ಮೈಲೇಜ್ ಹೆಚ್ಚಳ: ಮಾರುತಿ ಕಾರುಗಳಿಗೆ ಸೆಡ್ಡು ಹೊಡೆಯಲಿವೆ ಟಾಟಾ ಕಾರುಗಳು
ಸ್ವದೇಶಿ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರ್ಯಾಗಿ ಕಾರುಗಳನ್ನು ಮಾರಾಟ ಮಾಡುತ್ತಿದೆ. ಕಳೆದ ಕೆಲವು ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಕಾರುಗಳ ಮಾರಾಟದಲ್ಲಿ ಬಾರೀ ಏರಿಕೆಯನ್ನು ಕಂಡಿದೆ. ಗರಿಷ್ಠ ಸುರಕ್ಷತೆಯೊಂದಿಗೆ ಹೆಚ್ಚು ಜನಪ್ರಿಯಗೊಂಡ ಟಾಟಾ ಕಾರುಗಳ ಮೈಲೇಜ್ ಕೂಡ ಹೆಚ್ಚಾಗಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಸೇರಿದಂತೆ ಹೆಚ್ಚಿನ ಕಾರು ತಯಾರಕರು ಈ ವರ್ಷ ಬೆಲೆ ಏರಿಕೆಯನ್ನು ಘೋಷಿಸಿದ್ದಾರೆ, ಇದು ಕಟ್ಟುನಿಟ್ಟಾದ BS6 ಹಂತ 2 ಎಮಿಷನ್ ಮಾನದಂಡಗಳಿಗೆ ಲಿಂಕ್ ಮಾಡುವ ಸಾಧ್ಯತೆಯಿದೆ. ಜನಪ್ರಿಯ ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಈ ವರ್ಷದ ಆರಂಭದಲ್ಲಿ ಫೆಬ್ರವರಿಯಲ್ಲಿ ಬೆಲೆ ಏರಿಕೆಯನ್ನು ಘೋಷಿಸಿತ್ತು. ಈ ವರ್ಷದ ಕೊನೆಯಲ್ಲಿ ಮತ್ತೊಂದು ಸುತ್ತಿನ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಟಾಟಾ ಕಾರುಗಳು ದುಬಾರಿಯಾಗಿದ್ದರೂ, ನೆಕ್ಸಾನ್, ಆಲ್ಟ್ರೊಜ್, ಪಂಚ್, ಟಿಯಾಗೊ ಮತ್ತು ಟಿಗೊರ್‌ನ ಬಿಎಸ್ 6 ಹಂತ II ಆವೃತ್ತಿಗಳ ಹೆಚ್ಚಿದ ಮೈಲೇಜ್‌ನಿಂದ ಗ್ರಾಹಕರು ಲಾಭ ಪಡೆಯುತ್ತಾರೆ. ಈ ಕಾರುಗಳ ಪೆಟ್ರೋಲ್ ಮತ್ತು ಡೀಸೆಲ್ ರೂಪಾಂತರಗಳಾದ್ಯಂತ ಮೈಲೇಜ್ 0.60 ಕಿ.ಮೀ ನಿಂದ 2.40 ಕಿ.ಮೀ ಹೆಚ್ಚು ಮೈಲೇಜ್ ಪಡೆಯುತ್ತದೆ. ಹೆಚ್ಚಿದ ಮೈಲೇಜ್ ನಿಂದ ಉಳಿತಾಯವನ್ನು ಹೆಚ್ಚಿಸುತ್ತದೆ, ಇನ್ನು ಸಿಎನ್‌ಜಿ ರೂಪಾಂತರಗಳು ಈಗಾಗಲೇ ಹೆಚ್ಚು ಮೈಲೇಜ್ ಅನ್ನು ನೀಡುತ್ತಿದೆ.
ಡೀಸೆಲ್ ರೂಪಾಂತರಗಳಲ್ಲಿ, ಆಲ್ಟ್ರೋಜ್ ಡೀಸೆಲ್ ಕಾರು 0.60 ಕಿ.ಮೀ ಹೆಚ್ಚು ಮೈಲೇಜ್ ಅನ್ನು ನೀಡುತ್ತದೆ. ಇನ್ನು ನೆಕ್ಸಾನ್ ಡೀಸೆಲ್ ಎಂಜಿನ್ 2.10 ಕಿ.ಮೀ ಹೆಚ್ಚು ಮೈಲೇಜ್ ಅನ್ನು ನೀಡುತ್ತದೆ ಮತ್ತು ಇದರ ಹೊಸ ಮೈಲೇಜ್ 23.20 ಕಿ.ಮೀ ಆಗಿದೆ. ಇನ್ನು ನೆಕ್ಸಾನ್ ಡೀಸೆಲ್ ಎಎಂಟಿ ಮಾದರಿಯು 2.40 ಕಿ.ಮೀ ಹೆಚ್ಚು ಮೈಲೇಜ್ ಅನ್ನು ನೀಡುತ್ತದೆ ಮತ್ತು ಇದರ ಮೈಲೇಜ್ 24.10 ಕಿ.ಮೀ ಆಗಿದೆ.

