ಅಬ್ಬರಿಸಲು ಬರುತ್ತಿವೆ Tata ನೆಕ್ಸಾನ್, ಹ್ಯಾರಿಯರ್, ಸಫಾರಿ ರೆಡ್ ಡಾರ್ಕ್ ಎಡಿಷನ್: ಟೀಸರ್ ಬಿಡುಗಡೆ

ಟಾಟಾ ಮೋಟಾರ್ಸ್ ತಯಾರಿಸುವ ಕಾರುಗಳನ್ನು ಪ್ರತಿಯೊಬ್ಬರು ಇಷ್ಟಪಟ್ಟು ಖರೀದಿ ಮಾಡುತ್ತಾರೆ. ಅವುಗಳ ಕಾರ್ಯಕ್ಷಮತೆ , ವಿನ್ಯಾಸ ಹಾಗೂ ವೈಶಿಷ್ಟ್ಯಗಳು ಎಲ್ಲರನ್ನು ಸೆಳೆಯುತ್ತವೆ. ಸದ್ಯ, ಕಂಪನಿಯು ಬಹುನಿರೀಕ್ಷಿತ ನೆಕ್ಸಾನ್, ಹ್ಯಾರಿಯರ್ ಹಾಗೂ ಸಫಾರಿ ರೆಡ್ ಡಾರ್ಕ್ ಎಡಿಷನ್ ಟೀಸರ್ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಲಾಂಚ್ ಆಗಲಿವೆ.

ಟಾಟಾ ಮೋಟಾರ್ಸ್, ಟೀಸರ್‌ನಲ್ಲಿ ನೆಕ್ಸಾನ್ ಎಸ್‌ಯುವಿಯನ್ನು ಸೇರ್ಪಡೆ ಮಾಡಿರುವುದು ಪ್ರಮುಖ ಆಕರ್ಷಣೆಯಾಗಿದೆ. ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿಗಳ ರೆಡ್ ಡಾರ್ಕ್ ಎಡಿಷನ್ ಅನ್ನು ಕಳೆದ ತಿಂಗಳು ದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಟಾಟಾ ಪ್ರದರ್ಶನ ಮಾಡಿತ್ತು. ಈ ಹೊಸ ಎಸ್‌ಯುವಿಗಳು ಬಹುತೇಕ ಹಿಂದಿನ ಮಾದರಿಗಳನ್ನು ಹೋಲಿಕೆಯಾಗುತ್ತವೆ. ಹೊರಭಾಗವು ಕಪ್ಪು ಬಣ್ಣದಲ್ಲಿರಲಿದ್ದು, ಮುಂಭಾಗದ ಗ್ರೀಲ್ ಕೆಂಪು ಬಣ್ಣದಲ್ಲಿರಲಿದೆ. ಕ್ಯಾಬಿನ್ ಒಳಭಾಗದಲ್ಲಿ ಸೀಟ್ ಹಾಗೂ ಡೋರ್ ಹ್ಯಾಂಡಲ್ ಗಳು ಕೆಂಪು ಬಣ್ಣವನ್ನು ಹೊಂದಿರಲಿವೆ.

ಅಬ್ಬರಿಸಲು ಬರುತ್ತಿವೆ Tata ನೆಕ್ಸಾನ್, ಹ್ಯಾರಿಯರ್, ಸಫಾರಿ ರೆಡ್ ಡಾರ್ಕ್ ಎಡಿಷನ್: ಟೀಸರ್ ಬಿಡುಗಡೆ

ಹೊಸ ಹ್ಯಾರಿಯರ್ ಹಾಗೂ ಸಫಾರಿ ರೆಡ್ ಡಾರ್ಕ್ ಎಡಿಷನ್ ಎಸ್‌ಯುವಿಗಳು, ಹಿಂದಿನ ಮಾದರಿಗಳಂತೆಯೇ ಭರಪೂರ ವೈಶಿಷ್ಟ್ಯಗಳನ್ನು ಹೊಂದಿದ್ದು, ಗ್ರಾಹಕರನ್ನು ಆಕರ್ಷಿಸಲು ಹೆಚ್ಚುವರಿ ವೈಶಿಷ್ಟ್ಯಗಳು ಸೇರ್ಪಡೆಗೊಂಡಿವೆ. ಅವುಗಳೆಂದರೆ, 10.25-ಇಂಚಿನ ಟಚ್‌ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌, ನೂತನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 360 ಡಿಗ್ರಿ ಕ್ಯಾಮೆರಾ. ಪ್ರತಿಯೊಬ್ಬ ಗ್ರಾಹಕರು ಸುರಕ್ಷತೆಗೆ ಆದ್ಯತೆ ನೀಡುತ್ತಾರೆ. ಆ ದೃಷ್ಟಿಯಿಂದ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ವೈಶಿಷ್ಟ್ಯವನ್ನು ಸೇರಿಸಿರುವುದು ವಿಶೇಷವಾಗಿದೆ.

ಇತ್ತೀಚೆಗೆ RDE ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ಟಾಟಾ, ತನ್ನೆಲ್ಲ ಎಂಜಿನ್ ಲೈನ್-ಅಪ್ ಅನ್ನು ನವೀಕರಿಸಿತ್ತು. ನೆಕ್ಸಾನ್ ಎಸ್‌ಯುವಿ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು ಎರಡು ಎಂಜಿನ್ ಆಯ್ಕೆಗಳನ್ನು ಪಡೆದುಕೊಂಡಿದೆ. 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 120 PS ಪವರ್ ಮತ್ತು 170 Nm ಟಾರ್ಕ್ ಉತ್ಪಾದಿಸುತ್ತದೆ. 1.5-ಲೀಟರ್ ಡೀಸೆಲ್ ಎಂಜಿನ್ 110 PS ಪವರ್ ಮತ್ತು 260 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ AMT ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ.

ಟಾಟಾ ಮೋಟಾರ್ಸ್ ನವೀಕರಿಸಿದ ಹ್ಯಾರಿಯರ್‌ ಎಸ್‌ಯುವಿ ಬುಕಿಂಗ್ ಆರಂಭಿಸಿದ್ದು, 2.0 ಲೀಟರ್ ಫೋರ್-ಸಿಲಿಂಡರ್ ಟರ್ಬೋಚಾರ್ಜ್ಡ್ ಡಿಸೇಲ್ ಎಂಜಿನ್ ಅನ್ನು ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಲಾಗಿದ್ದು, ಇದು 170 PS ಗರಿಷ್ಠ ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 6 ಸ್ವೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಅಥವಾ 6 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ದೊರೆಯಬಹುದು. 7 ಇಂಚಿನ TFT ಇನ್ಸ್ರುಮೆಂಟ್ ಕನ್ಸೋಲ್, USB ಚಾರ್ಜಿಂಗ್ ಪೋರ್ಟ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಈಗಾಗಲೇ ನವೀಕರಿಸಿದ ಟಾಟಾ ಸಫಾರಿ ಎಸ್‌ಯುವಿ ಬುಕಿಂಗ್ ಕೂಡ ಪ್ರಾರಂಭವಾಗಿದೆ. ಇದು ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ತಂತ್ರಜ್ಞಾನವನ್ನು ಹೊಂದಿದ್ದು, (AEB) ಆಟೋಮೆಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಟ್ರಾಫಿಕ್ ಸಿಗ್ನಲ್ ರೆಕಗ್ನಿಷನ್, ಹೈ ಬೀಮ್ ಅಸಿಸ್ಟ್, ಲೇನ್ ಡಿಪಾರ್ಚರ್ ವಾರ್ನಿಂಗ್ ಸೇರಿ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಎಂಜಿನ್ ಬಗ್ಗೆ ಮಾತನಾಡುವುದಾದರೆ, ಇದು 2.0 - ಲೀಟರ್ Kryotec ಡೀಸೆಲ್ ಎಂಜಿನ್ ಹೊಂದಿದ್ದು, 168 bhp ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ನೆಕ್ಸಾನ್ ಎಸ್‌ಯುವಿ ರೂ.7.80 ಲಕ್ಷದಿಂದ ರೂ.14.30 ಲಕ್ಷ ಆನ್-ರೋಡ್ ಬೆಲೆಯನ್ನು ಹೊಂದಿದೆ. ಹ್ಯಾರಿಯರ್‌ ಎಸ್‌ಯುವಿ ರೂ.14.98 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆತರೆ, ಸಫಾರಿ ಎಸ್‌ಯುವಿ ರೂ.15.65 ಲಕ್ಷದಿಂದ ರೂ.24.01 ಲಕ್ಷ ದರದಲ್ಲಿ ಗ್ರಾಹಕರಿಗೆ ಸಿಗಲಿದೆ. ನೂತನ ನೆಕ್ಸಾನ್, ಹ್ಯಾರಿಯರ್ ಹಾಗೂ ಸಫಾರಿ ರೆಡ್ ಡಾರ್ಕ್ ಎಡಿಷನ್ ಕಾರಿಗಳು ಆಕರ್ಷಕ ಲುಕ್ ಹೊಂದಿರಲಿದ್ದು, ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವ ಸಾಧ್ಯತೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Monday, February 20, 2023, 9:48 [IST]
English summary
Tata nexon harrier safari red dark edition launch soon teaser out details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+