Tata Nexon EV: ಐತಿಹಾಸಿಕ ಮೈಲಿಗಲ್ಲು ನಿರ್ಮಿಸಿದ ಟಾಟಾ ನೆಕ್ಸಾನ್ ಇವಿ.. ಇದರಿಂದಲೇ ಚರಿತ್ರೆ ಆರಂಭ

ಕೇಂದ್ರ ಸರ್ಕಾರ ಶೂನ್ಯ ಹೊರಸೂಸುವಿಕೆಯ ವಾಹನಗಳ ಮೂಲಕ ಶುದ್ದ ಪರಿಸರ ನಿರ್ಮಾಣ ಮಾಡಲು ಹೊರಟಿದೆ. ಅದರ ಭಾಗವಾಗಿ ವಿವಿಧ ವಾಹನ ತಯಾರಕ ಕಂಪನಿಗಳು ಹಲವು ಎಲೆಕ್ಟ್ರಿಕ್ ಕಾರುಗಳನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿವೆ. ಇದೀಗ, ಟಾಟಾ (Tata) ಕಂಪನಿ ನೆಕ್ಸಾನ್ ಇವಿ ಮಾರಾಟದಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದೆ.

ದೇಶೀಯ ಮಾರುಕಟ್ಟೆಯಲ್ಲಿ ಟಾಟಾ, 2020ರಲ್ಲಿ ನೆಕ್ಸಾನ್ ಇವಿಯನ್ನು ಬಿಡುಗಡೆ ಮಾಡಿತ್ತು. ಅಂದಿನಿಂದ ಇಂದಿನವರೆಗೆ ಬರೋಬ್ಬರಿ 50,000 ಯುನಿಟ್ ಕಾರುಗಳನ್ನು ಸೇಲ್ ಮಾಡಿದೆ. ಈ ಮೂಲಕ ಭಾರತದ ಎಲೆಕ್ಟ್ರಿಕ್ ಕಾರು, ವಿಭಾಗದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಕಾರೆಂಬ ಎಂಬ ಹೆಗ್ಗಳಿಕೆಗೆ ನೆಕ್ಸಾನ್ ಇವಿ ಪಾತ್ರವಾಗಿದೆ. ಕಂಪನಿಯ ಒಟ್ಟು ನೆಕ್ಸಾನ್ ಎಸ್‌ಯುವಿ (ಇಂಧನ ಚಾಲಿತ ಒಳಗೊಂಡಂತೆ) ಸೇಲ್ ನಲ್ಲಿ ನೆಕ್ಸಾನ್ ಇವಿ 15% ಪಾಲನ್ನು ಹೊಂದಿದೆ.

Tata Nexon EV: ಐತಿಹಾಸಿಕ ಮೈಲಿಗಲ್ಲು ನಿರ್ಮಿಸಿದ ಟಾಟಾ ನೆಕ್ಸಾನ್ ಇವಿ.. ಇದರಿಂದಲೇ ಚರಿತ್ರೆ ಆರಂಭ

ಟಾಟಾ, ನೆಕ್ಸಾನ್ ಇವಿಯನ್ನು ದೇಶಾದ್ಯಂತ 500ಕ್ಕೂ ಹೆಚ್ಚು ನಗರಗಳಲ್ಲಿ ಸೇಲ್ ಮಾಡುತ್ತದೆ. ಭಾರತದ ವಿವಿಧ ರಸ್ತೆಗಳಲ್ಲಿ ಈವರೆಗೆ ಮಾರಾಟವಾದ ನೆಕ್ಸಾನ್ ಇವಿಗಳು ಸುಮಾರು 900 ಮಿಲಿಯನ್ ಕಿಲೋಮೀಟರ್ ಸಂಚರಿಸಿದ್ದು, ತಿಂಗಳಿಗೆ ಏನಿಲ್ಲ ಅಂದರೂ 6.3 ಮಿಲಿಯನ್ ಕಿಲೋಮೀಟರ್ ಓಡಿವೆ. ನಗರ ಪ್ರದೇಶ ಹಾಗೂ ಇತರೆ ರಸ್ತೆಗಳಲ್ಲಿ ನೆಕ್ಸಾನ್ ಇವಿವೊಂದರಲ್ಲಿ ಅದರ ಮಾಲೀಕರು ಮಾಸಿಕ 100 ಕಿ.ಮೀ ರಿಂದ 400 ಕಿ.ಮೀ ವರೆಗೆ ಪ್ರಯಾಣಿಸುತ್ತಿದ್ದಾರೆ.

ಕಂಪನಿ ಹೇಳುವಂತೆ ನೆಕ್ಸಾನ್ ಇವಿಯನ್ನು ಲಾಗ್ ಡ್ರೈವ್ ಮಾಡಲು ಬಳಕೆ ಮಾಡಲಾಗುತ್ತಿದ್ದು, ಕಡಿಮೆ ಖರ್ಚಿನಲ್ಲಿ ಸುಮಾರು 1500 ಕಿ.ಮೀ ವರೆಗೆ ಓಡಿಸುತ್ತಿದ್ದಾರೆ. ಟಾಟಾ, ಇವಿ ಮಾರಾಟದಲ್ಲಿ ಮಾತ್ರ ನಿರತವಾಗಿಲ್ಲ. ಚಾರ್ಜಿಂಗ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿದೆ. FY21 ಹಾಗೂ FY23. ಅವಧಿಯಲ್ಲಿ 6,000 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪನೆ ಮಾಡಿ, ಶೇಕಡ 1,500% ಬೆಳವಣಿಗೆ ಸಾಧಿಸಿದೆ.

ಟಾಟಾ ಕಂಪನಿ ಪ್ರೈಮ್ ಹಾಗೂ ಮ್ಯಾಕ್ಸ್ ಎಂಬ ಎರಡು ರೂಪಾಂತರಗಳಲ್ಲಿ ನೆಕ್ಸಾನ್ ಇವಿಯನ್ನು ಮಾರಾಟ ಮಾಡುತ್ತದೆ. ಮೊದಲಿಗೆ ನೆಕ್ಸಾನ್ ಪ್ರೈಮ್ ಬಗ್ಗೆ ಮಾತನಾಡೋಣ. ಇದು, ರೂ.14.49 ರಿಂದ 17.19 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿ 30.2 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, 129 PS ಗರಿಷ್ಠ ಪವರ್ ಹಾಗೂ 245 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಆಟೋಮೆಟಿಕ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಹೊಂದಿದೆ.

ನೆಕ್ಸಾನ್ ಪ್ರೈಮ್, ಸಂಪೂರ್ಣ ಚಾರ್ಜಿನಲ್ಲಿ 312 km (ARAI) ರೇಂಜ್ ನೀಡುತ್ತದೆ. ಈ ಕಾರು, 50kW ಡಿಸಿ ಫಾಸ್ಟ್ ಚಾರ್ಜಿಂಗ್ ಆಯ್ಕೆಯಲ್ಲಿ 80% ಚಾರ್ಜ್ ಆಗಲು 60 ನಿಮಿಷ ತೆಗೆದುಕೊಳ್ಳುತ್ತದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋ ಎಸಿ, ಆಟೋ ಹೆಡ್‌ಲೈಟ್‌ ಮತ್ತು ಸನ್‌ರೂಫ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಏರ್ ಬಾಗ್ಸ್, ABS, EBD ಒಳಗೊಂಡಂತೆ ಹಲವು ಫೀಚರ್ಸ್ ಪಡೆದಿದೆ.

ಟಾಟಾ ನೆಕ್ಸಾನ್ ಮ್ಯಾಕ್ಸ್, ರೂ.16.49 ಲಕ್ಷದಿಂದ ರೂ.19.54 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. ಪವರ್ ಫುಲ್ 40.5 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿದ್ದು, ಫುಲ್ ಚಾರ್ಜಿನಲ್ಲಿ 453 km ರೇಂಜ್ ನೀಡಲಿದೆ. ಇದು, 143 PS ಗರಿಷ್ಠ ಪವರ್ ಹಾಗೂ 250 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ ಆಟೋಮೆಟಿಕ್ ಟ್ರಾನ್ಸ್ಮಿಷನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ನೆಕ್ಸಾನ್ ಪ್ರೈಮ್ ಗೆ ಹೋಲಿಕೆ ಮಾಡಿದರೆ, ನೆಕ್ಸಾನ್ ಮ್ಯಾಕ್ಸ್ ಒಂದಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆದಿದೆ. ದೇಶೀಯ ಮಾರುಕಟ್ಟೆಯಲ್ಲಿ ನೆಕ್ಸಾನ್ ಇವಿಗೆ ಪ್ರಬಲ ಪ್ರತಿಸ್ಪರ್ಧಿ ಎಂದರೆ, ಮಹೀಂದ್ರಾ XUV400 ಆಗಿದೆ. ಆದರೂ ಕಂಪನಿ ನೆಕ್ಸಾನ್ ಇವಿ ಮಾರಾಟದಲ್ಲಿ ಐತಿಹಾಸಿಕ ದಾಖಲೆ ಮಾಡಿರುವುದು ಮಾತ್ರ ಸುಳ್ಳಲ್ಲ.

Article Published On: Tuesday, June 27, 2023, 18:35 [IST]
English summary
Tata nexon ev cross 50000 sales milestone india datails
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+