Tata Nexon EV: ಭಾರತದಲ್ಲಿ ಧೂಳೆಬ್ಬಿಸಲು ಮತ್ತೊಂದು ಅವತಾರ ತಾಳಿದ ಜನಪ್ರಿಯ ಎಲೆಕ್ಟ್ರಿಕ್ ಕಾರು

ಜನಪ್ರಿಯ ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ನೆಕ್ಸಾನ್ ಇವಿ ಮ್ಯಾಕ್ಸ್ ಡಾರ್ಕ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದ ಮೂಲಕ ಡಾರ್ಕ್ ಎಡಿಷನ್ ಸೀರಿಸ್ ಅನ್ನು ವಿಸ್ತರಿಸಿದೆ. ಈ ಹೊಸ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಡಾರ್ಕ್ ಎಡಿಷನ್ ಅನ್ನು ಸ್ಟ್ಯಾಂಡರ್ಡ್ ನೆಕ್ಸಾನ್ ಇವಿ ಪ್ರೈಮ್‌ನೊಂದಿಗೆ ಮಾರಾಟ ಮಾಡಲಾಗುತ್ತದೆ.

ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಡಾರ್ಕ್ ಎಡಿಷನ್ ಮಾದರಿಯು ಎರಡೂ ರೂಪಾಂತರಗಳಲ್ಲ ಲಭ್ಯವಿದೆ. ಇದರ XZ+ LUX ರೂಪಾಂತರದ ಬೆಲೆಯು ರೂ.19.04 ಲಕ್ಷಗಳಾದರೆ, 7.2 kW AC ಫಾಸ್ಟ್ ಚಾರ್ಜರ್‌ನೊಂದಿಗೆ XZ+ LUX ರೂಪಾಂತರದ ಬೆಲೆಯು ರೂ,19.54 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಭಾರತದಲ್ಲಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಎಸ್‍ಯುವಿಯು ಹೊಸ ಅವತಾರದಲ್ಲಿ ಸಂಚಲನವನ್ನು ಸೃಷ್ತಿಸಲು ಸಜ್ಜಾಗಿದೆ.

Tata Nexon EV Max Dark L

ಮಿಡ್‌ನೈಟ್ ಬ್ಲ್ಯಾಕ್ ಬಾಡಿ ಬಣ್ಣದ ಫಿನಿಶಿಂಗ್ ಹೊಂದಿದೆ, ಇದು ಗ್ರೇ ಫಿನಿಶ್ಡ್ ಅಲಾಯ್ ವ್ಹೀಲ್ ಗಳು, ಸ್ಯಾಟಿನ್ ಬ್ಲ್ಯಾಕ್ ಹ್ಯುಮಾನಿಟಿ ಲೈನ್, ಟ್ರೈ-ಆರೋ LED ಡೇಟೈಮ್ ರನ್ನಿಂಗ್ ಲೈಟ್‌ಗಳೊಂದಿಗೆ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಟ್ರೈ-ಆರೋ ಸಿಗ್ನೇಚರ್ LED ಟೈಲ್ ಲ್ಯಾಂಪ್‌ಗಳು, ಫೆಂಡರ್‌ನಲ್ಲಿ #ಡಾರ್ಕ್ ಮ್ಯಾಸ್ಕಾಟ್, ಶಾರ್ಕ್ ಫಿನ್ ಆಂಟೆನಾ ಮತ್ತು ರೂಫ್ ಅನ್ನು ಒಳಗೊಂಡಿದೆ.

ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಡಾರ್ಕ್ ಎಡಿಷನ್ ಕ್ಯಾಬಿನ್ ಜ್ಯುವೆಲ್ಡ್ ಕಂಟ್ರೋಲ್ ನಾಬ್‌ನೊಂದಿಗೆ ಡಾರ್ಕ್ ಥೀಮ್‌ನೊಂದಿಗೆ ಬರುತ್ತದೆ, ಸಿಗ್ನೇಚರ್ ಟ್ರೈ-ಆರೋ ಪ್ಯಾಟರ್ನ್‌ನೊಂದಿಗೆ ಗ್ಲೋಷಿ ಪಿಯಾನೋ ಬ್ಲ್ಯಾಕ್ ಡ್ಯಾಶ್‌ಬೋರ್ಡ್, ಟ್ರೈ-ಆರೋ ಹೋಕ್ಸ್ ಗಳೊಂದಿಗೆ ಡಾರ್ಕ್-ಥೀಮ್ ಲೆಥೆರೆಟ್ ಸೀಟ್ ಅಪ್ಹೋಲ್‌ಸ್ಟರಿ ಮತ್ತು ಇವಿ ಬ್ಲೂ ಹೈಲೈಟ್ ಹೊಲಿಗೆಗಳು ಮತ್ತು ಲೆದರರ್ಡ್ ಸುತ್ತುವರೆದ ಸ್ಟೀರಿಂಗ್ ವ್ಹೀಲ್ ಅನ್ನು ಹೊಂದಿದೆ.

Tata Nexon EV Max Dark L

ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಡಾರ್ಕ್ ಎಡಿಷನ್; ಹೆಚ್ಚಿನ ರೆಸ್ HD ಡಿಸ್ಪ್ಲೇಯೊಂದಿಗೆ ಹರ್ಮನ್‌ನಿಂದ ಪಡೆದ ದೊಡ್ಡ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯುವ ನೆಕ್ಸಾನ್ ಸರಣಿಯ ಮೊದಲ ಮಾದರಿಯಾಗಿದೆ. ಇದು ವೈರ್‌ಲೆಸ್ Apple CarPlay ಮತ್ತು Android Auto ಕನೆಕ್ಟಿವಿಟಿಯನ್ನು ಹೊಂದಿದೆ. ಈ ಹೊಸ UI ಜೊತೆಗಿನ ಇನ್ಫೋಟೈನ್‌ಮೆಂಟ್ ಯೂನಿಟ್ 2023ರ ಹ್ಯಾರಿಯರ್ ಮತ್ತು ಸಫಾರಿ ಎಸ್‍ಯುವಿಗಳಲ್ಲಿ ನೀಡಲಾಗಿತ್ತು.

ರಿವರ್ಸ್ ಪಾರ್ಕಿಂಗ್ ಎಚ್‌ಡಿ ಕ್ಯಾಮೆರಾ ಮತ್ತು ಆರು ಪ್ರಾದೇಶಿಕ ಭಾಷೆಗಳಲ್ಲಿ ವಾಯ್ಸ್ ಅಸಿಸ್ಟ್ ಅನ್ನು ಹೊಂದಿದ್ದು ಇದು ಇಂಗ್ಲಿಷ್, ಹಿಂದಿ, ಬಂಗಾಳಿ ತಮಿಳು, ತೆಲುಗು ಮತ್ತು ಮರಾಠಿಯಲ್ಲಿ 180ಕ್ಕೂ ಹೆಚ್ಚು ವಾಯ್ಸ್ ಕಾಮೆಂಡ್ ಗಳು ಮತ್ತು ವಿಸ್ತೃತ ಬಾಸ್ ಕಾರ್ಯಕ್ಷಮತೆಯೊಂದಿಗೆ ವರ್ಧಿತ ಆಡಿಯೊ ಕಾರ್ಯಕ್ಷಮತೆ ಇತರ ಮುಖ್ಯಾಂಶಗಳು. ಸ್ಟ್ಯಾಂಡರ್ಡ್ ನೆಕ್ಸಾನ್ ಇವಿ ಮ್ಯಾಕ್ಸ್‌ಗೆ ಹೋಲಿಸಿದರೆ, ಇದು ಒಳಗೆ ಮತ್ತು ಹೊರಗೆ ಹಲವಾರು ಪರಿಷ್ಕರಣೆಗಳನ್ನು ಪಡೆಯುತ್ತದೆ.

Tata Nexon EV Max Dark L

ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಡಾರ್ಕ್ ಎಡಿಷನ್ ಬಿಡುಗಡೆಯ ಬಗ್ಗೆ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ಮಾರ್ಕೆಟಿಂಗ್, ಸೇಲ್ಸ್ ಮತ್ತು ಸರ್ವಿಸ್ ಕಾರ್ಯತಂತ್ರದ ಮುಖ್ಯಸ್ಥ ವಿವೇಕ್ ಶ್ರೀವತ್ಸ ಅವರು ಮತಾನಾಡಿ, ನೆಕ್ಸಾನ್ ಇವಿ ಭಾರತದ #1 EV ಆಗಿದೆ ಮತ್ತು ಕಡಿಮೆ ಅವಧಿಯಲ್ಲಿ 50,000ಕ್ಕೂ ಹೆಚ್ಚು ಗ್ರಾಹಕರು ಪ್ರೀತಿಸಿದ್ದಾರೆ ಮತ್ತು ನಂಬಿದ್ದಾರೆ. ಇದನ್ನು ಭಾರತದ ಎಲೆಕ್ತ್ರಿಕ್ ಕಾರಿನ ವಿಭಾಗದ ವಿಕಾಸವನ್ನು ಮಾಡಿದೆ.

ಮತ್ತೊಂದೆಡೆ #DARK ಸರಣಿಯ ಗ್ರಾಹಕರು ಜನಪ್ರಿಯ ಆಯ್ಕೆಯಾಗುವ ಮೂಲಕ ತನ್ನದೇ ಆದ ಗುರುತು ಮಾಡಿದೆ. #DARK. ಯಶಸ್ಸು ಮತು ನೆಕ್ಸಾನ್ ಇವಿ ಮ್ಯಾಕ್ಸ್ ಜನಪ್ರಿಯತೆಯೊಂದಿಗೆ #DARK ನಿಂದ MAX ಎಂಬ ರೀತಿಯಲ್ಲಿ ಹೊಸ ಅವತಾರವನ್ನು ನಮ್ಮ ಗ್ರಾಹಕರಿಗೆ ಪ್ರಸ್ತುತಪಡಿಸಲು ಸರಿಯಾದ ಸಮಯವೆಂದು ಭಾವಿಸಿದ್ದೇವೆ ಎಂದು ಹೇಳಿದರು. ಇನ್ನು ಯಾಂತ್ರಿಕವಾಗಿ, ನೆಕ್ಸಾನ್ ಇವಿ ಮ್ಯಾಕ್ಸ್ ಡಾರ್ಕ್ ಸಾಮಾನ್ಯ ಇವಿ ಮ್ಯಾಕ್ಸ್‌ಗೆ ಹೋಲಿಸಿದರೆ ಯಾವುದೇ ಬದಲಾವಣೆಗಳನ್ನು ಹೊಂದಿರುವುದಿಲ್ಲ.

Article Published On: Monday, April 17, 2023, 17:30 [IST]
English summary
Tata nexon ev max dark launched price specs features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+