ಎರಡು ತಿಂಗಳು ಮೊದಲೇ ಟಾಟಾದಿಂದ ಮಹತ್ವದ ಘೋಷಣೆ

ಭಾರತದ ಪ್ರಮುಖ ವಾಹನ ತಯಾರಕ ಕಂಪನಿ ಟಾಟಾ ಮೋಟಾರ್ಸ್ ಮಹತ್ವದ ಘೋಷಣೆ ಮಾಡಿದೆ. ಏಪ್ರಿಲ್ 1, 2023ರಿಂದ ದೇಶಾದ್ಯಂತ ಭಾರತ್ ಸ್ಟೇಜ್ 6 (BS6) ಹಂತ-II ಕಟ್ಟುನಿಟ್ಟಿನ ನಿಯಮ ಜಾರಿಯಾಗಲಿದೆ. ಅದರನ್ವಯ ತನ್ನೆಲ್ಲ ಎಂಜಿನ್ ಲೈನ್-ಅಪ್ ಅನ್ನು RDE (ರಿಯಲ್ ಡ್ರೈವಿಂಗ್ ಎಮಿಷನ್ಸ್) ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಿದೆ.

ಇದರೊಟ್ಟಿಗೆ ತನ್ನ ಪೆಟ್ರೋಲ್ ಎಂಜಿನ್ ಅನ್ನು E20 (20% ಎಥೆನಾಲ್ ಮತ್ತು 80% ಪೆಟ್ರೋಲ್ ಮಿಶ್ರಣ) ಇಂಧನ ಬಳಕೆ ಮಾಡಲು ಸಹಾಯವಾಗುವಂತೆ ರೆಡಿ ಮಾಡಿದೆ. ಅಲ್ಲದೆ, ತನ್ನೆಲ್ಲ ಪ್ಯಾಸೆಂಜರ್ ವಾಹನಗಳಿಗೆ 2 ವರ್ಷ/75,000 ಕಿಮೀಗಳ ವಾರಂಟಿಯನ್ನು 3 ವರ್ಷ/1 ಲಕ್ಷ ಕಿಮೀಗಳಿಗೆ ವಿಸ್ತರಿಸಿದೆ. ಆಸಕ್ತ ಗ್ರಾಹಕರು, ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ತಿಳಿಯಲು ತಮ್ಮ ಹತ್ತಿರದ ಡೀಲರ್‌ಶಿಪ್ ಅಥವಾ ಟಾಟಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಎರಡು ತಿಂಗಳು ಮೊದಲೇ ಟಾಟಾದಿಂದ ಮಹತ್ವದ ಘೋಷಣೆ

ಟಾಟಾದ ಜನಪ್ರಿಯ ಕಾರುಗಳಾದ ಆಲ್ಟ್ರೊಜ್ ಮತ್ತು ಪಂಚ್‌ನ ಎಲ್ಲಾ ರೂಪಾಂತರಗಳಲ್ಲಿ ಐಡಲ್ ಸ್ಟಾಪ್/ ಸ್ಟಾರ್ಟ್ ಬಟನ್ ಫೀಚರ್ಸ್ ಅನ್ನು ಸೇರಿಸಲಾಗಿದ್ದು, ಇದು ಈ ಕಾರು ಖರೀದಿಸಲು ಮತ್ತಷ್ಟು ಗ್ರಾಹರನ್ನು ಸೆಳೆಯಬಹುದು. ಡೀಸೆಲ್ ಎಂಜಿನ್ ಚಾಲಿತ ವಾಹನಗಳಿಗೆ ಸಾಕಷ್ಟು ಬೇಡಿಕೆ ಈಗಲೂ ಇದೆ ಎಂದು ಟಾಟಾ ನಂಬಿದೆ. ಹಲವು ಕಂಪನಿಗಳು ಡಿಸೇಲ್ ಎಂಜಿನ್ ಆಧಾರಿತ ಕಾರುಗಳ ಉತ್ಪಾದನೆಯನ್ನು ನಿಲ್ಲಿಸಿವೆ. ಆದರೆ, ಕಂಪನಿಯು ಆಲ್ಟ್ರೊಜ್ ಮತ್ತು ನೆಕ್ಸಾನ್ ಎಸ್‌ಯುವಿಗಳ ಡೀಸೆಲ್ ಎಂಜಿನ್‌ ಅನ್ನು RDE ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಿದೆ.

ಟಾಟಾ ಮೋಟಾರ್ಸ್, ಖರೀದಿದಾರರ ಹಿತದೃಷ್ಟಿಯಿಂದ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಎಂಜಿನ್ ಚಾಲಿತ ಕಾರುಗಳಿಗೆ ಸುರಕ್ಷತೆ ದೃಷ್ಟಿಯಿಂದ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ತನ್ನ ಬಹುನಿರೀಕ್ಷಿತ ಟಿಯಾಗೊ ಹ್ಯಾಚ್‌ಬ್ಯಾಕ್ ಮತ್ತು ಟಿಗೊರ್ ಸೆಡಾನ್‌ಗೆ TPMS (ಟೈರ್ ಪ್ರೆಜರ್ ಮಾನಿಟರಿಂಗ್ ಸಿಸ್ಟಮ್) ಅನ್ನು ಸೇರಿಸಿದೆ. ಇನ್ನು, ದೇಶದ ಜನರ ರಕ್ಷಣೆಗೆ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ RDE ಮಾನದಂಡಗಳನ್ನು ಏಪ್ರಿಲ್ ನಿಂದ ಜಾರಿಗೊಳಿಸಲಿದೆ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಟಾಟಾದ ಕಾರುಗಳು ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯಲಿವೆ. ಅವುಗಳ ಬಗ್ಗೆ ತಿಳಿಯೋಣ. ಟಾಟಾ ಎಂಟ್ರಿ ಲೆವೆಲ್ ಕಾರಾಗಿರುವ ಟಿಯಾಗೊ ಹ್ಯಾಚ್‌ಬ್ಯಾಕ್, ರೂ.5.54 ಲಕ್ಷದಿಂದ ರೂ.8.05 ಲಕ್ಷ ಬೆಲೆಯಲ್ಲಿ ಮೂರು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಇದು1.2 - ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 86 PS ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 5-ಸ್ವೀಡ್ ಮಾನ್ಯುಯಲ್ ಅಥವಾ 5-ಸ್ವೀಡ್ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯಲಿದೆ. ಜೊತೆಗೆ ಸಿಎನ್‌ಜಿ ಕಿಟ್ ನೊಂದಿಗೂ ಖರೀದಿಗೆ ಲಭ್ಯವಿದೆ.

ಟಾಟಾದ ಟಿಗೊರ್ ಸೆಡಾನ್‌ ಬಗ್ಗೆ ಹೇಳುವುದಾದರೆ, ಇದು ರೂ.6.20 ಲಕ್ಷದಿಂದ ರೂ.8.90 ಲಕ್ಷ ಬೆಲೆಯಲ್ಲಿ ದೊರೆಯಲಿದ್ದು, ಮೂರು ರೂಪಾಂತರದ ಆಯ್ಕೆಯನ್ನು ಹೊಂದಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಮೂಲಕ ಚಾಲಿತವಾಗಲಿದೆ. ಇದರ .2-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ 86 PS ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 7 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಟಾಟಾ ಆಲ್ಟ್ರೊಜ್, ರೂ.6.45 ಲಕ್ಷದಿಂದ ರೂ.10.40 ಲಕ್ಷ ಬೆಲೆಯನ್ನು ಹೊಂದಿದ್ದು, 1.2 - ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್, 1.2 - ಲೀಟರ್ ಟರ್ಬೊ-ಪೆಟ್ರೋಲ್ ಹಾಗೂ 1.5 - ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಟಾಟಾ ಪಂಚ್ ರೂ.6 ಲಕ್ಷದಿಂದ ರೂ.9.47 ಲಕ್ಷ ಬೆಲೆಯಲ್ಲಿ ದೊರೆಯಲಿದ್ದು, ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ ಎಂದು ಹೇಳಬಹುದು. ಜೊತೆಗೆ 1.2 - ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ ಸಿಎನ್‌ಜಿ ಕಿಟ್ ಆಯ್ಕೆಯೊಂದಿಗೆ ಖರೀದಿಗೆ ದೊರೆಯಲಿದೆ.

ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ಟಾಟಾ ತನ್ನ ಕಾರುಗಳ ಎಂಜಿನ್ ಅನ್ನು ನವೀಕರಣ ಮಾಡಿದ್ದು, ಸದ್ಯದ ಮಟ್ಟಿಗೆ ಇದು ದೊಡ್ಡ ಮಟ್ಟದ ಬೆಳವಣಿಗೆಯಾಗಿದೆ ಎಂದು ಹೇಳಬಹುದು. ಜೊತೆಗೆ ದೇಶವು ಶೂನ್ಯ ಹೊರಸೂಸುವಿಕೆ ಗುರಿ ಸಾಧಿಸಲು ಮುಂದಾಗಿದ್ದು, ಅದಕ್ಕೆ ತಕ್ಕಂತೆ ವಿವಿಧ ವಾಹನ ತಯಾರಿಕ ಕಂಪನಿಗಳು ಎಲೆಕ್ಟ್ರಿಕ್ ವಾಹನ ತಯಾರಿಕೆಗೆ ಮಾಡುತ್ತಿವೆ. ಅದರಲ್ಲಿಯೂ ಟಾಟಾ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಭಾರತದಲ್ಲಿ ಅಗ್ಗದ ಬೆಲೆಯ ಟಿಯಾಗೊ ಇವಿಯನ್ನು ಕೆಲದಿನಗಳ ಹಿಂದೆ ಬಿಡುಗಡೆ ಮಾಡಿತ್ತು.

Article Published On: Sunday, February 12, 2023, 11:30 [IST]
English summary
Tata motors introduces rde and e20 compliant passenger vehicles details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+