Tata Nexon EV: ಕೆಲವೇ ದಿನಗಳಲ್ಲಿ ಧೂಳೆಬ್ಬಿಸಲು ಬರಲಿದೆ ಫೇಸ್‌ಲಿಫ್ಟ್ ಟಾಟಾ ನೆಕ್ಸಾನ್ ಇವಿ, ವಿಶೇಷತೆಗಳೇನು?
ದೇಶದಲ್ಲಿ ಟಾಟಾ (Tata) ನಂಬರ್ 1 ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಮುಂದಿನ ತಿಂಗಳು, ನವೀಕರಣಗೊಂಡ ನೆಕ್ಸಾನ್ ಇವಿ (Facelift Nexon EV)ಯನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸುತ್ತದೆ. ಇದರೊಟ್ಟಿಗೆ ಇಂಧನ ಚಾಲಿತ (ICE) ಫೇಸ್‌ಲಿಫ್ಟ್ ನೆಕ್ಸಾನ್ ಕೂಡ ಲಾಂಚ್ ಆಗಬಹುದು.
ನಾವು, ಫೇಸ್‌ಲಿಫ್ಟ್ ನೆಕ್ಸಾನ್ ಇವಿ ಬಗ್ಗೆ ಮಾತ್ರ ತಿಳಿಯೋಣ. ಈ ಎಲೆಕ್ಟ್ರಿಕ್ ಎಸ್‌ಯುವಿ ಹಬ್ಬದ ಋತುವಿನ ಮುಂಚೆಯೇ ಅಂದರೇ ಸೆಪ್ಟೆಂಬರ್ 14ರಂದು ದೇಶೀಯ ಮಾರುಕಟ್ಟೆಗೆ ಬರಬಹುದು. 2020ರಲ್ಲಿ ಬಿಡುಗಡೆಯಾದ ನೆಕ್ಸಾನ್ ಇವಿ, ಸದ್ಯ ಸಾಕಷ್ಟು ನವೀಕರಣಗಳನೊಂದಿಗೆ ಬಿಡುಗಡೆಗೆ ರೆಡಿಯಾಗಿದ್ದು, ಭಾರತದ ರಸ್ತೆಯಲ್ಲಿ ಹಲವು ಬಾರಿ ಪರೀಕ್ಷೆ ನಡೆಸುವಾಗ ಕಂಡು ಬಂದಿದೆ. ಆ ಕುರಿತ ಸ್ಪೈ ಚಿತ್ರಗಳು ಇಂಟರ್ನೆಟ್ ನಲ್ಲಿ ಸೋರಿಕೆಯಾಗಿವೆ.

ಟಾಟಾ ನೆಕ್ಸಾನ್ ಇವಿ ಫೇಸ್‌ಲಿಫ್ಟ್ ಅದರ ವಿನ್ಯಾಸದಲ್ಲಿ ಬಹುದೊಡ್ಡ ಬದಲಾವಣೆಯನ್ನು ಪಡೆದುಕೊಂಡಿದೆ. ಇದರ ಡಿಸೈನ್, ಕರ್ವ್ವ್ ಕಾನ್ಸೆಪ್ಟ್ ಇವಿ ಹಾಗೂ ಹ್ಯಾರಿಯರ್ ಇವಿಗಳಿಗೆ ಹೋಲಿಕೆಯಾಗಬಹುದು. ಇದು, ಈ ಕಾರಿಗೆ ಸ್ಪೋರ್ಟಿ ಲುಕ್ ನೀಡುತ್ತದೆ. ಮುಂಭಾಗ, ಹೊಸದಾದ ಎಲ್ಇಡಿ ಹೆಡ್‌ಲೈಟ್ ಯುನಿಟ್, ಆಕರ್ಷಕ ಎಲ್ಇಡಿ DRLs ಹೊಂದಿರಲಿದ್ದು, ಗ್ರೀಲ್ ಹಾಗೂ ಬಂಪರ್ ಅನ್ನು ನವೀಕರಿಸಲಾಗಿದೆ.
ನೆಕ್ಸಾನ್ ಇವಿ ಫೇಸ್‌ಲಿಫ್ಟ್ ಎಸ್‌ಯುವಿ, ಹಿಂಭಾಗ, ಮರುವಿನ್ಯಾಸಗೊಳಿಸಲಾದ ಎಲ್‌ಇಡಿ ಟೈಲ್‌ಲೈಟ್ಸ್ ಪಡೆದಿರುವ ನೀರಿಕ್ಷೆಯಿದೆ. ಜೊತೆಯಲ್ಲಿ ಈ ಕಾರು ಅಲಾಯ್ ವೀಲ್ಸ್ ಒಳಗೊಂಡಿರಲಿದೆ. ಒಳಭಾಗದಲ್ಲಿಯೂ ನೆಕ್ಸಾನ್ ಇವಿ ಅತ್ಯಾಧುನಿಕ ಸೌಕರ್ಯವನ್ನು ಹೊಂದಿರಲಿದ್ದು, 7 - ಇಂಚಿನ ಡಿಸ್ಪ್ಲೇ ಬದಲಿಗೆ, ನೂತನ 10.25 - ಇಂಚಿನ ಡಿಜಿಟಲ್ ಟಚ್‌ಸ್ಕ್ರೀನ್ ಡಿಸ್ಪ್ಲೇ ಪಡೆದಿರಬಹುದು.
ಇದರೊಟ್ಟಿಗೆ, ನವೀಕರಣಗೊಂಡಿರುವ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 2 ಸ್ಪೋಕ್ ಸ್ಟೀರಿಂಗ್ ವೀಲ್, ಹೊಸದಾದ ಅಪ್ಹೋಲ್ಸ್ಟರಿ, 6 ಏರ್‌ಬ್ಯಾಗ್ಸ್, 2 ಸ್ಪೋಕ್ ಸ್ಟೀರಿಂಗ್ ವೀಲ್, 360 ಡಿಗ್ರಿ ಕ್ಯಾಮೆರಾ ಮತ್ತು ಪಾರ್ಕಿಂಗ್ ಸೆನ್ಸರ್ನ್ ನಂತಹ ಫೀಚರ್ಸ್ ಹೊಂದಿರಬಹುದು ಬೆಲೆ ವಿಚಾರವಾಗಿ ಕಂಪನಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೂ, ಈಗಿರುವ ಮಾದರಿಗಳಿಗೆ ಹೋಲಿಸಿದರೆ, ಕೊಂಚ ಅಧಿಕ ದರ ಪಡೆದಿರಬಹುದು ಎಂದು ಅಂದಾಜಿಸಲಾಗಿದೆ.
ಟಾಟಾ ಮೋಟಾರ್ಸ್, ನೆಕ್ಸಾನ್ ಇವಿ ಫೇಸ್‌ಲಿಫ್ಟ್ ಎಸ್‌ಯುವಿಯ ಬ್ಯಾಟರಿ ಪ್ಯಾಕ್ ಹಾಗೂ ರೇಂಜ್ ನಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ. ಈಗಿರುವ ಆವೃತ್ತಿಗಳಂತೆ 30.2 kWh ಹಾಗೂ 40.5 kWh ಬ್ಯಾಟರಿ ಪ್ಯಾಕ್ ಪಡೆದಿರಬಹುದು. ಅದಕ್ಕೆ ತಕ್ಕಂತೆ ಸಂಪೂರ್ಣ ಚಾರ್ಜಿನಲ್ಲಿ 312 km ನಿಂದ 453 km ರೇಂಜ್ ನೀಡಬಹುದು.
ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ನೆಕ್ಸಾನ್ ಇವಿ, ಪ್ರೈಮ್ ಹಾಗೂ ಮ್ಯಾಕ್ಸ್ ಎಂಬ ಎರಡು ರೂಪಾಂತರಗಳ ಆಯ್ಕೆಯಲ್ಲಿ ದೊರೆಯುತ್ತದೆ. ಮೊದಲಿಗೆ ನೆಕ್ಸಾನ್ ಇವಿ ಪ್ರೈಮ್ ಬಗ್ಗೆ ಮಾತನಾಡೋಣ. ಇದು, ರೂ.14.49 ಲಕ್ಷದಿಂದ ರೂ.17.19 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗಲಿದ್ದು, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ನೆಕ್ಸಾನ್ ಇವಿ ಮ್ಯಾಕ್ಸ್ ರೂ.16.49 ಲಕ್ಷದಿಂದ ರೂ.19.54 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಿದ್ದು, ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ. ಇನ್ನು, ಟಾಟಾ ಮೋಟಾರ್ಸ್, ನೆಕ್ಸಾನ್ ಇವಿ ಮಾರಾಟದಿಂದಲೇ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಅಗ್ರಸ್ಥಾನಕ್ಕೆ ಏರಿದೆ. ಕಂಪನಿಯು ಮೂರು ವರ್ಷದಲ್ಲಿ ಮಾರಾಟ ಮಾಡಿದ ಒಂದು ಲಕ್ಷ ಇವಿಗಳಲ್ಲಿ ನೆಕ್ಸಾನ್ ಇವಿ ಪಾಲು ಅರ್ಧಕ್ಕಿಂತ ಹೆಚ್ಚಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications