Tata: ರಸ್ತೆಯಲ್ಲಿ ಕಾಣಿಸಿತು ಹೊಸ ಟಾಟಾ ಕರ್ವ್ ಕಾರು, ಭರ್ಜರಿ ವಿಶೇಷತೆಗಳಿವೆ?
ದೇಶದಲ್ಲಿ ಟಾಟಾ (Tata) ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುತ್ತಿರುತ್ತದೆ. ಕಂಪನಿಯ ಹ್ಯಾಚ್‌ಬ್ಯಾಕ್ ಹಾಗೂ ಎಸ್‌ಯುವಿಗಳು ಅತ್ಯಾಕರ್ಷಕ ವಿನ್ಯಾಸ, ವೈಶಿಷ್ಟ್ಯದೊಂದಿಗೆ ಖರೀದಿಗೆ ದೊರೆಯುವುದರಿಂದ ಹೆಚ್ಚಿನ ಮಂದಿ ಇಷ್ಟಪಟ್ಟು ಕೊಂಡುಕೊಳ್ಳುತ್ತಾರೆ. ಸದ್ಯ, ಕರ್ವ್ ಎಸ್‌ಯುವಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದಿದೆ.
ಟಾಟಾ ಮೋಟಾರ್ಸ್ (Tata Motors), ದೇಶೀಯ ಮಾರುಕಟ್ಟೆಯಲ್ಲಿ ಬಹುತೇಕ 2024ರಲ್ಲಿ ಬಿಡುಗಡೆಗೊಳಿಸಲು ಸಿದ್ದವಾಗಿರುವ ಕರ್ವ್ ಎಸ್‌ಯುವಿ (Curvv SUV) ಪರೀಕ್ಷೆಯನ್ನು ಈಗಾಗಲೇ ಹಲವು ಬಾರಿ ನಡೆಸಿದ್ದು, ಆ ಚಿತ್ರಗಳು ಇಂಟರ್ನೆಟ್ ನಲ್ಲಿ ಕಾಣಿಸಿಕೊಂಡಿವೆ. ಇತ್ತೀಚೆಗೆ ಕೂಡ ಈ ಎಸ್‌ಯುವಿ ಪ್ರಾಯೋಗಿಕ ಸಂಚಾರ ನಡೆಸಿತ್ತು. ಅದರ ಸ್ಪೈ ಫೋಟೋಗಳನ್ನು ಗಮನಿಸಿದರೆ, ಇದರ ವಿನ್ಯಾಸ ಸಾಕಷ್ಟು ಅತ್ಯಾಧುನಿಕವಾಗಿದೆ.

