ಟಾಟಾ-ಹ್ಯುಂಡೈ ಕಾರುಗಳ ಮುಖಾ-ಮುಖಿ ಡಿಕ್ಕಿ... ಇಲ್ಲಿದೆ ನೋಡಿ ಫಲಿತಾಂಶದ ವಿಡಿಯೋ
ದುಡುಕಿನ ಚಾಲನೆ ಅಪಾಯಕಾರಿ ಅಪಘಾತಕ್ಕೆ ಹೇಗೆ ಕಾರಣವಾಗಬಹುದು ಎಂಬುದಕ್ಕೆ ಇತ್ತೀಚಿನ ಘಟನೆಯೊಂದು ಉದಾಹರಣೆಯಾಗಿದೆ. ಹ್ಯುಂಡೈ ಕ್ರೆಟಾ, ಟಾಟಾ ನೆಕ್ಸಾನ್ ಮುಖಾಮುಖಿ ಡಿಕ್ಕಿ ಹೊಡೆದಿರುವ ಅಪಘಾತದ ದೃಶ್ಯ ಡ್ಯಾಶ್‌ಕ್ಯಾಮ್‌ನಲ್ಲಿ ರೆಕಾರ್ಡ್ ಆಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಪ್ಪು ಯಾರದ್ದು ಎಂಬುದರ ಕುರಿತು ಚರ್ಚೆಗಳು ನಡೆಯುತ್ತಿವೆ.
ಪ್ರತೀಕ್ ಸಿಂಗ್ ಎಂಬಾತ ಅಪ್‌ಲೋಡ್ ಮಾಡಿದ ಯೂಟ್ಯೂಬ್ ವೀಡಿಯೊದಲ್ಲಿ, ಹ್ಯುಂಡೈ ಕ್ರೆಟಾ ಮತ್ತು ಟಾಟಾ ನೆಕ್ಸಾನ್ ನಡುವಿನ ಮುಖಾಮುಖಿ ಡಿಕ್ಕಿಯ ದೃಶ್ಯಗಳನ್ನು ನಾವು ನೋಡಬಹುದು. ವಿಡಿಯೋದಲ್ಲಿ, ಕ್ರೆಟಾದ ಚಾಲಕ ಹೇಗೆ ಬೇಜವಾಬ್ದಾರಿಯಾಗಿ ಎಸ್‌ಯುವಿಯನ್ನು ಚಾಲನೆ ಮಾಡುತ್ತಿದ್ದಾನೆ ಎಂಬುದನ್ನು ಸ್ಪಷ್ಟವಾಗಿ ನೋಡಬಹುದು. ಎದುರಿನ ಲೇನ್‌ನಲ್ಲಿ ನೇರವಾಗಿ ಬಂದು ನೆಕ್ಸಾನ್‌ಗೆ ಡಿಕ್ಕಿ ಹೊಡೆದಿದ್ದಾನೆ. ಹ್ಯುಂಡೈ ಕ್ರೆಟಾ ಚಾಲಕ ತನ್ನ ಬಲಗಡೆ ಚಲಿಸುತ್ತಿದ್ದ ಫೋಕ್ಸ್‌ವ್ಯಾಗನ್ ಪೋಲೊವನ್ನು ಹಿಂದಿಕ್ಕಲು ಪ್ರಯತ್ನಿಸಿದ್ದನ್ನು ವೀಡಿಯೊದಲ್ಲಿ ಕಾಣಬಹುದು.

