ನಾಯಿ ಜೀವ ಉಳಿಸುವ ಪ್ರಯತ್ನದಲ್ಲಿ ಭೀಕರ ಅಪಘಾತ... ಟಾಟಾ ಕಾರಿನಿಂದ ಎಲ್ರೂ ಸೇಫ್
ಟಾಟಾ ಕಾರುಗಳಿಗೆ ಸಾಟಿಯೇ ಇಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಈ ಹಿಂದೆ ಹಲವು ಅಪಘಾತದ ಸುದ್ದಿಗಳನ್ನು ನೋಡಿದ್ದೇವೆ. ಆದ್ರೂ ಇದೀಗ ಮತ್ತೊಂದು ಭೀಕರ ಅಪಘಾತದಲ್ಲಿ ಚಾಲಕ ಬದುಕುಳಿದಿರುವುದು ಬ್ರಾಂಡ್ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಅತಿ ವೇಗದಲ್ಲಿದ್ದ ಟಾಟಾ ಹ್ಯಾರಿಯರ್ ಅಪಘಾತವು ಎಂಥವರನ್ನು ದಂಗಾಗಿಸಬಹುದು.
ಹೌದು. ಈ ಅಪಘಾತದಲ್ಲಿ ಡ್ರೈವರ್ ಸೇಫ್ ಆಗಿ ಹೊರಬಂದಿದ್ದಾರೆ ಎಂಬುದೇ ಇಲ್ಲಿ ಪವಾಡ. ಏಕೆಂದರೆ ಕಾರಿನ ವೇಗಕ್ಕೆ ಹಾಗೂ ಅದು ಹೊಡೆದಿರುವ ಪಲ್ಟಿಗೆ ಎಂಥವರೂ ಬದುಕುಳಿಯುವುದು ಅಸಾಧ್ಯ. ಆದ್ರೆ ಈ ಅಪಘಾತದಲ್ಲಿ ಚಾಲಕ ಆರಾಮವಾಗಿ ಹೊರಬಂದಿದ್ದಾರೆ. ಕಾಲಿಗೆ ಸಣ್ಣ ಗಾಯವಾಗಿರುವುದು ಬಿಟ್ಟರೇ ಎಲ್ಲವೂ ಸರಿಯಾಗಿದೆ ಎಂದು ಚಾಲಕನೇ ಹೇಳಿದ್ದಾನೆ.

ಘಟನೆಯು ಮಹಾರಾಷ್ಟ್ರದ ಗುರ್‌ಗಾಂವ್-ಫರಿದಾಬಾದ್ ರಸ್ತೆಯಲ್ಲಿ ನಡೆದಿದೆ. ಹಗಲು ಹೊತ್ತಿನಲ್ಲಿ ಈ ಘಟನೆ ನಡೆದಿದ್ದು, ನಾಯಿಯನ್ನು ರಕ್ಷಿಸಲು ಮುಂದಾದ ಟಾಟಾ ಹ್ಯಾರಿಯರ್ ಕಾರು ಡಿವೈಡರ್‌ಗೆ ಡಿಕ್ಕಿಯಾಗಿ ರಸ್ತೆಯುದ್ದಕ್ಕೂ ಪಲ್ಟಿಹೊಡೆದಿದೆ. ಈ ವೇಳೆ ಚಾಲಕನೊಂದಿಗೆ ಇತರ ಯಾವುದೇ ಪ್ರಯಾಣಿಕರು ಇರಲಿಲ್ಲ. ಸಮಯಕ್ಕೆ ಸರಿಯಾಗಿ ಏರ್‌ಬ್ಯಾಗ್‌ಗಳು ಕೂಡ ತೆರೆದುಕೊಂಡ ಕಾರಣ ಚಾಲಕ ಸೇಫ್ ಆಗಿದ್ದಾನೆ.
ವಿಡಿಯೋದಲ್ಲಿ ನೊಡುವುದಾದರೆ ಅಪಘಾತವಾದಾಗ ವಾಹನಗಳು ಮತ್ತೊಂದು ರೋಡಿಗೆ ನುಗ್ಗದಂತೆ ಹಾಕಾಲಾಗಿದ್ದ ಸುರಕ್ಷತಾ ಹಳಿಗಳು ಕೂಡ ಧ್ವಂಸಗೊಂಡಿವೆ. ಈ ಮೂಲಕ ಅಪಘಾತವು ಯಾವ ಮಟ್ಟಿಗೆ ಜರುಗಿದೆ ಎಂಬುದನ್ನು ನಾವು ಊಹಿಸಬಹುದು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾರು ಅತಿ ವೇಗದಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು, ಪಲ್ಟಿಯಾಗಿ ಇನ್ನೊಂದು ಬದಿಗೆ ದಾಟಿದೆ ಎಂದು ಹೇಳಲಾಗಿದೆ.
ಅಪಘಾತದ ಬಳಿಕ ಚಾಲಕ ಕುಂಟುತ್ತಾ ಹೊರಬಂದಿರುವುದಾಗಿ ತಿಳಿದುಬಂದಿದೆ, ಆದರೆ ಯಾವುದೇ ಗಾಯಗಳಾಗಿಲ್ಲ. ಇದು ಹೊಸ ಕಾರಿನಂತೆ ಕಾಣುತ್ತಿದ್ದು ಚಾಲಕನ ಪ್ರಕಾರ, ನಾಯಿಯೊಂದು ರಸ್ತೆಗೆ ಓಡಿ ಬಂದಿತು, ಅದನ್ನು ಉಳಿಸಲು ಪ್ರಯತ್ನಿಸಿದ ವೇಳೆ ಸ್ಟೀರಿಂಗ್ ಅನ್ನು ವೆಗವಾಗಿ ತಿರುಗಿಸಿದೆ. ನನ್ನ ಹ್ಯಾರಿಯರ್ ಕೂಡ ಒಂದು ಮಟ್ಟದ ವೇಗದಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎಂದು ತಿಳಿಸಿದ್ದಾರೆ.
ಎಸ್‌ಯುವಿಗಳೊಂದಿಗೆ ಇರಲಿ ಎಚ್ಚರ: ಹೆಚ್ಚಿನ ವೇಗದಲ್ಲಿ ಲೇನ್ ಬದಲಾವಣೆ ಅಥವಾ ತೀಕ್ಷ್ಣವಾದ ತಿರುವುಗಳನ್ನು ತೆಗೆದುಕೊಳ್ಳುವಾಗ SUV ಗಳು ನಿಯಂತ್ರಣ ಕಳೆದುಕೊಳ್ಳುವುದು ಸರ್ವೇ ಸಾಮನ್ಯ. ಏಕೆಂದರೆ ಅದರ ಎತ್ತರದ ನಿರ್ಮಾಣ ಇದಕ್ಕೆ ಪ್ರಮುಖ ಕಾರಣ. ಹೆಚ್ಚಿನ ವೇಗದಲ್ಲಿ ಸಣ್ಣ ತಿರುವುಗಳು ಸಹ SUV ಗಳನ್ನು ರೋಲ್ ಹೊಡೆಸುತ್ತವೆ. ಇದೊಂದನ್ನು ಬಿಟ್ಟರೇ ಎಸ್‌ಯುವಿಗಳು ಎಲ್ಲಾ ವಿಧಗಳಲ್ಲೂ ಉತ್ತಮ ವಾಹನಗಳೆಂದು ಹೇಳಬಹುದು.
ಅದೇನೇ ಇದ್ದರೂ, ಟಾಟಾ ಹ್ಯಾರಿಯರ್ ಅಪಘಾತಗಳು SUV ಯ ಪ್ರಭಾವಶಾಲಿ ನಿರ್ಮಾಣ ಗುಣಮಟ್ಟವನ್ನು ಪ್ರದರ್ಶಿಸಿವೆ. ಏಕೆಂದರೆ ಪ್ರಯಾಣಿಕರು ಆಗಾಗ್ಗೆ ಅಪಘಾತಗಳಿಂದ ದೊಡ್ಡ ಗಾಯಗಳಿಲ್ಲದೆ ಹೊರಬಂದಿರುವುದು ಇದಕ್ಕೆ ಪ್ರಮುಖ ಕಾರಣ. ಒಟ್ಟಾರೆ ಇದರ ನಿರ್ಮಾಣ ಗುಣಮಟ್ಟವು ಅಪಘಾತಗಳಿಂದಲೇ ತಿಳಿದುಬರುತ್ತಿದ್ದು, ಬ್ರಾಂಡ್ ಹೀಗೂ ಫೇಮಸ್ ಆಗುತ್ತಿದೆ ಎಂದು ಹಲವರು ತಮಾಷೆ ಮಾಡುತ್ತಿದ್ದಾರೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications