Tata Cars: ಟಾಟಾದಿಂದ ಭರ್ಜರಿ ಸಿಹಿಸುದ್ದಿ.. ಘೋಷಣೆ
ದೇಶದ ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಟಾಟಾ ಮೋಟಾರ್ಸ್ ಜನಪ್ರಿಯತೆ ಗಳಿಸಿದೆ. ಅದರ ಕಾರುಗಳ ವೈಶಿಷ್ಟ್ಯ ಹಾಗೂ ಕಾರ್ಯಕ್ಷಮತೆಗೆ ಪ್ರತಿಯೊಬ್ಬ ಗ್ರಾಹಕರು ಆಕರ್ಷಿತರಾಗುತ್ತಾರೆ .ಇದೀಗ, ತನ್ನ ಜನಪ್ರಿಯ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿದ್ದು, ಟಿಯಾಗೊ, ಟಿಗೂರ್ ಸೇರಿದಂತೆ ಯಾವೆಲ್ಲ ಕಾರುಗಳು ಡಿಸ್ಕೌಂಟ್ ಪಡೆದಿವೆ ಎಂಬುದನ್ನು ತಿಳಿಯೋಣ.
ಮೊದಲಿಗೆ ಟಾಟಾದ ಎಂಟ್ರಿ ಲೆವೆಲ್ ಕಾರಾಗಿರುವ ಟಿಯಾಗೊಗೆ ನೀಡಿರುವ ರಿಯಾಯಿತಿ ಬಗ್ಗೆ ಮಾತನಾಡೋಣ. ಎಕ್ಸ್‌ಟಿ, ಎಕ್ಸ್‌ಟಿ ರಿದಮ್, NRG ಮ್ಯಾನುಯಲ್, XZ+ ರೂಪಾಂತರಗಳನ್ನು ಹೊರತುಪಡಿಸಿ, ಉಳಿದೆಲ್ಲ ರೂಪಾಂತರಗಳು ರೂ.15,000 ವರೆಗೆ ಕನ್ಸೂಮರ್ ಸ್ಕೀಮ್ ನಲ್ಲಿ ರಿಯಾಯಿತಿ, ರೂ.10,000 ಎಕ್ಸ್ಚೇಂಜ್ ಡಿಸ್ಕೌಂಟ್ ಸೇರಿದಂತೆ ಒಟ್ಟು ರೂ.25,000 ರಿಯಾಯಿತಿಯನ್ನು ಪಡೆದಿವೆ. ಎಕ್ಸ್‌ಟಿ, ಎಕ್ಸ್‌ಟಿ ರಿದಮ್, NRG ಮ್ಯಾನುಯಲ್, XZ+ ರೂಪಾಂತರಗಳು ಒಟ್ಟು ರೂ.30,000 ಡಿಸ್ಕೌಂಟ್ ಆಫರ್ ಪಡೆದಿವೆ.

ಟಿಯಾಗೊ CNG ಆವೃತ್ತಿ ರೂ.10,000 ವರೆಗೆ ಕನ್ಸೂಮರ್ ಸ್ಕೀಮ್ ನಲ್ಲಿ ಡಿಸ್ಕೌಂಟ್, ರೂ.10,000 ವಿನಿಮಯ ರಿಯಾಯಿತಿ ಒಳಗೊಂಡು ಒಟ್ಟು ರೂ.20,000 ರಿಯಾಯಿತಿಯನ್ನು ಪಡೆದಿದೆ. ಈ ಸೌಲಭ್ಯಗಳು ಏಪ್ರಿಲ್ 30ರವರೆಗೆ ಅನ್ವಯವಾಗಲಿದೆ. ಟಾಟಾ ಟಿಯಾಗೊ ಕಾರು, ರೂ.5.54 ಲಕ್ಷದಿಂದ ರೂ.8.05 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಪೆಟ್ರೋಲ್/CNG ಆಯ್ಕೆಯಲ್ಲಿ ಸಿಗಲಿದೆ. ಜೊತೆಗೆ 19.0 - 19.01 kmpl ಮೈಲೇಜ್ ನೀಡಲಿದೆ.
