Tata: ಟಾಟಾದ ಪರಿಸರ ಪ್ರೇಮ, ದಾಖಲೆಯ 1 ಲಕ್ಷ ಇವಿ ಮಾರಾಟ.. ಗ್ರಾಹಕರಿಗೆ ರೂ.7 ಬಿಲಿಯನ್ ಹಣ ಉಳಿತಾಯ

ಭಾರತದಲ್ಲಿ ಟಾಟಾ (Tata) ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿದೆ. ಅದರಲ್ಲೂ ಎಲೆಕ್ಟ್ರಿಕ್ ವಾಹನ (ಇವಿ) ಮಾರುಕಟ್ಟೆಯಲ್ಲಿ ಅಬ್ಬರಿಸುತ್ತಿದ್ದು, ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಅತ್ಯಾಧುನಿಕ ವೈಶಿಷ್ಟ್ಯ, ಗರಿಷ್ಠ ರೇಂಜ್ ಮತ್ತು ಕೈಗೆಟುಕುವ ಬೆಲೆಯಲ್ಲಿ ಕಂಪನಿಯ ಇವಿಗಳು ಖರೀದಿಗೆ ದೊರೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆದಿದೆ.

ಟಾಟಾ ಮೋಟಾರ್ಸ್, ಎಲೆಕ್ಟ್ರಿಕ್ ವಾಹನ ಸೇಲ್ಸ್ ನಲ್ಲಿ 1 ಲಕ್ಷ ಮಾರಾಟ ಮೈಲಿಗಲ್ಲನ್ನು ಸಾಧಿಸಲಾಗಿದೆ ಎಂದು ಘೋಷಣೆ ಮಾಡಿದೆ. ಅದಕ್ಕೆ ಕಾರಣ ಕಂಪನಿಯ ಬಲವಾದ ಇವಿ ಲೈನ್-ಅಪ್ ಆಗಿದ್ದು, ಪ್ರಮುಖವಾಗಿ ನೆಕ್ಸಾನ್ ಇವಿ, ಟಿಯಾಗೊ ಇವಿ ಮತ್ತು ಟಿಗೊರ್ ಇವಿಗಳನ್ನು ಮಾರುತ್ತಿದೆ. ಕಳೆದ ಒಂಬತ್ತು ತಿಂಗಳಲ್ಲಿಯೇ 50,000 ಯುನಿಟ್‌ ಸೇಲ್ ಮಾಡಿ, ಈ ಗುರಿ ಮುಟ್ಟಲಾಗಿದೆ ಎಂದು ಟಾಟಾ ಕಂಪನಿಯೇ ಹೇಳಿಕೊಂಡಿದೆ.

Tata: ಟಾಟಾದ ಪರಿಸರ ಪ್ರೇಮ, ದಾಖಲೆಯ 1 ಲಕ್ಷ ಇವಿ ಮಾರಾಟ.. ಗ್ರಾಹಕರಿಗೆ ರೂ.7 ಬಿಲಿಯನ್ ಹಣ ಉಳಿತಾಯ

ಟಾಟಾದ ಎಲೆಕ್ಟ್ರಿಕ್ ಕಾರುಗಳು ಕೊಂಡುಕೊಂಡಿರುವ ಗ್ರಾಹಕರು, ಈವರೆಗೆ ಒಟ್ಟು 1.9 ಶತಕೋಟಿ ಕಿಲೋಮೀಟರ್ ದೂರದವರೆಗೆ ಅವುಗಳನ್ನು ಓಡಿಸಿದ್ದಾರೆ. ನಿಮಗೆ ತಿಳಿದಿರಲಿ.. ಇದು ಲೆಕ್ಕದಲ್ಲಿ ಸೂರ್ಯನಿಗೆ ಮೂರು ಸುತ್ತು ಹಾಕಿದಷ್ಟು. ಕಂಪನಿಯ ಎಲೆಕ್ಟ್ರಿಕ್ ವಾಹನಗಳು ಪರಿಸರ ಮಾಲಿನ್ಯವನ್ನು ಕಡಿಮೆಗೊಳಿಸಲು ಮಹತ್ವದ ಪಾತ್ರ ವಹಿಸಿದ್ದು, 2,19,432 ಟನ್ ಇಂಗಾಲ (CO2) ಪ್ರಮಾಣ ವಾತಾವರಣಕ್ಕೆ ಸೇರಿವುದನ್ನು ತಡೆಗಟ್ಟಿವೆ.

ಟಾಟಾದ ಎಲೆಕ್ಟ್ರಿಕ್ ಕಾರುಗಳ ಬಳಕೆಯಿಂದ ಅದರ ಗ್ರಾಹಕರಿಗೆ ದೊಡ್ಡಮಟ್ಟದಲ್ಲಿ ಅನುಕೂಲವಾಗಿದ್ದು, ಇಂಧನಕ್ಕೆ ಖರ್ಚು ಮಾಡಬೇಕಿದ್ದ ರೂ.7 ಬಿಲಿಯನ್ ಹಣ ಉಳಿತಾಯವಾಗಿದೆ. ಜೊತೆಯಲ್ಲಿ ಟಾಟಾ ಮುಂಬರುವ ವರ್ಷಗಳಲ್ಲಿ ಹಲವು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸುತ್ತಿದ್ದು, ಹ್ಯಾರಿಯರ್ ಇವಿ, ಸಿಯೆರಾ ಇವಿ ಮತ್ತು ಪಂಚ್ ಇವಿ ಮತ್ತು ಆಲ್ಟ್ರೋಜ್‌ ಇವಿಗಳು ಭಾರತದ ಗ್ರಾಹಕರಿಗೆ ಸಿಗಲಿವೆ.

