ಇಂಧನ ಚಾಲಿತ ವಾಹನಗಳಿಗೆ ಟಾಂಗ್ ಕೊಡಲು ಸಜ್ಜಾದ ಟಾಟಾ ನೆಕ್ಸಾನ್ ಇವಿ... 4 ದಿನ 4 ಸಾವಿರ ಕಿ.ಮೀ
K2K (ಕಾಷ್ಮೀರದಿಂದ- ಕನ್ಯಾಕುಮಾರಿ) ಎಂಬ ಟ್ಯಾಗ್ ಸಾಹಸಿ ಪ್ರಯಾಣಿಕರಲ್ಲಿ ಬಹಳ ಜನಪ್ರಿಯವಾಗಿದೆ. ಬೈಕರ್‌ಗಳು ಹೆಚ್ಚಾಗಿ ಅಡ್ವೆಂಚರ್ ಮೋಟಾರ್‌ಸೈಕಲ್‌ಗಳೊಂದಿಗೆ ಈ ಯಾತ್ರೆಯನ್ನು ಆರಂಭಿಸುತ್ತಾರೆ. ಸಾಮಾನ್ಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಲ್ಲಿ K2K ಟ್ರಿಪ್‌ಗಳನ್ನು ಮಾಡುತ್ತಾರೆ. ಆದರೆ ಮೊದಲ ಬಾರಿಗೆ ಎಲೆಕ್ಟ್ರಿಕ್ ಕಾರಿನ ಮೂಲಕ ಈ ಟ್ರಿಪ್ ಮಾಡಲು ಟಾಟಾ ಯೋಜಿಸಿದೆ.
ಎಲೆಕ್ಟ್ರಿಕ್ ವಾಹನಗಳಲ್ಲಿ ಅಷ್ಟು ದೂರವನ್ನು ಕ್ರಮಿಸುವುದು ತುಂಬಾ ಕಷ್ಟ. ಆದರೆ ಟಾಟಾ ಮೋಟಾರ್ಸ್ ತನ್ನ ನೆಕ್ಸಾನ್ ಇವಿ ಎಲೆಕ್ಟ್ರಿಕ್ ಕಾರಿನ ಮೂಲಕ ಅಡ್ವೆಂಚರ್ ಟ್ರಿಪ್ ಅನ್ನು ಯಶಸ್ವಿಯಾಗಿ ಮುಗಿಸಲು ಸಜ್ಜಾಗುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಕ್ರಾಂತಿಕಾರಿ ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದಾದ ಟಾಟಾ ನೆಕ್ಸಾನ್ EV ಈ ಹಿಂದೆಯು ಹಲವು ದಾಖಲೆಗಳನ್ನು ನಿರ್ಮಿಸಿದೆ. ಇದೀಗ ಈ ಸುಧೀರ್ಘ ಪ್ರಯಾಣವನ್ನು ಅತಿ ಕಡಿಮೆ ಅವಧಿಯಲ್ಲಿ ಮುಗಿಸಿ ಎಲೆಕ್ಟ್ರಿಕ್ ಕಾರು ಈ ಶ್ರೇಣಿಯಲ್ಲಿ ಮತ್ತೊಂದು ದಾಖಲೆ ನಿರ್ಮಿಸಲಿದೆ.

ಟಾಟಾ ನೆಕ್ಸಾನ್ EV ಎಲೆಕ್ಟ್ರಿಕ್ ತನ್ನ K2K ಪ್ರಯಾಣವನ್ನು ಫೆಬ್ರವರಿ 25 ರಂದು ಪ್ರಾರಂಭಿಸಲಿದೆ. ಪ್ರಯಾಣವು ಶ್ರೀನಗರದಿಂದ ಪ್ರಾರಂಭವಾಗಿ ಕನ್ಯಾಕುಮಾರಿಯಲ್ಲಿ ಕೊನೆಗೊಳ್ಳುತ್ತದೆ. ಕೇವಲ 4 ದಿನಗಳಲ್ಲಿ ಪ್ರಯಾಣವನ್ನು ಪೂರ್ಣಗೊಳಿಸಲು ಯೋಜಿಸಲಾಗಿದೆ. ಈ 4 ದಿನಗಳಲ್ಲಿ 4,000 ಕಿ.ಮೀ ದೂರ ಕ್ರಮಿಸಬೇಕು. ಹಾಗಾಗಿ ಪ್ರತಿದಿನ 1,000 ಕಿ.ಮೀ ಪ್ರಯಾಣಿಸಲು ಯೋಜಿಸಲಾಗಿದ್ದು, ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ನಡುವೆ ಚಾರ್ಜ್ ಮಾಡಲು ಮಾತ್ರ ನಿಲ್ಲುತ್ತದೆ ಎಂದು ತಿಳಿದುಬಂದಿದೆ.
ಈ ಟ್ರಿಪ್‌ನ ಮೂಲಕ ಟಾಟಾ ನೆಕ್ಸಾನ್ EV ಎಲೆಕ್ಟ್ರಿಕ್ ಕಾರು K2K ಪ್ರಯಾಣವನ್ನು ಪೂರ್ಣಗೊಳಿಸಿದ ಅತ್ಯಂತ ವೇಗದ ಎಲೆಕ್ಟ್ರಿಕ್ ವಾಹನ ಎಂಬ ದಾಖಲೆಯನ್ನು ನಿರ್ಮಿಸಲಿದೆ. ಈ ಪ್ರಯಾಣದಲ್ಲಿ ಟಾಟಾ ಮೋಟಾರ್ಸ್‌ನ ಪ್ರಮುಖ ಮಾದರಿ ಹಾಗೂ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಹೊಂದಿರುವ ನೆಕ್ಸಾನ್ ಇವಿ ಮ್ಯಾಕ್ಸ್ ಎಲೆಕ್ಟ್ರಿಕ್ ಕಾರನ್ನು ಬಳಸಲಾಗುವುದು. ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಟಾಟಾ ನೆಕ್ಸಾನ್ ಇವಿ ಎಲೆಕ್ಟ್ರಿಕ್ ಕಾರಿನ 'ಲಾಂಗ್ ರೇಂಜ್' ಆವೃತ್ತಿಯಾಗಿದೆ.

ಈ ಎಲೆಕ್ಟ್ರಿಕ್ ಕಾರ್ 40.5 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ ಬರೋಬ್ಬರಿ 453 ಕಿಲೋಮೀಟರ್ ಕ್ರಮಿಸಬಹುದು ಎಂದು ಕಂಪನಿ ಕ್ಲೈಮ್ ಮಾಡಿದೆ. ದೂರದ ಪ್ರಯಾಣಕ್ಕೆ ಇದು ಪರಿಪೂರ್ಣ ಶ್ರೇಣಿ ಎಂಬುದರಲ್ಲಿ ಸಂದೇಹವಿಲ್ಲ. 50 kW DC ವೇಗದ ಚಾರ್ಜರ್ ಅನ್ನು ಬಳಸಿ, ಈ ಎಲೆಕ್ಟ್ರಿಕ್ ಕಾರಿನ ಬ್ಯಾಟರಿಯನ್ನು ಕೇವಲ 56 ನಿಮಿಷಗಳಲ್ಲಿ ಶೇ 80 ರವರೆಗೆ ಚಾರ್ಜ್ ಮಾಡಬಹುದು.
ಆದ್ದರಿಂದ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಎಲೆಕ್ಟ್ರಿಕ್ ಕಾರು ಯೋಜಿಸಿದಂತೆ ಕಾಶ್ಮೀರದಿಂದ ಕನ್ಯಾಕುಮಾರಿ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ನಿರೀಕ್ಷೆಯಿದೆ. ಪ್ರಸ್ತುತ, ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಎಲೆಕ್ಟ್ರಿಕ್ ಕಾರಿನ ಪ್ರವೇಶ ಮಟ್ಟದ ರೂಪಾಂತರಕ್ಕೆ 16.49 ಲಕ್ಷ ರೂ. ಬೆಲೆ ಇದ್ದು, ಟಾಪ್ ವೇರಿಯೆಂಟ್ ಬೆಲೆ 18.99 ಲಕ್ಷ ರೂ. ಇವು ಎಕ್ಸ್ ಶೋ ರೂಂ ಬೆಲೆಗಳಾಗಿವೆ. ಈ ಬೆಲೆಗಳು ಗ್ರಾಹಕರಿಗೆ ಹಣಕ್ಕೆ ತಕ್ಕ ಮೌಲ್ಯದ ಉತ್ಪನ್ನವಾಗಿದೆ.

ಟಾಟಾ ನೆಕ್ಸಾನ್ EV ಮ್ಯಾಕ್ಸ್ ಎಲೆಕ್ಟ್ರಿಕ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರ XUV400, MG ZS EV ಮತ್ತು ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರುಗಳೊಂದಿಗೆ ಸ್ಪರ್ಧಿಸುತ್ತಿದೆ. K2K ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ Nexon EV Max ಎಲೆಕ್ಟ್ರಿಕ್ ಕಾರಿನ ಮಾರಾಟವು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಸದ್ಯ ಇಂಧನ ಚಾಲಿತ ಕಾರುಗಳೇ ಈ ಪ್ರಯಾಣವನ್ನು ಮಾಡಲು ಹಿಂದೇಟು ಹಾಕುತ್ತಿದ್ದರೇ ಟಾಟಾ ಮೋಟಾರ್ಸ್ ತನ್ನ ಇವಿ ಮೂಲಕ ಈ ಸಾಧನೆ ಮಾಡಲು ಹೊರಟಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications