Tata Nexon EV ಎಸ್‌ಯುವಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ... ಕಂಪನಿ ಹೇಳಿಕೆಯೇ ಫೈನಲ್!
ಟಾಟಾ ಮೋಟಾರ್ಸ್ ದೇಶದ ಜನಪ್ರಿಯ ವಾಹನ ತಯಾರಕರು, ಪ್ರಮುಖವಾಗಿ ಈ ಬ್ರಾಂಡ್‌ನ ನಿರ್ಮಾಣ ಗುಣಮಟ್ಟದಿಂದಲೇ ಹೆಚ್ಚು ಗುರ್ತಿಸಿಕೊಂಡಿದೆ. ಕಳೆದ ನಾಲ್ಕೈದು ವರ್ಷಗಳಿಂದ ಟಾಟಾದವರು ಎಲೆಕ್ಟ್ರಿಕ್ ವಿಭಾಗದಲ್ಲೂ ಸೈ ಎನಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಟಾಟಾ ನೆಕ್ಸಾನ್ ಇವಿ ಕಾರುಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಟಾಟಾ ಮೋಟಾರ್ಸ್‌ನ ಎಲೆಕ್ಟ್ರಿಕ್ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟ ಕಾಣುವ ನೆಕ್ಸಾನ್ ಇವಿ ಕಾರಿನಲ್ಲಿ ಇದೀಗ ಬೆಂಕಿ ಕಾಣಿಸಿಕೊಂಡಿದೆ. ಇತ್ತೀಚೆಗೆ, ಪುಣೆಯಲ್ಲಿ ಟಾಟಾ ನೆಕ್ಸಾನ್ ಇವಿ ಕೆಲ ಕಾರಣಾಂತರಗಳಿಂದ ಬೆಂಕಿ ಅವಘಡದಲ್ಲಿ ಸಿಲುಕಿದ್ದು, ವಿವಿಧ ವರದಿಗಳ ಪ್ರಕಾರ, Nexon EV ಯ ಪ್ರಯಾಣಿಕರು ವಾಹನದಿಂದ ಯಾವುದೇ ಹಾನಿಯಾಗದಂತೆ ಪಾರಾಗಿದ್ದಾರೆ. ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುವ ಕೆಲ ದೃಷ್ಯಗಳನ್ನು nakulbhandari149 ಎಂಬುವವರು ತಮ್ಮ YouTube ಚಾನಲ್‌ನಲ್ಲಿ ಹಂಚಿಕೊಂಡಿದ್ದಾರೆ.

ಮಾಹಿತಿಯ ಪ್ರಕಾರ ಏಪ್ರಿಲ್ 16, 2023 ರಂದು ಪುಣೆಯ ಕಟ್ರಾಜ್ ಚೌಕ್‌ನ ರಿಲಯನ್ಸ್ ಮಾರ್ಟ್ ನ ಮುಂಭಾಗದಲ್ಲಿ ಈ ಅವಘಡ ಸಂಭವಿಸಿದೆ. ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಯಿತು. ಈ ದೃಷ್ಯಗಳನ್ನು ಕೆಲವರು ಸ್ಥಳೀಯರು ಸೆರೆಹಿಡಿಯಲಾಗಿದ್ದು, ವಿಡಿಯೋ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದು ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಹೊಂದಿರುವವರನ್ನು ತುಸು ಆತಂಕಕ್ಕೆ ಸಿಲುಕಿಸಿದೆ.
ಮೊದಲಿಗೆ ಎಲೆಕ್ಟ್ರಿಕ್ ವಾಹನಗಳಲ್ಲಿ ಬೆಂಕಿ ಎಂದಕ್ಷಣ ಬ್ಯಾಟರಿ ಸಮಸ್ಯೆ ಎಂದು ಊಹಿಸಲಾಗುತ್ತದೆ. ಇಲ್ಲೂ ಕೂಡ ಅದೇ ರಿತಿ ನೆಕ್ಸಾನ್ ಇವಿ SUV ಯ ಬ್ಯಾಟರಿ ಪ್ಯಾಕ್ ಬೆಂಕಿಗೆ ಕಾರಣ ಎಂದು ನಂಬಲಾಗಿತ್ತು. ಆದರೆ ಟಾಟಾ ನೆಕ್ಸಾನ್ ಇವಿಯ ಬ್ಯಾಟರಿ ಪ್ಯಾಕ್ ಕಾರಿನ ಕೆಳಭಾಗದ ಚಾಸ್ಸಿಗೆ ಹೊಂದಿಕೆಯಾಗಿದೆ. ಆದರೆ ಇಲ್ಲಿ ನೆಕ್ಸಾನ್ ಎಸ್‌ಯುವಿಯ ಬಾನೆಟ್ ಅಡಿಯಲ್ಲಿ ಬೆಂಕಿ ಕಾಣಿಸಕೊಂಡಿದೆ, ವೀಡಿಯೊದಲ್ಲಿ ನೋಡಿದಂತೆ ಬೆಂಕಿಯು ಕಾರಿನ ಬಾನೆಟ್‌ಗೆ ಮಾತ್ರ ಸೀಮಿತವಾಗಿದೆ. ಹಾಗಾಗಿ ಇದು ಬ್ಯಾಟರಿ ಸಮಸ್ಯೆ ಅಲ್ಲ ಎಂದು ಖಚಿತಪಡಿಸಲಾಗಿದೆ.
ಒಟ್ಟಾರೆಯಾಗಿ ಇದು ಬಾನೆಟ್ ಅಡಿಯಲ್ಲಿರುವ ಮತ್ತಿತರ ಘಟಕಗಳಿಂದ ಬೆಂಕಿಗೆ ಕಾರಣವಾಗಿರಬಹುದು ಎಂದು ಹೇಳಬಹದು. ಸದ್ಯ ಟಾಟಾದವರು ವಾಹನಕ್ಕೆ ಬೆಂಕಿ ತಗುಲಲು ಮೂಲ ಕಾರಣವನ್ನು ಪತ್ತೆಹಚ್ಚುತ್ತಿದ್ದಾರೆ ಎಂದು ಭಾವಿಸಲಾಗಿದೆ. ನೋಂದಣಿ ಸಂಖ್ಯೆ ಪ್ರಕಾರ ಮಾಲೀಕರು ಈ ಎಸ್‌ಯುವಿಯನ್ನು ಖರೀದಿಸಿ ಕೇವಲ 9 ತಿಂಗಳಾಗುತ್ತಿದೆ. ಜೂನ್ 2022 ರಲ್ಲಿ ಮುಂಬೈನ ರೆಸ್ಟೋರೆಂಟ್‌ನ ಹೊರಗೆ ನಿಲ್ಲಿಸಿದ್ದ ಟಾಟಾ ನೆಕ್ಸಾನ್ EV ನಲ್ಲಿ ಇದೇ ರೀತಿ ಬೆಂಕಿ ಕಾಣಿಸಿಕೊಂಡಿತ್ತು.
ಬೆಂಕಿಯು ಕಾರಿನ ಕೆಳಭಾಗದಲ್ಲಿ ಕಾಣಿಸಿಕೊಂಡ ಕಾರಣ ಇದು ಬ್ಯಾಟರಿ ಸಮಸ್ಯೆ ಎಂದು ಖಚಿತವಾಗಿತ್ತು. ಘಟನೆಯ ನಂತರ, ಟಾಟಾ ಮೋಟಾರ್ಸ್ ಅಧಿಕೃತ ಹೇಳಿಕೆಯನ್ನು ನೀಡಿತ್ತು. ಈ ವಿಷಯವನ್ನು ವಿವರವಾಗಿ ತನಿಖೆ ಮಾಡಿ ಉತ್ಪನ್ನವನ್ನು ಸಂಪೂರ್ಣವಾಗಿ ಪರೀಕ್ಷಿಸಲಾಗುತ್ತದೆ. ಇದೊಂದು ಪ್ರತ್ಯೇಕ ಘಟನೆಯಾಗಿದೆ ಎಂದು ತಯಾರಕರು ಒತ್ತಿ ಹೇಳಿದ್ದರು. ಇದೀಗ ಈ ಘಟನೆಯನ್ನು ಕೂಡ ಕಂಪನಿಯವರು ಪ್ರತ್ಯೇಕವಾಗಿ ಪರಿಶೀಲಿಸಿ ಮಾಲೀಕರಿಗೆ ಯಾವರೀತಿಯ ಸಮಾಧಾನವನ್ನು ನೀಡಲಿದ್ದಾರೆ ಎಂಬುದನ್ನು ತಿಳಿಯಲು ಕಾದುನೋಡಬೇಕಿದೆ.
ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರುಗಲು ಮಾತ್ರವಲ್ಲದೇ ಇತ್ತೀಚೆಗೆ ಟಾಟಾದವರ ಇಂಧನ ಚಾಲಿತ ಕಾರುಗಳಲ್ಲಿಯೂ ಬೆಂಕಿ ಕಾಣಿಸಿಕೊಂಡ ಘಟನೆಗಳು ದಾಖಲಾಗಿವೆ. ನೆಕ್ಸಾನ್ ಇವಿ ಹೊರತುಪಡಿಸಿ, ಎರಡು ಟಾಟಾ ಪಂಚ್ ಎಸ್‌ಯುವಿಗಳು ಚಾಲನೆಯಲ್ಲಿದ್ದಾಗಲೇ ಬೆಂಕಿ ಹೊತ್ತಿಕೊಂಡಿದ್ದವು. 11 ತಿಂಗಳ ಹಳೆಯ ಹ್ಯಾರಿಯರ್ ರಸ್ತೆಯ ಮಧ್ಯದಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಈ ಎಲ್ಲಾ ಘಟನೆಗಳಿಗೂ ವಿವಿಧ ಕಾರಣಗಳಿವೆ, ಇತ್ತೀಚೆಗೆ ಟಾಟಾ ಉತ್ತರಿಸಿ ಆಫ್ಟರ್ ಮಾರ್ಕೆಟ್ ಕಳಪೆ ಗುಣಮಟ್ಟದ ವೈರಿಂಗ್ ಅನ್ನು ಬಳಸದಿರಿ ಎಂದು ಹೇಳಿತ್ತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications