ಪ್ರಮುಖ ಮಾದರಿಗಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ರಿಯಾಯಿತಿ ಘೋಷಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ತನ್ನ ಮಾರಾಟವನ್ನು ಹೆಚ್ಚಿಸುವ ಸಲುವಾಗಿ ಫೆಬ್ರವರಿ 2023 ರಲ್ಲಿ ತನ್ನ ಪ್ರಯಾಣಿಕ ಕಾರುಗಳಿಗೆ ಹೊಸ ಕೊಡುಗೆಗಳನ್ನು ಘೋಷಿಸಿದೆ. ಮಾರಾಟದಲ್ಲಿ ಎರಡನೇ ಸ್ಥಾನಕ್ಕಾಗಿ ಪ್ರತಿ ತಿಂಗಳು ಹ್ಯುಂಡೈನೊಂದಿಗೆ ಸೆಣಸಾಡುತ್ತಿರುವ ಟಾಟಾ ಮೋಟಾರ್ಸ್, ಈ ಬಾರಿ ಅದ್ಬುತ ಆಫರ್‌ಗಳನ್ನು ಗ್ರಾಹಕರಿಗಾಗಿ ತಂದಿದೆ. ಆದರೆ ಈ ಕೊಡುಗೆಗಳು ಎಲ್ಲಾ ಮಾದರಿಗಳಿಗೆ ಅನ್ವಯಿಸುವುದಿಲ್ಲ.

ಟಾಟಾ ಮೋಟಾರ್ಸ್‌ನ ಕೆಲವಷ್ಟು ಮಾದರಿಗಳಿಗೆ ಮಾತ್ರ ಈ ಕೊಡುಗೆಗಳು ಅನ್ವಯಿಸಲಿವೆ. ಈ ಕೆಲವು ಮಾದರಿಗಳಿಗೆ ಅನ್ವಯವಾಗುವಂತೆ ಫೆಬ್ರವರಿಯಲ್ಲಿ 35,000 ರೂಪಾಯಿಗಳವರೆಗೆ ರಿಯಾಯಿತಿಗಳನ್ನು ನೀಡುತ್ತಿದೆ. ನವೀಕರಿಸಿದ ಕೊಡುಗೆಗಳು Tiago, Tigor, Altroz, Harrier ಮತ್ತು Safari ನಂತಹ ಮಾದರಿಗಳಿಗೆ ಅನ್ವಯಿಸುತ್ತವೆ. ಈ ಮಾದರಿಗಳು ಈಗಾಗಲೇ ಪ್ರಯಾಣಿಕ ವಿಭಾಗದಲ್ಲಿ ಜನಪ್ರಿಯತೆ ಹೊಂದಿರುವ ಕಾರುಗಳಾಗಿದ್ದು, ಪ್ರತಿ ಮಾದರಿ ಮೇಲೆ ಎಷ್ಟು ರಿಯಾಯಿತಿ ಸಿಗಲಿದೆ ಎಂಬುದನ್ನು ಇಲ್ಲಿ ನೋಡೋಣ.

ಪ್ರಮುಖ ಮಾದರಿಗಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ರಿಯಾಯಿತಿ ಘೋಷಿಸಿದ ಟಾಟಾ ಮೋಟಾರ್ಸ್

ಟಾಟಾ ಟಿಯಾಗೋ
ಟಾಟಾ ಟಿಯಾಗೊ ಟಾಟಾ ಮೋಟಾರ್ಸ್‌ನ ಪ್ರವೇಶ ಮಟ್ಟದ ಮಾದರಿಯಾಗಿದೆ. ಈ ಹ್ಯಾಚ್‌ಬ್ಯಾಕ್ ತನ್ನ ಮಾರಾಟದ ಪ್ರಮಾಣವನ್ನು ಸ್ಥಿರವಾಗಿ ಸುಧಾರಿಸಿದೆ. ಹಾಗಾಗಿಯೇ ಟಾಟಾ, ಟಿಯಾಗೊ ಹ್ಯಾಚ್‌ಬ್ಯಾಕ್‌ನ ಸಿಎನ್‌ಜಿ ರೂಪಾಂತರವನ್ನು ಸಹ ನೀಡುತ್ತಿದೆ. ಹೇಳುವುದಾದರೆ, ಟಾಟಾ ಮೋಟಾರ್ಸ್ ಟಿಯಾಗೊ ಹ್ಯಾಚ್‌ಬ್ಯಾಕ್‌ನ ಸಿಎನ್‌ಜಿ ಮತ್ತು ಪೆಟ್ರೋಲ್ ಎರಡೂ ರೂಪಾಂತರಗಳಲ್ಲಿ ರೂ. 20,000 ವರೆಗೆ ರಿಯಾಯಿತಿಗಳನ್ನು ನೀಡುತ್ತಿದೆ. ಇದು ರೂ. 10,000 ಎಕ್ಸ್‌ಚೇಂಜ್ ರಿಯಾಯಿತಿಯನ್ನು ಸಹ ಒಳಗೊಂಡಿದೆ.

ಟಾಟಾ ಟಿಗೋರ್
ಟಾಟಾ ಟಿಗೊರ್ ಟಿಯಾಗೊ ಹ್ಯಾಚ್‌ಬ್ಯಾಕ್‌ನ ಸೆಡಾನ್ ಆವೃತ್ತಿಯಾಗಿದೆ. ಟಾಟಾ ಟಿಯಾಗೊದಂತೆ, ಟಾಟಾ ಮೋಟಾರ್ಸ್ ಭಾರತದಲ್ಲಿ ಟಿಗೊರ್ ಸಬ್ -4 ಎಂ ಸೆಡಾನ್‌ನ ಸಿಎನ್‌ಜಿ ರೂಪಾಂತರಗಳನ್ನು ಸಹ ನೀಡುತ್ತಿದೆ. ಟಾಟಾ ಟಿಯಾಗೊಗೆ ಹೋಲಿಸಿದರೆ ಟಾಟಾ ಮೋಟಾರ್ಸ್ ಹೆಚ್ಚುವರಿ 5,000 ರೂ.ಗಳ ರಿಯಾಯಿತಿಯನ್ನು ನೀಡುತ್ತಿದೆ ಎಂದು ಹೇಳಬಹುದು. ಇದು ರೂ. 15,000 ಗ್ರಾಹಕ ಯೋಜನೆ ಮತ್ತು ರೂ. 10,000 ಮೌಲ್ಯದ ವಿನಿಮಯ ರಿಯಾಯಿತಿಯನ್ನು ಒಳಗೊಂಡಿದೆ.

ಟಾಟಾ ಆಲ್ಟ್ರೋಜ್
ಟಾಟಾ ಆಲ್ಟ್ರೋಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದ್ದು, ಇದು ಭಾರತದಲ್ಲಿ ಹ್ಯುಂಡೈ i20 ವಿರುದ್ಧ ಸ್ಪರ್ಧಿಸುತ್ತದೆ. ತನ್ನ ಮಾರಾಟವನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ಭಾರತೀಯ ವಾಹನ ತಯಾರಕರು ಡೀಸೆಲ್ ರೂಪಾಂತರಗಳ ಮೇಲೆ ರೂ. 25,000 ವರೆಗೆ ರಿಯಾಯಿತಿಗಳನ್ನು ನೀಡುತ್ತಿದ್ದಾರೆ. ಆದರೆ ಆಲ್ಟ್ರೊಜ್ ಹ್ಯಾಚ್‌ಬ್ಯಾಕ್‌ನ ಪೆಟ್ರೋಲ್- ಚಾಲಿತ ರೂಪಾಂತರಗಳು ಒಟ್ಟು ರೂ. 20,000 ರಿಯಾಯಿತಿಯೊಂದಿಗೆ ಬರುತ್ತವೆ. ಈ ಎರಡೂ ಕೂಡ ಕಳೆದು ತಿಂಗಳು ಉತ್ತಮ ಮಾರಾಟ ಸಾಧಿಸಿವೆ.

ಟಾಟಾ ಹ್ಯಾರಿಯರ್
ಟಾಟಾ ಹ್ಯಾರಿಯರ್ ಟಾಟಾ ಮೋಟಾರ್ಸ್‌ಗೆ ಹಲವು ವಿಧಗಳಲ್ಲಿ ಗೇಮ್ ಚೇಂಜರ್ ಆಗಿದೆ. ಈಗ, ವಾಹನ ತಯಾರಕರು ಟಾಟಾ ಹ್ಯಾರಿಯರ್ SUV ಮೇಲೆ 35,000 ರೂ.ವರೆಗೆ ರಿಯಾಯಿತಿಗಳನ್ನು ನೀಡುತ್ತಿದ್ದಾರೆ. ಅಲ್ಲದೆ, ಈ ನವೀಕರಿಸಿದ ರಿಯಾಯಿತಿ ಕೊಡುಗೆಯು ರೂ. 25,000 ವಿನಿಮಯ ರಿಯಾಯಿತಿ ಮತ್ತು ರೂ. 10,000 ಗ್ರಾಹಕ ಯೋಜನೆಯನ್ನು ಒಳಗೊಂಡಿದೆ. ಟಾಟಾ ಹ್ಯಾರಿಯರ್ ಇವಿ ಮಾದರಿಯನ್ನು ಇತ್ತೀಚಗೆ ನಡೆದ ಆಟೋ ಎಕ್ಸ್‌ಪೋ 2023 ರಲ್ಲಿ ಟಾಟಾ ಪ್ರದರ್ಶಿಸಿತ್ತು.

ಟಾಟಾ ಸಫಾರಿ
ಟಾಟಾ ಸಫಾರಿಯು ಟಾಟಾ ಹ್ಯಾರಿಯರ್ ಎಸ್‌ಯುವಿ ಆಧಾರಿತ 7-ಆಸನಗಳ ಎಸ್‌ಯುವಿಯಾಗಿದೆ. ಇದು ಪ್ರಸ್ತುತ ಭಾರತದಲ್ಲಿ ಟಾಟಾ ಮೋಟಾರ್ಸ್‌ಗೆ ಪ್ರಮುಖ ಮಾದರಿಯಾಗಿದೆ. ಇನ್ನು ವಿಷಯಕ್ಕೆ ಬಂದರೆ ಟಾಟಾ ಮೋಟಾರ್ಸ್ ಸಫಾರಿ SUV ಮೇಲೆ 35,000 ರೂ.ವರೆಗೆ ರಿಯಾಯಿತಿಗಳನ್ನು ನೀಡುತ್ತಿದೆ. ಇತ್ತೀಚಿನ ರಿಯಾಯಿತಿಯು ರೂ. 25,000 ವಿನಿಮಯ ರಿಯಾಯಿತಿ ಮತ್ತು ರೂ. 10,000 ಗ್ರಾಹಕ ಯೋಜನೆಯನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
Tata motors has announced discounts on month of february
Story first published: Sunday, February 5, 2023, 12:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X