ಟಾಟಾ ಕಾರುಗಳಿಗೆ 58 ಸಾವಿರವರೆಗೂ ಭರ್ಜರಿ ಆಫರ್: ಯಾವ ಯಾವ ಕಾರುಗಳಿಗೆ ಎಷ್ಟೆಷ್ಟು?
ಭಾರತದ ಹೆಮ್ಮೆಯ ಕಾರು ತಯಾರಿಕಾ ಕಂಪನಿಯಾದ ಟಾಟಾ ಮೋಟಾರ್ಸ್ ಕಾರುಗಳಿಗೆ ಈ ತಿಂಗಳು ಅಂದರೆ ಜೂನ್ ನಲ್ಲಿ ಭರ್ಜರಿ ಡಿಸ್ಕಂಟ್ ಮತ್ತು ಉಡುಗೊರೆಗಳನ್ನು ಘೋಷಿಸಲಾಗಿದೆ. ಟಾಟಾ ಕಂಪನಿಯ ಟಿಯಾಗೋ, ಟಿಗೋರ್, ಆಲ್ಟ್ರೋಜ್, ಸಫಾರಿ, ಹ್ಯಾರಿಯರ್ ಮತ್ತು ನೆಕ್ಸಾನ್ ಕಾರುಗಳಿಗೆ ರಿಯಾಯಿತಿಯನ್ನ ಘೋಷಿಸಲಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಜೊತೆಗೆ ಸಿಎನ್‌ಜಿ ವೇರಿಯೆಂಟ್‌ಗಳಿಗೂ ಈ ಆಫರನ್ನು ನೀಡಲಾಗುತ್ತಿದೆ. ಆಫರನ್ನು ನಗದು ಡಿಸ್ಕೌಂಟ್, ಎಕ್ಸ್ಚೇಂಜ್ ಬೋನಸ್ ಮತ್ತು ಇನ್ನಿತರ ರೂಪದಲ್ಲಿ ನೀಡಲಾಗುತ್ತಿದ್ದು, ಜೂನ್ 1 ರಂದ ಜೂನ್ 30, 2023ರ ಅವಧಿಯಲ್ಲಿ ಕಾರನ್ನು ಕೊಳ್ಳುವವರಿಗೆ ಈ ಉಡುಗೊರೆ ಲಭ್ಯವಿದೆ ಎಂದು ತಿಳಿದು ಬಂದಿದೆ.

ಟಾಟಾ ಟಿಯಾಗೋ: ಟಾಟಾ ಟಿಯಾಗೋ ಗರಿಷ್ಟ 53,000 ರೂಗಳ ಆಫರನ್ನು ನೀಡಲಾಗುತ್ತಿದೆ. ಇದರಲ್ಲಿ ೩೦೦೦೦ ರೂಗಳ ಕ್ಯಾಶ್ ಡಿಸ್ಕೌಂಟ್ ಮತ್ತು 20,000 ರೂಗಳ ವರೆಗೆ ಎಕ್ಸ್ಚೇಂಜ್ ಬೋನಸ್ ಅನ್ನು ನೀಡಲಾಗುತ್ತದೆ. ಮತ್ತು ಮೂರು ಸಾವಿರ ರೂಪಾಯಿ ಕಾರ್ಪೋರೇಟ್ ಡಿಸ್ಕೌಂಟ್ ಅನ್ನು ಸಹ ನೀಡಲಾಗುತ್ತಿದೆ.
ಟಾಟಾ ಟಿಯಾಗೋ ಕಾರು ಸದ್ಯಕ್ಕೆ 5.06 - 8.11 ಲಕ್ಷ ಎಕ್ಸ್ ಶೋ ರೂಂ ಬೆಲೆಗೆ ಮಾರಾಟವಾಗುತ್ತಿದೆ. 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುವ ಈ ಕಾರು 5-ಸ್ಪೀಡ್ ಮ್ಯಾನುವಲ್ ಅಥವಾ ಎಎಂಟಿ ಟ್ರಾನ್ಸ್ಮಿಷನ್ ವ್ಯವಸ್ಥೆಯನ್ನು ಹೊಂದಿದೆ.
ಟಾಟಾ ಟಿಗೋರ್: ಟಾಟಾ ಟಿಗೋರ್ ಕಾರಿನ ಮೇಲೆ ಗರಿಷ್ಟ 48೦೦೦ ರೂಪಾಯಿಗಳ ಡಿಸ್ಕೌಂಟನ್ನು ಟಾಟಾ ಮೋಟಾರ್ಸ್ ನೀಡುತ್ತಿದೆ. ಇದರಲ್ಲಿ 48೦೦೦ ರೂಗಳ ಕ್ಯಾಶ್ ಡಿಸ್ಕೌಂಟ್ ಮತ್ತು 20000 ಸಾವಿರ ರೂಗಳ ಎಕ್ಸ್ಚೇಂಜ್ ಬೋನಸ್ ಲಭಿಸಲಿದೆ. ಈ ಕಾರಿನೊಂದಿಗೂ ಸುಮಾರು 2000 ರೂಗಳ ಕಾರ್ಪೋರೇಟ್ ಡಿಸ್ಕೌಂಟನ್ನು ನೀಡಲಾಗುತ್ತಿದೆ.
ಟಾಟಾ ಆಲ್ಟ್ರೋಜ್: ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿರುವ ಟಾಟಾ ಆಲ್ಟ್ರೋಜ್ ಕಾರಿನ ಪಟ್ರೋಲ್ ಮತ್ತು ಡೀಸೆಲ್ ವೇರಿಯಂಟ್‌ಗಳಿಗೆ ಮಾತ್ರ ಈ ಬಾರಿಯ ಡಿಸ್ಕೌಂಟ್ ದೊರಕಲಿದೆ. ಈ ಕಾರಿನ ಸಿಎನ್‌ಜಿ ವೇರಿಯಂಟ್ ಸದ್ಯಕ್ಕಷ್ಟೇ ಲಾಂಚ್ ಆಗಿರುವುದರಿಂದ ಅದಕ್ಕೆ ಈ ಸೌಲಭ್ಯ ದೊರಕಿಲ್ಲ. ಆಲ್ಟ್ರೋಜ್ ಕಾರಿಗೆ 1500 ಕ್ಯಾಶ್ ಡಿಸ್ಕೌಂಟ್, 25000 ಎಕ್ಸ್ಚೇಂಜ್ ಬೋನಸ್ ಮತ್ತು 5000 ರೂಗಳ ಕಾರ್ಪೋರೇಟ್ ಡಿಸ್ಕೌಂಟ್ ಸಿಗುತ್ತಿದೆ.
ಟಾಟಾ ಸಫಾರಿ ಮತ್ತು ಹ್ಯಾರಿಯರ್: ಈ ಎರಡೂ ಕಾರುಗಳಿಗೆ ಸಉಮಾರು 5000 ರೂಗಳ ಡಿಸ್ಕೌಂಟನ್ನು ನೀಡಲಾಗಿದ್ದು ಇದರಲ್ಲಿ 40000 ರೂ ಎಕ್ಸ್ಚೇಂಜ್ ಬೋನಸ್ ಮತ್ತು 10000 ರೂಗಳ ಕಾರ್ಪೋರೇಟ್ ಡಿಸ್ಕೌಂಟ್ ದೊರಕಲಿದೆ. ಇದಕ್ಕಿಂತ ಸಣ್ಣ ಎಸ್‌ಯುವಿಗಳಾದ ಪಂಚ್ ಮತ್ತು ನೆಕ್ಸಾನ್ ಕಾರುಗಳಿಗೆ ತಲಾ 10000 ಮತ್ತು 20000 ರೂಗಳ ಆಫರ್ ಸಿಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications