ಕೇವಲ ಎಲೆಕ್ಟ್ರಿಕ್ ವಾಹನ ಗ್ರಾಹಕರಿಗಾಗಿ ಹೊಸ ಶೋರೂಂಗಳನ್ನು ತೆರೆದ ಟಾಟಾ

ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆಯಾದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ (TPEM), ತನ್ನ ಹೊಸ TATA.ev ಶೋರೂಂಗಳನ್ನು ಕೇವಲ EV ಗ್ರಾಹಕರಿಗಾಗಿ ಹರಿಯಾಣದ ಗುರುಗ್ರಾಮ್‌ನ ಸೆಕ್ಟರ್ 14 ಮತ್ತು ಸೋಹ್ನಾ ರಸ್ತೆಯ ಪ್ರಮುಖ ಆಟೋ ಹಬ್‌ಗಳಲ್ಲಿ ಪ್ರಾರಂಭಿಸಿದೆ. ಈ ಶೋರೂಂಗಳನ್ನು ಜನವರಿ 07, 2024 ರಿಂದ ಸಾರ್ವಜನಿಕರಿಗಾಗಿ ತೆರೆಯಲಿದ್ದಾರೆ.

ಭಾರತೀಯ EV ವಿಭಾಗದಲ್ಲಿ ಶೇ 71 ಕ್ಕಿಂತ ಹೆಚ್ಚಿನ ಮಾರುಕಟ್ಟೆ ಪಾಲನ್ನು ಹೊಂದಿರುವ TPEM ಇತ್ತೀಚೆಗೆ 1 ಲಕ್ಷ ಟಾಟಾ ಇವಿಗಳ ಮಾರಾಟ ಮೈಲಿಗಲ್ಲನ್ನು ದಾಟಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ, EV ಮಾಲೀಕರಿಗೆ ಸೇವೆಗಳು ಸುಲಭವಾಗಿ ಸಿಗಲೆಂದು TPEM ತನ್ನ ಹೊಸ ಮಾರಾಟ ಮತ್ತು ಸೇವಾ ಅನುಭವದ ಶೋರೂಂಗಳನ್ನು ಸ್ಥಾಪಿಸಿದೆ.

tata-has-opened-new-showrooms-exclusively-for-electric-vehicle-customers

ಈ ಬಗ್ಗೆ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿಯ ಎಂಡಿ ಶೈಲೇಶ್ ಚಂದ್ರ ಮಾತನಾಡಿ, "1 ಲಕ್ಷಕ್ಕೂ ಹೆಚ್ಚು ಟಾಟಾ ಇವಿ ಗ್ರಾಹಕರು ವಿಭಿನ್ನತೆಯನ್ನು ಬಯಸುತ್ತಾರೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಗ್ರಾಹಕರು ಚಾಲನೆಯ ವೆಚ್ಚದ ಬಗ್ಗೆ ಬಹಳ ಜಾಗೃತರಾಗಿದ್ದಾರೆ, ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಯಸುತ್ತಾರೆ.

ಹಾಗಾಗಿ ಹೊಸ ಶೋರೂಮ್‌ಗಳು ಅದಕ್ಕೆ ಅನುಗುಣವಾಗಿ ಗ್ರಾಹಕರ ಅನುಭವವನ್ನು ಹೆಚ್ಚಿಸುವಲ್ಲಿ ತೃಪ್ತಿ ನೀಡಲಿವೆ. ನಾವು ನಮ್ಮ ಗ್ರಾಹಕರನ್ನು ಸಶಕ್ತಗೊಳಿಸಲು ಬಯಸುತ್ತಿದ್ದೇವೆ. ಆದ್ದರಿಂದ ಗ್ರಾಹಕರ ಸೇವೆಗಳು, ಸುಸ್ಥಿರತೆ-ಕೇಂದ್ರಿತ ಕಾರ್ಯಾಗಾರಗಳು ಮತ್ತು ಗ್ರಾಹಕರಿಗೆ ಈವೆಂಟ್‌ಗಳಿಗೆ ಅನುಕೂಲವಾಗುವಂತೆ ರಚಿಸುತ್ತಿದ್ದೇವೆ. ಈ ಶೋರೂಮ್‌ಗಳು ಕೇವಲ EV ಮಾರಾಟ ಮಾಡುವುದಲ್ಲ, ಜೊತೆಗೆ ಇವು TATA.ev ಸಮುದಾಯ ಕೇಂದ್ರಗಳಾಗಿವೆ ಎಂದರು.

