ಟಾಟಾ ಅಂದ್ರೇನೆ ಹಾಗೆ ನೋಡಿ... ಟ್ರೋಲ್ ಮಾಡಿದ್ದೇ ಯಾರೋ ಸ್ಪಷ್ಟನೆ ಕೊಟ್ಟಿದ್ದು ಮಾತ್ರ ಟಾಟಾ

ಭಾರತದಲ್ಲಿ ಎಲೆಕ್ಟ್ರಿಕ್ ಕಾರು ವಿಭಾಗವು ಅತ್ಯಂತ ವೇಗ ಪಡೆಯುತ್ತಿದ್ದು, ಹೊಸ ಬ್ರಾಂಡ್‌ಗಳು ಗ್ರಾಹಕರನ್ನು ತಮ್ಮತ್ತ ಸೆಳೆಯುವಲ್ಲಿ ಭಾರೀ ಪ್ರಯತ್ನಗಳನ್ನು ಮಾಡುತ್ತಿವೆ. ಇತ್ತೀಚೆಗೆ ಎಂಜಿ ಮೋಟಾರ್ ಕೂಡ ತಮ್ಮ ಕಾಮೆಟ್ ಎಂಬ ಪುಟ್ಟ ಎಲೆಕ್ಟ್ರಿಕ್ ಕಾರನ್ನು ಸ್ಪರ್ಧಾತ್ಮಕ ಬೆಲೆಗೆ ಬಿಡುಗಡೆ ಮಾಡಿದ್ದೇ ತಡ ಟ್ರೋಲ್‌ಗಳು ಆರಂಭವಾಗಿವೆ.

ಮಾಹಿತಿಯ ಪ್ರಕಾರ ಟಾಟಾ ಡೀಲರ್‌ ಒಬ್ಬರು ಎಂಜಿ ಕಾಮೆಟ್ ಅನ್ನು ಕಾರ್ಟೂನ್‌ಗೆ ಹೋಲಿಸಿ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಎಂಜಿ ಕಡೆಯಿಂದ ಪೋಸ್ಟರ್ ಒಂದು ಹೊರಹೊಮ್ಮಿತ್ತು ಇದರಲ್ಲಿ ಟಾಟಾ ಟಿಯಾಗೊವನ್ನು ಐಸ್ ಏಜ್‌ಗೆ ಹೋಲಿಸಲಾಗಿತ್ತು. ವಿಚಿತ್ರವೆಂದರೆ ಈ ವಿಚಾರದಲ್ಲಿ ಯಾವುದೇ ಬ್ರಾಂಡ್‌ಗಳು ತಮ್ಮನ್ನು ತೊಡಗಿಸಿಕೊಂಡಿರಲಿಲ್ಲ. ಆದರೂ ಈ ಕುರಿತು ಟಾಟಾ ಇದೀಗ ಸ್ಪಷ್ಟನೆ ನೀಡಿ ವಿಷಯವನ್ನು ತಣ್ಣಗಾಗಿಸಿದೆ.

Tata motors responded to the running trolls on MG comet

ಟಾಟಾ ಸ್ಪಷ್ಟನೆ:
"ವಾಟ್ಸಾಪ್ ಮತ್ತು ಹಲವಾರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪೋಸ್ಟರ್ ಚಲಾವಣೆಯಲ್ಲಿರುವುದನ್ನು ನಾವು ಗಮನಿಸಿದ್ದೇವೆ. ಇದರಲ್ಲಿ ನಮ್ಮ ವಾಹನ ಮತ್ತು ಇನ್ನೊಂದು OEMನ ಇತ್ತೀಚೆಗೆ ಬಿಡುಗಡೆಯಾದ ಕಾರನ್ನು ಅಸಹ್ಯಕರ ರೀತಿಯಲ್ಲಿ ಪ್ರದರ್ಶಿಸುತ್ತದೆ. ಈ ಪೋಸ್ಟರ್ ನಾವು ರಚಿಸಿಲ್ಲ ಹಾಗೂ ವಿತರಿಸಿಲ್ಲ. ಯಾವುದೇ ರೀತಿಯಲ್ಲಿ ಅದರೊಂದಿಗೆ ತೊಡಗಿಸಿಕೊಳ್ಳದಂತೆ ನಾವು ನಮ್ಮ ಚಾನಲ್ ಪಾಲುದಾರರಿಗೆ ಸಲಹೆ ನೀಡಿದ್ದೇವೆ. ಟಾಟಾ ಮೋಟಾರ್ಸ್ ದೃಢವಾದ ನೀತಿ ಸಂಹಿತೆಯನ್ನು ಅನುಸರಿಸುತ್ತದೆ ಎಂದು ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿದೆ.

ಅಂಥದ್ದೇನಿದೆ ಪೋಸ್ಟರ್‌ನಲ್ಲಿ:
ಫೇಸ್‌ ಬುಕ್‌ನಲ್ಲಿ ಟಾಟಾ ಡೀಲರ್‌ಶಿಪ್ ಹಂಚಿಕೊಂಡ MG ಕಾಮೆಟ್ ಕುರಿತ ಪೋಸ್ಟರ್ ನಲ್ಲಿ ಎಂಜಿ ಕಾಮೆಟ್ ಹಾಗೂ ಟಾಟಾ ಟಿಯಾಗೋವನ್ನು ನೋಡಬಹುದು. "ಇದು ಕಾರ್ ಕಾರ್ಟೂನ್ ಅಲ್ಲ" ಎಂಬ ಸಂದೇಶವನ್ನು ನೀಡುತ್ತಾ "ಕಾರ್" ಎಂಬ ಪದವು ಟಾಟಾ ಕಾನೂನುಬದ್ಧ ಸಾರಿಗೆ ವಿಧಾನವನ್ನು ನೀಡುತ್ತಿದೆ ಎಂದು ಸೂಚಿಸುತ್ತದೆ. ಹಾಗೆಯೇ "ಕಾರ್ಟೂನ್" ಎಂಬ ಪದವು MG ಕಾಮೆಟ್ ಗಂಭೀರವಾದ ಆಯ್ಕೆಯಾಗಿಲ್ಲ ಎಂದು ಸೂಚಿಸುತ್ತದೆ.