ಇನ್ನು ಆಲ್ಟ್ರೊಜ್ ಡೀಸೆಲ್ ಮತ್ತು ನೆಕ್ಸಾನ್ ಡೀಸೆಲ್‌ನ BS6 ಹಂತ II ಆವೃತ್ತಿಗಳೊಂದಿಗೆ ಚಾಲನೆಯನ್ನು ಸುಧಾರಿಸಲಾಗಿದೆ ಎಂದು ಟಾಟಾ ಹೇಳಿಕೊಂಡಿದೆ. ಇನ್ನು ಪೆಟ್ರೋಲ್ ರೂಪಾಂತರಗಳಲ್ಲಿ, ಟಾಟಾ ಟಿಗೋರ್ 0.60 ಕಿ.ಮೀ ಹೆಚ್ಚು ಮೈಲೇಜ್ ನೀಡುತ್ತದೆ. BS6 ಹಂತ II ನಿಯಮಕ್ಕೆ ಅನುಗುಣವಾಗಿ ನವೀಕರಣಗೊಂಡ ಆಲ್ಟ್ರೊಜ್ ಪೆಟ್ರೋಲ್ ಕಾರು 0.70 ಕಿ.ಮೀ ಹೆಚ್ಚು ಮೈಲೇಜ್ ಅನ್ನು ನೀಡುತ್ತದೆ ಮತ್ತು ಇದರ ಹೊಸ ಮೈಲೇಜ್ 19.30 ಕಿಮೀ ಆಗಿದೆ.
ಇನ್ನು ಟಾಟಾ ನೆಕ್ಸಾನ್ ಪೆಟ್ರೋಲ್ ಕಾರು 0.75 ಕಿ.ಮೀ ಹೆಚ್ಚು ಮೈಲೇಜ್ ಅನ್ನು ನೀಡುತ್ತದೆ ಮತ್ತು ಇದು ಈಗ 17.10 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಟಾಟಾ ಪಂಚ್ ಕಾರು 1.13 ಕಿ.ಮೀ ಮೈಲೇಜ್ ಹೆಚ್ಚು ನೀಡುತ್ತದೆ ಮತ್ತು ಇದರ ಹೊಸ ಮೈಲೇಜ್ 20.10 ಕಿ.ಮೀ ಆಗಿದೆ. ಇದು ಎಲ್ಲಾ ಟಾಟಾ ಪೆಟ್ರೋಲ್ ಕಾರುಗಳಲ್ಲಿ ಅತ್ಯಧಿಕವಾಗಿದೆ.

ಟಾಟಾ ಟಿಯಾಗೋ, ಟಿಗೋರ್ ಮತ್ತು ಆಲ್ಟ್ರೊಜ್ ಕಾರುಗಳು 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ, ಆಲ್ಟ್ರೊಜ್ 6-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ (DCA) ಆಯ್ಕೆಯನ್ನು ಹೊಂದಿದ್ದರೆ, ಇತರ ಮೂರು ಕಾರುಗಳು 5-ಸ್ಪೀಡ್ AMT ಆಯ್ಕೆಯನ್ನು ಹೊಂದಿವೆ. ಆಲ್ಟ್ರೊಜ್ ಕಾರಿನಲ್ಲಿ 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದು 110 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.
BS6 ಹಂತ II ಮಾಲಿನ್ಯ ಮಾನದಂಡಗಳ ಅನುಸರಣೆ ಮತ್ತು ಇಂಧನ ದಕ್ಷತೆಯನ್ನು ಹೆಚ್ಚಿಸುವುದರ ಜೊತೆಗೆ, ಟಾಟಾ ತನ್ನ ಎಲ್ಲಾ ಕಾರುಗಳಿಗೆ ವಾರಂಟಿ ಅವಧಿಯನ್ನು ಹೆಚ್ಚಿಸಿದೆ. ಹಿಂದಿನ 2 ವರ್ಷಗಳು/75,000 ಕಿಮೀಗಳಿಗೆ ಹೋಲಿಸಿದರೆ, ಹೊಸ ವಾರಂಟಿಯು 3 ವರ್ಷಗಳು/1 ಲಕ್ಷ ಕಿಮೀಗಳ ವಾರಂಟಿಯನ್ನು ನೀಡುತ್ತದೆ. ಈ ಸುಧಾರಣೆಗಳು ಉತ್ತಮ ಒಟ್ಟಾರೆ ಪ್ಯಾಕೇಜ್ ಅನ್ನು ರಚಿಸುತ್ತವೆ, ಇದು ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಸಹಾಯ ಮಾಡುತ್ತದೆ.


Click it and Unblock the Notifications