Tata: ಟಾಟಾದ ಪರಿಸರ ಪ್ರೇಮ, ದಾಖಲೆಯ 1 ಲಕ್ಷ ಇವಿ ಮಾರಾಟ.. ಗ್ರಾಹಕರಿಗೆ ರೂ.7 ಬಿಲಿಯನ್ ಹಣ ಉಳಿತಾಯ

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಟಾಟಾ ಮಾರಾಟ ಮಾಡುವ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ತಿಳಿಯೋಣ. ಮೊದಲಿಗೆ ನೆಕ್ಸಾನ್ ಇವಿ ಕುರಿತು ಮಾತನಾಡೋಣ. ಇದು, ಪ್ರೈಮ್ ಹಾಗೂ ಮ್ಯಾಕ್ಸ್ ಎಂಬ ಎರಡು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ನೆಕ್ಸಾನ್ ಇವಿ ಪ್ರೈಮ್ ರೂ.14.49 - 17.19 ಲಕ್ಷ ಎಕ್ಸ್ ಶೋರೂಂ ದರದಲ್ಲಿ ದೊರೆಯುತ್ತದೆ. ಇದು, 30.2 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 312 km ರೇಂಜ್ ನೀಡುತ್ತದೆ.

ನೆಕ್ಸಾನ್ ಇವಿ ಮ್ಯಾಕ್ಸ್ ಕೊಂಚ ಪವರ್ ಫುಲ್ ಆಗಿದ್ದು, ರೂ.16.49 ಲಕ್ಷದಿಂದ ರೂ.19.54 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. ಇದು, 40.5 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಇದರ ಎಲೆಕ್ಟ್ರಿಕ್ ಮೋಟಾರ್ 143 PS ಗರಿಷ್ಠ ಪವರ್ ಹಾಗೂ 250 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಫುಲ್ ಚಾರ್ಜ್ ನಲ್ಲಿ 453 km ರೇಂಜ್ ನೀಡುತ್ತದೆ. 10.25 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಟಾಟಾ ಟಿಯೊಗೊ ಇವಿ ಬಗ್ಗೆ ಹೇಳುವುದಾದರೆ, ಇದು ರೂ.8.69 ಲಕ್ಷದಿಂದ ರೂ.12.04 ಲಕ್ಷ ಎಕ್ಸ್ ಶೋರೂಂ ದರದಲ್ಲಿ ದೊರೆಯುತ್ತದೆ. 19.2 kWh ಹಾಗೂ 24 kWh ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಅದಕ್ಕೆ ಅನುಗುಣವಾಗಿ ಇವುಗಳ ಎಲೆಕ್ಟ್ರಿಕ್ ಮೋಟಾರ್ ಕ್ರಮವಾಗಿ 61 PS ಪವರ್, 110 Nm ಪೀಕ್ ಟಾರ್ಕ್, 75 PS ಗರಿಷ್ಠ ಪವರ್ ಮತ್ತು 114 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ.

ರೇಂಜ್ ವಿಷಯವಾಗಿ ಹೇಳುವುದಾದರೆ, ಬ್ಯಾಟರಿ ಪ್ಯಾಕ್ ಅನ್ವಯ ಸಂಪೂರ್ಣ ಚಾರ್ಜಿನಲ್ಲಿ 250 km ರಿಂದ 315 km ರೇಂಜ್ ನೀಡುತ್ತದೆ. ಡಿಸಿ ಪಾಸ್ಟ್ ಚಾರ್ಜರ್ ಆಯ್ಕೆಯಲ್ಲಿ ಈ ಕಾರಿನ ಬ್ಯಾಟರಿ ಪ್ಯಾಕ್, ಶೇಕಡ 10 - 80% ಚಾರ್ಜ್ ಆಗಲು 57 ನಿಮಿಷಬೇಕು. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಟಾಟಾ ಟಿಗೂರ್ ಇವಿ ವಾಣಿಜ್ಯ ಬಳಕೆಗೆ ಮಾತ್ರ ಖರೀದಿಗೆ ಲಭ್ಯವಿದ್ದು, ರೂ.12.49 ಲಕ್ಷದಿಂದ ರೂ.13.75 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗುತ್ತದೆ. 26 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, ಇದರಲ್ಲಿವ ಎಲೆಕ್ಟ್ರಿಕ್ ಮೋಟಾರ್ 75 PS ಗರಿಷ್ಠ ಪವರ್ ಹಾಗೂ 170 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಫುಲ್ ಚಾರ್ಜಿನಲ್ಲಿ 315 km ರೇಂಜ್ ಕೊಡುತ್ತದೆ.

Article Published On: Saturday, August 12, 2023, 13:39 [IST]
English summary
Tata ev sales cross 1 lakh unit milestone details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+