ಅರ್ಧಕ್ಕರ್ಧ ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗುತ್ತಿರುವುದು ಹಳ್ಳಿಗಳಲ್ಲಿ: ಕಾರಣ ತಿಳಿಸಿದ ಟಾಟಾ
ಇತ್ತೀಚೆಗಷ್ಟೇ ನಡೆದ ಕಾರ್ಯಕ್ರಮವೊಂದರಲ್ಲಿ ಭಾರತದ ಹೆಮ್ಮೆಯ ಕಾರು ಉತ್ಪಾದನಾ ಕಂಪನಿ ಟಾಟಾ ಮೋಟಾರ್ಸ್ ಒಂದು ಕುತೂಹಲಕಾರಿಯಾದ ಮಾಹಿತಿಯೊಂದನ್ನು ಮಾಧ್ಯಮಗಳ ಮುಂದೆ ಇಟ್ಟಿತ್ತು. ಈಗಾಗಲೇ ಸುಮಾರು ಒಂದು ಲಕ್ಷಕ್ಕೂ ಅಧಿಕ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದ ಟಾಟಾ ಭಾರತದಲ್ಲಿ ಎಲೆಕ್ಟ್ರಿಕ್ ವಾಹನದ ಬಗ್ಗೆ ಜನರು ತೋರುತ್ತಿರುವ ಒಲವನ್ನು ಎತ್ತಿ ತೋರಿಸಿದೆ.
ಇನ್ನು ಟಾಟಾ ಹೊರ ಬಿಟ್ಟ ಆ ಇಂಟರೆಸ್ಟಿಂಗ್ ಮಾಹಿತಿ ಏನೆಂದರೆ ಟಾಟಾ ಮೋಟಾರ್ಸ್ ಇಲ್ಲಿಯವರೆಗೆ ಮಾರಾಟ ಮಾಡಿರುವ ಎಲೆಕ್ಟ್ರಿಕ್ ಕಾರುಗಳ ಸರಿ ಸುಮಾರು ಅರ್ಧದಷ್ಟು ಕಾರುಗಳು ಮಾರಾಟವಾಗಿರುವುದು ಗ್ರಾಮೀಣ ಭಾಗಗಳಲ್ಲಿ ಮತ್ತು ಸಣ್ಣ ಪಟ್ಟಣಗಳಲ್ಲಿ ಎಂಬುದು. ಇದರಲ್ಲಿಯೇ ತಿಳಿಯುತ್ತದೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಜನರಿಗೆ ಎಷ್ಟರ ಮಟ್ಟಿಗೆ ಹತ್ತಿರವಾಗುತ್ತದೆ ಎಂದು.

ಟಾಟಾ ಹೊರಹಾಕಿದ ಮಾಹಿತಿಗಳ ಪ್ರಕಾರ ಭಾರತದಲ್ಲಿ ಸದ್ಯಕ್ಕೆ ಮೊದಲ ಬಾರಿ ಕಾರು ಕೊಳ್ಳುವವರು ಎಲೆಕ್ಟ್ರಿಕ್ ಕಾರನ್ನು ತಮ್ಮ ಮೊದಲ ಕಾರಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದು, ಇದು ಭಾರತದಲ್ಲಿ ಎಲೆಕ್ಟ್ರಿಕ್ ಮಾರುಕಟ್ಟೆ ಬೂಸ್ಟ್ ಆಗಲು ಪ್ರಮುಖ ಕಾರಣ. ಮಾಹಿತಿ ಹೊಸದಾಗಿದ್ದರೂ ನೋಡುವಾಗ ಅಚ್ಚರಿ ಮೂಡುವುದಂತೂ ಖಂಡಿತ. ಇದಕ್ಕೆ ಪ್ರಮುಖ ಕಾರಣವೇನೆಂದರೆ ಎಲ್ಲರೂ ನಗರ ಪ್ರದೇಶಕ್ಕೆ ಎಲೆಕ್ಟ್ರಿಕ್ ಕಾರುಗಳು ಹೇಳಿ ಮಾಡಿಸಿದ್ದು ಎನ್ನುತ್ತಾರೆ.
ಆದರೆ ಇದೀಗ ಎಲೆಕ್ಟ್ರಿಕ್ ಬೈಕ್‌ಗಳು ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರದೆ, ಅವು ದೇಶದ ಮೂಲೆಗಳಿಗೂ ತಲುಪುತ್ತಿವೆ ಎಂಬುದು ಸಂತಸದ ವಿಚಾರ. ದೇಶದ ಸುಮಾರು 50% ಎಲೆಕ್ಟ್ರಿಕ್ ಕಾರುಗಳು ಸಹ ಸಣ್ಣ ನ ಗರ ಮತ್ತು ಹಳ್ಳಿ ಪ್ರದೇಶಗಳಲ್ಲಿ ಮಾರಾಟವಾಗಿರುವುದರ ಬಗ್ಗೆ ಮಾತನಾಡಿದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಮುಖ್ಯಸ್ಥ ಶೈಲೈಶ್ ಚಂದ್ರ ತಮ್ಮ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ.

ಅವರ ಪ್ರಕಾರ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಜನರಿಗೆ ಇದ್ದ ಸಂಶಯಗಳು ಮತ್ತು ಆತಂಕಗಳು ದೂರವಾಗುತ್ತಿವೆ. ಇದರ ನಿದರ್ಶನವೇ ಮಾರಾಟದಲ್ಲಿ ಆಗಿರುವ ಈ ದೊಡ್ಡ ಬದಲಾವಣೆ ಎಂದು ಹೇಳಿದ್ದಾರೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ನೆಟ್‌ವರ್ಕ್‌ಗಳು ಇಲ್ಲದೇ ಇದ್ದರು ತಮ್ಮ ತಮ್ಮ ಮನೆಗಳಲ್ಲಿಯೇ ಚಾರ್ಜಿಂಗ್ ಮಾಡಿಕೊಳ್ಳುವ ವ್ಯವಸ್ಥೆಯನ್ನು ಸಿದ್ದಗೊಳಿಸುತ್ತಿದ್ದಾರೆ.
ಇನ್ನು ಇಲ್ಲಿಯವರೆಗೆ ಮಾರಾಟವಾಗಿರುವ ಎಲೆಕ್ಟ್ರಿಕ್ ವಾಹನಗಳ ಶೇ 25 ರಷ್ಟು ಖರೀದಿಸಿರುವುದು ಮಹಿಳೆಯರು. ಹೌದು, ನಾಲ್ಕನೇ ಒಂದರಷ್ಟು ಪಾಲು ಮಹಿಳೆಯರದ್ದು ಎಂಬುದು ನಿಜಕ್ಕೂ ಮೆಚ್ಚುವಂತಹ ವಿಚಾರ. ಇದರಿಂದ ಮಹಿಳೆಯರು ಸಹ ಎಲೆಕ್ಟ್ರಿಕ್ ವಾಹನಗಳನ್ನು ಕೊಳ್ಳುವಲ್ಲಿ ತಮ್ಮ ಒಲವನ್ನು ತೋರುತ್ತಿದ್ದಾರೆ ಎಂಬುದು ಇದರಿಂದ ತಿಳಿದು ಬರುತ್ತದೆ.

ಮಾಹಿತಿಗಳಲ್ಲಿ ತಿಂಗಳಿಗೆ ಸುಮಾರು 26 ದಿನಗಳು ಎಲೆಕ್ಟ್ರಿಕ್ ವಾಹನಗಳನ್ನು ಚಲಾಯಿಸುತ್ತಿದ್ದು, ಇತರ ಐಸಿಇ ಎಂಜಿನ್‌ಗಳಿಗಿಂತ 23 ಪಟ್ಟು ಹೆಚ್ಚು ಈ ವಾಹನಗಳನ್ನು ಬಳಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ತಿಂಗಳಿಗೆ ಸುಮಾರು 1400 ಕಿಲೋ ಮೀಟರ್‌ಗಳಷ್ಟು ದೂರ ಈ ವಾಹನಗಳನ್ನು ಓಡಿಸುತ್ತಿದ್ದು, ಎಲೆಕ್ಟ್ರಿಕ್ ವಾಹನದ ಸಂಪೂರ್ಣ ಪ್ರಯೋಜನವನ್ನು ಮಾಲೀಕರು ಪಡೆಯುತ್ತಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications