Tata: ಟಾಟಾದಿಂದ ಹೊಸ ಕಾರಿನ ಹೆಸರು ನೋಂದಣಿ.. ಇದೇ ಅದು?, ಪ್ರತಿಸ್ಪರ್ಧಿಗಳಿಗೆ ಶುರುವಾಯ್ತು ನಡುಕ!

ಭಾರತದಲ್ಲಿ ಟಾಟಾ (Tata) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಜನಪ್ರಿಯತೆ ಗಳಿಸಿದೆ. ಅದರ ಕಾರುಗಳು ಆಕರ್ಷಕ ವೈಶಿಷ್ಟ್ಯ, ವಿನ್ಯಾಸ ಹಾಗೂ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವುದರಿಂದ ಹೆಚ್ಚಿನ ಜನರು, ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ, ಕಂಪನಿಯು ತನ್ನ ಮುಂಬರುವ ಹೊಸ ಮಾದರಿಗಳಿಗೆ ಹೆಸರನ್ನು ನೋಂದಣಿ ಮಾಡಿದೆ.

ಟಾಟಾ ಮೋಟಾರ್ಸ್, ಎಲೆಕ್ಟ್ರಿಕ್ ಸೇರಿದಂತೆ ವಿವಿಧ ಹೊಸ ಕಾರು ಮಾದರಿಗಳನ್ನು
ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಾಕಷ್ಟು ಸಿದ್ಧತೆ ನಡೆಸುತ್ತಿದೆ. ಇತ್ತೀಚೆಗೆ ಕಂಪನಿಯು ಫ್ರೆಸ್ಟ್ (Frest) ಹಾಗೂ ಅಜುರಾ (Azura) ಹೆಸರನ್ನು ಟ್ರೇಡ್ ಮಾರ್ಕ್ ಮಾಡಿದೆ. ಈ ಹೆಸರನ್ನು ಟಾಟಾ ಯಾವ ಕಾರಿಗೆ ಬಳಕೆ ಮಾಡುತ್ತದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.

Tata: ಟಾಟಾದಿಂದ ಹೊಸ ಕಾರಿನ ಹೆಸರು ನೋಂದಣಿ.. ಇದೇ ಅದು?, ಪ್ರತಿಸ್ಪರ್ಧಿಗಳಿಗೆ ಶುರುವಾಯ್ತು ನಡುಕ!

ಆದರೂ, ಉತ್ಪಾದನೆಗೆ ಸಿದ್ದವಾಗಿರುವ ಕರ್ವ್ವ್ (Curvv) ಕಾನ್ಸೆಪ್ಟ್ ಆಧಾರಿತ ಎಸ್‌ಯುವಿಗೆ ಬಳಸಬಹುದು ಎಂದು ಅಂದಾಜಿಸಲಾಗಿದೆ. ಕೆಲವೊಬ್ಬರ ಪ್ರಕಾರ, ಈ ಕರ್ವ್ವ್ ಕಾರಿಗೆ ಅಜುರಾ ಎಂದು ಹೆಸರು ಇಡಬಹುದು. ನೂತನ ಕರ್ವ್ವ್ ಮುಂದಿನ ವರ್ಷವೇ ಭಾರತದಲ್ಲಿ ಬಿಡುಗಡೆಯಾಗಬಹುದು. ನಾಳೆ, ಲಾಂಚ್ ಆಗಲಿರುವ ನವೀಕರಣಗೊಂಡಿರುವ (ಇಂಧನ ಚಾಲಿತ) ನೆಕ್ಸಾನ್ ಎಸ್‌ಯುವಿ ಮತ್ತು ನೆಕ್ಸಾನ್ ಇವಿ, ಕರ್ವ್ವ್ ವಿನ್ಯಾಸವನ್ನು ಆಧರಿಸಿವೆ.

ಟಾಟಾ ಕಂಪನಿ, ಕರ್ವ್ವ್ ಕಾನ್ಸೆಪ್ಟ್ ಎಸ್‌ಯುವಿಯನ್ನು ಈ ವರ್ಷದ ಜನವರಿ ತಿಂಗಳಲ್ಲಿ ನಡೆದ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಮಾಡಿತ್ತು. ಅಂದಿನಿಂದಲೇ ಸಖತ್ ಕ್ರೇಜ್ ಹುಟ್ಟುಹಾಕಿದೆ. ಕರ್ವ್ವ್ ಕಾರು, ಮುಂದಿನ ವರ್ಷದ ಆರಂಭದಲ್ಲಿ (2024) ಎಲೆಕ್ಟ್ರಿಕ್ ರೂಪದಲ್ಲಿ ಬರಲಿದೆ. ಆ ಬಳಿಕ, ಮರು ವರ್ಷ (2025) ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ.

Tata: ಟಾಟಾದಿಂದ ಹೊಸ ಕಾರಿನ ಹೆಸರು ನೋಂದಣಿ.. ಇದೇ ಅದು?, ಪ್ರತಿಸ್ಪರ್ಧಿಗಳಿಗೆ ಶುರುವಾಯ್ತು ನಡುಕ!

