Tata: ಭಾರತದಲ್ಲಿ ಶುರುವಾಗಲಿದೆ ಟಾಟಾದ 3 ಎಲೆಕ್ಟ್ರಿಕ್ ಕಾರುಗಳ ಅಬ್ಬರ: ಇವುಗಳ ಪವರ್ ಏಕ್ ನಂಬರ್!
ದೇಶೀಯ ಮಾರುಕಟ್ಟೆಯಲ್ಲಿ ಪ್ರಮುಖ ಕಾರು ತಯಾರಕ ಕಂಪನಿಯಾಗಿರುವ ಟಾಟಾ (Tata) ಮುಂದಿನ ಮೂರು ವರ್ಷದಲ್ಲಿ ಆಕರ್ಷಕ ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಪರಿಚಯಿಸಲಿದ್ದು, ಸಕಲ ಸಿದ್ಧತೆಯನ್ನು ನಡೆಸುತ್ತದೆ. ಅದಕ್ಕಿಂತ ಮೊದಲೇ 18 ತಿಂಗಳೊಳಗೆ ಪಂಚ್, ಹ್ಯಾರಿಯರ್ ಹಾಗೂ Curvv ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುವ ಸಾಧ್ಯತೆಯಿದೆ.
ಮೊದಲಿಗೆ ಟಾಟಾದ ಬಹುನೀರಿಕ್ಷಿತ ಎಲೆಕ್ಟ್ರಿಕ್ Curvv ಕಾರಿನ ಬಗ್ಗೆ ಮಾತನಾಡೋಣ. ಕಂಪನಿಯು ಜನವರಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಮುಂಬರಲಿರುವ ಈ 'Curvv' ಹೇಗಿರಲಿದೆ ಎಂಬುದನ್ನು ತಿಳಿಸಲು ಅದರ ಕಾನ್ಸೆಪ್ಟ್ ಕಾರನ್ನು ಪ್ರದರ್ಶನ ಮಾಡಿತ್ತು. ಇಂದೊಂದು ಮಿಡ್ ಸೈಜ್ ಎಸ್‌ಯುವಿಯಾಗಿದ್ದು, ಬಹುತೇಕ 2024ರಲ್ಲಿ ಭಾರತದಲ್ಲಿ ಬಿಡುಗಡೆಯಾಗಬಹುದು. ಸರಿ ಸಮಾರು ರೂ.20 ಲಕ್ಷ ಆಸುಪಾಸಿನಲ್ಲಿ ಖರೀದಿಗೆ ಸಿಗಬಹುದು.

ಟಾಟಾ Curvv ಎಸ್‌ಯುವಿ ಎಲೆಕ್ಟ್ರಿಕ್ ಹಾಗೂ ಇಂಧನ ಚಾಲಿತ (ICE) ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಅದರಲ್ಲೂ ಎಲೆಕ್ಟ್ರಿಕ್ Curvv ಕಾರು, ಸಂಪೂರ್ಣ ಚಾರ್ಜಿನಲ್ಲಿ 500 km ರೇಂಜ್ ನೀಡಬಹುದು. ಈ ಎಸ್‌ಯುವಿ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಮುಖ್ಯವಾಗಿ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಟೂ ಸ್ಪೋಕ್ ಸ್ಟೇರಿಂಗ್ ವೀಲ್, 360 ಡಿಗ್ರಿ ಕ್ಯಾಮೆರಾ, ಆಟೋ ಪಾರ್ಕ್ ಅಸಿಸ್ಟ್ ಪಂಕ್ಷನ್, ADAS ಫೀಚರ್ಸ್ ಪಡೆದಿರಲಿದೆ.
ಟಾಟಾ, ಬಿಡುಗಡೆ ಮಾಡಲಿರುವ ಎಲೆಕ್ಟ್ರಿಕ್ ಎಸ್‌ಯುವಿಗಳಲ್ಲಿ ಪಂಚ್ ಕೂಡ ಪ್ರಮುಖವಾಗಿದೆ ಎಂದು ಆಗಾಗ ಸುದ್ದಿಯಾಗುತ್ತಿರುತ್ತದೆ. ಈ ಬಗ್ಗೆ ಯಾವುದೇ ಖಚಿತ ಮಾಹಿತಿಯಿಲ್ಲ. ಆದರೂ, ಹಲವು ಮಾರುಕಟ್ಟೆ ತಜ್ಞರು 'ಟಾಟಾ ಕಂಪನಿ ಖಂಡಿತ ಪಂಚ್ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡುತ್ತದೆ' ಎಂದು ಹೇಳುತ್ತಿರುತ್ತಾರೆ. ಇದು, ನೆಕ್ಸಾನ್ ಇವಿ ಹೊಂದಿರುವಂತೆ ಜಿಪ್‌ಟ್ರಾನ್ ತಂತ್ರಜ್ಞಾನವನ್ನು ಆಧರಿಸಿರಲಿದೆ ಎನ್ನಲಾಗಿದೆ.

