ವಿದೇಶಿ ಕಾರುಗಳಿಗೆ ಸೆಡ್ಡು ಹೊಡೆದು ಎಸ್‍ಯುವಿಗಳ ಮಾರಾಟದಲ್ಲಿ ನಂ.1 ಸ್ಥಾನಕ್ಕೇರಿದ ಟಾಟಾ ನೆಕ್ಸಾನ್

ಟಾಟಾ ನೆಕ್ಸಾನ್ (Tata Nexon) ಮಾದರಿಯು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ಕಾಂಪ್ಯಾಕ್ಟ್ ಎಸ್‍ಯುವಿ ಭಾರತೀಯ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಸ್ವದೇಶಿ ಕಾರು ತಯಾರಕರಾದ ಟಾಟಾ ಮೋಟಾರ್ಸ್ ಈ ಕಾರನ್ನು ಹೆಚ್ಚು ಪೈಪೋಟಿ ಇರುವ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ 2017ರಲ್ಲಿ ಬಿಡುಗಡೆಗೊಳಿಸಿತು.

ಟಾಟಾ ನೆಕ್ಸಾನ್ 2017 ರಲ್ಲಿ ಪ್ರಾರಂಭವಾದಾಗಿನಿಂದ ಭಾರತೀಯ ವಾಹನ ತಯಾರಕರಿಗೆ ವಾಲ್ಯೂಮ್ ಜನರೇಟರ್ ಆಗಿದೆ. ಟಾಟಾ ನೆಕ್ಸಾನ್ ಬಿಡುಗಡೆಯಾದ ಆರಂಭದಲ್ಲಿ ನಿಧಾನಗತಿಯಲ್ಲಿ ಸಾಗಿತು. ಸ್ವದೇಶಿ ತಯಾರಕರು 2020ರ ಆರಂಭದಲ್ಲಿ ನೆಕ್ಸಾನ್‌ನ ಹೆಚ್ಚು ನವೀಕರಿಸಿದ ಆವೃತ್ತಿಯನ್ನು ತಂದರು ಮತ್ತು ಅಂದಿನಿಂದ ನೆಕ್ಸಾನ್ ನಿಜವಾಗಿಯೂ ಮಾರಾಟದಲ್ಲಿ ಭಾರೀ ಏರಿಕೆಯನ್ನು ಕಂಡಿತು. ಎರಡು ವರ್ಷಗಳ ಹಿಂದೆ, ಟಾಟಾ ನೆಕ್ಸಾನ್ ದೇಶದಲ್ಲಿ ನಾಲ್ಕನೇ ಹೆಚ್ಚು ಮಾರಾಟವಾದ ಪ್ರಯಾಣಿಕ ವಾಹನವಾಗಿ ಹೊರಹೊಮ್ಮಿತು.

ಎಸ್‍ಯುವಿಗಳ ಮಾರಾಟದಲ್ಲಿ ನಂ.1 ಸ್ಥಾನಕ್ಕೇರಿದ ಟಾಟಾ ನೆಕ್ಸಾನ್

2022ರಲ್ಲಿ ಹ್ಯುಂಡೈ ಕ್ರೆಟಾ ಮತ್ತು ಮಾರುತಿ ಸುಜುಕಿ ಬ್ರೆಝಾವನ್ನು ಸೋಲಿಸುವ ಮೂಲಕ ಸುಲಭವಾಗಿ ಎಸ್‍ಯುವಿ ಮಾರಾಟದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 2022ರ ವರ್ಷದಲ್ಲಿ ನೆಕ್ಸಾನ್ ಮಾದರಿಯ ಒಟ್ಟು 1,68,278 ಯುನಿಟ್ ಗಳು ಮಾರಾಟವಾಗಿವೆ. ಇದು ಸ್ವಿಫ್ಟ್‌ಗಿಂತ ಕೇವಲ 8,000 ಯೂನಿಟ್‌ಗಳಿಗಿಂತಲೂ ಕಡಿಮೆಯಾಗಿದೆ, ಅತಿ ಹೆಚ್ಚು ಮಾರಾಟವಾದ ಪ್ರಯಾಣಿಕರ ಕಾರುಗಳ ವಿಭಾಗದಲ್ಲಿ ನೆಕ್ಸಾನ್ ಮೊದಲ ಹತ್ತರಲ್ಲಿ ಮೊದಲ ಮಾರುತಿ ಸುಜುಕಿಯೇತರ ಮಾದರಿಯಾಗಿದೆ. ಅದರ ಯಶಸ್ಸಿಗೆ ಒಂದು ಪ್ರಮುಖ ಕಾರಣವೆಂದರೆ ದೃಢವಾದ ನಿರ್ಮಾಣ ಗುಣಮಟ್ಟವಾಗಿದೆ.

ಅಲ್ಲದೇ ನೆಕ್ಸಾನ್ ಭಾರತದಲ್ಲಿ ಖರೀದಿಸಬಹುದಾದ ಅತ್ಯಂತ ಕೈಗೆಟುಕುವ ಕಾರುಗಳಲ್ಲಿ ಒಂದಾಗಿದೆ, ಟಾಟಾ ಮೋಟಾರ್ಸ್ ಹಲವಾರು ಕಾರಣಗಳಿಂದಾಗಿ ನೆಕ್ಸಾನ್ ಅನ್ನು ದೀರ್ಘಕಾಲದಿಂದಲೂ ಹೆಚ್ಚು ಮಾರಾಟವಾಗುತ್ತಿರುವ ಮಾದರಿಗಳಲ್ಲಿ ಒಂದಾಗಿದೆ. ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ನಲ್ಲಿ ಐದು ಸ್ಟಾರ್ ರೇಟಿಂಗ್ ಅನ್ನು ಪಡೆದ ಮಾದರಿಯಾಗಿದೆ. 2017ರ ಕೊನೆಯಲ್ಲಿ ಬಿಡುಗಡೆಯಾದ ನಂತರ ಸಬ್-ಫೋರ್-ಮೀಟರ್ ಎಸ್‍ಯುವಿಯು ಗ್ರಾಹಕರ ಗಮನ ಸೆಳೆದುಕೊಂಡಿತು. 2020ರ ಆರಂಭದಲ್ಲಿ ಫೇಸ್ ಲಿಫ್ಟ್ ನೆಕ್ಸಾನ್ ಆಗಮನವು ಮಾರಾಟವನ್ನು ಮತ್ತಷ್ಟು ಹೆಚ್ಚಿಸಿತು.

ಈ ಟಾಟಾ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‍ಯುವಿ ಬೇಡಿಕೆಯು ಹೆಚ್ಚಾಗುತ್ತಿದೆ. ಈ ಟಾಟಾ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‍ಯುವಿಯ ಪ್ಯೂರ್ ಸಿಲ್ವರ್ ಬಣ್ಣದ ಆಯ್ಜೆಯನ್ನು ಇತ್ತೀಚೆಗೆ ಸ್ಥಗಿತಗೊಳಿಸಿತ್ತು ಇದು ಎಲ್ಲಾ ರೂಪಾಂತರಗಳೊಂದಿಗೆ ಲಭ್ಯವಿತ್ತು. ಇನ್ನು ಈ ಬಣ್ಣವನ್ನು ಹೊರತುಪಡಿಸಿ ಟಾಟಾ ನೆಕ್ಸಾನ್ ಅಟ್ಲಾಸ್ ಬ್ಲ್ಯಾಕ್, ಪೊಲಿಜ್ ಗ್ರೀನ್, ಕ್ಯಾಲ್ಗರಿ ವೈಟ್, ಫ್ಲೇಮ್ ರೆಡ್ ಮತ್ತು ಡೇಟೋನಾ ಗ್ರೇ ಎಂಬ ಬಣ್ಣಗಳಲ್ಲಿ ಲಭ್ಯವಿರಲಿದೆ. ಈ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‌ಯುವಿಯು ದೇಶದಲ್ಲೇ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಇದು ಒಂದಾಗಿದೆ.

ಇನ್ನು ಕಳೆದ ತಿಂಗಳ ಮಾರಾಟದಲ್ಲಿ ಟಾಟಾ ನೆಕ್ಸಾನ್ ತನ್ನ ಪ್ರಬಲ ಪ್ರತಿಸ್ಪರ್ಧಿ ಹ್ಯುಂಡೈ ವೆನ್ಯೂ ಸೇರಿದಂತೆ ಇತರ ಎಲ್ಲಾ ಮಾದರಿಗಳನ್ನು ಹಿಂದಿಕ್ಕಿಅಗ್ರಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಜನಪ್ರಿಯ ಮಾದರಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ. ಇದರಿಂದ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಹೊಸ ಅಪ್‌ಡೇಟ್ ಗಳನ್ನು ಪಡೆದುಕೊಂಡಿತ್ತು. ಟಾಟಾ ನೆಕ್ಸಾನ್ ಎಸ್‍ಯುವಿಯ ಎಂಜಿನ್ ಬಗ್ಗೆ ಹೇಳುವುದಾದರೆ, ಇದರಲ್ಲಿ 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

ಈ ಎಂಜಿನ್ 118 ಬಿಹೆಚ್‍ಪಿ ಪವರ್ ಮತ್ತು 170 ಎನ್ಎಂ ಟಾರ್ಕ್ ಉತ್ಪಾದಿಸುಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಜೊತೆಗೆ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಕೂಡ ಹೊಂದಿದೆ, ಈ ಎಂಜಿನ್ 108 ಬಿಹೆಚ್‍ಪಿ ಪವರ್ ಮತ್ತು 260 ಎನ್ಎಂ ಟಾರ್ಕ್ ಉತ್ಪಾದಿಸುಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎರಡು ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಇನ್ನು ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಹೆಚ್ಚು ಪೈಪೋಟಿ ಇರುವುದರಿಂದ ಟಾಟಾ ತನ್ನ ನೆಕ್ಸಾನ್ ಕಾರಿನ ಇಂಟಿರಿಯರ್ ಅನ್ನು ಇತ್ತೀಚೆಗೆ ನವೀಕರಿಸಿತು.

ಇದರ ಇಂಟಿರಿಯರ್ ಅಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ನಿಯಂತ್ರಿಸಲು ಬಳಸಲಾಗಿದ್ದ ಎಸಿ ವೆಂಟ್ ಗಳ ಅಡಿಯಲ್ಲಿ ಇರಿಸಲಾಗಿರುವ ಫಿಸಿಕಲ್ ಬಟನ್ ಗಳನ್ನು ತೆಗೆದುಹಾಕಿದೆ. ಬದಲಾಗಿ ಟಾಟಾ ಅಲ್ಲಿ ನೆಕ್ಸಾನ್ ಲೋಗೊವನ್ನು ಇರಿಸಿದೆ.ಇನ್ನು ರೆಡಿಯೋವನ್ನು ನಿಯಂತ್ರಿಸಲು ಇದ್ದ ರೋಟರಿ ಡಯಲ್‌ಗಳನ್ನು ಸಹ ತೆಗೆದುಹಾಕಲಾಗಿದೆ, ಇನ್ಫೋಟೈನ್‌ಮೆಂಟ್ ಯುನಿಟ್'ಗೆ ಸಂಯೋಜಿಸಲಾಗಿದೆ. ವಾಲ್ಯೂಮ್ ನಾಬ್ ಅನ್ನು ಮ್ಯೂಟ್ ಮತ್ತು ಪವರ್ ಆಫ್ ಕಾರ್ಯಗಳಿಗೆ ಸಹ ಬಳಸಬಹುದು.ಇದರಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಫೀಚರ್ ಅನ್ನು ಒಳಗೊಂಡಿದೆ.

Article Published On: Monday, January 9, 2023, 17:55 [IST]
English summary
Tata nexon becomes best selling suv in india 2022 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+