Just In
- 18 min ago
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- 48 min ago
ಸಪ್ತ ಸಾಗರದಾಚೆಯೂ ಮಹೀಂದ್ರಾ ಕಾರಿಗೆ ಬೇಡಿಕೆ... ನೇಪಾಳದಲ್ಲಿ ಎಕ್ಸ್ಯುವಿ700 ಬಿಡುಗಡೆ
- 1 hr ago
ಸೇನೆಗೆ ಮಾರುತಿ ಜಿಪ್ಸಿ ಬದಲಿಗೆ ಅತ್ಯಾಧುನಿಕ ಹೊಸ ಜಿಮ್ನಿ ಸೇರ್ಪಡೆ ಹೇಗಿರಬಹುದು?
- 2 hrs ago
ಭಾರತದಿಂದ ಬ್ರಿಟನ್ಗೆ ರಾಯಲ್ ಎನ್ಫೀಲ್ಡ್ ಸೂಪರ್ ಮಿಟಿಯೊರ್ 650 ರಫ್ತು ಪ್ರಾರಂಭ
Don't Miss!
- Movies
ಭೀಕರ ಅಪಘಾತದಲ್ಲಿ ಸಾವಿನ ಕದ ತಟ್ಟಿ ಬಂದ ನಟಿ ರಿಷಿಕಾ ಸಿಂಗ್.. ಯಾವ ಶತ್ರುಗೂ ಬೇಡ ಈ ನೋವು!
- News
Budget 2023; ಮೋದಿ ಸರ್ಕಾರದಿಂದ ಸಾವಯವ ಕೃಷಿಗೆ ಒತ್ತು: ಸಂಸದ ಈರಣ್ಣ ಕಡಾಡಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬೆಲೆ ಇಳಿಸಿ, ಹೆಚ್ಚಿನ ಮೈಲೇಜ್‌ನೊಂದಿಗೆ ಟಾಟಾ ಬಿಡುಗಡೆಗೊಳಿಸಿದ ನೆಕ್ಸಾನ್ ಇವಿ ವಿಶೇಷತೆಗಳು
ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಭಾರೀ ಬೇಡಿಕೆಯನ್ನು ಪಡೆಯುತ್ತಿದೆ. ನೆಕ್ಸಾನ್ ಇವಿ ಪ್ರಸ್ತುತ ದೇಶದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಪ್ರಯಾಣಿಕ ಎಲೆಕ್ಟ್ರಿಕ್ ವಾಹನವಾಗಿದೆ. ಕಳೆದ ವರ್ಷ 50,000 ಇವಿ ಮಾರಾಟಗಳನ್ನು ದಾಖಲಿಸುವಲ್ಲಿ ಮತ್ತು 90 ಪ್ರತಿಶತಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಗಳಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಿದೆ.
ಜನಪ್ರಿಯ ನೆಕ್ಸಾನ್ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಯಾದ ಮೂರು ವರ್ಷಗಳ ನೆನಪಿಗಾಗಿ, ಟಾಟಾ ಪರಿಷ್ಕೃತ ಬೆಲೆಗಳೊಂದಿಗೆ ಹೆಚ್ಚಿನ ರೇಂಜ್ ನೊಂದಿಗೆ ಬಿಡುಗಡೆಗೊಳಿಸಿದೆ. ಅಲ್ಲದೇ ಇತ್ತೀಚೆಗೆ ಮತ್ತೊಂದು ಸ್ವದೇಶಿ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ ತನ್ನ XUV400 ಎಲೆಕ್ಟ್ರಿಕ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತು. ಇನ್ನು ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಎಲೆಕ್ಟ್ರಿಕ್ ಎಸ್‍ಯುವಿಯ ಬೆಲೆಯನ್ನು ರೂ. 85,000 ವರೆಗೆ ಕಡಿಮೆ ಮಾಡಿದೆ. ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್‌ನ ರೇಂಜ್ ಅನ್ನು ಸಿಂಗಲ್ ಚಾರ್ಜ್‌ನಲ್ಲಿ 437 ಕಿ.ಮೀ ನಿಂದ 453 ಕಿ.ಮೀಗೆ ಹೆಚ್ಚಿಸಿದೆ.
ರೂಪಾಂತರಗಳು ಮತ್ತು ಬೆಲೆ
ಹೊಸ ಟಾಟಾ ನೆಕ್ಸಾನ್ ಇವಿ ಪ್ರೈಮ್ 3 ರೂಪಾಂತರಗಳಲ್ಲಿ ಲಭ್ಯವಿದೆ. ಇದು XM, XZ+ ಮತ್ತು XZ+ Lux. ಆಗಿದೆ. ಈ ರೂಪಾಂತರಗಳು 3.3kW ಚಾರ್ಜರ್ ಜೊತೆಗೆ 30.2kWh ಬ್ಯಾಟರಿ ಪ್ಯಾಕ್‌ನೊಂದಿಗೆ ಲಭ್ಯವಿದೆ. XM ಮತ್ತು XZ+ ರೂಪಾಂತರಗಳಿಗೆ ಕ್ರಮವಾಗಿ ರೂ.14.49 ಲಕ್ಷ ಮತ್ತು 15.99 ಲಕ್ಷ ರೂ.ಗಳಾಗಿದ್ದು, ಇನ್ನು XZ+ Lux ರೂಪಾಂತರದ ಬೆಲೆಯು ರೂ.16.99 ಲಕ್ಷವಾಗಿದೆ. ಇನ್ನು ಮೂಲ ಮಾದರಿಯ ಬೆಲೆ 50,000 ರೂ.ಗಳಷ್ಟು ಕಡಿಮೆಯಾಗಿದೆ, ಆದರೆ ಟಾಪ್-ಸ್ಪೆಕ್ ಮಾಡೆಲ್ ಈಗ 85,000 ರೂ.ಗಳಷ್ಟು ಅಗ್ಗವಾಗಿದೆ.
ಬ್ಯಾಟರಿ ಪ್ಯಾಕ್
2023ರ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ದೊಡ್ಡದಾದ 40.5kWh ಬ್ಯಾಟರಿ ಪ್ಯಾಕ್ ಮತ್ತು 3.3kW ಅಥವಾ 7.2kW ಚಾರ್ಜರ್ ಆಯ್ಕೆಯೊಂದಿಗೆ ಲಭ್ಯವಿದೆ. 3.3kW ಚಾರ್ಜರ್ ಹೊಂದಿರುವ ನೆಕ್ಸಾನ್ ಇವಿ ಬೆಲೆಯು ರೂ. 16.49 ಲಕ್ಷದಿಂದ ರೂ.18.49 ಲಕ್ಷದವರೆಗೆ ಇದೆ. 7.2kW ಚಾರ್ಜರ್ ಹೊಂದಿರುವ ಇವಿ ಮ್ಯಾಕ್ಸ್ ರೂ 16.99 ಲಕ್ಷದಿಂದ ರೂ 18.99 ಲಕ್ಷ ಬೆಲೆಯಲ್ಲಿ ಲಭ್ಯವಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.
ಇನ್ನು ನೆಕ್ಸಾನ್ ಇವಿ ಪ್ರೈಮ್ ಅನ್ನು 30.2kWh ಬ್ಯಾಟರಿ ಪ್ಯಾಕ್‌ನೊಂದಿಗೆ ಅಳವಡಿಸಲಾಗಿದೆ, ಇದು ಮುಂಭಾಗದ ಆಕ್ಸಲ್ ಮೌಂಟೆಡ್ ಎಲೆಕ್ಟ್ರಿಕ್ ಮೋಟರ್‌ಗೆ ಶಕ್ತಿಯನ್ನು ನೀಡುತ್ತದೆ. ಎಲೆಕ್ಟ್ರಿಕ್ ಮೋಟಾರ್ 129 ಬಿಹೆಚ್‍ಪಿ ಪವರ್ ಮತ್ತು 245 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಕಾರಿನಲ್ಲಿ ಡ್ರೈವ್ ಮತ್ತು ಸ್ಪೋರ್ಟ್ಸ್ ಎಂಬ ಮೋಡ್‌ಗಳನ್ನು ನೀಡುತ್ತದೆ ನೆಕ್ಸಾನ್ ಇವಿ ಪ್ರೈಮ್ ಸಿಂಗಲ್ ಚಾರ್ಜ್‌ನಲ್ಲಿ 312 ಕಿಮೀ ರೇಂಜ್ ಅನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ.
15A AC ವಾಲ್ ಸಾಕೆಟ್‌ನಿಂದ 8 ಗಂಟೆಗಳಲ್ಲಿ ಬ್ಯಾಟರಿಯನ್ನು 20% ರಿಂದ 80% ವರೆಗೆ ಚಾರ್ಜ್ ಮಾಡಬಹುದು. ನೆಕ್ಸಾನ್ ಇವಿ ಮ್ಯಾಕ್ಸ್ ಮುಂಭಾಗದ ಆಕ್ಸಲ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಅಳವಡಿಸಲಾಗಿರುತ್ತದೆ, ಇದು 40.5kWh ಬ್ಯಾಟರಿ ಪ್ಯಾಕ್‌ನಿಂದ ಪವರ್ ಅನ್ನು ಪಡೆಯುತ್ತದೆ. ಎಲೆಕ್ಟ್ರಿಕ್ ಮೋಟಾರ್ 143 ಬಿಹೆಚ್‍ಪಿ ಪಬರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಇಕೋ, ಸಿಟಿ ಮತ್ತು ಸ್ಪೋಟ್ಸ್ ಮೋಡ್ ಗಳನ್ನು ಕೂಡ ಒಳಗೊಂಡಿವೆ.
ಫೀಚರ್ಸ್
ಇದು 4 ಹಂತದ ಹೊಂದಾಣಿಕೆಯ ಪುನರುತ್ಪಾದಕ ಬ್ರೇಕಿಂಗ್‌ನೊಂದಿಗೆ ಬರುತ್ತದೆ. ಇದು ಸಿಂಗಲ್ ಚಾರ್ಜ್‌ನಲ್ಲಿ 453 ಕಿಮೀ ಸ್ಟ್ಯಾಂಡರ್ಡ್ ರೇಂಜ್ ಅನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಹೊಸ ನೆಕ್ಸಾನ್ ಇವಿ ಮ್ಯಾಕ್ಸ್ 48 ಸಂಪರ್ಕಿತ ಕಾರ್ ವೈಶಿಷ್ಟ್ಯಗಳನ್ನು ಹೊಂದಿರುವ ZConnect ಅಪ್ಲಿಕೇಶನ್‌ನೊಂದಿಗೆ ನವೀಕರಿಸಿದ ZConnect 2.0 ಸಂಪರ್ಕಿತ ಕಾರ್ ತಂತ್ರಜ್ಞಾನದೊಂದಿಗೆ ಬರುತ್ತದೆ. ಸುರಕ್ಷತೆ ಮತ್ತು ಭದ್ರತೆಗಾಗಿ, ಈ ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ ಹಿಲ್ ಹೋಲ್ಡ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್ ಅನ್ನು ಒಳಗೊಂಡಿವೆ.
ಇದರೊಂದಿಗೆ ಆಟೋ ವೆಹಿಕಲ್ ಹೋಲ್ಡ್ ಜೊತೆಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು i-VBAC (ಇಂಟೆಲಿಜೆಂಟ್ - ವ್ಯಾಕ್ಯೂಮ್-ಲೆಸ್ ಬೂಸ್ಟ್ ಮತ್ತು ಆಕ್ಟಿವ್ ಕಂಟ್ರೋಲ್) ಜೊತೆಗೆ ESP ಅನ್ನು ಪಡೆಯುತ್ತದೆ. ಇನ್ನು 16-ಇಂಚಿನ ಅಲಾಯ್ ವ್ಹೀಲ್ ಗಳು, ಎಂಟು-ಸ್ಪೀಕರ್ ಹರ್ಮನ್-ಮೂಲದ ಆಡಿಯೊ, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಎಲೆಕ್ಟ್ರಿಕ್ ಸನ್‌ರೂಫ್,ಲೆದರ್ ಸೀಟ್ ಅಪ್ಹೋಲ್ಸ್ಟರಿ, ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ, ಆಟೋ-ಡಿಮ್ಮಿಂಗ್ IRVM, ಏರ್ ಪ್ಯೂರಿಫೈಯರ್, HDC (ಹಿಲ್ ಡಿಸೆಂಟ್ ಕಂಟ್ರೋಲ್) ಮತ್ತು ಶಾರ್ಕ್ ಫಿನ್ ಆಂಟೆನಾವನ್ನು ಒಳಗೊಂಡಿದೆ.