Tata vs Mahindra: ಎರಡು ದೇಶೀಯ ಬ್ರಾಂಡ್‌ ಕಾರುಗಳ ಭೀಕರ ಅಪಘಾತ... ಯಾವ ಪ್ರಯಾಣಿಕರು ಸೇಫ್?

ದೇಶದ ಎರಡು ಪ್ರಮುಖ ಬ್ರಾಂಡ್‌ಗಳ ಕಾರುಗಳ ನಡುವೆ ಅಪಘಾತವಾಗಿದ್ದು, ಇದೀಗ ಸುರಕ್ಷತೆಯ ಕುರಿತ ಕುತೂಹಲ ಹೆಚ್ಚಾಗಿದೆ. ಮಹೀಂದ್ರಾ XUV500 ಮತ್ತು ಟಾಟಾ ಹ್ಯಾರಿಯರ್ ನಡುವಿನ ಅಪಘಾತದ ಫೋಟೋಗಳು ಈಗ ವೈರಲ್ ಆಗಿವೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ನಮಗಿರುವ ವಿವರಗಳ ಪ್ರಕಾರ, ಮಹಾರಾಷ್ಟ್ರದ ಮೀರಜ್- ಮಹೈಸಲ್ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿರುವುದಾಗಿ ತಿಳಿದುಬಂದಿದೆ. ನಮಗೆ ಸಿಕ್ಕ ಫೋಟೋಗಳ ಆಧಾರದ ಮೇಲೆ ಇದು ಹೆಚ್ಚಿನ ವೇಗದಲ್ಲಿ ಸಂಭವಿಸಿದ ಅಪಘಾತ ಎಂದು ಊಹಿಸಲಾಗಿದೆ. ಯಾವ ಕಾರಣಕ್ಕೆ ಅಪಘಾತ ಸಂಭವಿಸಿದೆ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಆದ್ರೆ ಎರಡೂ ವಾಹನಗಳಲ್ಲಿನ ಪ್ರಯಾಣಿಕರು ಸೇಫ್ ಆಗಿದ್ದಾರೆ.

tata-harrier-mahindra-xuv-500-crash-viral-video

ಮಹೀಂದ್ರಾ XUV500 ಟಾಟಾ ಹ್ಯಾರಿಯರ್ ಬದಿಗೆ ಅಪ್ಪಳಿಸಿದ್ದು, ಅಪಘಾತದ ರಭಸಕ್ಕೆ ಹ್ಯಾರಿಯರ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂಬ ಹಾಗೂ ಅಂಗಡಿಗೆ ಡಿಕ್ಕಿ ಹೊಡೆದಿದೆ. ಎರಡೂ ವಾಹನಗಳು ಕೆಟ್ಟು ನಿಂತಿರುವುದನ್ನು ಫೋಟೋಗಳಲ್ಲಿ ನೊಡಬಹುದು. XUV500 ನ ಮುಂಭಾಗ ಬಹುತೇಕ ಹಾನಿಯಾಗಿದೆ. ಹ್ಯಾರಿಯರ್ ಸಹ ಅಪಘಾತದ ತೀರ್ವತೆಯನ್ನು ಉತ್ತಮವಾಗಿ ತಡೆದುಕೊಂಡಿದೆ.

ಎರಡೂ ಕಾರುಗಳಲ್ಲಿ ಎಷ್ಟು ಮಂದಿ ಪ್ರಯಾಣಿಕರಿದ್ದರು ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದ್ರೆ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ಪ್ರಾಣಹಾನಿಯಾದ ಕುರಿತು ಯಾವುದೇ ವರದಿಯಾಗಿಲ್ಲ. ಇಲ್ಲಿ ಕುತೂಹಲಕಾರಿ ವಿಷಯವೆಂದರೆ ಎರಡೂ ಬ್ರಾಂಡ್‌ಗಳ ವಾಹನಗಳನ್ನು ಗ್ಲೋಬಲ್ ಎನ್‌ಸಿಎಪಿನಲ್ಲಿ ಪರೀಕ್ಷಿಸಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.

tata-harrier-mahindra-xuv-500-crash-viral-video

ಮಹೀಂದ್ರಾ ತಯಾರಕರು A-NCAP ಪರೀಕ್ಷೆಯಲ್ಲಿ XUV500 4-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಆದರೆ ಇದನ್ನು ಗ್ಲೋಬಲ್ NCAP ನಿಂದ ಪರೀಕ್ಷಿಸಿಲ್ಲ. ಇನ್ನು ಟಾಟಾ ಮೋಟಾರ್ಸ್ ವಿಷಯಕ್ಕೆ ಬಂದರೆ ಅನೇಕ ಹೊಸ ಉತ್ಪನ್ನಗಳನ್ನು G-NCAP ಪರೀಕ್ಷೆಗೆ ಒಳಪಡಿಸುತ್ತದೆಯಾದರೂ, ಹ್ಯಾರಿಯರ್ ಸುರಕ್ಷತಾ ರೇಟಿಂಗ್ ಮೌಲ್ಯಮಾಪನಕ್ಕೆ ಇನ್ನೂ ಒಳಗಾಗಿಲ್ಲ.

ಟಾಟಾ ಹ್ಯಾರಿಯರ್ ಸುರಕ್ಷತಾ ಪರಿಕ್ಷೆಗೆ ಒಳಗಾಗದಿರುವ ಬಗ್ಗೆ ಕೆಲ ವದಂತಿಗಳಿವೆ. ಇದರೊಳಗೆ ಮಲ್ಟಿ ಜೆಟ್ ಎಂಜಿನ್ ಬಳಸಿರುವುದರಿಂದ ಅಪಘಾತ ಸಂದರ್ಭಗಳಲ್ಲಿ ಚಾಲಕನಿಗೆ ಹಾನಿಯಾಗುವ ಸಾಧ್ಯತೆಗಳು ಹೆಚ್ಚು ಎಂದು ಹೇಳಲಾಗುತ್ತದೆ. ಆದ್ರೂ ಟಾಟಾ ಹ್ಯಾರಿಯರ್ ಹಿಂದೆ ಹಲವಾರು ಅಪಘಾತಗಳಲ್ಲಿ ಪ್ರಭಾವಶಾಲಿ ನಿರ್ಮಾಣ ಗುಣಮಟ್ಟವನ್ನು ಪ್ರದರ್ಶಿಸಿದೆ.

tata-harrier-mahindra-xuv-500-crash-viral-video

ಅನೇಕ ಅಪಘಾತಗಳಲ್ಲಿ ಟಾಟಾ ಹ್ಯಾರಿಯರ್ ತನ್ನ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಹಾಕಿದೆ. ಸದ್ಯಕ್ಕೆ ಎರಡೂ ಕಾರುಗಳು ಪ್ರಯಾಣಿಕರನ್ನು ಸುರಕ್ಷಿತವಾಗಿರಿಸಿ ಗುಣಮಟ್ಟವನ್ನು ಸಾಭೀತುಪಡಿಸಿಕೊಂಡಿವೆ. ಆದರೆ ಮುಂಬರಲಿರುವ ಭಾರತ್ ಎನ್‌ಸಿಎಪಿ ಕ್ರಾಷ್ ಪರೀಕ್ಷೆಯಲ್ಲಿ ಎಲ್ಲಾ ವಾಹನ ತಯಾರಕರು ಸುರಕ್ಷತಾ ರೇಟಿಂಗ್ ಪಡೆಯಲು ತಮ್ಮ ಹೊಸ ಕಾರುಗಳನ್ನು ಕ್ರ್ಯಾಶ್ ಟೆಸ್ಟ್‌ಗೆ ಒಳಪಡಿಸುವುದು ಕಡ್ಡಾಯವಾಗಿದೆ.

ಕೇಂದ್ರ ಸರ್ಕಾರ, ವಾಹನಗಳ ಸುರಕ್ಷೆತೆಯ ದೃಷ್ಟಿಯಿಂದ ಅಕ್ಟೋಬರ್ 1ರಿಂದ ದೇಶಾದ್ಯಂತ ಜಾರಿಗೊಳಿಸಲು ಹೊರಟಿರುವ ಭಾರತ್ ಎನ್‌ಸಿಎಪಿಗೆ ಪ್ರಮುಖ ಕಾರು ತಯಾರಕ ಕಂಪನಿಗಳಾದ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಟೊಯೊಟಾ, ಸ್ಕೋಡಾ, ಕಿಯಾ ಮತ್ತು ಮಹೀಂದ್ರಾ ಕಂಪನಿಗಳು ಸ್ವಾಗತಿಸಿವೆ. ಸದ್ಯ, ದೇಶದಲ್ಲಿ ಖರೀದಿಗೆ ದೊರೆಯುವ ಕಾರುಗಳು ಗ್ಲೋಬಲ್ ಎನ್‌ಸಿಎಪಿ ಟೆಸ್ಟ್ ಗೆ ಒಳಗಾಗುತ್ತವೆ.

Article Published On: Thursday, July 20, 2023, 13:24 [IST]
English summary
Tata harrier mahindra xuv 500 crash viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+