ಈ ಟಾಟಾ ಕರ್ವ್ ಕಾರು, ಹುಂಡೈ ಕ್ರೆಟಾಗೆ ಪ್ರಬಲ ಪ್ರತಿಸ್ಪರ್ಧಿಯಾಗಲಿದೆ ಎಂದು ಹೇಳಲಾಗಿದೆ. ಮುಂಭಾಗ ಹೊಸದಾದ ಬಂಪರ್ ಇದ್ದು, ಎಲ್ಲರನ್ನು ಆಕರ್ಷಿಸುತ್ತದೆ. ನೆಕ್ಸಾನ್ ಇವಿ ರೀತಿಯಲ್ಲಿ ಎಲ್ಇಡಿ DRLs ಹಾಗೂ ಇಂಡಿಕೇಟರ್ ಪಡೆದಿದೆ. ಇದರ ಗ್ರಿಲ್ ನೋಡುಗರನ್ನು ಸೆಳೆಯಲಿದ್ದು, ಸ್ಪ್ಲಿಟ್ ಹೆಡ್ ಲ್ಯಾಂಪ್ ಸೆಟಪ್ ಒಳಗೊಂಡಿದೆ. 17-ಇಂಚಿನ ಅಲಾಯ್ ವೀಲ್ಸ್, ಪೀಲರ್ ನಲ್ಲಿ ORVMs ಅಳವಡಿಸಲಾಗಿದ್ದು, ಶಾರ್ಕ್-ಫಿನ್ ಆಂಟೆನಾವಿರುವುದನ್ನು ಸ್ಪೈ ಫೋಟೋದಲ್ಲಿ ನೋಡಬಹುದು.
ಮುಂಬರಲಿರುವ ಟಾಟಾ ಕರ್ವ್ ಎಸ್‌ಯುವಿಯ ಒಳಭಾಗ ಹೆಚ್ಚು ಆಕರ್ಷಣೀಯವಾಗಿರಲಿದ್ದು, ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿರಲಿದೆ. ಅವುಗಳೆಂದರೆ, 12.3 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟ್ವಿನ್-ಸ್ಪೋಕ್ ಸ್ಟೀರಿಂಗ್ ವೀಲ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜರ್, ಏರ್ ಪ್ಯೂರಿಫೈಯರ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, 360-ಡಿಗ್ರಿ ಕ್ಯಾಮೆರಾ, ಸನ್‌ರೂಫ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ಸದ್ಯ, ಪರಿಕ್ಷಾರ್ಥ ಸಂಚಾರ ನಡೆಸಿರುವ ಕಾರು, ಎಲೆಕ್ಟ್ರಿಕ್ ಅಥವಾ ಇಂಧನ ಚಾಲಿತವೇ ಎಂಬುದು ತಿಳಿದುಬಂದಿಲ್ಲ. ಟಾಟಾ ಕರ್ವ್ ನೂತನ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದ್ದು, ಇದರ 1.2-ಲೀಟರ್ T-GDi ಟರ್ಬೊ ಪೆಟ್ರೋಲ್ ಎಂಜಿನ್, 125 PS ಗರಿಷ್ಠ ಪವರ್ ಹಾಗೂ 225 Nm ಪೀಕ್ ಟಾರ್ಕ್ ಉತ್ಪಾದಿಸುಸುವ ನೀರಿಕ್ಷೆಯಿದ್ದು, 7-ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಾಗಬಹುದು.
ಟಾಟಾ ಕರ್ವ್ ಎಲೆಕ್ಟ್ರಿಕ್ ಕಾರು, ದೊಡ್ಡದಾದ ಬ್ಯಾಟರಿ ಪ್ಯಾಕ್ ಹೊಂದಿರಲಿದೆ ಎಂದು ಅಂದಾಜಿಸಲಾಗಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 500 ರೇಂಜ್ ನೀಡಬಹುದು. ಬಹುತೇಕ ಮುಂದಿನ ವರ್ಷ ಇವೆರೆಡು ಬಿಡುಗಡೆಯಾಗಲಿವೆ. ಟಾಟಾ ಈ ಕಾರಿನ ಬೆಲೆ ಬಗ್ಗೆ ಎಲ್ಲಿಯೂ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೂ ಇಂಧನ ಚಾಲಿತ ಕರ್ವ್ ರೂ.10.50 ಲಕ್ಷ, ಎಲೆಕ್ಟ್ರಿಕ್ ಕಾರು,ರೂ. 20 ಲಕ್ಷ ಬೆಲೆಗೆ ಸಿಗಬಹುದು ಎಂದು ಹೇಳಲಾಗಿದೆ.

ಈ ಟಾಟಾ ಕರ್ವ್ ಕಾರಿಗೆ ಪ್ರಬಲ ಪ್ರತಿಸ್ಪರ್ಧಿಗಳೇ ಇದ್ದು, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಫೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಹೋಂಡಾ ಎಲಿವೇಟ್, ಸಿಟ್ರಸ್ ಸಿ3 ಏರ್‌ಕ್ರಾಸ್ ಮತ್ತು ಎಂಜಿ ಆಸ್ಟರ್ ಸೇರಿದಂತೆ ವಿವಿಧ ಪ್ರತಿಸ್ಪರ್ಧಿಗಳಿವೆ. ಈ ಕಾರು ಬಿಡುಗಡೆಯಾದ ಮೇಲೆ ಟಾಟಾ, ವಾಹನ ಮಾರುಕಟ್ಟೆಯಲ್ಲಿ ಮೊದಲ ಸ್ಥಾನಕ್ಕೆ ಬಂದರೂ ಅಚ್ಚರಿಯಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.
Image Courtesy: MotorBeam


Click it and Unblock the Notifications