ಟಿಗೂರ್ ಕಾರಿನ ಬಗ್ಗೆ ಹೇಳುವುದಾದರೆ, ಇದರ ಆಟೋಮೆಟಿಕ್ ಟ್ರಾನ್ಸ್ಮಿಷನ್ ರೂಪಾಂತರಗಳು ಒಟ್ಟು ರೂ.25,000 ರಿಯಾಯಿತಿ ಪ್ರಯೋಜನವನ್ನು ಹೊಂದಿವೆ. ಅದರಲ್ಲಿ ರೂ.15,000 ಕನ್ಸೂಮರ್ ಸ್ಕೀಮ್ ನಲ್ಲಿ ಡಿಸ್ಕೌಂಟ್ ಇದ್ದು, ರೂ.10,000 ವಿನಿಮಯ ರಿಯಾಯಿತಿಯನ್ನು ಪಡೆದಿವೆ. ಮ್ಯಾನುವಲ್ ಟ್ರಾನ್ಸ್ಮಿಷನ್ ರೂಪಾಂತರಗಳು, ರೂ.20,000 ಕನ್ಸೂಮರ್ ಸ್ಕೀಮ್ ನಲ್ಲಿ ರಿಯಾಯಿತಿ, ರೂ. 10,000 ಎಕ್ಸ್ಚೇಂಜ್ ಡಿಸ್ಕೌಂಟ್ ಸೇರಿದಂತೆ ಒಟ್ಟು ರೂ.30,000 ರಿಯಾಯಿತಿ ಪ್ರಯೋಜನವನ್ನು ಪಡೆದಿವೆ.
ಟಿಗೂರ್ CNG ಆವೃತ್ತಿ ಒಟ್ಟು 25,000ವರೆಗೆ ರಿಯಾಯಿತಿ ಪ್ರಯೋಜನವನ್ನು ಪಡೆದುಕೊಂಡಿದೆ. ಈ ಕಾರು, ರೂ.6.20 ಲಕ್ಷದಿಂದ ರೂ.8.90 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಇದರ 1.2-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್, 86 PS ಗರಿಷ್ಠ ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಟ್ರಾನ್ಸ್ಮಿಷನ್ ಆಯ್ಕೆಯಲ್ಲಿ ಸಿಗಲಿದೆ.
ಟಾಟಾ ಆಲ್ಟ್ರಾಜ್ ಕಾರು ಭರ್ಜರಿ ರಿಯಾಯತಿ ಪ್ರಯೋಜನವನ್ನು ಹೊಂದಿದೆ. DCA ರೂಪಾಂತರ ಹೊರತುಪಡಿಸಿ, ಉಳಿದೆಲ್ಲ ಪೆಟ್ರೋಲ್ ವೇರಿಯೆಂಟ್ ಒಟ್ಟು 20,000 ರಿಯಾಯಿತಿ ಪ್ರಯೋಜನವನ್ನು ಹೊಂದಿವೆ. ಅದರಲ್ಲಿ ರೂ.10,000 ಕನ್ಸೂಮರ್ ಸ್ಕೀಮ್ ನಲ್ಲಿ ಡಿಸ್ಕೌಂಟ್, ರೂ.10,000 ವಿನಿಮಯ ರಿಯಾಯಿತಿಯನ್ನು ಪಡೆದಿವೆ. DCA ರೂಪಾಂತರ ಒಟ್ಟು ರೂ.25,000 ಡಿಸ್ಕೌಂಟ್ ಅನ್ನು ಪಡೆದಿದೆ.
ಆಲ್ಟ್ರಾಜ್ ಎಲ್ಲ ಡಿಸೇಲ್ ರೂಪಾಂತರಗಳು ಒಟ್ಟು ರೂ.25,000 ರಿಯಾಯಿತಿ ಪ್ರಯೋಜನವನ್ನು ಹೊಂದಿವೆ. ರೂ.6.45 ಲಕ್ಷದಿಂದ ರೂ.10.40 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 18.05 - 23.64 kmpl ಮೈಲೇಜ್ ನೀಡಲಿದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಬಿಯೆಂಟ್ ಲೈಟಿಂಗ್ ಹಾಗೂ ಕ್ರೂಸ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಇನ್ನುಳಿದಂತೆ ಟಾಟಾ ಸಫಾರಿ ಹಾಗೂ ಹ್ಯಾರಿಯರ್ ಎಸ್‌ಯುವಿಗಳು ರೂ.25,000 ರಿಯಾಯಿತಿ ಪ್ರಯೋಜನವನ್ನು ಪಡೆದಿವೆ. ಹೆಚ್ಚುವರಿ ಆಫರ್ ಒಳಗೊಂಡಂತೆ ಹೆಚ್ಚಿನ ಮಾಹಿತಿಗೆ ಹತ್ತಿರದ ಡೀಲರ್‌ಗಳನ್ನು ಆಸಕ್ತ ಗ್ರಾಹಕರು ಸಂಪರ್ಕಿಸಬಹುದು. ಈ ಡಿಸ್ಕೌಂಟ್ ಕಡಿಮೆ ಬೆಲೆಯ ಕಾರುಗಳಿಗೆ ನ್ ನೀಡಿರುವುದರಿಂದ ಹೊಸ ಕಾರು ಖರೀದಿಸಬೇಕೆಂಬ ಆಸೆಯೊಂದಿರುವ ಗ್ರಾಹಕರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.


Click it and Unblock the Notifications