TATA: ಟಾಟಾದಿಂದ ಡಬಲ್ ಡೆಕ್ಕರ್ ಬಸ್ ಕನ್ಫರ್ಮ್... ಆಸಕ್ತಿಕರ ಮಾಹಿತಿ ಬಹಿರಂಗ!
ಟಾಟಾ ಮೋಟಾರ್ಸ್ ಡಬಲ್ ಡೆಕ್ಕರ್ ಬಸ್‌ಗಳನ್ನು ತರಲು ಯೋಜಿಸುತ್ತಿರವ ಮಾಹಿತಿ ಹೊರಬಿದ್ದಿದೆ. ಈ ಹಿಂದೆ ಭಾರತದಲ್ಲಿ ಸಖತ್ ಕ್ರೇಜ್ ಹುಟ್ಟುಹಾಕಿದ್ದ ಈ ಬಸ್‌ಗಳು, ಈಗಲು ದೇಶದ ಕೆಲವೆಡೆ ಸಂಚರಿಸುತ್ತಿವೆ. ಈ ಬಸ್‌ಗಳು ಸಾಮಾನ್ಯ ಬಸ್‌ಗಳಿಗಿಂತಲ್ಲದೇ ಹೆಚ್ಚು ಜನರನ್ನು ಸಾಗಿಸಬಲ್ಲವು ಹಾಗೂ ರಸ್ತೆಗಳಲ್ಲಿ ಆಕರ್ಷಣೀಯವಾಗಿ ಕಾಣುತ್ತವೆ.
ಡಬಲ್ ಡೆಕ್ಕರ್ ಬಸ್‌ನಲ್ಲಿ ಹೊಸತನದ ಅಂಶವಿದೆ, ಸಾಮಾನ್ಯ ಬಸ್‌ಗಳಿಗಿಂತ ಆಕರ್ಷಣೆಯವಾಗಿ ಕಾಣುವುದರಿಂದ ಪ್ರಯಾಣಿಕರು ಈ ಬಸ್‌ಗಳಲ್ಲಿ ಪ್ರಯಾಣಿಸಲು ಇಷ್ಟಪಡುತ್ತಾರೆ. ಹಾಗಾಗಿ ಈ ಬಸ್‌ಗಳನ್ನು ಮಾರುಕಟ್ಟಗೆ ಪರಿಚಯಿಸಿದರೆ ಉತ್ತಮ ಬೇಡಿಕೆ ಸೃಷ್ಟಿಯಾಗಲಿದೆ. ಈ ನಿಟ್ಟಿನಲ್ಲಿ ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಭಾರತದಲ್ಲಿ ಅದರ ವಿನ್ಯಾಸವನ್ನು ಪೇಟೆಂಟ್ ಮಾಡಿದೆ.

ಏನನ್ನು ನಿರೀಕ್ಷಿಸಬಹುದು: ಹೆಚ್ಚಿನ ಜಾಗ, ಸ್ಮಾರ್ಟ್ ಡಿಸೈನ್, ಸ್ಮಾರ್ಟರ್ ಕಮ್ಯೂಟ್, 4,920 ಎಂಎಂ ವ್ಹೀಲ್‌ಬೇಸ್, 900 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಒಟ್ಟಾರೆ ಅಗಲ 2,340 ಎಂಎಂ ಇರಬಹುದು ಎನ್ನಲಾಗಿದೆ. ಪವರ್‌ಟ್ರೇನ್ ಆಯ್ಕೆಗಳು ಬಹುಶಃ ಈಗಾಗಲೇ ಇರುವ ಟಾಟಾ ಅಲ್ಟ್ರಾ ಎಲೆಕ್ಟ್ರಿಕ್ ಬಸ್‌ಗಳಂತೆಯೇ ಇರಬಹುದು ಎಂದು ಹೇಳಲಾಗುತ್ತಿದೆ.
245 kW ಪೀಕ್ ಪವರ್ (329 bhp) ಮತ್ತು 145 kW (194 bhp) ನಿರಂತರ ಶಕ್ತಿಯ ಜೊತೆಗೆ 3000 Nm ಪೀಕ್ ಟಾರ್ಕ್ ಮತ್ತು 1145 Nm ನಿರಂತರ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಲಿದೆ. ಅಲ್ಟ್ರಾ 9m ಎಲೆಕ್ಟ್ರಿಕ್ ಬಸ್‌ನಂತೆ 150 ಕಿ.ಮೀ ವ್ಯಾಪ್ತಿ ಮತ್ತು 75 ಕಿ.ಮೀ/ಗಂ ಟಾಪ್ ಸ್ಪೀಡ್ ಹೊಂದಿರುವ ದೊಡ್ಡ 124 kWh ಬ್ಯಾಟರಿ ಪಡೆಯುವ ನಿರೀಕ್ಷೆಯಿದೆ.

