ರೂ. 8 ಲಕ್ಷದ ಕಾರಿಗೆ ಭಾರೀ ಬೇಡಿಕೆ... ಸುರಕ್ಷತೆಗೆ ಪ್ರಶಂಸೆ... ಅಕ್ಟೋಬರ್‌ನಲ್ಲಿ ನಂ.1 ಸ್ಥಾನ

ಭಾರತದಲ್ಲಿ ಕಳೆದ ಕೆಲ ವರ್ಷಗಳಿಂದ ಎಸ್‌ಯುವಿಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. SUV ವಾಹನಗಳ ಮಾರಾಟವು ಅದ್ಭುತವಾಗಿದ್ದು, ಅದರಲ್ಲೂ ಜನರು ಕಾಂಪ್ಯಾಕ್ಟ್ SUV ಕಾರುಗಳನ್ನು ತುಂಬಾ ಖರೀದಿಸುತ್ತಿದ್ದಾರೆ ಎಂದು ವರದಿಯಾಗಿದೆ. ಅಕ್ಟೋಬರ್ 2023 ರ ಕಾರು ಮಾರಾಟವನ್ನು ನೋಡಿದರೆ, ಕಾಂಪ್ಯಾಕ್ಟ್ SUV ಗಳೇ ಹೆಚ್ಚಾಗಿ ಮಾರುಕಟ್ಟೆಯನ್ನು ಆಳುತ್ತಿವೆ ಎಂಬುದು ಬಹಿರಂಗವಾಗಿದೆ.

ಕೆಲವೇ ವಾಹನ ತಯಾರಕರು ಮಾತ್ರ ಭಾರತದಲ್ಲಿ ಅತ್ಯುತ್ತಮ ಗುಣಮಟ್ಟ, ಆಕರ್ಷಕ ಡಿಸೈನ್, ಕಡಿಮೆ ಬೆಲೆಯೊಂದಿಗೆ ತಮ್ಮ ಕಾರುಗಳನ್ನು ಜನಪ್ರಿಯಗೊಳಿಸಿದ್ದಾರೆ. ಅಂತಹ ಕಂಪನಿಗಳಲ್ಲಿ ಪ್ರಮುಖರು ಟಾಟಾ ಮೋಟಾರ್ಸ್ ಎಂದರೆ ತಪ್ಪಾಗುವುದಿಲ್ಲ. ಏಕೆಂದರೆ ಕಳೆದ ತಿಂಗಳ ಮಾರಾಟ ಅಂಕಿಅಂಶಗಳನ್ನು ನೋಡಿದರೆ, ಟಾಟಾ ನೆಕ್ಸಾನ್ ದೇಶದಲ್ಲಿ ನಂಬರ್-1 ಎಸ್‌ಯುವಿಯಾಗಿ ಹೊರಹೊಮ್ಮಿದೆ.

tata-nexon-sales-october-2023-segment-best-suv

ಮಾರುತಿ ವ್ಯಾಗನ್ಆರ್, ಸ್ವಿಫ್ಟ್ ನಂತರ, ನೆಕ್ಸಾನ್ ಮಾರಾಟದ ವಿಷಯದಲ್ಲಿ ಮೂರನೇ ಸ್ಥಾನದಲ್ಲಿದೆ. ಹಾಗೆಯೇ ತನ್ನ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿರುವ ನೆಕ್ಸಾನ್ ಕಳೆದ ಸೆಪ್ಟೆಂಬರ್‌ನಲ್ಲಿ 15,300 ಯುನಿಟ್‌ ಮಾದರಿಗಳನ್ನು ಮಾರಾಟ ಮಾಡಿತ್ತು. ಆದರೆ ಈಗ ಅಕ್ಟೋಬರ್ 2023 ರಲ್ಲಿ ಒಟ್ಟು 16,887 ಯೂನಿಟ್‌ ನೆಕ್ಸಾನ್ ಮಾದರಿಗಳನ್ನು ಮಾರಾಟ ಮಾಡುವ ಮೂಲಕ ನೆಕ್ಸಾನ್ ಮಾರಾಟದಲ್ಲಿ ಭಾರೀ ಹೆಚ್ಚಳವನ್ನು ದಾಖಲಿಸಿದೆ.

ಸೆಪ್ಟೆಂಬರ್ 21, 2017 ರಂದು ಬಿಡುಗಡೆಯಾದ ನೆಕ್ಸಾನ್, ಮಾರ್ಚ್ 2023 ರ ಅಂತ್ಯದವರೆಗೆ ದೇಶೀಯ ಮಾರುಕಟ್ಟೆಯಲ್ಲಿ 4,85,839 ಯುನಿಟ್‌ಗಳ ಮಾರಾಟವನ್ನು ಸಾಧಿಸಿದೆ. ಏಪ್ರಿಲ್ 2023 ರಲ್ಲಿ ಅಂದಾಜು 15,000 ಯುನಿಟ್‌ಗಳ ಮಾರಾಟ ಸೇರಿಸಿ ಒಟ್ಟು 500,839 ಯುನಿಟ್‌ಗಳನ್ನು ತಲುಪಿದ್ದು, ಈ 68 ತಿಂಗಳುಗಳ ಅವಧಿಯಲ್ಲಿ 5,265 ಯುನಿಟ್‌ಗಳ ರಫ್ತು ಕೂಡ ಮಾಡಿದೆ.

tata-nexon-sales-october-2023-segment-best-suv

ನೆಕ್ಸಾನ್ ಫೇಸ್‌ಲಿಫ್ಟ್: ಭಾರತದಲ್ಲಿ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಅವತಾರದಲ್ಲಿ ಇತ್ತೀಚೆಗೆ ಬಿಡುಗಡೆಯಾಗಿತ್ತು. ಹೊಸ ಕಾರು ಸಾಕಷ್ಟು ಬದಲಾವಣೆಗಳನ್ನು ಪಡೆದಿದ್ದು, ಬೆಲೆಯು ರೂ.8.10 ಲಕ್ಷದಿಂದ ಆರಂಭವಾಗಿ ರೂ.15.50 ಲಕ್ಷದವರೆಗೆ (ಎಕ್ಸ್ ಶೋ ರೂಂ) ಇದೆ. ಕಂಪನಿಯು ಇದನ್ನು ಆಲ್ಫಾ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಿದೆ. ಈ ಕಾರಣದಿಂದಾಗಿ SUV ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆಯುವಲ್ಲಿ ಯಶಸ್ವಿಯಾಗಿದೆ.

ಫೇಸ್‌ಲಿಫ್ಟ್ ಆಗಿ ಬಿಡುಗಡೆಯಾದ ನಂತರ ನೆಕ್ಸಾನ್ ಮಾರಾಟವು ಇನ್ನೂ ಹೆಚ್ಚಾಗಿದೆ. ಕಾರು ಈಗ ಹೊಸ ವಿನ್ಯಾಸದ ಸ್ಪ್ಲಿಟ್ LED ಹೆಡ್‌ಲೈಟ್ ಸೆಟಪ್‌ನೊಂದಿಗೆ ಬರುತ್ತದೆ. ಇಂಟೀರಿಯರ್ ನಲ್ಲೂ ಸಾಕಷ್ಟು ಬದಲಾವಣೆ ಮಾಡಲಾಗಿದೆ. ನೆಕ್ಸಾನ್ ಅದರ ಸುರಕ್ಷತಾ ವೈಶಿಷ್ಟ್ಯಗಳು, ಶಕ್ತಿಗೆ ಹೆಸರುವಾಸಿಯಾಗಿದೆ. ಇದು ಬಜೆಟ್ ವಿಭಾಗದಲ್ಲಿ ಲಭ್ಯವಿರುವ ಸುರಕ್ಷಿತ ಕಾರುಗಳಲ್ಲಿ ಒಂದಾಗಿ ಜನಪ್ರಿಯತೆ ಪಡೆದಿದೆ.

tata-nexon-sales-october-2023-segment-best-suv

ಟಾಟಾ ಮೋಟಾರ್ಸ್ ನೆಕ್ಸಾನ್ ಮಾದರಿಯನ್ನು ಸ್ಮಾರ್ಟ್, ಪ್ಯೂರ್, ಕ್ರಿಯೇಟಿವ್ ಮತ್ತು ಫಿಯರ್‌ಲೆಸ್ ಎಂಬ ನಾಲ್ಕು ರೂಪಾಂತರಗಳಲ್ಲಿ ಒಟ್ಟು 7 ಬಣ್ಣಗಳ ಆಯ್ಕೆಗಳೊಂದಿಗೆ ಮಾರಾಟ ಮಾಡುತ್ತಿದೆ. ನೆಕ್ಸಾನ್ ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ, ಹೋಂಡಾ ಎಲಿವೇಟ್ ಮತ್ತು ಮಾರುತಿ ಬ್ರೆಝಾದೊಂದಿಗೆ ನೇರವಾಗಿ ಸ್ಪರ್ಧಿಸುತ್ತದೆ.

ಟಾಟಾ ನೆಕ್ಸಾನ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಇದರ 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 120 bhp ಪವರ್ ಮತ್ತು 170 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಾಗೆಯೇ ಇದರ 1.5-ಲೀಟರ್ ಡೀಸೆಲ್ ಎಂಜಿನ್ 115 bhp ಪವರ್ ಮತ್ತು 260 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

tata-nexon-sales-october-2023-segment-best-suv

ಈ ಸ್ಟೈಲಿಷ್ ಎಸ್‌ಯುವಿಯ ಟ್ರಾನ್ಸ್‌ಮಿಷನ್ ಆಯ್ಕೆಗಳ ವಿಷಯಕ್ಕೆ ಬಂದರೆ, 5 ಸ್ಪೀಡ್ ಮ್ಯಾನುವಲ್, 6 ಸ್ಪೀಡ್ ಮ್ಯಾನ್ಯುವಲ್, 6 ಸ್ಪೀಡ್ AMT, ಹೊಸ 7 ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ (DCT) ಕೂಡ ಇದೆ. ಡೀಸೆಲ್ ಘಟಕವು 6 ಸ್ಪೀಡ್ ಮ್ಯಾನುವಲ್, 6 ಸ್ಪೀಡ್ AMT ಆಯ್ಕೆಯನ್ನು ಹೊಂದಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, November 22, 2023, 15:55 [IST]
English summary
Tata nexon sales october 2023 segment best suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+