Tata: ಬಹುನೀರಿಕ್ಷಿತ ಫೇಸ್‌ಲಿಫ್ಟ್ ಟಾಟಾ ಹ್ಯಾರಿಯರ್, ಸಫಾರಿ ಬುಕ್ಕಿಂಗ್ ಆರಂಭ, ಹೊಸ ಅಲೆ ಸೃಷ್ಟಿ!
ಭಾರತದ ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿ ಟಾಟಾ ಮೋಟಾರ್ಸ್ (Tata Motors) ಪ್ರಖ್ಯಾತಿ ಗಳಿಸಿದೆ. ಹೊಸ ತಲೆಮಾರಿನ ಗ್ರಾಹಕರನ್ನು ಆಕರ್ಷಿಸಲು ನವೀನ ವೈಶಿಷ್ಟ್ಯದೊಂದಿಗೆ ಹೊಸ ಹೊಸ ಕಾರುಗಳನ್ನು ಬಿಡುಗಡೆಗೊಳಿಸುತ್ತಿದೆ. ಶುಕ್ರವಾರ ಫೇಸ್‌ಲಿಫ್ಟ್ ಹ್ಯಾರಿಯರ್, ಸಫಾರಿ ಎಸ್‌ಯುವಿ ಬುಕ್ಕಿಂಗ್ ಅನ್ನು ಆರಂಭಿಸಿದೆ.
ಆಸಕ್ತ ಗ್ರಾಹಕರು, ಟಾಟಾದ ಆನ್‌ಲೈನ್ ಪೋರ್ಟಲ್ ಅಥವಾ ಹತ್ತಿರದ ಡೀಲರ್‌ಶಿಪ್ ಗೆ ತೆರಳಿ, ರೂ.25,000 ಮೊತ್ತವನ್ನು ಪಾವತಿಸಿ, ಫೇಸ್‌ಲಿಫ್ಟ್ ಹ್ಯಾರಿಯರ್ (Harrier), ಸಫಾರಿ (Safari) ಎಸ್‌ಯುವಿಗಳನ್ನು ಕಾಯ್ದಿರಿಸಬಹುದು. ಇವೆರೆಡು ಕಾರುಗಳು ಬಹುತೇಕ ಇದೇ ತಿಂಗಳು ( ಅಕ್ಟೋಬರ್) ಬಿಡುಗಡೆಯಾಗಲಿದ್ದು, ಶೀಘ್ರದಲ್ಲೇ ಬೆಲೆಗಳು ಘೋಷಣೆಯಾಗಲಿದೆ. ಆ ಬಳಿಕ, ವಿತರಣೆಗಳು ಶುರುವಾಗಲಿದೆ.

ಟಾಟಾ ಮೋಟಾರ್ಸ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಇತ್ತೀಚೆಗೆ, ಹೊಸ ಫೇಸ್‌ಲಿಫ್ಟ್ ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿಗಳ ಟೀಸರ್ ಬಿಡುಗಡೆ ಮಾಡಿತ್ತು. ಡಿಸೈನ್, ಫೀಚರ್ಸ್ ಹಾಗೂ ಪವರ್‌ಟ್ರೇನ್ ವಿಚಾರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಹೊಂದಿರುವುದು ಗೊತ್ತಾಗುತ್ತಿತ್ತು. ಪ್ರಮುಖವಾಗಿ ರೂಪಾಂತರಗಳಿಗೂ ಹೊಸ ಹೆಸರನ್ನು ನೀಡಲಾಗಿದೆ. ಹ್ಯಾರಿಯರ್ ವೇರಿಯೆಂಟ್ಸ್, ಸ್ಮಾರ್ಟ್, ಪ್ಯೂರ್, ಅಡ್ವೆಂಚರ್ ಮತ್ತು ಫಿಯರ್‌ಲೆಸ್ ಹೆಸರನ್ನು ಒಳಗೊಂಡಿರಲಿದೆ.
ಸಫಾರಿ ಟಾಪ್-ಎಂಡ್ ರೂಪಾಂತರವನ್ನು ಅಕಾಂಪ್ಲಿಶ್ಡ್ ಹೆಸರಿನಿಂದ ಕರೆಯಲಾಗುತ್ತದೆ. ಫೇಸ್‌ಲಿಫ್ಟ್ ಹ್ಯಾರಿಯರ್, ಸಫಾರಿ ಎಸ್‌ಯುವಿಗಳು ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ಹೊಂದಿರಲಿವೆ. ಮುಖ್ಯವಾಗಿ, ಸ್ಪ್ಲಿಟ್ ಹೆಡ್‌ಲೈಟ್ ಸೆಟಪ್, ನವೀಕರಿಸಿದ ಗ್ರಿಲ್, ಬಾನೆಟ್‌ನಾದ್ಯಂತ ವಿಸ್ತರಿಸಿಕೊಂಡಿರುವ ಎಲ್‌ಇಡಿ ಡಿಆರ್‌ಎಲ್ ಪಡೆದಿದೆ. ಜೊತೆಗೆ, ಮರುವಿನ್ಯಾಸಗೊಳಿಸಲಾದ ಅಲಾಯ್ ವೀಲ್ಸ್ ಒಳಗೊಂಡಿದೆ. ಹಿಂಭಾಗ, ಕನೆಕ್ಟ್ದ್ ಲೈಟ್ ಬಾರ್ ಹೊಂದಿದೆ.

ಫೇಸ್‌ಲಿಫ್ಟ್ ಟಾಟಾ ಹ್ಯಾರಿಯರ್, ಸಫಾರಿ ಕಾರಿಗಳು ಬಹುತೇಕ ಒಂದೇ ರೀತಿಯ ಹೋಲಿಕೆಯಾಗುವ ವೈಶಿಷ್ಟ್ಯಗಳನ್ನು ಪಡೆದಿರುವ ನೀರಿಕ್ಷೆಯಿದೆ. ದೊಡ್ಡದಾದ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮರುವಿನ್ಯಾಸಗೊಳಿಸಲಾದ ಸೆಂಟರ್ ಕನ್ಸೋಲ್, ಆಕರ್ಷಕ ಟಾಟಾ ಲೋಗೋ ಒಳಗೊಂಡ 2-ಸ್ಪೋಕ್ ಸ್ಟೀರಿಂಗ್ ವೀಲ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಹೊಂದಿರುವ ಸಾಧ್ಯತೆಯಿದೆ.
ಫೇಸ್‌ಲಿಫ್ಟ್ ಟಾಟಾ ಹ್ಯಾರಿಯರ್, ಸಫಾರಿ ಪವರ್‌ಟ್ರೇನ್ ಬಗ್ಗೆ ಹೇಳುವುದಾದರೆ, ಇವು 2.0 ಲೀಟರ್ ಡೀಸೆಲ್ ಎಂಜಿನ್ ಒಳಗೊಂಡಿರಲಿದ್ದು, 167.6 bhp ಗರಿಷ್ಠ ಪವರ್ ಮತ್ತು 350 Nm ಪೀಕ್ ಟಾರ್ಕ್ ಉತ್ಪಾದಿಸಬಹುದು. ಜೊತೆಗೆ 6-ಸ್ವೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗಬಹುದು. ಇದರೊಟ್ಟಿಗೆ, 1.5 - ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿಯೂ ದೊರೆಯಬಹುದು.
ಟಾಟಾ ಹ್ಯಾರಿಯರ್, ಸಫಾರಿಗಳು ಮೂರು ಡ್ರೈವಿಂಗ್ ಮೋಡ್ ಆಯ್ಕೆಗಳನ್ನು ಹೊಂದಿರಲಿದ್ದು, ಅವುಗಳೆಂದರೆ, ಇಕೋ (Eco), ಸಿಟಿ (City) ಹಾಗೂ ಸ್ಪೋರ್ಟ್ (Sport). ಸುರಕ್ಷತೆಯ ದೃಷ್ಟಿಯಿಂದ ಇವೆರೆಡು ಕಾರುಗಳು, ಆರು ಏರ್ ಬಾಗ್ಸ್, ಲೆವೆಲ್ 2 ADAS (ಸುಧಾರಿತ ಚಾಲಕ ಸಹಾಯಕ ವ್ಯವಸ್ಥೆ) ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿರುವ ನೀರಿಕ್ಷೆಯಿದೆ.
ಫೇಸ್‌ಲಿಫ್ಟ್ ಟಾಟಾ ಹ್ಯಾರಿಯರ್, ಸಫಾರಿ ಕಾರುಗಳಿಗೆ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಹೀಂದ್ರಾ XUV700 ಪ್ರತಿಸ್ಪರ್ಧಿಯಾಗಲಿವೆ. ಫೇಸ್‌ಲಿಫ್ಟ್ ಹ್ಯಾರಿಯರ್ ರೂ.15.00 ಲಕ್ಷದಿಂದ ರೂ.22.00 ಲಕ್ಷ ಹಾಗೂ ಫೇಸ್‌ಲಿಫ್ಟ್ ಸಫಾರಿ ರೂ.16.00 ಲಕ್ಷದಿಂದ ರೂ.25.00 ಲಕ್ಷ ಬೆಲೆಗೆ ಗ್ರಾಹಕರಿಗೆ ಖರೀದಿಗೆ ದೊರೆಯಬಹುದು. ಈ ಕಾರು, ಬಿಡುಗಡೆಯಾದ ಮೇಲೆ ಯಾವೆಲ್ಲ ವೈಶಿಷ್ಟ್ಯ ಹೊಂದಿದೆ ಎಂಬುದು ತಿಳಿಯಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications