Tata: ಟಾಟಾ ಎಂಬ ದೈತ್ಯ ಶಕ್ತಿಯ ಮುಂದೆ ನಿಲ್ಲಲು ಸಾಧ್ಯವೇ.. ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸರಿಸಾಟಿಯೇ ಇಲ್ಲ!

ಟಾಟಾ ಮೋಟಾರ್ಸ್ (Tata Motors) ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಖ್ಯಾತಿ ಗಳಿಸಿದೆ. ಅಕ್ಟೋಬರ್ (2023) ಮಾರಾಟ ವರದಿ ಪ್ರಕಟಗೊಂಡಿದ್ದು, ಉತ್ತಮವಾಗಿ ಪ್ರಗತಿ ದಾಖಲಿಸಿದೆ. ಅದರಲ್ಲೂ ಕಂಪನಿಯ ಎಲೆಕ್ಟ್ರಿಕ್ ಕಾರು ಸೇಲ್ಸ್ ಗಮನಿಸಿದರೆ, ಮುಂಬರುವ ದಿನಗಳಲ್ಲಿ ಅವೇ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡರೂ ಅಚ್ಚರಿಯಿಲ್ಲ.

ಟಾಟಾ ಬಿಡುಗಡೆಗೊಳಿಸಿರುವ ವರದಿ ಪ್ರಕಾರ, ದೇಶೀಯ ಮಾರಾಟದಲ್ಲಿ (domestic sales) ಈ ಅಕ್ಟೋಬರ್‌ನಲ್ಲಿ 80,825 ಯುನಿಟ್ ವಾಹನಗಳನ್ನು ಸೇಲ್ ಮಾಡಿದೆ. 2022ರ ಇದೇ ಅವಧಿಗೆ ಹೋಲಿಸಿದರೆ (76,537 ಯುನಿಟ್) ವರ್ಷದಿಂದ ವರ್ಷಕ್ಕೆ (Y-o-Y) ಶೇಕಡ 6% ಪ್ರಗತಿ ಸಾಧಿಸಿದೆ. ವಾಣಿಜ್ಯ ವಾಹನ (commercial vehicle - CV) ವಿಚಾರಕ್ಕೆ ಬಂದರೆ, 34,317 ಯುನಿಟ್ ಮಾರಾಟ ಮಾಡಿ, ಶೇಕಡ 4% ಬೆಳವಣಿಗೆ ಕಂಡಿದೆ.

Tata: ಟಾಟಾ ಎಂಬ ದೈತ್ಯ ಶಕ್ತಿಯ ಮುಂದೆ ನಿಲ್ಲಲು ಸಾಧ್ಯವೇ.. ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸರಿಸಾಟಿಯೇ ಇಲ್ಲ!

ಪ್ರಯಾಣಿಕ ವಾಹನ (passenger vehicle - PV) ಮಾರಾಟದಲ್ಲೂ ಟಾಟಾ ಭರ್ಜರಿಯಾಗಿ ಯಶಸ್ವಿಯಾಗಿದೆ. ಕಳೆದ ತಿಂಗಳು 48,337 ಯುನಿಟ್ ಕಾರುಗಳನ್ನು ಮಾರಾಟ ಮಾಡಿ, 2022ರ ಅಕ್ಟೋಬರ್‌ ತಿಂಗಳಿಗೆ ಹೋಲಿಸಿದರೆ (45,217 ಯುನಿಟ್) ವರ್ಷದಿಂದ ವರ್ಷಕ್ಕೆ (Y-o-Y) ಶೇಕಡ 7% ಬೆಳವಣಿಗೆ ಕಂಡಿದೆ. ಇದರಲ್ಲಿ ಇಂಧನ ಚಾಲಿತ ಹಾಗೂ ಎಲೆಕ್ಟ್ರಿಕ್ ಕಾರುಗಳು ಸೇರ್ಪಡೆಯಾಗಿವೆ.

ಭಾರೀ ವಾಣಿಜ್ಯ ವಾಹನ (heavy-commercial vehicle - HCV) ಮಾರಾಟದಲ್ಲಿಯೂ ಟಾಟಾ ಕಂಪನಿ ಉತ್ತಮವಾಗಿ ಪ್ರಗತಿ ಸಾಧಿಸಿದೆ. ಈ ಅಕ್ಟೋಬರ್‌ ತಿಂಗಳು 10,204 ಯುನಿಟ್ ವಾಹನಗಳನ್ನು ಸೇಲ್ ಮಾಡಿದ್ದು, ಹೋದ ವರ್ಷದ ಇದೇ ಅವಧಿಗೆ ಹೋಲಿಕೆ ಮಾಡಿದರೆ (9,253 ಯುನಿಟ್) ಶೇಕಡ 10% ಬೆಳವಣಿಗೆ ಕಂಡಿದೆ. ಕಾರ್ಗೋ ಮತ್ತು ಪಿಕಪ್ ವಾಹನ ಮಾರಾಟದಲ್ಲಿ ಶೇಕಡ 8% ಕುಸಿತವಾಗಿದೆ.

Tata: ಟಾಟಾ ಎಂಬ ದೈತ್ಯ ಶಕ್ತಿಯ ಮುಂದೆ ನಿಲ್ಲಲು ಸಾಧ್ಯವೇ.. ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸರಿಸಾಟಿಯೇ ಇಲ್ಲ!

ಟಾಟಾ ಕಂಪನಿ ಎಲೆಕ್ಟ್ರಿಕ್ ವಾಹನ (ಇವಿ) ಮಾರಾಟದಲ್ಲಿ ದಿನದಿಂದ ದಿನಕ್ಕೆ ಒಳ್ಳೆಯ ಪ್ರಗತಿಯನ್ನು ದಾಖಲಿಸುತ್ತಿದೆ. ಈ ಅಕ್ಟೋಬರ್‌ನಲ್ಲಿ 5,465 ಯುನಿಟ್ ಇವಿ ಸೇಲ್ ಮಾಡಿ, ಕಳೆದ ವರ್ಷದ ಇದೇ ಅವಧಿಗೆ ಹೋಲಿಕೆ ಮಾಡಿದರೆ (4,277 ಯುನಿಟ್) ವರ್ಷದಿಂದ ವರ್ಷಕ್ಕೆ ಶೇಕಡ 28% ಬೆಳವಣಿಗೆ ಕಂಡಿದೆ. ಟಾಟಾ, ನೆಕ್ಸಾನ್ ಇವಿ, ಟಿಯಾಗೊ ಇವಿ ಹಾಗೂ ಟಿಗೂರ್ ಇವಿಗಳನ್ನು ಮಾರಾಟ ಮಾಡುತ್ತಿದೆ.

ಇತ್ತೀಚೆಗೆ, ಬಿಡುಗಡೆಗೊಂಡ ನವೀಕರಿಸಿದ ನೆಕ್ಸಾನ್ ಇವಿ (Nexon EV) ಬಗ್ಗೆ ಮಾತನಾಡುವುದಾದರೆ, ಇದು ರೂ.14.74 ಲಕ್ಷದಿಂದ ರೂ.19.94 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. ರೂಪಾಂತರಗಳಿಗೆ ಅನುಗುಣವಾಗಿ 30 kWh ಹಾಗೂ 40.5 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 325 km ರಿಂದ 465 km ರೇಂಜ್ ನೀಡುತ್ತದೆ.

Tata: ಟಾಟಾ ಎಂಬ ದೈತ್ಯ ಶಕ್ತಿಯ ಮುಂದೆ ನಿಲ್ಲಲು ಸಾಧ್ಯವೇ.. ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸರಿಸಾಟಿಯೇ ಇಲ್ಲ!

ಟಾಟಾ ನೆಕ್ಸಾನ್ ಇವಿ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದ್ದು, 12.3 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸ್ಟೀರಿಂಗ್ - ಮೌಂಟೆಡ್ ಪ್ಯಾಡಲ್ ಶಿಫ್ಟರ್, 360-ಡಿಗ್ರಿ ಕ್ಯಾಮೆರಾ, ಬ್ಲೈಂಡ್ ಸ್ಪಾಟ್ ಮಾನಿಟರ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್ ಅನ್ನು ಹೊಂದಿದೆ. ಸುರಕ್ಷತೆ ದೃಷ್ಟಿಯಿಂದಲ್ಲೂ ಅತ್ಯುತ್ತಮವಾಗಿದ್ದು, 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ರೇರ್ ಪಾರ್ಕಿಂಗ್ ಸೆನ್ಸರ್ಸ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಅನ್ನು ಪಡೆದಿದೆ.

ಟಾಟಾ ಟಿಯಾಗೊ ಇವಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ರೂ.8.69 ಲಕ್ಷದಿಂದ ರೂ.12.04 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 19.2 - 24 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಒಳಗೊಂಡಿದ್ದು, 250 - 315 km ರೇಂಜ್ ಕೊಡುತ್ತದೆ. ಟಿಗೂರ್ ಇವಿ ವಾಣಿಜ್ಯ ಬಳಕೆಗೆ ರೂ.12.49 ಲಕ್ಷದಿಂದ ರೂ.13.75 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ಸಿಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, November 3, 2023, 12:22 [IST]
English summary
Tata motors october sales report good progress in electric vehicles
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+