IPL: ಪಂದ್ಯಕ್ಕಿಂತ ಹೆಚ್ಚಾಗಿ ಪ್ರತಿಯೊಬ್ಬರನ್ನು ಆಕರ್ಷಿಸುತ್ತೆ ಕಡಿಮೆ ಬೆಲೆಯ ಟಾಟಾ ಟಿಯಾಗೊ ಇವಿ

ದೇಶದ ಪ್ರಮುಖ ವಾಹನ ತಯಾರಕ ಕಂಪನಿ ಟಾಟಾ ಮೋಟಾರ್ಸ್, ಸತತ 6ನೇ ವರ್ಷವು ಇಂಡಿಯನ್ ಪ್ರೀಮಿಯರ್ ಲೀಗ್‌ (IPL)ಗೆ ತನ್ನ ಸಹಭಾಗಿತ್ವವನ್ನು ಮುಂದುವರೆಸಿದೆ. ಇಂದಿನಿಂದ ಆರಂಭವಾಗುವ ಲೀಗ್ ಪಂದ್ಯಗಳಿಗೆ 'ಟಿಯಾಗೊ ಇವಿ' ಅಧಿಕೃತ ಪಾಲುದಾರವಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಟಾಟಾ ಮೋಟಾರ್ಸ್, ದೇಶಾದ್ಯಂತ ಐಪಿಎಲ್ ಪಂದ್ಯಗಳು ನಡೆಯುವ ಎಲ್ಲ 12 ಕ್ರೀಡಾಂಗಣಗಳಲ್ಲಿಯೂ ಟಿಯಾಗೊ ಇವಿಯನ್ನು ಪ್ರದರ್ಶಿಸಲು ತೀರ್ಮಾನಿಸಿದ್ದು, ಈ ಮೂಲಕ ಇದರ ಮಾರಾಟ ಪ್ರಮಾಣವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇವಿಗಳ ಬಗ್ಗೆ ಗ್ರಾಹಕರು ಹೊಂದಿರುವ ಮನಸ್ಥಿತಿಯನ್ನು ಬಸಲಾಯಿಸಲು 100 ಕಾರಣಗಳು ಇವಿ ಕಡೆಗೆ.. ಜೊತೆಗೆ ಟಿಯಾಗೊ ಇವಿ (100 reasons to go.ev with Tiago.ev) ಎಂಬ ಅಭಿಯಾನವನ್ನು ಪ್ರಾರಂಭಿಸಿದೆ.

IPL: ಪಂದ್ಯಕ್ಕಿಂತ ಹೆಚ್ಚಾಗಿ ಪ್ರತಿಯೊಬ್ಬರನ್ನು ಆಕರ್ಷಿಸುತ್ತೆ ಕಡಿಮೆ ಬೆಲೆಯ ಟಾಟಾ ಟಿಯಾಗೊ ಇವಿ

ಆಟಗಾರರನ್ನು ಉತ್ತೇಜಲು ಟಿಯಾಗೊ ಇವಿ ಎಲೆಕ್ಟ್ರಿಕ್ ಸ್ಟ್ರೈಕರ್ ಪ್ರಶಸ್ತಿ (Tiago EV Electric Striker Award)ಯನ್ನು ಟಾಟಾ ಕೊಡಲಿದೆ. ಪಂದ್ಯದಲ್ಲಿ ಅತಿಹೆಚ್ಚು ಸ್ಟ್ರೈಕ್ ಹೊಂದಿದ ಆಟಗಾರ, ಟ್ರೋಫಿ ಜೊತೆಗೆ ರೂ.1,00,000 ನಗದು ಬಹುಮಾನ ಪಡೆಯಲಿದ್ದಾರೆ. ಲೀಗ್ ನಲ್ಲಿ ಅತಿಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ ಆಟಗಾರನಿಗೆ ಎಲೆಕ್ಟ್ರಿಕ್ ಸ್ಟ್ರೈಕರ್ ಆಫ್ ದಿ ಸೀಸನ್ (Electric Striker of the Season) ಪ್ರಶಸ್ತಿಯೊಂದಿಗೆ ಟಿಯಾಗೊ ಇವಿಯನ್ನು ಬಹುಮಾನವಾಗಿ ನೀಡಲಾಗುತ್ತದೆ.

ಇಷ್ಟೇ ಅಲ್ಲದೆ, ಪ್ರತಿ ಪಂದ್ಯದಲ್ಲಿ ಟಿಯಾಗೊ ಇವಿ ಕಾರಿನ ಡಿಸ್ಪ್ಲೇ ಗೆ ಬಾಲ್ ಬಂದು ಬಡಿದರೆ ಟಾಟಾ ಮೋಟಾರ್ಸ್, ಕರ್ನಾಟಕದ ಕಾಫಿ ತೋಟದಲ್ಲಿ ಸಸಿಗಳನ್ನು ನೆಡಲು ರೂ.5,00,000 ನೆರವನ್ನು ನೀಡಲಿದೆ. ಇದರಲ್ಲೂ ಕಂಪನಿ ಬುದ್ದಿವಂತಿಕೆ ಮೆರೆದಿದ್ದು, ಕಾರಿಗೆ ಬಾಲ್ ಬಂದು ತಗುಲಿದರೆ ಕ್ಯಾಮೆರಾಗಳು ಅದನ್ನೇ ಪೋಕಸ್ ಮಾಡುತ್ತವೆ. ಇದರಿಂದ ಕೊಂಚವು ಖರ್ಚಿಲ್ಲದೇ ಉಚಿತ ಪ್ರಚಾರ ದೊರೆಯುತ್ತದೆ. ಆದ್ದರಿಂದ ಈ ರೀತಿಯಾಗಿ ಹಣ ವಿನಿಯೋಗಿಸಲು ನಿರ್ಧರಿಸಿದೆ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಟಾಟಾ ಟಿಯಾಗೊ ಇವಿ ರೂ.8.69 ಲಕ್ಷದಿಂದ ರೂ.11.99 ಲಕ್ಷ ಎಕ್ಸ್ ಶೋ ರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಕಾರು, ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಅವುಗಳೆಂದರೆ, 19.2kWh (61 PS ಪವರ್, 110 Nm ಪೀಕ್ ಟಾರ್ಕ್), 24kWh (75 PS ಪವರ್, 114 Nm ಪೀಕ್ ಟಾರ್ಕ್) ಬ್ಯಾಟರಿ ಪ್ಯಾಕ್.

ದೊಡ್ಡದಾದ ಅಂದರೆ, 24kWh ಬ್ಯಾಟರಿ ಪ್ಯಾಕ್ ಪಡೆದಿರುವ ಟಿಯಾಗೊ ಇವಿ ಸಂಪೂರ್ಣ ಚಾರ್ಜಿನಲ್ಲಿ 315 km ರೇಂಜ್ ನೀಡಿದರೆ, ಚಿಕ್ಕ ( 19.2kWh) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿರುವ ಕಾರು, 250 km ರೇಂಜ್ ಕೊಡಲಿದೆ. ಈ ಟಿಯಾಗೊ ಇವಿ ನಾಲ್ಕು ವಿವಿಧ ಚಾರ್ಜಿಗ್ ಆಯ್ಕೆಯನ್ನು ಪಡೆದಿದ್ದು, ಡಿಸಿ ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ 10-80% ಬ್ಯಾಟರಿ ಚಾರ್ಜ್ ಆಗಲು ಕೇವಲ 57 ನಿಮಿಷ ಬೇಕಾಗುತ್ತದೆ.

ಟಾಟಾ ಟಿಯಾಗೊ ಇವಿ ಹತ್ತು ಹಲವು ಭರಪೂರ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 7 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 4 ಸ್ಪೀಕರ್ ಹರ್ಮನ್ ಸೌಂಡ್ ಸಿಸ್ಟಮ್, ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಏರ್ ಬಾಗ್ಸ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್)ಗಳನ್ನು ಪಡೆದಿದೆ.

ಟಾಟಾ ಮೋಟಾರ್ಸ್, ಟಿಯಾಗೊ ಇವಿ ಮಾರಾಟ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಐಪಿಎಲ್ ವರದಾನವಾಗಿದೆ. ಪಂದ್ಯ ನಡೆಯುವ ಈ ಕಾರನ್ನು ಪ್ರದರ್ಶಿಸಿದರೆ, ಮತ್ತಷ್ಟು ಗ್ರಾಹಕರನ್ನು ಸೆಳೆಯುವುದು ಸುಲಭವಾಗುತ್ತದೆ ಎಂಬುದು ಕಂಪನಿಯ ನಂಬಿಕೆಯಾಗಿದೆ. ಈಗಾಗಲೇ ಟಿಯಾಗೊ ಕಡಿಮೆ ಬೆಲೆ ಮೂಲಕವೇ ದೇಶಾದ್ಯಂತ ಖ್ಯಾತಿಗಳಿಸಿದೆ. ಅದಕ್ಕೆ ತಕ್ಕಂತೆ ಉತ್ತಮ ಸಂಖ್ಯೆಯಲ್ಲಿ ಬುಕಿಂಗ್ ಕೂಡ ಪಡೆದುಕೊಂಡಿದೆ.

Article Published On: Friday, March 31, 2023, 14:30 [IST]
English summary
Tata announced tiago ev official partner of ipl 2023 details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+