ಇಂಧನ ಚಾಲಿತ ಕರ್ವ್ವ್ ಎಸ್‌ಯುವಿ ಕಂಪನಿಯ 'ಜನರೇಷನ್2 ಪ್ಲಾಟ್‌ಫಾರ್ಮ್' ಆಧರಿಸಿದ್ದು, 1.2 ಲೀಟರ್ TGDi ಪೆಟ್ರೋಲ್ ಎಂಜಿನ್ ಪಡೆದಿರುವ ನೀರಿಕ್ಷೆಯಿದ್ದು, 125 bhp ಗರಿಷ್ಠ ಪವರ್ ಹಾಗೂ 225 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಎಮಿಷನ್ ಮಾನದಂಡ ಹಾಗೂ ಇ20 ಫ್ಯುಯೆಲ್ (20% ಎಥೆನಾಲ್ & 80% ಪೆಟ್ರೋಲ್) ಬೆಂಬಲಿಸುವ ಎಂಜಿನ್ ಒಳಗೊಂಡಿರುವ ಸಾಧ್ಯತೆಯಿದೆ.

ಎಲೆಕ್ಟ್ರಿಕ್ ಚಾಲಿತ ಕರ್ವ್ವ್ ಕಾರು, ಸಂಪೂರ್ಣ ಚಾರ್ಜಿನಲ್ಲಿ 400 - 500 km ರೇಂಜ್ ನೀಡಬಹುದು ಎಂದು ಹೇಳಲಾಗಿದೆ. ಕರ್ವ್ವ್ ಪೆಟ್ರೋಲ್, ಎಲೆಕ್ಟ್ರಿಕ್ ರೂಪಾಂತರಗಳು ಬಹುತೇಕ ಹೋಲಿಕೆಯಾಗುವ ವೈಶಿಷ್ಟ್ಯಗಳನ್ನು ಪಡೆದಿರಲಿವೆ. ಮುಖ್ಯವಾಗಿ, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ದೊಡ್ಡದಾದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಒಳಗೊಂಡಂತೆ ಹತ್ತಾರು ಫೀಚರ್ಸ್ ಹೊಂದಿರಲಿವೆ.

ಮುಂಬರಲಿವ ಈ ಕಾರಿನ ಬೆಲೆ ವಿಚಾರವಾಗಿ ಯಾವುದೇ ಮಾಹಿತಿ ಇಲ್ಲ. ಕೆಲವೊಂದು ಮಾಹಿತಿ ಪ್ರಕಾರ, ಎಲೆಕ್ಟ್ರಿಕ್ ಚಾಲಿತ ಕರ್ವ್ವ್ ರೂ.20 ಲಕ್ಷ ಹಾಗೂ ಪೆಟ್ರೋಲ್ ಚಾಲಿತ ಕಾರು, ರೂ.10.50 ಲಕ್ಷ ದರದಲ್ಲಿ ಗ್ರಾಹಕರಿಗೆ ಸಿಗಲಿದೆ ಎಂದು ಅಂದಾಜಿಸಲಾಗಿದೆ. ಕಳೆದ ಜುಲೈ ತಿಂಗಳು, ಮೊದಲ ಬಾರಿಗೆ ಈ ಎಸ್‌ಯುವಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡು ಬಂದಿತ್ತು. ಆ ಚಿತ್ರಗಳು ಇಂಟರ್ನೆಟ್ ನಲ್ಲಿ ಸೋರಿಕೆಯಾಗಿದ್ದವು.

ಒಟ್ಟಾರೆಯಾಗಿ, ಟಾಟಾ ಮುಂಬರುವ ಹೊಸ ಕಾರು ಮಾದರಿಗಳಿಗೆ ಹೆಸರನ್ನು ಟ್ರೇಡ್ ಮಾರ್ಕ್ ಮಾಡಿದೆ. ಇದನ್ನು ಗಮನಿಸದಾಗ ಅದ್ಬುತ ಕೊಡುಗೆಗಳನ್ನು ಕಂಪನಿಯು ಗ್ರಾಹಕರಿಗೆ ನೀಡಲು ಹೊರಟಿದೆ ಎಂದು ಸುಲಭವಾಗಿ ಹೇಳಬಹುದು. ಈಗಾಗಲೇ ಟಾಟಾ ಕಾರುಗಳ ವಿನ್ಯಾಸ ಹಾಗೂ ವೈಶಿಷ್ಟ್ಯಗಳು ಯುವ ಖರೀದಿದಾರರನ್ನು ಆಕರ್ಷಿಸುತ್ತಿವೆ. ಈ ಮೂಲಕ ಕಂಪನಿ ವಾಹನಗಳಿಗೆ ಹೆಚ್ಚಿನ ಬೇಡಿಕೆ ಬರಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, September 13, 2023, 13:48 [IST]
English summary
Tata motors trademarks azura name full details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+