ಕೇವಲ 4 ದಿನಗಳಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ತಲುಪಿದ ಟಾಟಾ ನೆಕ್ಸಾನ್ ಇವಿ

ಟಾಟಾ ನೆಕ್ಸಾನ್ ಇವಿ ಕಾಶ್ಮೀರದಿಂದ ಕನ್ಯಾಕುಮಾರಿಗೆ ಅತಿ ವೇಗವಾಗಿ ತಲುಪಿದ ಮೊದಲ ಎಲೆಕ್ಟ್ರಿಕ್ ಕಾರ್ ಎಂಬ ಬಿರುದು ಪಡೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಪ್ರವೇಶಿಸಿದೆ. ನೆಕ್ಸನ್ ಇವಿ 95 ಗಂಟೆ 46 ನಿಮಿಷಗಳಲ್ಲಿ (4 ದಿನಗಳೊಳಗೆ) 4,003 ಕಿ.ಮೀ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಟಾಟಾ ಕೆಲವು ದಿನಗಳ ಹಿಂದೆಯೇ ಈ ದಾಖಲೆಯನ್ನು ಪ್ರಯತ್ನಿಸುವ ಯೋಜನೆ ಕುರಿತು ಪ್ರಕಟಿಸಿತ್ತು. ಇದೀಗ ಇದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಭಾರತದಲ್ಲಿ ಇಂತಹ ದಾಖಲೆಯನ್ನು ಪ್ರಯತ್ನಿಸಿದ ಮೊದಲ ಇವಿ ಎಂದು ಖ್ಯಾತಿ ಪಡೆದಿದೆ. ಎಲೆಕ್ಟ್ರಿಕ್ ಕಾರುಗಳು ಲಾಂಗ್ ಡ್ರೈವ್‌ಗೆ ಸೂಕ್ತವಲ್ಲ ಎಂಬುದು ಹಲವರ ಅಭಿಪ್ರಾಯಾಗಿತ್ತು. ಆದರೆ ಇದು ಬಹು- ನಗರ ಪ್ರವಾಸಗಳನ್ನು ಕೈಗೊಳ್ಳುವ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಹೆದ್ದಾರಿಗಳಲ್ಲಿ ಸಾರ್ವಜನಿಕ ಚಾರ್ಜಿಂಗ್ ನೆಟ್‌ವರ್ಕ್ ಇರುವುದರಿಂದ ಈ ತಡೆರಹಿತ ಡ್ರೈವ್‌ ಸಾಧ್ಯವಾಯಿತು.

ಕೇವಲ 4 ದಿನಗಳಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ತಲುಪಿದ ಟಾಟಾ ನೆಕ್ಸಾನ್ ಇವಿ

ಪ್ರವಾಸದುದ್ದಕ್ಕೂ ವೇಗದ ಚಾರ್ಜಿಂಗ್‌ಗಾಗಿ 21 ನಿಲ್ದಾಣಗಳಲ್ಲಿ ನಿಲ್ಲಿಸಿದ್ದರಿಂದ ಒಟ್ಟು 28 ಗಂಟೆಗಳು ಪ್ರಯಾಣಿಸಲಾಯಿತು. ಆದರೂ ನೆಕ್ಸಾನ್ ಇವಿ ಒಟ್ಟು ಪ್ರವಾಸವನ್ನು ಪೂರ್ಣಗೊಳಿಸಿದಾಗ ಮೊದಲು ನಿರ್ಣಯಿಸಿದ್ದ ಸಮಯಕ್ಕಿಂತ ಬೇಗನೇ ತಲುಪಿ ಸಮಯನ್ನು ಉಳಿಸಿದೆ. ಇಂಧನ ಚಾಲಿತ ವಾಹನಕ್ಕೆ ಹೋಲಿಸಿದರೆ ವೆಚ್ಚದ ಮೇಲೆ ಗಣನೀಯ ಮೊತ್ತವನ್ನು ಉಳಿಸಿದೆ. ಈ ಪ್ರಯಾಣದಲ್ಲಿ ನೆಕ್ಸಾನ್ ಇವಿ ಸರಾಸರಿ 300+ಕಿ.ಮೀ ರೇಂಜ್ ನೀಡಿದ್ದಲ್ಲದೇ 'ವೇಗದ' K2K (ಕಾಶ್ಮೀರ-ಕನ್ಯಾಕುಮಾರಿ) ಡ್ರೈವ್‌ ಜೊತೆಗೆ, ನೆಕ್ಸನ್ ಇವಿ 23 ಹೆಚ್ಚುವರಿ ದಾಖಲೆಗಳನ್ನು ನಿರ್ಮಿಸಿದೆ.

