ಟಾಟಾ ನ್ಯಾನೋ ಕಾರಿನಂತೆ ಮಾಡಿಫೈಗೊಂಡ ಟಾಟಾ ಇಂಡಿಕಾ
ಇತರ ದೇಶಗಳಂತೆ ಭಾರತದಲ್ಲೂ ಕಾರು, ಬೈಕ್‌ಗಳನ್ನು ಮಾಡಿಫೈಗೊಳಿಸುವ ಹಾಗೂ ವಿಭಿನ್ನವಾಗಿ ತೋರಿಸುವ ಸೃಜನಶೀಲ ವ್ಯಕ್ತಿಗಳು ಹಲವರಿದ್ದಾರೆ. ಸೋಷಿಯಲ್ ಮೀಡಿಯಾದಿಂದಾಗಿ ಇದೀಗ ಹೆಚ್ಚಾಗಿ ಕಾಣಿಸಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಟಾಟಾ ಇಂಡಿಕಾವನ್ನು ನ್ಯಾನೋ ಕಾರಿನಂತೆ ಆಕರ್ಷಣೀಯವಾಗಿ ಮಾರ್ಪಡಿಸಿದ ವಿಡಿಯೋ ಒಂದು ಯೂಟ್ಯೂಬ್‌ನಲ್ಲಿ ಭಾರೀ ವೈರಲ್ ಆಗಿದೆ.
ಈ ವಿಡಿಯೋದಲ್ಲಿನ ಟಾಟಾ ಇಂಡಿಕಾ V2 ಹ್ಯಾಚ್‌ಬ್ಯಾಕ್ ಭಾರತದಲ್ಲಿ ಅಸ್ತಿತ್ವದಲ್ಲಿರುವ ಅತ್ಯಂತ ಚಿಕ್ಕದಾದ ಕಾರು ಎಂದು ಹೇಳಬಹುದು. ಈ ಕಾರ್ ನಿರ್ಮಾಣದ ವಿಡಿಯೋ ದೇಶದ ಜನರ ಗಮನವನ್ನು ಸೆಳೆದಿದೆ. ಈ ಎರಡು-ಬಾಗಿಲಿನ ಕಸ್ಟಮ್ ಟಾಟಾ ಇಂಡಿಕಾ V2 ನ ವಿಡಿಯೋವನ್ನು ವಾಸೀಮ್ ಕ್ರಿಯೇಷನ್ ಎಂಬುವರು ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ ಮೊದಲು ಮಾರ್ಪಾಡುಗಳನ್ನು ಮಾಡುವ ಮೊದಲು ಹಳೆಯ ಇಂಡಿಕಾ ಹೇಗಿತ್ತು ಎಂಬುದನ್ನು ತೋರಿಸುತ್ತಾರೆ.

ನಂತರ ಮಾಡಿಫೈಗೊಂಡ ಕಾರನ್ನು ತೋರುತ್ತಾರೆ. ಇದಕ್ಕಾಗಿ ಮಧ್ಯಪ್ರದೇಶದ ಇಂದೋರ್‌ನಿಂದ ಹಳೆಯ ಸಿಲ್ವರ್ ಇಂಡಿಕಾ V2 ಅನ್ನು ತಂದಿದ್ದಾರೆ. ಕಾರನ ಮುಂಭಾಗ, ಬದಿಗಳು ಮತ್ತು ಹಿಂಭಾಗ ತೋರಿಸಿ ಕಾರಿನ ಒಳಭಾಗವನ್ನು ಸಹ ತೋರಿಸಿ ಹೇಗೆ ಬದಲಾಗಲಿದೆ ನೋಡಿ ಎಂದು ಕುತೂಹಲ ಹೆಚ್ಚಿಸುತ್ತಾರೆ. ಆದರೆ ಕಾರನ್ನು ಮಾಡಿಫೈಗೊಳಿಸುವ ಪ್ರಕ್ರಿಯೆಯನ್ನು ತೋರಿಸುವುದಿಲ್ಲ. ನಂತರ ವಿಡಿಯೋದಲ್ಲಿ ಕಾಣುವಂತೆ ಹಿಂದಿನ ಬಾಗಿಲನ್ನು ತೆಗೆದುಹಾಕಿ, ಹಿಂಭಾಗದ ಭಾಗವನ್ನು ಕಾರಿನ ಬಿ ಪಿಲ್ಲರ್‌ಗೆ ಜೋಡಿಸಿದ್ದಾರೆ.
ಮಾಡಿಫೈಗೊಂಡ ಕಾರನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರು ಬಂಪರ್‌ಗಳನ್ನು ಬದಲಾಯಿಸಿಲ್ಲ ಬದಲಿಗೆ ಅವುಗಳನ್ನು ದುರಸ್ತಿ ಮಾಡಿ ಮರುಹೊಂದಿಸಿದ್ದಾರೆ. ನಂತರ ಅವರು ಹಿಂಭಾಗದಲ್ಲಿ ಒಂದು ವಿಶಿಷ್ಟವಾದ ಡಿಸೈನ್‌ನೊಂದಿಗೆ ಕಾರನ್ನು ತೋರಿಸಿದ್ದಾರೆ. ಇಲ್ಲಿ ಮೂರು ಬೋಲ್ಟ್‌ಗಳ ಸೇರ್ಪಡೆಯನ್ನು ನೋಡಬಹುದಾಗಿದ್ದು, ಸುತ್ತಲಿನ ವಸ್ತುಗಳನ್ನು ಸಾಗಿಸಲು ಟೋವ್ ಹುಕ್ ಅನ್ನು ಜೋಡಿಸಲಾಗಿದೆ. ಇದನ್ನು ಅನುಸರಿಸಿ ಅವರು ಈ ವಿಶಿಷ್ಟ ಕಾರಿಗೆ ಕಸ್ಟಮ್ ಫ್ಯಾಬ್ರಿಕೇಟೆಡ್ ರಿಯರ್ ಸ್ಪಾಯ್ಲರ್ ಮತ್ತು ರೂಫ್ ರೈಲ್‌ಗಳನ್ನು ಹೊಂದಿಸಿದ್ದಾರೆ.

ಕಾರನ್ನು ಡ್ಯಯಲ್ ಟೋನ್ ಕಲರ್ ಸ್ಕೀಮ್‌ನಲ್ಲಿ ರೆಡಿ ಮಾಡಲಾಗಿದೆ. ಮೇಲಿನ ಅರ್ಧವನ್ನು ಸಿಲ್ವರ್‌ನಲ್ಲಿ ಮುಗಿಸಲಾಗಿದ್ದು, ಕೆಳಗಿನ ಭಾಗವನ್ನು ಮ್ಯಾಟ್ ಬ್ಲಾಕ್ ಬಣ್ಣದಲ್ಲಿ ಮುಗಿಸಲಾಗಿದೆ. ಸೈಡ್ ಫ್ಲೇರ್‌ಗಳು ಮತ್ತು ಮುಂಭಾಗ, ಹಿಂಭಾಗದ ಬಂಪರ್‌ಗಳನ್ನು ಮ್ಯಾಟ್ ಬ್ಲಾಕ್ ಬಣ್ಣದಲ್ಲಿ ಡಿಸೈನ್ ಮಾಡಲಾಗಿದೆ. ಕೊನೆಯದಾಗಿ ಮಾಡಿಫೈಯಗೊಂಡ ಕಾರಿನ ಒಟ್ಟಾರೆ ಉದ್ದವು ಬಹಳ ಕಡಿಮೆಯಾಗಿರುವುದನ್ನು ನೋಬಹುದು, ಸುಮಾರು 8 ಅಡಿಗಳಷ್ಟು ಉದ್ದಕ್ಕೆ ಕಾರನ್ನು ತರಲಾಗಿದೆ. ಅಂದರೆ ಮೂಲ ಕಾರ್‌ಗಿಂತ 3.5 ಅಡಿ ಚಿಕ್ಕದಾಗಿದೆ.
ಮುಂಭಾಗದಲ್ಲಿ ಹೊಚ್ಚಹೊಸ ಎರಡೂ ಹೆಡ್‌ಲೈಟ್‌ಗಳನ್ನು ಹಾಕಿದ್ದಾರೆ. ನಂತರ ಹೊಸ ವೀಲ್ ಕವರ್‌ಗಳನ್ನು ಸೇರಿಸಿರುವ ಕಾರಿನ ಸೈಡ್ ಪ್ರೊಫೈಲ್ ಅನ್ನು ನೋಡಬಹುದು. ಇದನ್ನು ಅನುಸರಿಸಿ ಬಾಗಿಲು ತೆರೆದಾಗ ಸ್ಟಾಕ್ ಕಾರಿನ ಮುಂಭಾಗ ಮತ್ತು ಹಿಂಭಾಗದ ಬಾಗಿಲುಗಳನ್ನು ವಿಲೀನಗೊಳಿಸಿ ಮಾಡಿದ ಕಸ್ಟಮ್ ಬಿಲ್ಟ್ ಡೋರ್ ಅನ್ನು ರೆಡಿ ಮಾಡಿದ್ದಾರೆ. ಕಾರಿನ ಡ್ಯಾಶ್‌ಬೋರ್ಡ್ ಅನ್ನು ಬ್ಲಾಕ್ ಮತ್ತು ಸಿಲ್ವರ್ ಬಣ್ಣದಲ್ಲಿ ಬಾಹ್ಯ ಥೀಮ್‌ಗೆ ಹೊಂದಿಸುವಂತಹ ಡಿಸೈನ್ ನೋಡಬಹುದು. ಜೊತೆಗೆ ಹೊಸದಾಗಿ ಸ್ಥಾಪಿಸಲಾದ ಲೆದರ್ ಸೀಟ್ ಕವರ್‌ಗಳನ್ನು ಸಹ ಅಳವಡಿಸಲಾಗಿದೆ.
ಒಟ್ಟಾರೆ ಕಾರನ್ನು ಮೂಲ ಮಾದರಿಗಿಂತ ಭಿನ್ನವಾಗಿ ಮಾಡಿಫೈಗೊಳಿಸಿ ಅಚ್ಚರಿಗೊಳಿಸಿದ್ದಾರೆ. ಇಂಡಿಕಾವನ್ನು ಸಂಪೂರ್ಣ ಮರೆಸುವಂತೆ ಡಿಸೈನ್ ಮಾಡಿದ್ದು, ನೋಡಲು ವಿಚಿತ್ರವಾಗಿ ಅನ್ನಿಸುತ್ತದೆ. ಇನ್ನು ಕಾರಿನ ಕುರಿತು ಯೂಟ್ಯೂಬ್‌ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇಂತಹ ಕಾರುಗಳು ನೋಡಲು ಹೊಸದಾಗಿ ಕಾಣುವುದರಿಂದ ಜನರು ವಿನ್ಯಾಸ ಕುರಿತ ಪ್ರಕ್ರಿಯೆಯ ಸಂಪೂರ್ಣ ವಿಡಿಯೋ ಕೂಡ ತೋರಿಸುವಂತೆ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ದೇಶದಲ್ಲಿ ಇಂತಹ ಇನ್ನೂ ಹಲವು ಪ್ರತಿಭೆಗಳಿದ್ದು, ಸೋಷಿಯಲ್ ಮೀಡಿಯಾ ಮೂಲಕ ಬೆಳಕಿಗೆ ಬರುತ್ತಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