ಇನ್ನು ಈಗಾಗಲೇ ಇರುವ ಟಾಟಾದ 12m ಸ್ಟಾರ್‌ಬಸ್ ಶ್ರೇಣಿಯು 200 ಕಿ.ಮೀ ವ್ಯಾಪ್ತಿಯೊಂದಿಗೆ 250 kWh ಬ್ಯಾಟರಿಯನ್ನು ಹೊಂದಿದೆ. ಟಾಟಾ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ ಬ್ಯಾಟರಿಗಳು ಸ್ಕೇಲೆಬಲ್ ಆಗಿರುತ್ತವೆ. ಆರ್ಡರ್‌ಗಳಿಗೆ ಅನುಗುಣವಾಗಿ ಟಾಟಾ ಬೆಸ್ಪೋಕ್ ಪರಿಹಾರಗಳನ್ನು ನೀಡುತ್ತದೆ ಎಂಬುದು ಇಲ್ಲಿ ತಿಳಿಯಬೇಕಾದ ಅಂಶ.
BMTC ಗೆ ಮೊದಲ ಟಾಟಾ ಎಲೆಕ್ಟ್ರಿಕ್ ಬಸ್ ಸೇರ್ಪಡೆ: ಟಾಟಾದ ಎಲೆಕ್ಟ್ರಿಕ್ ಬಸ್‌ನ ಪ್ರಥಮ ಪ್ರೊಟೊಟೈಪ್ ಮಾದರಿಯನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜುಲೈ 28 ರಂದು ಉದ್ಘಾಟಿಸಿದ್ದಾರೆ. ಸಾರಿಗೆ ಸಂಸ್ಥೆಗಳಿಗೆ 4,000 ಹೊಸ ವಾಹನಗಳನ್ನು ಒದಗಿಸುವ ಮತ್ತು 13,000 ಸಿಬ್ಬಂದಿಗಳ ನೇಮಕಾತಿಗೆ ಅನುಮತಿ ಕೊಡುವ ಜೊತೆಗೆ ಬಜೆಟ್ ನಲ್ಲಿ 500 ಕೋಟಿ ರೂ. ನಿಗಮಗಳಿಗೆ ಬಸ್ ಖರೀದಿಗಾಗಿ ವಿಸ್ತರಿಸುವುದಾಗಿ ತಿಳಿಸಿದರು.
ಸದ್ಯ ಮುಂಬರುವ ದಿನಗಳಲ್ಲಿ ಬೆಂಗಳೂರಿನ ಸಾರ್ವಜನಿಕರಿಗಾಗಿ ಬಿಎಂಟಿಸಿ 921 ಟಾಟಾ ಎಲೆಕ್ಟ್ರಿಕ್ ಬಸ್ಸುಗಳನ್ನು ಸೇರ್ಪಡೆಗೊಳಿಸುತ್ತಿದೆ. ಭಾರತ ಸರ್ಕಾರದ ಫೇಮ್-2 ಯೋಜನೆಯಡಿಯಲ್ಲಿ ಜಿ.ಸಿ.ಸಿ ಆಧಾರದ ಮೇಲ್ ಕಾರ್ಯಾಚರಣೆ ಮಾಡಲಿವೆ. ಈ ಬಸ್ಸುಗಳು 12 ಮೀಟರ್ ಉದ್ದದ low floor ಎಲೆಕ್ಟ್ರಿಕ್ ಬಸ್ಸುಗಳಾಗಿದ್ದು, ಎತ್ತರ 400 mm ಇದೆ.
ಪ್ರತಿ ಬಸ್ಸನ್ನು45 ನಿಮಿಷ Opportunity Charging ಮಾಡಲಾಗುವುದು. ಈ ಎಲೆಕ್ಟ್ರಿಕ್ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲು ಶಾಂತಿನಗರ, ಜಯನಗರ, ಹೆಣ್ಣೂರು, ದೀಪಾಂಜಲಿನಗರ, ರಾಜರಾಜೇಶ್ವರಿನಗರ, ಪೀಣ್ಯ 2ನೇ ಹಂತ, ಜಿಗಣಿ, ಕೆ.ಆರ್.ಪುರಂ, ಸೀಗೇಹಳ್ಳಿ, ಹೊಸಕೋಟೆ ಸೇರಿದಂತೆ 10 ಘಟಕಗಳನ್ನು ಗುರುತಿಸಲಾಗಿದೆ.
ಪ್ರಾಯೋಗಿಕವಾಗಿ ಕಾರ್ಯಚರಣೆ ಮಾಡುವ ಮಾರ್ಗ: 96-ಎ ಮಾರ್ಗ: ಕೆಂಪೇಗೌಡ ಬಸ್ ನಿಲ್ದಾಣ, ಸುಜಾತ ಟಾಕೀಸ್, ಇಂಡಸ್ಟ್ರಿಯಲ್ ಟೌನ್ ರಾಜಾಜಿನಗರ, ಹಾವನೂರು ವೃತ್ತ, ಮೋದಿ ಆಸ್ಪತ್ರೆ, ಹರಿಶ್ಚಂದ್ರ ಘಾಟ್, ಸೆಂಟ್ರಲ್, ಕೆಂಪೇಗೌಡ ಬಸ್ ನಿಲ್ದಾಣದ ಮೂಲಕ ಪ್ರಯೋಗಿಕ ಕಾರ್ಯಾಚರಣೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








