
ಇಷ್ಟೇ ಅಲ್ಲದೆ, ಟಾಟಾದಿಂದ ನೆಕ್ಸಾನ್ ಫೇಸ್‌ಲಿಫ್ಟ್, ಹ್ಯಾರಿಯರ್ ಫೇಸ್‌ಲಿಫ್ಟ್, ಸಫಾರಿ ಫೇಸ್‌ಲಿಫ್ಟ್, ಟಿಯಾಗೊ ಇವಿ ಬ್ಲಿಟ್ಜ್, ಹ್ಯಾರಿಯರ್ ಇವಿ, ಪಂಚ್ CNG ಕಾರುಗಳು ಮುಂಬರುವ ದಿನಗಳಲ್ಲಿ ಮಾರುಕಟ್ಟೆಗೆ ಬರಲಿವೆ. ಈ ನೂತನ ಪ್ರೀಮಿಯಂ ಆಲ್ಟ್ರೋಜ್ ಹ್ಯಾಚ್‌ಬ್ಯಾಕ್ ಮಾದರಿಗಳು ಹತ್ತು ಹಲವು ನವೀನ ವೈಶಿಷ್ಟ್ಯಗಳು ಹಾಗೂ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಖರೀದಿಸಬಹುದು. ಬಿಡುಗಡೆಯಾದ ಮೇಲೆ ಅವುಗಳ ಕಾರ್ಯಕ್ಷಮತೆ ಬಗ್ಗೆ ತಿಳಿಯಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications