Tata cars: ಮತ್ತೆ ಸಿಗುವುದಿಲ್ಲ.. ಟಾಟಾ ಕಾರುಗಳ ಮೇಲೆ ಬಿಗ್ ಡಿಸ್ಕೌಂಟ್

ಭಾರತದ ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿ ಟಾಟಾ (Tata) ಗುರುತಿಸಿಕೊಂಡಿದೆ. ಈ ಜುಲೈ ತಿಂಗಳು ಆಯ್ದ ಮಾದರಿಗಳ ಮೇಲೆ ಭರ್ಜರಿ ರಿಯಾಯಿತಿ ಪ್ರಯೋಜನವನ್ನು ನೀಡಿದ್ದು, ರೂ.50,000 ರವರೆಗೆ ಡಿಸ್ಕೌಂಟ್ ಸಿಗುತ್ತದೆ. ಗ್ರಾಹಕರು, ಇದರ ಸದುಪಯೋಗ ಪಡಿಸಿಕೊಂಡರೆ, ದೊಡ್ಡ ಮೊತ್ತವನ್ನು ಉಳಿಸಬಹುದು. ಇಲ್ಲಿದೆ ಹೆಚ್ಚಿನ ಮಾಹಿತಿ.

ಮೊದಲಿಗೆ ಕಂಪನಿಯ ಎಂಟ್ರಿ ಲೆವೆಲ್ ಕಾರಾಗಿರುವ ಟಿಯಾಗೊ ಪಡೆದಿರುವ ರಿಯಾಯಿತಿ ಪ್ರಯೋಜನ ಬಗ್ಗೆ ತಿಳಿಯೋಣ. ಈ ಕಾರು, ಒಟ್ಟು ರೂ.35,000 ಡಿಸ್ಕೌಂಟ್ ಹೊಂದಿದೆ. ಅದರಲ್ಲಿ ರೂ.20,000 ನಗದು ರಿಯಾಯಿತಿ, ರೂ.10,000 ಎಕ್ಸ್ಚೇಂಜ್ ಬೋನನ್ ಹಾಗೂ ರೂ.5,000 ಕಾರ್ಪೊರೇಟ್ ಡಿಸ್ಕೌಂಟ್ ಸೇರಿದೆ. ಟಿಯಾಗೊ CNG ಆವೃತ್ತಿಯು ಭರ್ಜರಿ ರಿಯಾಯಿತಿ ಪಡೆದಿದೆ. ಬರೋಬ್ಬರಿ ರೂ.45,000 ಮೊತ್ತದ ಡಿಸ್ಕೌಂಟ್ ಸೌಲಭ್ಯಗಳು ಲಭ್ಯವಿದೆ.

Tata cars: ಮತ್ತೆ ಸಿಗುವುದಿಲ್ಲ.. ಟಾಟಾ ಕಾರುಗಳ ಮೇಲೆ ಬಿಗ್ ಡಿಸ್ಕೌಂಟ್

ಪ್ರಮುಖವಾಗಿ, ರೂ.30,000 ಕ್ಯಾಶ್ ಡಿಸ್ಕೌಂಟ್, ರೂ.10,000 ಎಕ್ಸ್ಚೇಂಜ್ ಬೋನಸ್ ಮತ್ತು ರೂ.5,000 ಕಾರ್ಪೊರೇಟ್ ರಿಯಾಯಿತಿಯನ್ನು ಒಳಗೊಂಡಿದೆ. ಭಾರತದ ಮಾರುಕಟ್ಟೆಯಲ್ಲಿ ಟಾಟಾ ಟಿಯಾಗೊ ರೂ.5.60 ಲಕ್ಷದಿಂದ ರೂ.8.11 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ರೂಪಾಂತರಗಳಿಗೆ ಅನುಗುಣವಾಗಿ 19.0 - 19.01 kmpl ಮೈಲೇಜ್ ನೀಡುತ್ತದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಟಾಟಾ ಅಲ್ಟೋಜ್ ಕಾರು ಸಹ ದೊಡ್ಡ ಮಟ್ಟದಲ್ಲಿ ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಪೆಟ್ರೋಲ್ ಆವೃತ್ತಿ ಒಟ್ಟು ರೂ.23,000 ಡಿಸ್ಕೌಂಟ್ ಪಡೆದಿದೆ. ಅದರಲ್ಲಿ ರೂ.10,000 ನಗದು ರಿಯಾಯಿತಿ, ರೂ.10,000 ಎಕ್ಸ್ಚೇಂಜ್ ಬೋನಸ್ ಹಾಗೂ ರೂ.3,000 ಕಾರ್ಪೊರೇಟ್ ರಿಯಾಯಿತಿಯನ್ನು ಹೊಂದಿದೆ. ಅಲ್ಟೋಜ್ ಡಿಸೇಲ್ ಆವೃತ್ತಿಯು ರೂ.28,000 ಡಿಸ್ಕೌಂಟ್ ಪಡೆದಿದೆ.

ರೂ.15,000 ನಗದು ರಿಯಾಯಿತಿ, ರೂ.10,000 ಎಕ್ಸ್ಚೇಂಜ್ ಬೋನಸ್, ರೂ.3,000 ಕಾರ್ಪೊರೇಟ್ ರಿಯಾಯಿತಿ ಸೇರಿದೆ. ಟಾಟಾ ಅಲ್ಟೋಜ್ ರೂ.6.60 ಲಕ್ಷದಿಂದ ರೂ.10.74 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. ಈ ಕಾರು, 18.05 - 23.64 kmpl ಮೈಲೇಜ್ ನೀಡುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌, ISOFIX ಚೈಲ್ಡ್-ಸೀಟ್ ಆಂಕರ್ಸ್, ಆಟೋ ಪಾರ್ಕ್ ಲಾಕ್ ಮತ್ತು ರೇರ್ ಪಾರ್ಕಿಂಗ್ ಸೆನ್ಸರ್ಸ್ ಅನ್ನು ಹೊಂದಿದೆ.

ಟಾಟಾ ಟಿಗೂರ್ ಕಾರು ಈ ಜುಲೈ ತಿಂಗಳಲ್ಲಿ ಭರ್ಜರಿ ಡಿಸ್ಕೌಂಟ್ ಆಫರ್ ಪಡೆದಿದೆ. ಪೆಟ್ರೋಲ್ ಆವೃತ್ತಿ ಬರೋಬ್ಬರಿ ರೂ.35,000 ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ರೂ.20,000 ಕ್ಯಾಶ್ ಡಿಸ್ಕೌಂಟ್, ರೂ.10,000 ಎಕ್ಸ್ಚೇಂಜ್ ಬೋನಸ್ ಹಾಗೂ ರೂ.5,000 ಕಾರ್ಪೊರೇಟ್ ರಿಯಾಯಿತಿ ಸೇರಿದೆ. ಟಿಗೂರ್ iCNG ಗರಿಷ್ಠ ರೂ.50,000 ಡಿಸ್ಕೌಂಟ್ ಪಡೆದಿದ್ದು, ಅದರಲ್ಲಿ ರೂ.35,000 ನಗದು ರಿಯಾಯಿತಿ, ರೂ.10,000 ಎಕ್ಸ್ಚೇಂಜ್ ಬೋನಸ್, ರೂ.5,000 ಕಾರ್ಪೊರೇಟ್ ರಿಯಾಯಿತಿ ಒಳಗೊಂಡಿದೆ.

ಈ ಟಿಗೂರ್ ಕಾರು, ರೂ.6.30 ಲಕ್ಷದಿಂದ ರೂ.8.90 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಟಾಟಾದ ಜನಪ್ರಿಯ ಕಾಂಪ್ಯಾಕ್ಟ್ ಎಸ್‌ಯುವಿ ನೆಕ್ಸಾನ್ ಕೇವಲ ರೂ.3,000 ಕಾರ್ಪೊರೇಟ್ ಡಿಸ್ಕೌಂಟ್ ಪಡೆದಿದೆ. ಇನ್ನುಳಿದಂತೆ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಕಾರುಗಳು ರೂ.25,000 ಎಕ್ಸ್ಚೇಂಜ್ ಬೋನಸ್ ಮತ್ತು ರೂ.10,000 ಕಾರ್ಪೊರೇಟ್ ರಿಯಾಯಿತಿಯನ್ನು ಹೊಂದಿವೆ.

ಜುಲೈ ತಿಂಗಳಲ್ಲಿ ಪಂಚ್, ಟಿಯಾಗೊ ಇವಿ ಮತ್ತು ನೆಕ್ಸಾನ್ ಇವಿಗಳಿಗೆ ಕಂಪನಿಯು ಯಾವುದೇ ರಿಯಾಯಿತಿಯನ್ನು ನೀಡಿಲ್ಲ. ಆದರೆ, ಉಳಿದ ಬಹುತೇಕ ಎಲ್ಲ ಮಾದರಿಗಳಿಗೆ ದೊಡ್ಡ ಮಟ್ಟದಲ್ಲಿ ಡಿಸ್ಕೌಂಟ್ ನೀಡಿದೆ. ರಾಜ್ಯದಿಂದ ರಾಜ್ಯಕ್ಕೆ ಅನುಗುಣವಾಗಿ ಈ ರಿಯಾಯಿತಿ ಸೌಲಭ್ಯಗಳು ಬೇರೆ, ಬೇರೆಯಾಗಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಡೀಲರ್ ಶಿಪ್ ಗೆ ಭೇಟಿ ನೀಡಿರಿ.

Article Published On: Tuesday, July 11, 2023, 17:33 [IST]
English summary
Tata cars big discounts to rs 50000 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+