ಹಳೆಯ ಕಾರನ್ನು ಮಾರಾಟ ಮಾಡುತ್ತಿದ್ದೀರಾ?: ಟಾಟಾದಿಂದ ದೊಡ್ಡ ಘೋಷಣೆ

ಕೊಂಡವರಿಗೆ ಭಾರತದ ಅತ್ಯಂತ ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಟಾಟಾ ಮೋಟಾರ್ಸ್ ಗುರುತಿಸಿಕೊಂಡಿದೆ. ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡ ನವೀನ ಮಾದರಿ ಕಾರುಗಳನ್ನು ಗ್ರಾಹಕರಿಗೆ ನೀಡುತ್ತಿರುತ್ತದೆ. ಇದೀಗ ಹಳೆಯ ಕಾರುಗಳನ್ನು ಮಾರಾಟ ಮಾಡುವವರೂ ಹಾಗೂ ತಮ್ಮ ಕಾರುಗಳನ್ನು ನವೀಕರಿಸಬೇಕೆಂದು (upgrade) ಕೊಂಡವರಿಗೆ ಸಿಹಿಸುದ್ದಿ ನೀಡಿದೆ.

ಟಾಟಾ ಮೋಟಾರ್ಸ್ ರಾಷ್ಟ್ರೀಯ ವಿನಿಮಯ ಮೇಳವನ್ನು (National Exchange Carnival) ದೇಶಾದ್ಯಂತ ತನ್ನ ಗ್ರಾಹಕರಿಗಾಗಿ ಪ್ರಾರಂಭಿಸುವುದಾಗಿ ಘೋಷಣೆ ಮಾಡಿದೆ. ಈ ಮೆಗಾ ಮೇಳ ನಡೆಯುವ ಸಂದರ್ಭದಲ್ಲಿ ಆಸಕ್ತರು, ಯಾವುದೇ ಟಾಟಾ ಮೋಟಾರ್ಸ್ ಡೀಲರ್‌ಶಿಪ್‌ಗೆ ಭೇಟಿ ನೀಡಿ, ಕಾರುಗಳು ಮತ್ತು ಎಸ್‌ಯುವಿಗಳ ಮೇಲೆ ಆಕರ್ಷಕ ಪ್ರಯೋಜನ ಪಡೆಯಬಹುದು. ಸದ್ಯ ಟಾಟಾ ಟಿಯಾಗೊ, ಟಿಗೂರ್, ಹ್ಯಾರಿಯರ್ ಹಾಗೂ ಪಂಚ್ ಸೇರಿದಂತೆ ಹತ್ತು ಹಲವು ಕಾರುಗಳನ್ನು ಮಾರಾಟ ಮಾಡುತ್ತಿದೆ.

ಹಳೆಯ ಕಾರನ್ನು ಮಾರಾಟ ಮಾಡುತ್ತಿದ್ದೀರಾ?: ಟಾಟಾದಿಂದ ದೊಡ್ಡ ಘೋಷಣೆ

ಟಾಟಾ ಮೋಟಾರ್ಸ್ ಆಯೋಜಿಸಿರುವ ಈ ರಾಷ್ಟ್ರೀಯ ವಿನಿಮಯ ಮೇಳ ನಿನ್ನೆಯಿಂದ (ಫೆಬ್ರವರಿ 4) ಆರಂಭವಾಗಿದ್ದು, ಫೆಬ್ರವರಿ 15 ರವರೆಗೆ ನಡೆಯಲಿದೆ. ದೇಶಾದ್ಯಂತ 250 ನಗರಗಳ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು 12 ದಿನಗಳ ಕಾಲ ಟಾಟಾ ಕಂಪನಿ ಏರ್ಪಡಿಸಿರುವ ಮೇಳಕ್ಕೆ ನೀವು ಕೂಡ ಭೇಟಿ ನೀಡುವ ಮೂಲಕ ಆಯ್ದ ಟಾಟಾ ಕಾರುಗಳು ಮತ್ತು ಎಸ್‌ಯುವಿಗಳ ಮೇಲೆ ರೂ.60,000 ದವರೆಗೆ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಖರೀದಿದಾರರ ದೃಷ್ಟಿಯಿಂದ ನೋಡುವುದಾದರೆ ಇದು ಟಾಟಾದ ಉತ್ತಮ ಕೊಡುಗೆ ಎಂದು ಹೇಳಬಹುದು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್‌ನ ಸೇಲ್ಸ್, ಮಾರ್ಕೆಟಿಂಗ್ ಹಾಗೂ ಕಸ್ಟಮರ್ ಕೇರ್ ವಿಭಾಗದ ಉಪಾಧ್ಯಕ್ಷ ರಾಜನ್ ಅಂಬಾ, 'ಟಾಟಾ ಮೋಟಾರ್ಸ್ ಗ್ರಾಹಕರ ಅಗತ್ಯಗಳನ್ನು ಅರ್ಥ ಮಾಡಿಕೊಂಡು ಅವರಿಗೆ ಅತ್ಯುತ್ತಮ ಅನುಭವ ನೀಡಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ ನಮ್ಮ ಗ್ರಾಹಕರಿಗಾಗಿ 12- ದಿನಗಳ ರಾಷ್ಟ್ರೀಯ ವಿನಿಮಯ ಮೇಳವನ್ನು ಆಯೋಜಿಸುತ್ತಿದ್ದೇವೆ'. ಆಸಕ್ತ ಗ್ರಾಹಕರು, ಈ ಮೇಳದಲ್ಲಿ ಭಾಗವಹಿಸಬಹುದು ಎಂದು ಹೇಳಿದ್ದಾರೆ.

ಟಾಟಾ ಮೋಟಾರ್ಸ್ ಬಹುನಿರೀಕ್ಷಿತ ಟಿಯಾಗೊ ಇವಿಯ ವಿತರಣೆಯನ್ನು ಈಗಾಗಲೇ ಆರಂಭಿಸಿದ್ದು, ಮೊದಲ ಬ್ಯಾಚ್ ನ 2,000 ಯುನಿಟ್ ಕಾರುಗಳನ್ನು ಭಾರತದ 133 ನಗರಗಳ ಗ್ರಾಹಕರಿಗೆ ನೀಡುವುದನ್ನು ಶುರು ಮಾಡಿದೆ. ಟಾಟಾ ಟಿಯಾಗೊ ಎಲೆಕ್ಟ್ರಿಕ್ ಕಾರಿಗಾಗಿ ಬರೋಬ್ಬರಿ 20,000 ಗ್ರಾಹಕರು ಬುಕಿಂಗ್ ಮಾಡಿದ್ದರು. ಅದರಲ್ಲಿ ಬುಕಿಂಗ್ ಆರಂಭವಾದ ಮೊದಲ ದಿನವೇ 10,000 ಮಂದಿ ನೋಂದಣಿ ಮಾಡಿದ್ದರು. ಆಟೋಮೊಬೈಲ್ ಇತಿಹಾಸದಲ್ಲಿ ದೊಡ್ಡ ಮಟ್ಟದ ದಾಖಲೆಯಾಗಿದೆ ಎಂದು ಹೇಳಬಹುದು.

ಭಾರತದ ಮಾರುಕಟ್ಟೆಯಲ್ಲಿ ಟಿಯಾಗೊ ಇವಿ ಅತ್ಯಂತ ಕೈಗೆಟುಕುವ ಬೆಲೆಯ ಕಾರಾಗಿದೆ ಎಂದು ಹೇಳಬಹುದು. ಇದು ರೂ.8.49 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದ್ದು, ಟಾಪ್ ಎಂಡ್ ಮಾದರಿ ಬೆಲೆ ರೂ.11.79 ಲಕ್ಷ ಇದೆ. ಟಿಯಾಗೊ ಇವಿ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಗ್ರಾಹಕರಿಗೆ ಖರೀದಿಗೆ ಸಿಗಲಿದೆ. ಅವುಗಳೆಂದರೆ, 19.2kWh 24kWh ಬ್ಯಾಟರಿ ಪ್ಯಾಕ್. ಕ್ರಮವಾಗಿ 250 km, 315 km ರೇಂಜ್ ನೀಡುವ ಸಾಮರ್ಥ್ಯವನ್ನು ಪಡೆದಿವೆ.

ರಾಷ್ಟ್ರೀಯ ವಿನಿಮಯ ಮೇಳದೊಂದಿಗೆ ಟಾಟಾ ಮೋಟಾರ್ಸ್ ತನ್ನ ಆಯ್ದ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ನೀಡುತ್ತಿದೆ. ಇದು ಈ ಫೆಬ್ರವರಿ ತಿಂಗಳಿಗೆ ಅನ್ವಯವಾಗಲಿದ್ದು, 35,000 ರೂಪಾಯಿಗಳವರೆಗೆ ಡಿಸ್ಕೌಂಟ್ ದೊರೆಯುತ್ತಿದೆ. ಟಿಯಾಗೊ, ಟಿಗೂರ್, ಆಲ್ಟ್ರೋಜ್, ಹ್ಯಾರಿಯರ್ ಹಾಗೂ ಸಫಾರಿ ಕಾರುಗಳಿಗೆ ಈ ಆಫರ್ ಒಳಗೊಂಡಿರುತ್ತದೆ. ಇಷ್ಟೇಅಲ್ಲದೆ, ಟಾಟಾ ಆಲ್ಟ್ರೋಜ್ ಮತ್ತು ಪಂಚ್ ಸಿಎನ್‌ಜಿ ಆವೃತ್ತಿಯನ್ನು ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದ್ದು, ಹೆಚ್ಚಿನ ಇಂಧನ ದಕ್ಷತೆಯನ್ನು ಒಳಗೊಂಡಿರುವುದರಿಂದ ಬೆಲೆ ಕೊಂಚ ಹೆಚ್ಚಿರಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
Tata motors announces national exchange carnival details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X