tata-has-opened-new-showrooms-exclusively-for-electric-vehicle-customers

ಇಂದಿನ ಈ ಎರಡು ಶೋರೂಮ್‌ಗಳಿಂದ ಪ್ರಾರಂಭಿಸಿ ಮುಂದಿನ 12 ರಿಂದ 18 ತಿಂಗಳುಗಳಲ್ಲಿ ನಾವು ಇನ್ನೂ ಹಲವನ್ನು ತೆರೆಯಲು ಯೋಜಿಸಿದ್ದೇವೆ. ಇ-ಮೊಬಿಲಿಟಿಯ ಮೇಲೆ ಕೇಂದ್ರೀಕರಿಸುವ ಮೂಲಕ ವಾಹನ ಉದ್ಯಮದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ನಾವು ಉದ್ದೇಶಿಸಿದ್ದೇವೆ ಎಂದು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿಯ ಎಂಡಿ ಶೈಲೇಶ್ ಚಂದ್ರ ಹೇಳಿದರು.

ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಮಾರಾಟ ಮತ್ತು ಸೇವಾ ಕಾರ್ಯತಂತ್ರದ ಮುಖ್ಯಸ್ಥ ವಿವೇಕ್ ಶ್ರೀವತ್ಸ ಅವರ ಪ್ರಕಾರ, "ಇನ್-ಸ್ಟೋರ್ ಅನುಭವದ ಪ್ರತಿಯೊಂದು ಅಂಶವನ್ನು TATA.ev ಸ್ಟೋರ್‌ಗಳಲ್ಲಿ ಮರುರೂಪಿಸಲಾಗಿದೆ. ಡಿಜಿಟಲ್, ಭೌತಿಕ ಮತ್ತು ಮಾನವ ಅಂಶಗಳು ಸಾಮರಸ್ಯದಿಂದ ಒಂದು ಅನನ್ಯವಾಗಿ ಸ್ಮರಣೀಯ ಕಾರು-ಖರೀದಿಯ ಅನುಭವವನ್ನು ನೀಡುತ್ತವೆ.

tata-has-opened-new-showrooms-exclusively-for-electric-vehicle-customers

EV ಖರೀದಿದಾರರ ವಿಭಿನ್ನ ನಿರೀಕ್ಷೆಗಳನ್ನು ಗುರುತಿಸಿ, ಸ್ನೇಹಿ ವಾತಾವರಣದಲ್ಲಿ ಮಾಹಿತಿ, ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಲು ಅಂಗಡಿಯಲ್ಲಿನ ಅನುಭವವನ್ನು ವಿನ್ಯಾಸಗೊಳಿಸಲಾಗಿದೆ. ಅನುಭವವನ್ನು ಉನ್ನತೀಕರಿಸಲು ನಾವು ತಂತ್ರಜ್ಞಾನದ ಶಕ್ತಿಯನ್ನು ಬಳಸುತ್ತಿದ್ದೇವೆ, ಮಾನವ ನೇರ ನೋಟವು ಯಾವಾಗಲೂ ಪ್ರಮುಖವಾಗಿರುತ್ತದೆ. ನಮ್ಮ ಬ್ರ್ಯಾಂಡ್ ಮೇಲಿನ ನಂಬಿಕೆಯ ಪ್ರತಿ ವ್ಯಕ್ತಿಗೆ ಸ್ವಾಗತಾರ್ಹ, ಸ್ನೇಹಪರ ಮತ್ತು ವಿನೋದಕ್ಕಾಗಿ ಈ ಶೋರೂಂಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದರು.

ಈ ಶೋರೂಮ್‌ನ ಎರಡನೇ ಕೇಂದ್ರಬಿಂದು ಸಮುದಾಯ ವಿಸ್ತರಣೆಯಾಗಿದೆ. ಸಂದರ್ಶಕರನ್ನು ಕೇವಲ ಟಾಟಾ EV ಖರೀದಿಸಲು ಆಹ್ವಾನಿಸುವುದು ಮಾತ್ರವಲ್ಲದೇ, EV ಖರೀದಿಸುವವರೊಂದಿಗೆ ಉತ್ತಮ ಭಾಂದವ್ಯ ಏರ್ಪಿಡಿಸುವುದು, ಖರೀದಿಯನ್ನು ಮೀರಿ ಅರ್ಥಪೂರ್ಣ ಸಂವಹನಕ್ಕಾಗಿ ಅಂಗಡಿಯನ್ನು ಕೇಂದ್ರವಾಗಿ ಪರಿವರ್ತಿಸುವುದು ಮುಖ್ಯ ಗುರಿಯಾಗಿದೆ ಎಂದರು.

tata-has-opened-new-showrooms-exclusively-for-electric-vehicle-customers

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, December 23, 2023, 13:08 [IST]
English summary
Tata has opened new showrooms exclusively for electric vehicle customers
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+