ಈ ಸಾಧನೆಯ ಬಗ್ಗೆ ಪ್ರತಿಕ್ರಿಯಿಸಿದ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ ಲಿಮಿಟೆಡ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ಎಂಡಿ ಶೈಲೇಶ್ ಚಂದ್ರ, "ಈ ಸಾಧನೆಯು ಉತ್ಪನ್ನದ ಅಗಾಧ ಸಾಮರ್ಥ್ಯ ಮತ್ತು ದೇಶಾದ್ಯಂತ ಆರೋಗ್ಯಕರ ಚಾರ್ಜಿಂಗ್ ಮೂಲಸೌಕರ್ಯಗಳ ಲಭ್ಯತೆಗೆ ಸಾಕ್ಷಿಯಾಗಿದೆ. 75 ಕಿ.ಮೀ ನಿಂದ 100 ಕಿ.ಮೀ ನಡುವೆ ನಿಯಮಿತ ಮಧ್ಯಂತರದಲ್ಲಿ ವೇಗದ ಚಾರ್ಜಿಂಗ್ ಕೇಂದ್ರವಿತ್ತು. ಇದು ಭಾರತದ ಇವಿ ಪರಿಸರ ವ್ಯವಸ್ಥೆಗೆ ಒಂದು ದೊಡ್ಡ ಸಾಧನೆಯಾಗಿದೆ ಎಂದರು.

ಕೇವಲ 4 ದಿನಗಳಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ತಲುಪಿದ ಟಾಟಾ ನೆಕ್ಸಾನ್ ಇವಿ

ಈ ಡ್ರೈವ್ ನಮಗೆ ವಿಶೇಷವಾಗಿದೆ, ಏಕೆಂದರೆ ನನ್ನ ಸಹೋದ್ಯೋಗಿಗಳು ಮತ್ತು ನಾನು ಮೊದಲ ಬಾರಿಗೆ ಈ ರೀತಿಯತ್ತ ಸಾಗಿದ್ದೇವೆ. ದೇಶದ ಉದ್ದದ ಮಾರ್ಗದ ಮೂಲಕ ಕಡಿಮೆ ಅವಧಿಯಲ್ಲಿ 4,003 ಕಿ.ಮೀ ಪ್ರಯಾಣಿಸಿರುವುದು ಟಾಟಾ ಇವಿ ಹೆಮ್ಮೆಯಾಗಿದೆ. ನಮ್ಮ ಗ್ರಾಹಕರು ನೆಕ್ಸಾನ್ ಇವಿಗಳ ವರ್ಧಿತ ಶ್ರೇಣಿಯೊಂದಿಗೆ ನಿರಂತರವಾಗಿ ಬೆಳೆಯುತ್ತಿರುವ ಚಾರ್ಜಿಂಗ್ ಮೂಲಸೌಕರ್ಯಗಳ ಜೊತೆಗೆ ದೀರ್ಘ ಪ್ರಯಾಣವನ್ನು ವಿಶ್ವಾಸದಿಂದ ಯೋಜಿಸಬಹುದು ಎಂಬುದನ್ನು ಪ್ರದರ್ಶಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು ಎಂದರು.

ಈ ಪ್ರಯಾಣದಲ್ಲಿ ಟಾಟಾ ಮೋಟಾರ್ಸ್‌ನ ಪ್ರಮುಖ ಮಾದರಿ ಹಾಗೂ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಹೊಂದಿರುವ ನೆಕ್ಸಾನ್ ಇವಿ ಮ್ಯಾಕ್ಸ್ ಎಲೆಕ್ಟ್ರಿಕ್ ಕಾರನ್ನು ಬಳಸಲಾಗಿದೆ. ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಟಾಟಾ ನೆಕ್ಸಾನ್ ಇವಿ ಎಲೆಕ್ಟ್ರಿಕ್ ಕಾರಿನ 'ಲಾಂಗ್ ರೇಂಜ್' ಆವೃತ್ತಿಯಾಗಿದೆ. ಈ ಎಲೆಕ್ಟ್ರಿಕ್ ಕಾರು 40.5 kWh ಬ್ಯಾಟರಿ ಪ್ಯಾಕ್‌ ಅನ್ನು ಹೊಂದಿದೆ. ಒಮ್ಮೆ ಪೂರ್ಣ ಚಾರ್ಜ್‌ ಮಾಡಿದರೆ ಬರೋಬ್ಬರಿ 453 ಕಿಲೋಮೀಟರ್ ಕ್ರಮಿಸಬಹುದು ಎಂದು ಕಂಪನಿ ಕ್ಲೈಮ್ ಮಾಡಿದೆ.

ಕೇವಲ 4 ದಿನಗಳಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ತಲುಪಿದ ಟಾಟಾ ನೆಕ್ಸಾನ್ ಇವಿ

ದೂರದ ಪ್ರಯಾಣಕ್ಕೆ ಇದು ಪರಿಪೂರ್ಣ ಶ್ರೇಣಿ ಎಂಬುದರಲ್ಲಿ ಸಂದೇಹವಿಲ್ಲ. 50 kW DC ವೇಗದ ಚಾರ್ಜರ್ ಅನ್ನು ಬಳಸಿ, ಈ ಎಲೆಕ್ಟ್ರಿಕ್ ಕಾರಿನ ಬ್ಯಾಟರಿಯನ್ನು ಕೇವಲ 56 ನಿಮಿಷಗಳಲ್ಲಿ ಶೇ 80 ರವರೆಗೆ ಚಾರ್ಜ್ ಮಾಡಬಹುದು. ಆದ್ದರಿಂದ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಎಲೆಕ್ಟ್ರಿಕ್ ಕಾರು ಯೋಜಿಸಿದಂತೆ ಕಾಶ್ಮೀರದಿಂದ ಕನ್ಯಾಕುಮಾರಿ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿದೆ. ಪ್ರಸ್ತುತ, ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಎಲೆಕ್ಟ್ರಿಕ್ ಕಾರಿನ ಪ್ರವೇಶ ಮಟ್ಟದ ರೂಪಾಂತರಕ್ಕೆ 16.49 ಲಕ್ಷ ರೂ. ಎಕ್ಸ್ ಶೋ ರೂಂ ಬೆಲೆ ಇದ್ದು, ಟಾಪ್ ವೇರಿಯೆಂಟ್ ಬೆಲೆ 18.99 ಲಕ್ಷ ರೂ. ಎಕ್ಸ್ ಶೋ ರೂಂ ಬೆಲೆಯಿದೆ.

ಟಾಟಾ ನೆಕ್ಸಾನ್ EV ಮ್ಯಾಕ್ಸ್ ಎಲೆಕ್ಟ್ರಿಕ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ XUV400, MG ZS EV ಮತ್ತು ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರುಗಳೊಂದಿಗೆ ಸ್ಪರ್ಧಿಸುತ್ತಿದೆ. K2K ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದರಿಂದ Nexon EV Max ಎಲೆಕ್ಟ್ರಿಕ್ ಕಾರಿನ ಮಾರಾಟವು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಸದ್ಯ ಇಂಧನ ಚಾಲಿತ ಕಾರುಗಳೇ ಈ ಪ್ರಯಾಣವನ್ನು ಮಾಡಲು ಹಿಂದೇಟು ಹಾಕುತ್ತಿದ್ದರೇ ಟಾಟಾ ಮೋಟಾರ್ಸ್ ತನ್ನ ಇವಿ ಮೂಲಕ ಈ ಸಾಧನೆ ಮಾಡಿ ತನ್ನ ಸಾಮರ್ಥ್ಯವನ್ನು ತೋರಿದೆ.

Article Published On: Friday, March 3, 2023, 12:00 [IST]
English summary
Tata nexon ev reached kanyakumari from kashmir in just 4 days
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+