Tata Nexon ev: ಮೈಲೇಜ್ ಆತಂಕಕ್ಕೆ ಫುಲ್‌ಸ್ಟಾಪ್, ಟಾಟಾ ಅದ್ಬುತ ಫೀಚರ್: ಕಾರಿನಿಂದ ಕಾರಿಗೆ ಚಾರ್ಜ್
ಹೊಸ ಟಾಟಾ ನೆಕ್ಸಾನ್ (Tata Nexon) ಫೇಸ್‌ಲಿಫ್ಟ್ ಜೊತೆಗೆ, ಟಾಟಾ ಮೋಟಾರ್ಸ್ ಗುರುವಾರವೇ ತನ್ನ ಫೇಸ್‌ಲಿಫ್ಟೆಡ್ ಟಾಟಾ ನೆಕ್ಸಾನ್ ಇವಿಯನ್ನು (Tata Nexon.ev) ಸಹ ಬಿಡುಗಡೆ ಮಾಡಿದೆ. ಈ ಹೊಸ ಟಾಟಾ ನೆಕ್ಸಾನ್ ಇವಿಯಲ್ಲಿ ಈಗ ಅದ್ಬುತ ಚಾರ್ಜಿಂಗ್ ಆಯ್ಕೆ ನೀಡಲಾಗಿದೆ.
ಇಂಧನ ಚಾಲಿತ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಆವೃತ್ತಿಯು ರೂ. 8.10 ಲಕ್ಷದಿಂದ (ಎಕ್ಸ್ ಶೋ ರೂಂ) ಆರಂಭವಾದರೆ, ಹೊಸ ಟಾಟಾ ನೆಕ್ಸಾನ್ ಇವಿ ಬೆಲೆಯು ರೂ. 14.74 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗಿ ರೂ. 19.94 ಲಕ್ಷದವರೆಗೆ (ಎಕ್ಸ್ ಶೋ ರೂಂ) ಹೋಗುತ್ತದೆ. Nexon EV ಒಟ್ಟು ಆರು ವಿಭಿನ್ನ ರೂಪಾಂತರಗಳನ್ನು ಒಳಗೊಂಡಿದ್ದು, ವ್ಯಾಪಕ ಶ್ರೇಣಿಯನ್ನು ಹೊಂದಿದೆ.

ವಾಹನದಿಂದ ವಾಹನಕ್ಕೆ (V2V) ಚಾರ್ಜಿಂಗ್: ಟಾಟಾ ನೆಕ್ಸಾನ್ ಇವಿ ಒಂದು ಅದ್ಭುತವಾದ V2V ಚಾರ್ಜಿಂಗ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ವೈಶಿಷ್ಟ್ಯವು ಇತರ ಹೊಂದಾಣಿಕೆಯ EV ಕಾರುಗಳನ್ನು ರೀಚಾರ್ಜ್ ಮಾಡಲು ಸಪೋರ್ಟ್ ಮಾಡುತ್ತದೆ. ಈ ವೈಶಿಷ್ಟ್ಯವು ಇತರ ಟಾಟಾ ನೆಕ್ಸಾನ್ ಕಾರುಗಳು ನಿಮ್ಮ ಸುತ್ತಮುತ್ತಲಿನಲ್ಲಿ ಇದ್ದಾಗ ಯಾವುದೇ ರೇಂಜ್ ಆತಂಕವಿಲ್ಲದೇ ಪ್ರಯಾಣಿಸುವಂತೆ ಮಾಡುತ್ತದೆ.
ವೆಹಿಕಲ್ ಟು ಲೋಡ್ (V2L) ತಂತ್ರಜ್ಞಾನ: V2L ತಂತ್ರಜ್ಞಾನದೊಂದಿಗೆ ನೆಕ್ಸಾನ್ ಇವಿ ಬಹುಮುಖ ಪವರ್ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತದೆ. ಎಲೆಕ್ಟ್ರಿಕಲ್ ಕ್ಯಾಂಪಿಂಗ್ ಉಪಕರಣಗಳು, ಪವರ್ ಟೂಲ್ಸ್ ಮತ್ತು ವಿವಿಧ ಗ್ರಾಹಕ ಎಲೆಕ್ಟ್ರಾನಿಕ್ಸ್ ಸೇರಿದಂತೆ ಬಾಹ್ಯ ಸಾಧನಗಳು ಮತ್ತು ಉಪಕರಣಗಳಿಗೆ ಶಕ್ತಿ ನೀಡಲು ಅದರ HV ಬ್ಯಾಟರಿಯಿಂದ ಸಂಗ್ರಹಿಸಲಾದ ಶಕ್ತಿಯನ್ನು ಬಳಸಿಕೊಳ್ಳುತ್ತದೆ.

ಹೆಚ್ಚುವರಿ ವೈಶಿಷ್ಷ್ಯಗಳು: ಹೆಚ್ಚಿನ ಅನುಕೂಲಕ್ಕಾಗಿ ಆಟೋ ಹೋಲ್ಡ್ ಜೊತೆಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಬ್ಲೈಂಡ್ ಸ್ಪಾಟ್ ವ್ಯೂ ಮಾನಿಟರ್‌ನೊಂದಿಗೆ 360° ಸರೌಂಡ್ ವ್ಯೂ ಕ್ಯಾಮೆರಾ, 6 ಏರ್‌ಬ್ಯಾಗ್‌ಗಳು, i-VBAC ಯೊಂದಿಗೆ ESP, ಸವಾಲಿನ ರಸ್ತೆ ಪರಿಸ್ಥಿತಿಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸುವುದು, ತುರ್ತು ಸಹಾಯಕ್ಕಾಗಿ SOS ಕರೆಯನ್ನು ಸಹ ಪರಿಚಯಿಸಲಾಗಿದೆ.
ಪವರ್ ಹೇಗಿದೆ: Nexon EV ಅನ್ನು ಎರಡು ಆವೃತ್ತಿಗಳಲ್ಲಿ ಪರಿಚಯಿಸಲಾಗಿದೆ. ಮಧ್ಯಮ ಶ್ರೇಣಿ ಮತ್ತು ದೀರ್ಘ ಶ್ರೇಣಿ (Medium Range and Long Range), ಕ್ರಮವಾಗಿ ಇವೆರಡು 30kWh ಮತ್ತು 40.5kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿವೆ. ಮೊದಲನೆಯದು ಒಂದೇ ಚಾರ್ಜ್‌ನಲ್ಲಿ 325 ಕಿ.ಮೀಗಳ ರೇಂಜ್ ನೀಡುತ್ತದೆ, ಎರಡನೆಯದು ಬರೋಬ್ಬರಿ 465 ಕಿ.ಮೀ ರೇಂಜ್ ನೀಡುತ್ತದೆ.

ಇವರಡರ ನಡುವೆ ಕೇವಲ ಕಿ.ಮೀಗಳ ರೇಂಜ್ ಮಾತ್ರ ವ್ಯತ್ಯಾಸ ಬರುತ್ತದೆ ಉಳಿದಂತೆ ಪವರ್‌ಟ್ರೇನ್‌ನಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಹಳೆಯ ನೆಕ್ಸಾನ್ ಇವಿಗೆ ಹೋಲಿಸಿದರೆ ಟಾರ್ಕ್ ಅನ್ನು 250Nm ನಿಂದ 215Nm ಗೆ ಸ್ವಲ್ಪ ಕಡಿಮೆ ಮಾಡಲಾಗಿದೆಯಾದರೂ, ಟಾಪ್ ಸ್ಪೀಡ್ 130 ಕಿ.ಮೀ ನಿಂದ 150 ಕಿ.ಮೀಗೆ ಹೆಚ್ಚಿಸಲಾಗಿದೆ. ಈಗ ಕೇವಲ 8.9 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.
ಇಂಟೀರಿಯರ್ ನೊಡುವುದಾದ್ರೆ, ಟಾಟಾ ನೆಕ್ಸಾನ್ EV ಯ ಫೇಸ್‌ಲಿಫ್ಟೆಡ್ ಆವೃತ್ತಿಯೊಳಗೆ ಹೊಸ ಲೇಯರ್ಡ್ ಡ್ಯಾಶ್‌ಬೋರ್ಡ್, ದೊಡ್ಡ 10.25-ಇಂಚಿನ ಇನ್ಫೋಟೈನ್‌ಮೆಂಟ್ ಯುನಿಟ್, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೊಸ ಟು-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಒಳಗೊಂಡಿರುವ ಪ್ರಕಾಶಿತ ಲೋಗೋದೊಂದಿಗೆ ಹೊಸ ಒಳಾಂಗಣವನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications