ಟಾಟಾದಿಂದ ವಾಣಿಜ್ಯ ವಾಹನಗಳ ಬೆಲೆ ಏರಿಕೆ: ಎಂದಿನಿಂದ ಜಾರಿ?

ಭಾರತದಾದ್ಯಂತ ಏಪ್ರಿಲ್ 1ರಿಂದ ಕಟ್ಟುನಿಟ್ಟಿನ Bs6 ಹಂತ 2 ಎಮಿಷನ್ ಮಾನದಂಡಗಳು ಅನುಷ್ಠಾನವಾಗಲಿದೆ. ಅದಕ್ಕೂ ಮೊದಲು ವಿವಿಧ ವೆಹಿಕಲ್‌ಗಳ ಎಂಜಿನ್ ನವೀಕರಿಸಬೇಕಾಗಿದ್ದು, ಉತ್ಪಾದನಾ ವೆಚ್ಚ ಸರಿದೂಗಿಸಲು ಹಲವು ಪ್ರಮುಖ ವಾಹನ ತಯಾರಕ ಕಂಪನಿಗಳು ಬೆಲೆ ಏರಿಸುತ್ತಿವೆ. ಆ ಸಾಲಿಗೆ ಟಾಟಾ ಮೋಟಾರ್ಸ್ ಕೂಡ ಸೇರ್ಪಡೆಯಾಗಿದೆ.

ಕಳೆದ ಮಂಗಳವಾರ 'ಟಾಟಾ ಮೋಟಾರ್ಸ್' ವಾಣಿಜ್ಯ ವಾಹನಗಳ ಬೆಲೆಯನ್ನು ಏಪ್ರಿಲ್ 1ರಿಂದ ಶೇಕಡ 5% ಏರಿಕೆ ಮಾಡುವುದಾಗಿ ಘೋಷಣೆ ಮಾಡಿದೆ. ಕೆಲವೇ ದಿನಗಳಲ್ಲಿ ದೇಶಾದ್ಯಂತ ಜಾರಿಯಾಗಲಿರುವ RDE ಎಮಿಷನ್ ಮಾನದಂಡಗಳ ಅನ್ವಯ ತನ್ನೆಲ್ಲ ಮಾದರಿಗಳ ಎಂಜಿನ್ ನವೀಕರಿಸುತ್ತಿದ್ದು, ತಯಾರಿಕ ಖರ್ಚುಗಳನ್ನು ಭರಿಸಲು ದರ ಹೆಚ್ಚಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ. ವಾಣಿಜ್ಯ ವಾಹನಗಳ ಎಲ್ಲ ಮಾದರಿಗೆ ಬೆಲೆ ಏರಿಕೆ ಅನ್ವಯವಾಗಲಿದೆ.

ಟಾಟಾದಿಂದ ಏಪ್ರಿಲ್ 1ರಿಂದ ವಾಣಿಜ್ಯ ವಾಹನಗಳ ಬೆಲೆ ಏರಿಕೆ

ದೇಶೀಯ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್, ಪೀಕ್-ಅಪ್ ಟ್ರಕ್, ಬಸ್ ಸೇರಿದಂತೆ ವಿವಿಧ ವಾಣಿಜ್ಯ ವಾಹನಗಳನ್ನು ಮಾರಾಟ ಮಾಡುತ್ತಿದೆ. ಸದ್ಯ, ಟಾಟಾ ಏಸ್ ಗೋಲ್ಡ್ ರೂ.4.21 ಲಕ್ಷದಿಂದ ರೂ.6.69 ಲಕ್ಷ, ವಿಂಗರ್ ರೂ.12.05 ಲಕ್ಷ, ಯೋಧ ಪೀಕ್-ಅಪ್ ಟ್ರಕ್ ರೂ.6.95 ಲಕ್ಷದಿಂದ ರೂ.7.50 ಲಕ್ಷ, ಟಿ.10 ಅಲ್ಟ್ರಾ ಟ್ರಕ್ ರೂ.10.70 ಲಕ್ಷದಿಂದ ರೂ.12.78 ಲಕ್ಷ ಹಾಗೂ ಸಿಗ್ನಾ 4825.TK ಟಿಪ್ಪರ್ ರೂ.63.72 ಲಕ್ಷದಿಂದ ರೂ.70.72 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಟಾಟಾ, ಈಗಾಗಲೇ ತನ್ನ ಕಾರುಗಳ ಎಂಜಿನ್ ಅನ್ನು ಮುಂಬರಲಿರುವ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ಮೇಲ್ದರ್ಜೆಗೇರಿಸಿದೆ. ಇದರಿಂದ ನೆಕ್ಸಾನ್, ಆಲ್ಟ್ರೊಜ್, ಪಂಚ್, ಟಿಯಾಗೊ ಹಾಗೂ ಟಿಗೊರ್‌ ಮೈಲೇಜ್ ಕೊಂಚ ಮಟ್ಟಿಗೆ ಏರಿಕೆಗೊಂಡಿದೆ. ಅದರಂತೆ ಈ ಕಾರುಗಳ ಪೆಟ್ರೋಲ್ ಹಾಗೂ ಡೀಸೆಲ್ ರೂಪಾಂತರಗಳು 0.60 ಕಿಲೋಮೀಟರ್ ನಿಂದ 2.40 ಕಿಲೋಮೀಟರ್ ಹೆಚ್ಚುವರಿ ಮೈಲೇಜ್ ನೀಡಲಿವೆ.

RDE (ರಿಯಲ್ ಡ್ರೈವಿಂಗ್ ಎಮಿಷನ್) ಅರ್ಥವೇನು?: ಹೊಸ ವಾಹನಗಳು ಹೊರಸೂಸುವಿಕೆಯ ಮಾಲಿನ್ಯ ಅಳೆಯಲು 'ಎಲೆಕ್ಟ್ರಿಫೈಡ್ ಪ್ರೊಪಲ್ಷನ್ ತಂತ್ರಜ್ಞಾನ'ವನ್ನು ಹೊಂದಬೇಕು. ಇದು ವಾಹನವು ಹೆಚ್ಚಿನ ಹೊಗೆ ಬಿಡುಗಡೆ ಮಾಡುತ್ತಿದ್ದರೆ, ಚಾಲಕನಿಗೆ ಎಚ್ಚರಿಸುತ್ತದೆ. ಆ ಬಳಿಕ, ತಕ್ಷಣ ಸರ್ವಿಸ್ ಸೆಂಟರ್ ಗೆ ತೆಗೆದುಕೊಂಡು ಹೋಗಬೇಕು. ಇದರಿಂದ ವಾಯು ಮಾಲಿನ್ಯ ತಡೆಯಲು ಸಾಧ್ಯವಾಗುತ್ತದೆ.

ಎಮಿಷನ್ ಮಾನದಂಡಗಳ ಅನುಷ್ಠಾನದಿಂದ ಡೀಸೆಲ್ ಕಾರುಗಳ ದರ ಭಾರೀ ಏರಿಕೆಯಾಗಬಹುದು. ಸರಿ ಸುಮಾರು ರೂ.65,000 ದಿಂದ ರೂ.70,000 ಹೆಚ್ಚಾಗಬಹುದು. ವಾಣಿಜ್ಯ ವಾಹನಗಳಿಗೆ ಬೆಲೆ ಹೆಚ್ಚಳವು ಅಷ್ಟಾಗಿ ತಟ್ಟುವುದಿಲ್ಲ. ಆದರೂ ಶೇಕಡ 2 ರಿಂದ 4% (ರೂ.10,000 ರಿಂದ 30,000) ಏರಿಕೆಯಾಗಬಹುದು. ದ್ವಿಚಕ್ರ ವಾಹನಗಳ ದರವು ಹೆಚ್ಚಳವಾಗುವ ಸಾಧ್ಯತೆ ಇದ್ದು, ಶೇಕಡ 1 ರಿಂದ 3% (ಎಂಟ್ರಿ ಲೇವಲ್ ಬೈಕ್‌ ಬೆಲೆ ರೂ.2,500) ಆಗಬಹುದು.

ಒಟ್ಟಾರೆ, ಏಪ್ರಿಲ್ 1ರಿಂದ ನೂತನ ಎಮಿಷನ್ ಮಾನದಂಡಗಳು ಜಾರಿಯಾಗಲಿದ್ದು, ಅದರನ್ವಯ ಎಂಜಿನ್ ನವೀಕರಿಸಬೇಕಿರುವುದರಿಂದ ಟಾಟಾ ತನ್ನ ವಾಣಿಜ್ಯ ವಾಹನಗಳ ಬೆಲೆಯನ್ನು ಏರಿಕೆ ಮಾಡಿದ್ದು, ಮುಂಬರುವ ದಿನಗಳಲ್ಲಿ ವಿವಿಧ ಕಂಪನಿಗಳು ದ್ವಿಚಕ್ರ ಹಾಗೂ ಕಾರುಗಳ ಬೆಲೆಯನ್ನು ಹೆಚ್ಚಿಸಬಹುದು. ನೂತನ ನಿಯಮಗಳ ಜಾರಿಯಾಗುವುದ್ರಿಂದ ದೇಶಾದ್ಯಂತ ವಾಯು ಮಾಲಿನ್ಯ ಪ್ರಮಾಣ ಕಡಿಮೆಯಾಗಲಿದೆ ಎಂಬುದು ಕೇಂದ್ರ ಸರ್ಕಾರದ ಲೆಕ್ಕಾಚಾರವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Thursday, March 23, 2023, 10:42 [IST]
English summary
Tata hikes commercial vehicle prices from april 1 details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+