Tata motors responded to the running trolls on MG comet

ಇದಕ್ಕೆ ಪ್ರತಿಕ್ರಿಯೆಯಾಗಿ ಎಂಜಿ ಕಾಮೆಟ್ ಪೋಸ್ಟರ್ ಹೊರಬಂದಿತ್ತು. ಇದರಲ್ಲಿ ಟಾಟಾ ಕಾರುಗಳನ್ನು "ಐಸ್ ಏಜ್" ಎಂದು ಉಲ್ಲೇಖಿಸಲಾಗಿದ್ದು, ಎಂಜಿ ಕಾಮೆಟ್ ಅನ್ನು "ನ್ಯೂ ಏಜ್" ಎಂದು ತೋರಿಸಲಾಗಿದೆ. ಅಂದರೆ ಟಾಟಾ ಕಾರುಗಳನ್ನು ಹಳೆಯ ಜಮಾನಕ್ಕೆ ಹೊಲಿಸಿದ್ದು, ಎಂಜಿಯನ್ನು ಆಧುನಿಕ ಮತ್ತು ತಾಂತ್ರಿಕವಾಗಿ ಸುಧಾರಿತ ಕಾರುಗಳೆಂದು ಬಿಂಭಿಸಲಾಗಿದೆ. ಜನಸಂದಣಿಯಿಂದ ಎದ್ದು ಕಾಣುವ ಸ್ಟೈಲಿಶ್ ಮತ್ತು ಕೂಲ್ ಕಾರನ್ನು ಹುಡುಕುತ್ತಿರುವ ಗ್ರಾಹಕರನ್ನು ಎಂಜಿ ಗುರಿಯಾಗಿಸಿಕೊಂಡಿದೆ ಎಂಬ ಅರ್ಥವನ್ನು ನೀಡುತ್ತದೆ.

ಎಂಜಿ ಕಾಮೆಟ್ ಇವಿ ಬಿಡುಗಡೆಗೂ ಮುನ್ನ ಟಾಟಾ ಟಿಯಾಗೊ ಇವಿ ದೇಶದ ಅಗ್ಗದ ಬೆಲೆಯ ಎಲೆಕ್ಟ್ರಿಕ್ ಕಾರು ಎಂಬ ಖ್ಯಾತಿ ಪಡೆದಿತ್ತು. ಇದೀಗ ಕಾಮೆಟ್ ಆ ಸ್ಥಾನವನ್ನು ಧಕ್ಕಿಸಿಕೊಂಡಿದೆಯಾದರೂ ಟಾಟಾ ಟಿಯೋಗೊಗೆ ಹೋಲಿಸಿಕೊಂಡರೆ ಬ್ಯಾಟರಿ, ಉದ್ದಳತೆ, ವಿನ್ಯಾಸ, ರೇಂಜ್ ಹಲವು ರೀತಿಯಲ್ಲಿ ಭಾರೀ ವ್ಯತ್ಯಾಸಗಳಿವೆ. ಆದರೆ ಇಲ್ಲಿ ಕಡಿಮೆ ಬೆಲೆಯಿರುವ ಇವಿ, ಗ್ರಾಹಕರನ್ನು ಸೆಳೆಯುವುದಂತೂ ಖಚಿತ. ಎರಡು ಇವಿಗಳ ಬೆಲೆಗಳು ಉತ್ತಮ ಮಾರಾಟವನ್ನು ನಿರ್ಣಯಿಸಲಿವೆ.

Tata motors responded to the running trolls on MG comet

ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು ಕೇವಲ ಒಂದೇ ವೇರಿಯಂಟ್‌ನಲ್ಲಿ ಖರೀದಿಗೆ ಲಭ್ಯವಿದ್ದು, 7.98 ಲಕ್ಷ (ಎಕ್ಸ್‌ ಶೋರೂಂ) ಬೆಲೆಯನ್ನು ಹೊಂದಿದೆ. ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರ್ 8.69 ಲಕ್ಷ (ಎಕ್ಸ್‌ ಶೋರೂಂ) ಆರಂಭವಾಗಿ 11.99 ಲಕ್ಷ ರೂ. (ಎಕ್ಸ್‌ ಶೋರೂಂ) ವರೆಗೆ ಹೋಗುತ್ತದೆ. ಎಷ್ಟೇ ಆದರೂ ಟಾಟಾಗೆ ಪ್ರತ್ಯೇಕ ಗ್ರಾಹಕರ ಬಳಗವಿದೆ, ಹಾಗೆಯೇ ಎಂಜಿ ಆಧುನಿಕ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಈ ಕುರಿತು ನಿಮ್ಮ ಅನಿಸಿಕೆಯನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Image Source: WatsApp

Article Published On: Friday, April 28, 2023, 19:15 [IST]
English summary
Tata motors responded to the trolls clarified
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+