ರೇಂಜ್ ಹಾಗೂ ಬ್ಯಾಟರಿ ಪ್ಯಾಕ್ ನೆಕ್ಸಾನ್ ಇವಿಯಂತೆ ಪಂಚ್ ಇವಿಯಲ್ಲಿಯು ಇರಲಿದೆ. ಪಂಚ್ ಎಲೆಕ್ಟ್ರಿಕ್ ಎಸ್‌ಯುವಿ 312 km ರಿಂದ 453 km ರೇಂಜ್ ನೀಡಲಿದೆ ಎಂದು ಅಂದಾಜಿಸಲಾಗಿದ್ದು, 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿರಲಿದೆ. ಈ ಪಂಚ್ ಇವಿ ಭಾರತದ ಮಾರುಕಟ್ಟೆಯಲ್ಲಿ ಸರಿ ಸುಮಾರು ರೂ.12 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಬಹುದು.
ದೆಹಲಿಯ ಆಟೋ ಎಕ್ಸ್‌ಪೋದಲ್ಲಿ Curvv ಕಾನ್ಸೆಪ್ಟ್ ಎಸ್‌ಯುವಿ ಜೊತೆ ಹ್ಯಾರಿಯರ್ ಎಲೆಕ್ಟ್ರಿಕ್ ಕಾರನ್ನು ಪ್ರದರ್ಶನ ಮಾಡಲಾಯಿತು. ಆಗಲೇ ಈ ಕಾರು, ಉತ್ಪಾದನೆಗೆ ತಯಾರಾಗಿರುವಂತೆ ಭಾಸವಾಗುತ್ತಿತ್ತು. ಹ್ಯಾರಿಯರ್ ಇವಿ ವಿನ್ಯಾಸ, ICE ಫೇಸ್‌ಲಿಫ್ಟ್ ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿಗಳಿಗೆ ಹೋಲಿಕೆಯಾಗಲಿದ್ದು, ಈ ವರ್ಷದ ಕೊನೆಯಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ರೂ.30 ಲಕ್ಷ ಬೆಲೆಗೆ ಖರೀದಿಗೆ ಸಿಗಬಹುದು.

ಹ್ಯಾರಿಯರ್ ಇವಿ ಸಹ ನೆಕ್ಸಾನ್ ಇವಿಗೆ ಬಹುತೇಕ ಹೋಲಿಕೆಯಾಗಲಿದ್ದು, ಡ್ಯುಯಲ್-ಮೋಟರ್ ಸೆಟಪ್ ಅನ್ನು ಹೊಂದಿರಲಿದೆ. ಫುಲ್ ಚಾರ್ಜಿನಲ್ಲಿ 500 km ರೇಂಜ್ ಕೊಡಬಹುದು. ಈ ಕಾರಿನ ಫ್ರಂಟ್ ಹಾಗೂ ರೇರ್ ಡಿಸೈನ್ ಯುವ ಗ್ರಾಹಕರನ್ನು ತನ್ನತ್ತ ಸೆಳೆಯುವಂತೆ ಇದ್ದು, ದೊಡ್ಡದಾದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ ಮತ್ತು ಕ್ರೂಸ್ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಸ್ ಹೊಂದಿರಲಿದೆ.
ಇನ್ನು, ಟಾಟಾ ಮೋಟಾರ್ಸ್ ಮೇ ತಿಂಗಳಲ್ಲಿ (2023) 5,805 ಯುನಿಟ್ ಎಲೆಕ್ಟ್ರಿಕ್ ಕಾರು ಮಾರಾಟ ಮಾಡಿ, ವರ್ಷದಿಂದ ವರ್ಷಕ್ಕೆ (YoY) 66% ಪ್ರಗತಿ ಸಾಧಿಸಿದೆ. ಅಲ್ಲದೆ, ತನ್ನ ಒಟ್ಟು ಮಾರಾಟದಲ್ಲಿ ಸದ್ಯಕ್ಕಿರುವ 12% ಎಲೆಕ್ಟ್ರಿಕ್ ವಾಹನಗಳ ಸೇಲ್ ಅನ್ನು 2027ಕ್ಕೆ 25% ಮತ್ತು 2030ರ ವೇಳೆಗೆ 50% ಹೆಚ್ಚಿಸಲು ಕಂಪನಿ ನಿರ್ಧರಿಸಿದ್ದು, ಅದಕ್ಕೆ, ಈ ಮೂರು ಎಲೆಕ್ಟ್ರಿಕ್ ಕಾರುಗಳ ಬಿಡುಗಡೆ ಮಹತ್ವದ ಪಾತ್ರ ವಹಿಸಲಿದೆ.


Click it and Unblock the Notifications