ಇದೇ ವೇಳೆ ಪೋಲೊವನ್ನು ಹಿಂದಿಕ್ಕುವಾಗ, ಕ್ರೆಟಾ ಚಾಲಕ ಎದುರಿನ ಲೇನ್‌ನಲ್ಲಿ ಬರುತ್ತಿದ್ದ ವಾಹನಗಳನ್ನು ತಪ್ಪಾಗಿ ಗ್ರಹಿಸಿದ್ದಾನೆ. ಈ ವೇಳೆ ಎದುರಿನ ಲೇನ್‌ನಲ್ಲಿ ಚಲಿಸುತ್ತಿದ್ದ ಆಟೋ ರಿಕ್ಷಾಕ್ಕೆ ಮೊದಲಿಗೆ ಕ್ರೆಟಾ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯಿಂದಾಗಿ ಆಟೋ ರಿಕ್ಷಾ ಪಲ್ಟಿಯಾಗಿದ್ದು, ಅದೃಷ್ಟವಾಶಾತ್ ಆಟೋರಿಕ್ಷಾ ಚಾಲಕನಿಗೆ ಯಾವುದೇ ಗಾಯಗಳಾಗಿಲ್ಲ. ಹ್ಯುಂಡೈ ಕ್ರೆಟಾ ಮತ್ತು ಆಟೋ-ರಿಕ್ಷಾ ನಡುವಿನ ಡಿಕ್ಕಿಯಿಂದಾಗಿ ಕ್ರೆಟಾ ಚಾಲಕ ನಿಯಂತ್ರಣವನ್ನು ಕಳೆದುಕೊಂಡು ಆತುರದಿಂದ ಚಾಲನೆ ಮಾಡಿದ್ದಾನೆ.
ಕ್ರೆಟಾ ಚಾಲಕನು ನಂತರ ಟಾಟಾ ನೆಕ್ಸಾನ್‌ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಗೂ ಮುನ್ನ ನೆಕ್ಸಾನ್ ಚಾಲಕ ಸರಿಯಾದ ಮಾರ್ಗದಲ್ಲಿ ಎದುರು ಲೇನ್‌ನಲ್ಲಿ ಮುಂದೆ ಸಾಗುತ್ತಿದ್ದ. ಈ ಮುಖಾಮುಖಿ ಘರ್ಷಣೆಯಿಂದಾಗಿ ಕ್ರೆಟಾ ಎಸ್‌ಯುವಿಯ ಬಾನೆಟ್, ಮುಂಭಾಗದ ಬಂಪರ್ ಮತ್ತು ಹೆಡ್‌ಲ್ಯಾಂಪ್‌ಗಳಿಗೆ ಹಾನಿಯಾಗಿದೆ. ಇನ್ನು ಟಾಟಾ ನೆಕ್ಸಾನ್‌ನ ಬಾನೆಟ್ ತುಸು ಒತ್ತಡಕ್ಕೆ ಒಳಗಾಗಿದ್ದು, ಏರ್‌ಬ್ಯಾಗ್‌ಗಳು ತೆರೆದುಕೊಂಡಿರುವುದನ್ನು ಡ್ಯಾಶ್‌ಕ್ಯಾಮ್ ವೀಡಿಯೊ ತೋರಿಸುತ್ತದೆ, ಇದರಿಂದಾಗಿ ನೆಕ್ಸಾನ್ ಚಾಲಕನಿಗೆ ಯಾವುದೇ ಗಾಯಗಳಾಗಿಲ್ಲ.

ಈ ಘಟನೆಯಲ್ಲಿ ಹ್ಯುಂಡೈ ಕ್ರೆಟಾ ಡ್ರೈವರ್‌ನದ್ದೇ ಸಂಪೂರ್ಣ ತಪ್ಪು ಎಂದು ಡ್ಯಾಶ್‌ಕ್ಯಾಮ್ ವೀಡಿಯೊ ಸ್ಪಷ್ಟವಾಗಿ ತೋರಿಸುತ್ತದೆ. ಕ್ರೆಟಾ ಚಾಲಕ ತನ್ನ ವಾಹನದ ವೇಗ ಮತ್ತು ರಸ್ತೆಯ ಇತರ ವಾಹನಗಳಿಂದ ಕ್ಲಿಯರೆನ್ಸ್ ಅನ್ನು ತಪ್ಪಾಗಿ ಗ್ರಹಿಸಿ ಡಿಕ್ಕಿ ಹೊಡೆದಿದ್ದಾನೆ. ಜನನಿಬಿಡ ರಸ್ತೆಯಲ್ಲಿ ತಪ್ಪಾದ ಲೇನ್‌ನಲ್ಲಿ ಇತರ ವಾಹನಗಳನ್ನು ಬೇಜವಾಬ್ದಾರಿಯಿಂದ ಓವರ್‌ಟೇಕ್ ಮಾಡುವುದು ಹೇಗೆ ಮುಖಾಮುಖಿ ಡಿಕ್ಕಿಗಳಿಗೆ ಕಾರಣವಾಗಬಹುದು ಎಂಬುದನ್ನು ಸಹ ಈ ವೀಡಿಯೊ ತೋರಿಸುತ್ತದೆ.
ತಪ್ಪು ಲೇನ್‌ಗಳಲ್ಲಿ ಚಾಲನೆ ಮಾಡುವುದು ಮತ್ತು ಸಾರ್ವಜನಿಕ ರಸ್ತೆಗಳಲ್ಲಿ ಅತಿವೇಗವು ಎರಡು ಪ್ರಮುಖ ಸಮಸ್ಯೆಗಳಾಗಿವೆ. ದಾಖಲಾದ ಸಂಪೂರ್ಣ ಅಪಘಾತದ ದೃಶ್ಯಾವಳಿಗಳು ಇಂತಹ ಅಪಘಾತಗಳಲ್ಲಿ ಡ್ಯಾಶ್‌ಕ್ಯಾಮ್‌ಗಳ ಪ್ರಾಮುಖ್ಯತೆಯನ್ನು ತೋರುತ್ತದೆ. ಇಂತಹ ರಸ್ತೆ ಅಪಘಾತಗಳಲ್ಲಿ ತಪ್ಪು ಯಾರದೆಂದು ಕಂಡುಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಿದ್ದಾಗ ಪೊಲೀಸರಿಂದ ನ್ಯಾಯ ಪಡೆಯಲು ಪ್ರತ್ಯಕ್ಷ ದರ್ಶಿಗಳ ಸಾಕ್ಷ್ಯವೂ ಬೇಕಿಲ್ಲ. ವಿಡಿಯೋವನ್ನು ತೋರಿಸಿ ಅಪಘಾತ ಮಾಡಿದವರ ವಿರುದ್ಧ ಕ್ರಮ ಜರುಗಿಸಿ ನ್ಯಾಯಪಡೆಯಬಹುದು.
ಟಾಟಾ ನಿರ್ಮಾಣ ಗುಣಮಟ್ಟದಲ್ಲಿ ರಾಜಿಯಿಲ್ಲ:
ನೀವು ವಿಡಿಯೋ ಹಾಗೂ ಫೋಟೋಗಳನ್ನು ಸೂಕ್ಷ್ಮವಾಗಿ ನೋಡಿದರೆ ಎರಡೂ ಕಾರುಗಳು ಮುಖಾ-ಮುಖಿ ಡಿಕ್ಕಿಯಾದಾಗ ನೆಕ್ಸಾ ಬಾನೆಟ್ ತುಸು ಒತ್ತಡಕ್ಕೆ ಒಳಗಾಗಿದೆ. ಹಾಗೆಯೇ ನೀವು ಕ್ರೆಟಾವನ್ನು ನೋಡಿದಾಗ ಬಾನೆಟ್ ತುಂಬಾ ಹಾನಿಗೊಳಗಾಗಿದೆ. ಟಾಟಾ ಕಾರುಗಳ ಗುಣಮಟ್ಟದ ಕುರಿತು ನಮ್ಮ ವೆಬ್‌ಸೈಟ್‌ನಲ್ಲಿಯೇ ಹಲವು ಲೇಖನಗಳನ್ನು ಹಾಕಲಾಗಿದೆ. ಎಲ್ಲಾ ಲೇಖಗಳಿಗೂ ಟಾಟಾ ಕಾರುಗಳ ನಿರ್ಮಾಣ ಗುಣಮಟ್ಟದ ಕುರಿತು ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications