ಟಾಟಾದಿಂದ ಮಹತ್ವದ ಘೋಷಣೆ: ನಾಳೆಯೇ ಕಾರುಗಳು ಬಿಡುಗಡೆ.. ಹೊಸ ಅಧ್ಯಾಯಕ್ಕೆ ನಾಂದಿ?
ಟಾಟಾ ಮೋಟಾರ್ಸ್ ಭಾರತದ ಮಾರುಕಟ್ಟೆಯಲ್ಲಿ ಬಹುನಿರೀಕ್ಷಿತ ಹ್ಯಾರಿಯರ್, ಸಫಾರಿ ಮತ್ತು ನೆಕ್ಸನ್ ರೆಡ್ ಡಾರ್ಕ್ ಎಡಿಷನ್ ಎಸ್‌ಯುವಿಗಳನ್ನು ನಾಳೆ (ಫೆ.22) ಬಿಡುಗಡೆ ಮಾಡಲಿದೆ. ಈ ಬಗ್ಗೆ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಹತ್ವದ ಮಾಹಿತಿಯನ್ನು ನೀಡಿದೆ. ಹೆಚ್ಚಿನ ವಿವರ ಇಲ್ಲಿದೆ.
ಈ ನೂತನ ಎಸ್‌ಯುವಿಗಳು ಸಾಕಷ್ಟು ನವೀನ ವೈಶಿಷ್ಟ್ಯಗಳೊಂದಿಗೆ ಗ್ರಾಹಕರ ಮುಂದೆ ಬರುತ್ತಿದ್ದು, ಇತ್ತೀಚೆಗೆ ಮುಕ್ತಾಯಗೊಂಡ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಇವುಗಳನ್ನು ಟಾಟಾ ಮೋಟಾರ್ಸ್ ಪ್ರದರ್ಶನ ಮಾಡಿತ್ತು. ಅಂದಹಾಗೆ ಈ ಎಸ್‌ಯುವಿಗಳು ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ತಿಳಿಯುವುದಾದರೆ, ದೊಡ್ಡದಾದ 10.25-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್, ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆ ದೃಷ್ಟಿಯಿಂದ ಹ್ಯಾರಿಯರ್, ಸಫಾರಿ ಟಾಪ್ ಎಂಡ್ ಎಸ್‌ಯುವಿಗಳು ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 6 ಏರ್ ಬಾಗ್ಸ್ ಹೊಂದಿವೆ.

ಟಾಟಾ ಹ್ಯಾರಿಯರ್, ಸಫಾರಿ ಮತ್ತು ನೆಕ್ಸನ್ ರೆಡ್ ಡಾರ್ಕ್ ಎಡಿಷನ್ ಎಸ್‌ಯುವಿಗಳು ಇತರೆ ವೈಶಿಷ್ಟ್ಯಗಳು ಹಾಗೂ ವಿನ್ಯಾಸ ಬಹುತೇಕ ಹಿಂದಿನ ಮಾದರಿಗಳಿಗೆ ಹೋಲಿಕೆಯಾಗುತ್ತವೆ. ಆದರೂ ಈ ಎಸ್‌ಯುವಿ ವಿನ್ಯಾಸದಲ್ಲಿ ಕೆಂಪು ಬಣ್ಣ ಪ್ರಮುಖವಾಗಿ ಕಂಡುಬರುತ್ತದೆ. ಈ ಎಸ್‌ಯುವಿಗಳ ಹೊರಭಾಗವು ಕಪ್ಪು ಬಣ್ಣದಲ್ಲಿರಲಿದ್ದು, ಫ್ರಂಟ್ ಗ್ರೀಲ್ ಕೆಂಪು ಬಣ್ಣವನ್ನು ಹೊಂದಿರಲಿದೆ. ಕ್ಯಾಬಿನ್ ಒಳಭಾಗದಲ್ಲಿ ಸೀಟ್ ಹಾಗೂ ಡೋರ್ ಹ್ಯಾಂಡಲ್ ಗಳು ಕೆಂಪು ಬಣ್ಣದರಲಿವೆ. ಇವು ನೋಡುಗರನ್ನು ಆಕರ್ಷಿಸುತ್ತದೆ.
ಟಾಟಾ ಹ್ಯಾರಿಯರ್, ಸಫಾರಿ ಎಸ್‌ಯುವಿಗಳು 2.0-ಲೀಟರ್ ಡಿಸೇಲ್ ಎಂಜಿನ್ ಹೊಂದಿದ್ದು, 170 bhp ಪವರ್ ಉತ್ಪಾದಿಸುತ್ತದೆ. ಜೊತೆಗೆ 6 ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಟ್ರಾಸ್ಮಿಷನ್ ಆಯ್ಕೆಯನ್ನು ಹೊಂದಿದೆ. ನೆಕ್ಸನ್ ಎಸ್‌ಯುವಿ ಎರಡು ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ. ಅವುಗಳೆಂದರೆ 1.2-ಲೀಟರ್ ಡೀಸೆಲ್ ಎಂಜಿನ್ 108 bhp ಪವರ್ ಉತ್ಪಾದಿಸಲಿದೆ. 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 118 bhp ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಇದು ಕೂಡ 6 ಸ್ವೀಡ್ ಮ್ಯಾನುವಲ್ ಹಾಗೂ ಆಟೋಮೆಟಿಕ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿರಲಿದೆ.
ಟಾಟಾ ಹ್ಯಾರಿಯರ್, ಸಫಾರಿ ಮತ್ತು ನೆಕ್ಸನ್ ರೆಡ್ ಡಾರ್ಕ್ ಎಡಿಷನ್ ಎಸ್‌ಯುವಿಗಳ ಬೆಲೆ ಬಗ್ಗೆ ವಿವರವನ್ನು ಕಂಪನಿಯು ಈವರೆಗೆ ಬಹಿರಂಗ ಪಡಿಸಿಲ್ಲ. ಆದರೆ, ಕೊಂಚ ಹೆಚ್ಚಿನ ಬೆಲೆಯನ್ನು ಹೊಂದಿರಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸನ್ ರೂ.7.80 ಲಕ್ಷದಿಂದ ರೂ.14.30 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ಹ್ಯಾರಿಯರ್ ಎಸ್‌ಯುವಿ ರೂ.14.99 ಲಕ್ಷದಿಂದ ರೂ.22.60 ಲಕ್ಷ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ಸಫಾರಿ ಎಸ್‌ಯುವಿ ಬೆಲೆ ರೂ.15.65 ಲಕ್ಷದಿಂದ ರೂ.24.01 ಇದೆ.
ಟಾಟಾ ಕಂಪನಿ ಈಗಾಗಲೇ ಹ್ಯಾರಿಯರ್, ಸಫಾರಿ ಎಸ್‌ಯುವಿಗಳ ಬುಕಿಂಗ್ ಪ್ರಾರಂಭಿಸಿದೆ. ಹ್ಯಾರಿಯರ್ ಎಸ್‌ಯುವಿ, BSVI ಹಂತ 2 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಿದ 2.0 ಲೀಟರ್ ಫೋರ್-ಸಿಲಿಂಡರ್ ಟರ್ಬೋಚಾರ್ಜ್ಡ್ ಡಿಸೇಲ್ ಎಂಜಿನ್ ಹೊಂದಿದ್ದು, 10.25 ಇಂಚಿನ ಟಚ್ ಸ್ಕ್ರಿನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, USB ಚಾರ್ಜಿಂಗ್ ಪೋರ್ಟ್, ಸ್ಮಾರ್ಟ್‌ಫೋನ್ ಚಾರ್ಜರ್ ಹಾಗೂ ವಾಯ್ಸ್ ಕಮಾಂಡ್ಸ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಮತ್ತೊಂದು ಸಫಾರಿ ಎಸ್‌ಯುವಿ ಬಗ್ಗೆ ಹೇಳುವುದಾದರೆ, ಇದು ಕೂಡ ನವೀಕರಿಸಿದ ಡೀಸೆಲ್ ಎಂಜಿನ್ ಹೊಂದಿದ್ದು, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್) ತಂತ್ರಜ್ಞಾನದೊಂದಿಗೆ ಖರೀದಿಗೆ ದೊರೆಯಲಿದ್ದು, ಒಬೆರಾನ್ ಬ್ಲಾಕ್, ಡೇಟೋನಾ ಗ್ರೇ, ಓರ್ಕಸ್ ವೈಟ್, ಟ್ರಾಪಿಕಲ್ ಮಿಸ್ಟ್, ರಾಯಲ್ ಬ್ಲೂ ಮತ್ತು ಆರ್ಕಸ್ ವೈಟ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಇದು ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮೇಲೆ ಮಹೀಂದ್ರಾದ XUV700ಗೆ ಭಾರೀ ಪೈಪೋಟಿ ನೀಡಲಿದೆ.
ಇನ್ನು, ನಾಳೆ ಬಿಡುಗಡೆಯಾಗುತ್ತಿರುವ ಹ್ಯಾರಿಯರ್, ಸಫಾರಿ ಮತ್ತು ನೆಕ್ಸನ್ ರೆಡ್ ಡಾರ್ಕ್ ಎಡಿಷನ್ ಎಸ್‌ಯುವಿಗಳು ದೇಶೀಯ ಗ್ರಾಹಕರಿಗೆ ಖಂಡಿತ ಇಷ್ಟವಾಗಲಿದ್ದು, ಹೆಚ್ಚುವರಿ ವೈಶಿಷ್ಟ್ಯದಿಂದ ಲಾಂಚ್ ಆಗುತ್ತಿರುವುದರಿಂದ ಬೇರೆ ಕಂಪನಿ ಕಾರುಗಳಿಗೆ ಭಾರೀ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗಿದೆ. ಬೆಲೆ ಬಗ್ಗೆ ಟಾಟಾ ಮೋಟಾರ್ಸ್ ಈವರೆಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಬಹುತೇಕ ಹಿಂದಿನ ಮಾದರಿಗಳ ದರದ ಆಸುಪಾಲಿನಲ್ಲಿರಲಿದ್ದು, ಮಾರುಕಟ್ಟೆಗೆ ಬಂದ ಮೇಲೆ ಅವುಗಳ ಕಾರ್ಯಕ್ಷಮತೆ ಬಗ್ಗೆ ಗೊತ್ತಾಗಲಿದೆ.


Click it and Unblock the Notifications