Tata: ಗಣೇಶ ಹಬ್ಬ.. ಟಾಟಾ ಕಂಪನಿಯಿಂದ ದೊಡ್ಡ ಘೋಷಣೆ
ದೇಶದಲ್ಲಿ ಟಾಟಾ (Tata) ಪ್ರಮುಖ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಈ ತಿಂಗಳು (ಸೆಪ್ಟೆಂಬರ್ 2023) ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ನೆಕ್ಸಾನ್, ಆಲ್ಟ್ರೋಜ್, ಹ್ಯಾರಿಯರ್, ಸಫಾರಿ, ಟಿಯಾಗೊ ಸೇರಿದಂತೆ ವಿವಿಧ ಮಾದರಿಗಳ ಮೇಲೆ ರಿಯಾಯಿತಿ ಘೋಷಣೆ ಮಾಡಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಮೊದಲಿಗೆ ಆಲ್ಟ್ರೋಜ್ (Altroz) ಕಾರು ಪಡೆದುಕೊಂಡಿರುವ ಡಿಸ್ಕೌಂಟ್ ಆಫರ್ ಬಗ್ಗೆ ಮಾತನಾಡೋಣ. ಇದರ, ಡೀಸೆಲ್ ಆವೃತ್ತಿ ರೂ.15,000 ನಗದು ರಿಯಾಯಿತಿ, ರೂ.10,000 ಎಕ್ಸ್ಚೇಂಜ್ ಬೋನಸ್, ರೂ.5,000 ಕಾರ್ಪೊರೇಟ್ ಡಿಸ್ಕೌಂಟ್ ಹೊಂದಿದೆ. ಪೆಟ್ರೋಲ್ ಆವೃತ್ತಿ ರೂ.20,000 ಕ್ಯಾಶ್ ಡಿಸ್ಕೌಂಟ್, ರೂ.10,000 ವಿನಿಮಯ ಬೋನಸ್ ಮತ್ತು ರೂ. 5,000 ಕಾರ್ಪೊರೇಟ್ ರಿಯಾಯಿತಿಯನ್ನು ಒಳಗೊಂಡಿದೆ.

ಭಾರತದ ಮಾರುಕಟ್ಟೆಯಲ್ಲಿ ಟಾಟಾ ಆಲ್ಟ್ರೋಜ್ ರೂ.6.60 ಲಕ್ಷದಿಂದ ರೂ.10.74 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ರೂಪಾಂತರಗಳಿಗೆ ಅನುಗುಣವಾಗಿ 18.05 - 23.64 kmpl ಮೈಲೇಜ್ ನೀಡುತ್ತದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಬಿಯೆಂಟ್ ಲೈಟಿಂಗ್, ಕ್ರೂಸ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಹ್ಯಾರಿಯರ್ ಎಸ್‌ಯುವಿ, ಯಾವುದೇ ನಗದು ರಿಯಾಯಿತಿ ಹೊಂದಿಲ್ಲ. ಆದರೂ ಇದರ ಎಂಟಿ ರೂಪಾಂತರ ರೂ.25,000 ಎಕ್ಸ್ಚೇಂಜ್ ಬೋನಸ್, ರೂ.5,000 ಕಾರ್ಪೊರೇಟ್ ಡಿಸ್ಕೌಂಟ್ ಒಳಗೊಂಡಿದೆ. ಮತ್ತೊಂದು, ಎಟಿ ವೇರಿಯೆಂಟ್ ರೂ.25,000 ವಿನಿಮಯ ಬೋನಸ್ ಮತ್ತು ರೂ.10,000 ಕಾರ್ಪೊರೇಟ್ ರಿಯಾಯಿತಿಯನ್ನು ಪಡೆದಿದೆ. ಈ ಕಾರು, ರೂ.15.20 ಲಕ್ಷದಿಂದ ರೂ.24.27 ಲಕ್ಷ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ.

ಟಾಟಾ ಸಫಾರಿ (Safari) ಎಟಿ (ADAS) ಆವೃತ್ತಿ ಮಾತ್ರ ಭರ್ಜರಿ ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ರೂ.50,000 ಕ್ಯಾಶ್ ಡಿಸ್ಕೌಂಟ್, ರೂ.25,000 ಎಕ್ಸ್ಚೇಂಜ್ ಬೋನಸ್ ಹಾಗೂ ರೂ.10,000 ಕಾರ್ಪೊರೇಟ್ ರಿಯಾಯಿತಿಯನ್ನು ಪಡೆದಿದೆ. ಈ ಕಾರು, ರೂ.15.85 ಲಕ್ಷದಿಂದ ರೂ.25.21 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ.
ನೆಕ್ಸಾನ್ ಕಾರು ಹೊಂದಿರುವ ರಿಯಾಯಿತಿ ಬಗ್ಗೆ ಮಾತನಾಡುವುದಾದರೆ, ಡಿಸೇಲ್ ರೂಪಾಂತರ ರೂ.10,000 ನಗದು ರಿಯಾಯಿತಿ, ರೂ.25,000 ವಿನಿಮಯ ಬೋನಸ್, ರೂ.5,000 ಕಾರ್ಪೊರೇಟ್ ಡಿಸ್ಕೌಂಟ್ ಅನ್ನು ಹೊಂದಿದೆ. ನೆಕ್ಸಾನ್ ಎಂಟಿ (ಪೆಟ್ರೋಲ್) ರೂ.35,000 ಕ್ಯಾಶ್ ಡಿಸ್ಕೌಂಟ್, ರೂ.15,000 ಎಕ್ಸ್ಚೇಂಜ್ ಬೋನಸ್, ರೂ.10,000 ಕಾರ್ಪೊರೇಟ್ ರಿಯಾಯಿತಿಯನ್ನು ಒಳಗೊಂಡಿದೆ.
ನೆಕ್ಸಾನ್ ಎಎಂಟಿ (ಪೆಟ್ರೋಲ್) ರೂ.15,000 ನಗದು ರಿಯಾಯಿತಿ, ರೂ.25,000 ವಿನಿಮಯ ಬೋನಸ್, ರೂ.10,000 ಕಾರ್ಪೊರೇಟ್ ಡಿಸ್ಕೌಂಟ್ ಪಡೆದಿದೆ. ಈ ಕಾರು, ರೂ.8 ಲಕ್ಷದಿಂದ ರೂ.14.60 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ರೂಪಾಂತರಗಳಿಗೆ ಅನುಗುಣವಾಗಿ 24.07 kmpl ಮೈಲೇಜ್ ನೀಡುತ್ತದೆ. ಜೊತೆಗೆ ಗ್ರಾಹಕರನ್ನು ಆಕರ್ಷಿಸುವ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ಟಾಟಾ ಟಿಯಾಗೂ ಕೂಡ ಉತ್ತಮ ರಿಯಾಯಿತಿ ಪ್ರಯೋಜನಗಳನ್ನು ಪಡೆದಿದೆ. ಸಿಎನ್‌ಜಿ ಆವೃತ್ತಿ ರೂ.30,000 ನಗದು ರಿಯಾಯಿತಿ, ರೂ.20,000 ಎಕ್ಸ್ಚೇಂಜ್ ಬೋನಸ್, ರೂ.5,000 ಕಾರ್ಪೊರೇಟ್ ರಿಯಾಯಿತಿ ಒಳಗೊಂಡಿದೆ. ಟಿಯಾಗೂ ಎಂಟಿ ರೂಪಾಂತರ ರೂ.30,000 ಹಾಗೂ ಎಎಂಟಿ ವೇರಿಯೆಂಟ್ ರೂ.20,000 ಕ್ಯಾಶ್ ಡಿಸ್ಕೌಂಟ್ ಸೇರಿದಂತೆ ವಿವಿಧ ರಿಯಾಯಿತಿ ಪ್ರಯೋಜನಗಳನ್ನು ಹೊಂದಿವೆ.
ಟಿಗೂರ್ ಸಿಎನ್‌ಜಿ ರೂಪಾಂತರ ರೂ.30,000 ನಗದು ರಿಯಾಯಿತಿ, ರೂ.20,000 ಎಕ್ಸ್ಚೇಂಜ್ ಬೋನಸ್, ರೂ.5,000 ಕಾರ್ಪೊರೇಟ್ ರಿಯಾಯಿತಿ ಪಡೆದಿದೆ. ಉಳಿದ ಆವೃತ್ತಿಗಳು ರೂ.25,000 ಕ್ಯಾಶ್ ಡಿಸ್ಕೌಂಟ್ ಹೊಂದಿವೆ. ಪಂಚ್ ಕಾರು, ಕೇವಲ ರೂ.5,000 ಕಾರ್ಪೊರೇಟ್ ಡಿಸ್ಕೌಂಟ್ ಒಳಗೊಂಡಿದೆ. ಇನ್ನು ರಾಜ್ಯದಿಂದ ರಾಜ್ಯಕ್ಕೆ ಅನುಗುಣವಾಗಿ ಈ ರಿಯಾಯಿತಿ ಸೌಲಭ್ಯಗಳು ಬೇರೆಯಾಗಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಡೀಲರ್ ಶಿಪ್ ಅನ್ನು ಸಂಪರ್ಕಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications